Homeಅಂತರಾಷ್ಟ್ರೀಯಕೊರೊನಾ ಲಸಿಕೆ ಅಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ಸಹಕಾರದಿಂದ ಹೊರಗೆ: ಅಮೇರಿಕಾ ನಿರ್ಧಾರ

ಕೊರೊನಾ ಲಸಿಕೆ ಅಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ಸಹಕಾರದಿಂದ ಹೊರಗೆ: ಅಮೇರಿಕಾ ನಿರ್ಧಾರ

"ನಾವು ವೈರಸ್ ವಿರುದ್ಧ ಹೋರಾಡಲು ಆಂತರಾಷ್ಟ್ರೀಯ ಪಾಲುದಾರರೊಂದಿಗೆ ಸಹಕರಿಸುತ್ತೇವೆ. ಆದರೆ ಭ್ರಷ್ಟಗೊಂಡಿರುವ WHOನಂತಹ, ಚೀನಾದಿಂದ ಪ್ರಭಾವಿತವಾದ ಬಹುಪಕ್ಷೀಯ ಸಂಸ್ಥೆಯಿಂದ ನಾವು ನಿರ್ಬಂಧಿತರಾಗುವುದಕ್ಕೆ ಬಯಸುವುದಿಲ್ಲ"

- Advertisement -
- Advertisement -

ವಿಶ್ವ ಆರೋಗ್ಯ ಸಂಸ್ಥೆಯಂತಹ ಬಹುಪಕ್ಷೀಯ ಗುಂಪುಗಳ ನಿರ್ಬಂಧಕ್ಕೆ ಅಮೇರಿಕಾ ಒಳಗಾಗಲು ಬಯಸುವುದಿಲ್ಲವಾದ್ದರಿಂದ, ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲು ಮತ್ತು ವಿತರಿಸಲು ಅಂತಾರಾಷ್ಟ್ರೀಯ ಸಹಕಾರ ಪ್ರಯತ್ನದೊಟ್ಟಿಗೆ ಕೆಲಸ ಮಾಡುವುದಿಲ್ಲ ಎಂದು ಅಮೇರಿಕಾ ಮಂಗಳವಾರ ಹೇಳಿದೆ.

150 ಕ್ಕೂ ಹೆಚ್ಚು ದೇಶಗಳು ಕೊರೊನಾ ಲಸಿಕೆಯ ಪ್ರಯೋಗಗಳಲ್ಲಿ ನಿರತವಾಗಿವೆ. ಇದರ ನಡುವೆ ಅಮೇರಿಕಾ ಈ ಸ್ಫೋಟಕ ನಿರ್ಧಾರವನ್ನು ತೆಗೆದುಕೊಂಡಿದೆ.

ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿರುವಂತೆ, ಈ ನಿರ್ಧಾರವು ಜುಲೈ ಆರಂಭದಲ್ಲಿ ಅಮೇರಿಕಾವು WHO ದಿಂದ ಹೊರಬರುವ ಶ್ವೇತಭವನದ ನಿರ್ಧಾರವನ್ನು ಅನುಸರಿಸಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

WHOಗೆ ಸುಧಾರಣೆಯ ಅವಶ್ಯಕತೆ ಇದೆ. ಅದು ಚೀನಾದಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

WHO ಜೊತೆ ಸಂಬಂಧ ಹೊಂದಿರುವ ಈ ಸಹಕಾರ ಪ್ರಯತ್ನವು ಇತರ ರಾಷ್ಟ್ರಗಳು ಸಂಭಾವ್ಯ ಲಸಿಕೆಗಳ ಲಾಭವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಅದು ತಮ್ಮ ಜನರನ್ನು ಶೀಘ್ರವೇ ತಲುಪುತ್ತದೆ. ವೈಯಕ್ತಿಕ ಲಸಿಕೆ ತಯಾರಕರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸರ್ಕಾರಗಳು ಸಹ COVAX ಗೆ ಸೇರ್ಪಡೆಗೊಳ್ಳುವುದರಿಂದ ಪ್ರಯೋಜನ ಪಡೆದುಕೊಳ್ಳುತ್ತದೆ. ಏಕೆಂದರೆ ತಯಾರಕರೊಂದಿಗೆ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಮಾಡಲಾಗುವಂತಹವುಗಳು ಯಶಸ್ವಿಯಾಗದಿದ್ದಲ್ಲಿ ಅದು ಬ್ಯಾಕಪ್ ಲಸಿಕೆಗಳನ್ನು ನೀಡುತ್ತದೆ. ಎಂದು WHO ಹೇಳುತ್ತದೆ.

ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟದಲ್ಲಿ ಚೀನಾದ ಯಶಸ್ಸು ಇತರ ದೇಶಗಳಿಗೆ ಭರವಸೆಯಾಗಿದೆ: WHO

“ನಾವು ವೈರಸ್ ವಿರುದ್ಧ ಹೋರಾಡಲು ಆಂತರಾಷ್ಟ್ರೀಯ ಪಾಲುದಾರರಿಗೆ ಸಹಕಾರ ನೀಡುತ್ತೇವೆ. ಆದರೆ ಭ್ರಷ್ಟಗೊಂಡಿರುವ WHOನಂತಹ, ಚೀನಾದಿಂದ ಪ್ರಭಾವಿತವಾದ ಬಹುಪಕ್ಷೀಯ ಸಂಸ್ಥೆಯಿಂದ ನಾವು ನಿರ್ಬಂಧಿತರಾಗುವುದಕ್ಕೆ ಬಯಸುವುದಿಲ್ಲ” ಎಂದು ಶ್ವೇತಭವನದ ವಕ್ತಾರ ಜುಡ್ ಡೀರೆ ಹೇಳಿದ್ದಾರೆ.

ಇದನ್ನೂ ಓದಿ: ಕೊರೋನಾವೈರಸ್‌ ಕುರಿತ ಊಹಾಪೋಹಗಳಿಗೆ WHO ಸ್ಪಷ್ಟನೆ: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ಗೊತ್ತೆ?

ಈ ನಿರ್ಧಾರವು WHOನಿಂದ ಅಮೇರಿಕಾ ಹೊರಬಂದಿದ್ದರ ಪರಿಣಾಮವಾಗಿದೆ. ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವಲ್ಲಿ ಅಮೆರಿಕವು ತನ್ನ ಜಾಗತಿಕ ನಾಯಕತ್ವವನ್ನು ತ್ಯಜಿಸುತ್ತಿದೆ ಎಂದು ಉತ್ತರ ಅಮೆರಿಕದ ನಿರ್ದೇಶಕ ಟಾಮ್ ಹಾರ್ಟ್ ಹೇಳಿದ್ದಾರೆ.

“ಈ ಕ್ರಮವು ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವವನ್ನು ಅಪಾಯಕ್ಕೆ ತಳ್ಳುವುದು ಮಾತ್ರವಲ್ಲ, ಇದು ಕೊರೊನಾ ವಿರುದ್ಧದ ಪರಿಣಾಮಕಾರಿ ಲಸಿಕೆಯಿಂದ ಅಮೆರಿಕನ್ನರನ್ನು ಸಂಪೂರ್ಣವಾಗಿ ಪ್ರತ್ಯೇಕಿಸುತ್ತದೆ” ಎಂದು ಟಾಮ್ ಹಾರ್ಟ್ ಹೇಳಿದರು.

ಅಸ್ಟ್ರಾಜೆನೆಕಾವು ಸೋಮವಾರ ತನ್ನ ಲಸಿಕೆ ಅಭ್ಯರ್ಥಿಯು ಅಮೇರಿಕಾದಲ್ಲಿ ಅಂತಿಮ ಪರೀಕ್ಷಾ ಹಂತಕ್ಕೆ ಪ್ರವೇಶಿಸಿದೆ ಎಂದು ಘೋಷಿಸಿತು. ಇಂಗ್ಲೆಂಡ್ ಮೂಲದ ಕೇಂಬ್ರಿಡ್ಜ್ ಕಂಪನಿಯ ಈ ಅಧ್ಯಯನವು ವಿವಿಧ ಜನಾಂಗೀಯ ಮತ್ತು ಭೌಗೋಳಿಕ ಗುಂಪುಗಳಿಂದ 30,000 ವಯಸ್ಕರನ್ನು ಒಳಗೊಂಡಿದೆ ಎಂದು ಹೇಳಿದೆ.

ವಿಶ್ವದ ಮೊದಲ ಕೊರೊನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ರಷ್ಯಾ ಸೆಚೆನೋವ್ ವಿಶ್ವವಿದ್ಯಾನಿಲಯದ ಟ್ರಾಸ್ಸಲೇಷನಲ್ ಮೆಡಿಸಿನ್ ಆಂಡ್ ಬಯೊಟೆಕ್ನಾಲಜಿ ವಿಭಾಗದ ನಿರ್ದೇಶಕ ವಾಡಿಮ್ ತಾರಸೊವ್ ಜುಲೈ 13 ರಂದು ತಿಳಿಸಿದ್ದರು.

ಬ್ರಿಟನ್ ಮತ್ತು ಚೀನಾದ ಸಂಶೋಧಕರು ಜುಲೈ 21 ರಂದು ಕೊರೊನಾ ವಿರುದ್ಧದ ತಮ್ಮ ಎರಡು ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳನ್ನು ಪ್ರಕಟಿಸಿದ್ದರು. ಈ ಲಸಿಕಗಳು ಸುರಕ್ಷಿತ ಮತ್ತು ಪ್ರತಿರಕ್ಷಣಾ(ಇಮ್ಯೂನಿಟಿ) ಪ್ರಕ್ರಿಯೆಯನ್ನು ಉಂಟುಮಾಡಲು ಸಮರ್ಥವಾಗಿಯೆ ಎಂದು ಕಂಡುಕೊಳ್ಳಲು ಇದರ ಮೂರನೆ ಹಂತದ ಪ್ರಯೋಗಗಳು ನಡೆಯುತ್ತಿವೆ ಎಂದು ತಿಳಿಸಿದ್ದರು.


ಇದನ್ನೂ ಓದಿ: ಭಾರತದಲ್ಲಿ ಆಕ್ಸ್‌‌ಫರ್ಡ್ ಕೊರೊನಾ ಲಸಿಕೆಯ ಬೆಲೆ 225 ರೂ!: ಎಸ್‌ಐಐ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...