Homeಮುಖಪುಟಅರ್ನಾಬ್ ರಿಪಬ್ಲಿಕ್ ಚಾನೆಲ್ ವಿರುದ್ಧ PIL: ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್

ಅರ್ನಾಬ್ ರಿಪಬ್ಲಿಕ್ ಚಾನೆಲ್ ವಿರುದ್ಧ PIL: ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್

ಸುಶಾಂತ್‌ ಸಿಂಗ್ ಸಾವಿನ ಪ್ರಕರಣದಲ್ಲಿ ನಟಿ ರಿಯಾ ವಿರುದ್ದ ವಿಕೃತ ಮತ್ತು ದಾರಿ ತಪ್ಪಿಸುವ ವರದಿ ಮಾಡುತ್ತಿದ್ದಾರೆಂದು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆಯಾಗಿತ್ತು.

- Advertisement -
- Advertisement -

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮತ್ತು ಅವರ ಚಾನೆಲ್ “ವಿಕೃತ ಮತ್ತು ದಾರಿತಪ್ಪಿಸುವ ಸಂಗತಿಗಳನ್ನು” ವರದಿ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಹೈಕೋರ್ಟ್ ಒಪ್ಪಿದೆ.

ಅರ್ನಬ್ ವರದಿಯು ನಟಿ ರಿಯಾ ಚಕ್ರವರ್ತಿ ಅವರ ನ್ಯಾಯಯುತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: Fact check: ಅರ್ನಬ್ ಗೋಸ್ವಾಮಿ ವಿಡಿಯೋ ದಾಳಿಗೂ ಮುನ್ನವೇ ಮಾಡಲಾಗಿತ್ತೇ?

ಅರ್ಜಿಯು, “ಅಪರಾಧ ತನಿಖೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳ ವರದಿ ಅಥವಾ ಪ್ರಸಾರವನ್ನು ನಿಯಂತ್ರಿಸುವ ನಿಯಮ ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ” ಕೋರಿದೆ.

ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿದ್ದು, ಅಪರಾಧ ತನಿಖೆಗಳ ವರದಿಗಳನ್ನು ನಿಯಂತ್ರಿಸಲು ಯಾವ ರೀತಿಯ ನಿಯಮಗಳನ್ನು ರೂಪಿಸಬಹುದ ಎಂಬ ಸಲಹೆಗಳೊಂದಿಗೆ ಅರ್ಜಿದಾರರನ್ನು ಮುಂದಿನ ದಿನಾಂಕ – ನವೆಂಬರ್ 27 ರಂದು ಬರಲು ಕೇಳಿಕೊಂಡರು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ “ಪೂರ್ವಾಗ್ರಹ ವರದಿ” ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದ್ದು, ಅರ್ನಾಬ್ ಮತ್ತು ಅವರ ಚಾನೆಲ್ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸಲು ಮನವಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಸುಳ್ಳು ಸುದ್ದಿ ಪ್ರಕಟಿಸಿ ಮುಸ್ಲಿಮರ ಭಾವನೆಗೆ ಧಕ್ಕೆ: ಬೇಷರತ್‌ ಕ್ಷಮೆಯಾಚಿಸಿದ ಅರ್ನಬ್‌ ಗೋಸ್ವಾಮಿ

ರಿಯಾ ಚಕ್ರವರ್ತಿಗೆ ಕಿರುಕುಳ ನೀಡುತ್ತಿದ್ದು ಮಾತ್ರವಲ್ಲದೆ, ಅವರ ವಿರುದ್ಧ ಸಾರ್ವಜನಿಕವಾಗಿ ದುರಾಭಿಪ್ರಾಯ ಬರುವಂತೆ ಮಾಡಿ, ಅರ್ನಾಬ್ ಮತ್ತು ಅವರ ಟಿವಿ ಚಾನೆಲ್ “ನ್ಯಾಯಾಧೀಶರು, ತೀರ್ಪುಗಾರರು ಮತ್ತು ಮರಣದಂಡನೆಕಾರ” ಎಂಬ ರೀತಿ ವರ್ತಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

“ಕುತೂಹಲಕಾರಿ ಸಂಗತಿಯೆಂದರೆ, ಪ್ರಸ್ತುತ ಕ್ರಿಮಿನಲ್ ತನಿಖೆಯಲ್ಲಿ ಯಾವುದೇ ತನಿಖಾ ಸಂಸ್ಥೆಯೂ ಕೊಲೆ ಆರೋಪವನ್ನು ತನಿಖೆ ಮಾಡುತ್ತಿಲ್ಲ. ಮೃತನ ತಂದೆ ನೀಡಿದ ದೂರಿನ ಮೇರೆಗೆ ಪಾಟ್ನಾ ಪೊಲೀಸರು ದಾಖಲಿಸಿದ ಎಫ್‌ಐಆರ್‌ ಕೂಡ ಆತ್ಮಹತ್ಯೆ ಮತ್ತು ಇತರ ದಂಡ ಸಂಹಿತೆಯಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲದೆ ಏಮ್ಸ್ ವರದಿಯ ಪ್ರಕಾರ, ಸಾವಿಗೆ ಕಾರಣ ಆತ್ಮಹತ್ಯೆಯೆ ಹೊರತು ಕೊಲೆ ಅಲ್ಲ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

“ತನಿಖಾ ಪತ್ರಿಕೋದ್ಯಮ ಮತ್ತು / ಅಥವಾ ಅನಾಮಧೇಯ ಮೂಲಗಳಿಂದ ಪಡೆದ ಮಾಹಿತಿಯ ಹೆಸರಿನಲ್ಲಿ ಯಾವುದೇ ಕ್ರಿಮಿನಲ್ ತನಿಖೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ಸುದ್ದಿಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದನ್ನು ತಡೆಯುವಂತೆ ನಿರ್ದೇಶನ ನೀಡಲು ಅರ್ಜಿ ಕೋರಿದೆ.


ಇದನ್ನೂ ಓದಿ: ಟಿವಿ ಡಿಬೆಟ್‌ನಲ್ಲಿ ಊಟ ಮಾಡಿದ ಪ್ಯಾನೆಲಿಸ್ಟ್; ಟ್ರೋಲ್ ಆದ ಅರ್ನಾಬ್ ಗೋಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...