Homeಮುಖಪುಟಟೀಕೆಗೆ ಬೆದರಿದ ಚಿತ್ರತಂಡ: ಲಕ್ಷ್ಮೀ ಬಾಂಬ್ ಚಿತ್ರದ ಟೈಟಲ್‌ನಲ್ಲಿ 'ಬಾಂಬ್' ನಿಷ್ಕ್ರಿಯ!

ಟೀಕೆಗೆ ಬೆದರಿದ ಚಿತ್ರತಂಡ: ಲಕ್ಷ್ಮೀ ಬಾಂಬ್ ಚಿತ್ರದ ಟೈಟಲ್‌ನಲ್ಲಿ ‘ಬಾಂಬ್’ ನಿಷ್ಕ್ರಿಯ!

ಲಕ್ಷ್ಮೀ ಬಾಂಬ್ ಚಿತ್ರದ ಹೆಸರು ಹಿಂದೂ ದೇವತೆ ಲಕ್ಷ್ಮಿಗೆ ಸಾಕಷ್ಟು ಅವಹೇಳನಕಾರಿ ಎಂದು ರಜಪೂತ್ ಕರ್ಣಿ ಸೇನಾದ ಲೀಗಲ್ ನೋಟಿಸ್‌ನಲ್ಲಿ ಹೇಳಲಾಗಿದೆ.

- Advertisement -
- Advertisement -

ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ಲಕ್ಷ್ಮೀ ಬಾಂಬ್ ಟ್ರೈಲರ್ ಮತ್ತು ಬುರ್ಜ್ ಖಲೀಫಾ ಹಾಡುಗಳು ಸಾಕಷ್ಟು  ಹವಾ ಕ್ರಿಯೇಟ್ ಮಾಡಿವೆ. ಇದು ಚಿತ್ರತಂಡಕ್ಕೆ ಖುಷಿಯ ವಿಚಾವಾದರೆ, ಇತ್ತ ಕೆಲ ಸಂಘಟನೆಗಳು ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿವೆ.

ಲಕ್ಷ್ಮೀ ಬಾಂಬ್‌ನ ಟ್ರೈಲರ್‌ ತಮಾಷೆಯ ಮತ್ತು ಭಯಾನಕ ದೃಶ್ಯಗಳಿಂದ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಯಿತು. ಲೈಂಗಿಕ ಅಲ್ಪಸಂಖ್ಯಾತರಾಗಿ ನಟ ಅಕ್ಷಯ್ ಕುಮಾರ್ ಪಾತ್ರವು ಈಗಾಗಲೇ ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದೆ.

ಆದರೆ ಇಂದು(ಅ.29) ರಾಘವ ಲಾರೆನ್ಸ್ ನಿರ್ದೇಶಿಸಿದ ಚಿತ್ರವು ತನ್ನ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಹೋಗಿ ಸ್ಕ್ರೀನಿಂಗ್ ಅನ್ನು ಪೋಸ್ಟ್ ಮಾಡಿದೆ. ಜೊತೆಗೆ ಚಿತ್ರ ತಯಾರಕರು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಯೊಂದಿಗೆ ಚರ್ಚಿಸಿ, ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.

ಚಿತ್ರದ ಶೀರ್ಷಿಕೆಗೆ ವಿರೋಧಗಳು ಬಂದ ಹಿನ್ನೆಲೆ, ಚಿತ್ರ ವೀಕ್ಷಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಚಿತ್ರದ ನಿರ್ಮಾಪಕರಾದ ಶಬಿನಾ ಖಾನ್, ತುಷಾರ್ ಕಪೂರ್ ಮತ್ತು ಅಕ್ಷಯ್ ಕುಮಾರ್ ಈಗ ತಮ್ಮ ಚಿತ್ರದ ಹೆಸರನ್ನು ಲಕ್ಷ್ಮೀ ಬಾಂಬ್ ಬದಲು ಲಕ್ಷ್ಮೀ ಎಂದು ಬದಲಾಯಿಸಲಿದ್ದಾರೆ.

ಇದನ್ನೂ ಓದಿ: ದ್ವೇಷಕಾರುವ ಚಾನೆಲ್‌ಗಳಿಗೆ ಜಾಹೀರಾತು ನಿಷೇಧ; ಬಜಾಜ್ & ಪಾರ್ಲೆಯನ್ನು ಶ್ಲಾಘಿಸಿದ ಬಾಲಿವುಡ್

ನವೆಂಬರ್ 9 ರಂದು ತೆರೆಗೆ ಬರಲಿರುವ ಚಿತ್ರಕ್ಕೆ ಅಖಿಲ ಭಾರತ ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸಿತ್ತು. ಈ ಚಿತ್ರ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುತ್ತದೆ ಎಂದು ರಾಜ್ಯ ಕಾರ್ಯಕಾರಿ ಅಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳ ಭಾವನೆಗಳನ್ನು ಈ ಚಿತ್ರ ಅವಮಾನಿಸಿದೆ. ಈ ಚಿತ್ರದಲ್ಲಿ ನಾಯಕನ ಹೆಸರು ಆಸಿಫ್, ನಾಯಕಿಯ ಹೆಸರು ಪ್ರಿಯಾ ಯಾದವ್ ಆಗಿದೆ. ಚಿತ್ರ “ಲವ್ ಜಿಹಾದ್” ಅನ್ನು ಪ್ರಚಾರ ಪಡಿಸುತ್ತದೆ ಹಾಗಾಗಿ ಚಲನಚಿತ್ರವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಕರೆ ನೀಡಿದ್ದರು.

“ಚಲನಚಿತ್ರ ನಿರ್ಮಾಪಕರು ಕೋಮು ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮೀ ಬಾಂಬ್ ಎಂಬ ಚಲನಚಿತ್ರವನ್ನು ನಿರ್ಮಿಸುವವರು ಎಂದಾದರೂ ತಸ್ಲೀಮಾ ಬಾಂಬ್ ಎಂಬ ಚಿತ್ರ ಮಾಡಲು ಧೈರ್ಯ ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದ್ದರು.

ಇನ್ನು ಈ ಚಿತ್ರವನ್ನು ಬಹಿಷ್ಕರಿಸುವಂತೆ ಅನೇಕ ಜನರು ಒತ್ತಾಯಿಸಿದ್ದಾರೆ. ಚಿತ್ರದ ಹೆಸರು ಹಿಂದು ದೇವತೆಗೆ ಅವಮಾನ ಮಾಡುತ್ತದೆ. ಇದರಿಂದ ಹಿಂದೂಗಳ ಭಾವನೆಗೆ ಪೆಟ್ಟು ಬೀಳುತ್ತದೆ ಎಂದು ಹೇಳಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲೂ #bycottlaxmibomb ಟ್ರೆಂಡಿಂಗ್ ಆಗಿದೆ.

ಇದನ್ನೂ ಓದಿ: PUBG ನಿಷೇಧದ ಬೆನ್ನಿಗೆ FAU-G ಅನಾವರಣಗೊಳಿಸಿದ ನಟ ಅಕ್ಷಯ್ ಕುಮಾರ್‌

 

ಹೀಗಾಗಿ ಚಿತ್ರದ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿ ರಜಪೂತ್ ಕರ್ಣಿ ಸೇನಾ ಪರವಾಗಿ ವಕೀಲ ರಾಘವೇಂದ್ರ ಮೆಹ್ರೋತ್ರಾ ಚಿತ್ರದ ನಿರ್ಮಾಪಕರಿಗೆ ನಿನ್ನೆ(ಅ.28) ಲೀಗಲ್ ನೋಟಿಸ್ ಕಳುಹಿಸಿದ್ದರು. ಲಕ್ಷ್ಮೀ ಬಾಂಬ್ ಚಿತ್ರದ ಹೆಸರು ಹಿಂದೂ ದೇವತೆ ಲಕ್ಷ್ಮಿಗೆ ಸಾಕಷ್ಟು ಅವಹೇಳನಕಾರಿ ಎಂದು ಲೀಗಲ್ ನೋಟಿಸ್‌ನಲ್ಲಿ ಹೇಳಲಾಗಿದೆ. ಲಕ್ಷ್ಮಿ ದೇವಿಯನ್ನು ಅವಮಾನಿಸಲು ತಯಾರಕರು ಉದ್ದೇಶಪೂರ್ವಕವಾಗಿ ಚಿತ್ರದ ಶೀರ್ಷಿಕೆಯನ್ನು ಇಟ್ಟುಕೊಂಡಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

ಅಕ್ಷಯ್ ಕುಮಾರ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಥ್ರಿಲ್ಲರ್ ಮತ್ತು ಹಾಸ್ಯ ತುಂಬಿರುವ ಚಿತ್ರ ಈಗ ಲಕ್ಷ್ಮಿ ಎಂದು ಹೆಸರು ಬದಲಾಗಿದೆ. ಈ ಚಿತ್ರವು ಲಾರೆನ್ಸ್ ನಿರ್ದೇಶನದ 2011 ರ ತಮಿಳು ಚಿತ್ರ ಕಾಂಚನ ರೀಮೇಕ್ ಆಗಿದೆ. ಇದು ಕನ್ನಡದಲ್ಲಿ ಕಲ್ಪನ ಹೆಸರಿನಲ್ಲಿಯಲ್ಲಿಯೂ ಸಹ ರೀಮೇಕ್ ಆಗಿತ್ತು. ‘ಲಕ್ಷ್ಮಿ’ ಲಾರೆನ್ಸ್  ಅವರ ನಿರ್ದೇಶನದ ಚೊಚ್ಚಲ ಹಿಂದಿ ಚಿತ್ರವಾಗಿದೆ.

ಚಿತ್ರದಲ್ಲಿ ಬರುವ ಕೆಲ ಪಾತ್ರಗಳ ಹೆಸರುಗಳನ್ನು ಇಟ್ಟುಕೊಂಡು ಚಿತ್ರ ಬಹಿಷ್ಕರಣೆಗೆ ಕರೆ ನೀಡುವುದು, ಚಿತ್ರದ ಹೆಸರು ಬದಲಾವಣೆಗೆ ಒತ್ತಾಯಿಸುವುದು ಇತ್ತಿಚೆಗೆ ಹೆಚ್ಚಾಗುತ್ತಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 2016 ರಲ್ಲಿ ತೆಲುಗಿನಲ್ಲಿ ಲಕ್ಷ್ಮಿ ಬಾಂಬ್ ಎಂಬ ಹೆಸರಿನ ಚಿತ್ರ ಬಿಡುಗಡೆಯಾಗಿತ್ತು.


ಇದನ್ನೂ ಓದಿ: ತನಿಷ್ಕ್ ಜಾಹೀರಾತಿಗೆ ಟ್ವಿಟ್ಟರ್‌ನಲ್ಲಿ ಭಾರಿ ಬೆಂಬಲ: ಅಂತರ್‌ಧರ್ಮೀಯ ವಿವಾಹಿತರ ಮನದಾಳದ ಮಾತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...