Homeಕರ್ನಾಟಕಮುತ್ತು ಸುತ್ತು: ಟಿಪ್ಪುವಿನ ಪ್ರಸ್ತುತ ಸ್ಥಿತಿ ಸಾರುವ ನಂದಿಬೆಟ್ಟಕ್ಕೊಮ್ಮೆ ಹೋಗಿಬನ್ನಿ

ಮುತ್ತು ಸುತ್ತು: ಟಿಪ್ಪುವಿನ ಪ್ರಸ್ತುತ ಸ್ಥಿತಿ ಸಾರುವ ನಂದಿಬೆಟ್ಟಕ್ಕೊಮ್ಮೆ ಹೋಗಿಬನ್ನಿ

ಆಧುನಿಕತೆ ಮತ್ತು ಮುನ್ನೋಟಕ್ಕೆ ಹೆಸರಾಗಿದ್ದ ಟಿಪ್ಪು ಸುಲ್ತಾನ್ ಇಲ್ಲೊಂದು ಬೇಸಿಗೆ ಅರಮನೆ ಕಟ್ಟಿಸಿದ್ದಾರೆ. ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸೋಲನ್ನಪ್ಪಿದ ಬಳಿಕ ಇದು ಬ್ರಿಟಿಷರ ಕೈವಶವಾಯಿತು.

- Advertisement -
- Advertisement -

ಆಕಾಶದಲ್ಲಿ ಮೋಡಗಳು ಸ್ವಚ್ಛಂದವಾಗಿ ತೇಲಾಡುವಾಗ ಅದರ ಮೇಲೊಮ್ಮೆ ಕೂರಬೇಕೆಂದು ಯಾರಿಗೆ ತಾನೇ ಅನಿಸುವುದಿಲ್ಲ. ಅಂತ ಬಯಕೆ ನಿಮಗೇನಾದರೂ ಬಂದಿದ್ದಲ್ಲಿ ಅದನ್ನು ನನಸಾಗಿಸುವ ಅವಕಾಶ ಈ ತಿಂಗಳಲ್ಲಿ ಲಭ್ಯವಿದೆ. ಅದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ.. ಬೆಂಗಳೂರಿನಿಂದ ಹೊರಡುವುದಿದ್ದರೆ ಅರ್ಧದಿನ ಸಮಯ ಹೊಂದಿಸಿಕೊಳ್ಳುವುದು.

ಈ ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆಯೇ ಬೈಕ್ ಅಥವಾ ಕಾರ್ ಹತ್ತಿ ಹೊರಟರೆ ನಂದಿಬೆಟ್ಟಕ್ಕೆ ಕೇವಲ ಒಂದೂವರೆ ಗಂಟೆಗಳ (63 ಕಿ.ಮೀ) ಪ್ರಯಾಣ. ನಾನು ಸೆಪ್ಟಂಬರ್ 8 ರಂದು ನನ್ನ ಬೈಕ್ ಹತ್ತಿ ಹೊರಟೆ. ಯಲಹಂಕ ಮೇಲಿಂದ ಪ್ರಯಾಣ ಬೆಳೆಸಿ ದೇವನಹಳ್ಳಿ ದಾಟಿದೊಡನೆ ಎಡಕ್ಕೆ ತಿರುಗಿದರೆ ನಿಮಗೆ ನಂದಿ ಬೆಟ್ಟ ಕಾಣಸಿಗುತ್ತದೆ. ರಸ್ತೆಯ ಎರಡೂ ಬದಿಗೂ ಹಸಿರು ಮರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೋಗುವ ರಸ್ತೆಯೇ ಚೆಂದ.

ಈ ಮೊದಲು ಬೆಳಿಗ್ಗೆ 5-6 ಗಂಟೆಗೇ ನಂದಿಬೆಟ್ಟಕ್ಕೆ ಪ್ರವೇಶವಿರುತ್ತಿತ್ತು. ಸುತ್ತಲು ಕಾವಳ ಮುತ್ತಿ 15-20 ಅಡಿ ದೂರದವರೆಗೆ ಮಾತ್ರ ಕಾಣುವಂತೆ ಮಂಜು ಆವರಿಸುತ್ತಿತ್ತು. ಆನಂತರ ನೀವು ಬೆಟ್ಟದ ತುದಿಯಲ್ಲಿ ಕುಳಿತು ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬಹುದಿತ್ತು. ಇನ್ನು ದಿನವಿಡೀ ಆ ದಟ್ಟ ಕಾನನದಲ್ಲಿ ಸುತ್ತಾಡಿ, ವಿರಮಿಸಿ, ಹೊಟ್ಟೆ ತುಂಬ ಊಟ ಮಾಡಿ ಸಂಜೆಗೆ ಸೂರ್ಯಾಸ್ತವನ್ನು ನೋಡಿ ವಾಪಸ್ ಬರಬಹುದಿತ್ತು. ಇವೆಲ್ಲವೂ ಅದ್ಭುತ ಅನುಭವ. ಆದರೆ ಈಗ ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಆ ಅನುಭವಕ್ಕೆ ಅಡ್ಡಿಯಾಗಿದೆ. ಈಗ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶಾವಕಾಶವಿದೆ.

ಆದರೂ ನೀವು ಮೇಘಗಳ ಜೊತೆಗೆ ನಿಂತು ಅವುಗಳ ಹಿಂಡನ್ನು ನೋಡಲು ಈಗಲೂ ಸಾಧ್ಯವಿದೆ. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ನೀವು ನಂದಿ ಬೆಟ್ಟದ ಮೇಲಿದ್ದರೆ ನಿಮ್ಮ ಕೆಳಗೆ ಮೋಡಗಳ ಹಿಂಡು ಚಲಿಸುವುದು ಗೋಚರಿಸುತ್ತದೆ. ಆ ಮೋಡಗಳ ಸಾಲು ಬಂದು ಬೆಟ್ಟಕ್ಕೆ ಢಿಕ್ಕಿ ಹೊಡೆದು ಮಾಯವಾಗುತ್ತವೆ. ಸಾಮಾನ್ಯವಾಗಿ ಎತ್ತರದ ಎಲ್ಲಾ ಗಿರಿ ಶಿಖರಗಳಲ್ಲಿಯೂ, ಚಳಿಗಾಲದಲ್ಲಿ ಈ ದೃಶ್ಯ ಸಾಮಾನ್ಯ. ಆದರೆ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಥರದ ಬಹಳ ಎತ್ತರದ ಬೆಟ್ಟಗಳಲ್ಲಿ ನಮ್ಮ ಸುತ್ತಲೂ ಮಂಜು ತುಂಬಿ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ.

ಇದನ್ನೂ ನೋಡಿ: Exploring Nandi Hills ಮೊಗೆದಷ್ಟು ನೀರು ನಂದಿ ಬೆಟ್ಟ.. ನಂದಿ ಬೆಟ್ಟಕ್ಕೆ ಬೈಕ್ ರೈಡಿಂಗ್

 

ಚಿಕ್ಕಬಳ್ಳಾಪುರ ಜಿಲ್ಲಾವ್ಯಾಪ್ತಿಗೆ ಬರುವ, ಚಿಕ್ಕಬಳ್ಳಾಪುರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟದಲ್ಲಿ ನೀವು ಎಷ್ಟು ಹೊತ್ತು ಇದ್ದರೂ ಬೇಸರಿಸದೆ ನೋಡಬಹುದಾದ ಸ್ಥಳಗಳಿವೆ. ನಂದಿ ಬೆಟ್ಟ ಸಮುದ್ರ ಮಟ್ಟದಿಂದ 5841 ಅಡಿ ಎತ್ತರದಲ್ಲಿರುವ ಗಿರಿ ಶಿಖರ. ಚೋಳರ ಕಾಲದಲ್ಲಿ ಇಲ್ಲಿ ಕೋಟೆಗಳನ್ನು, ದೇವಾಲಯಗಳನ್ನು ಕಟ್ಟಲಾಯಿತು. ನಂತರ ಟಿಪ್ಪು ಸುಲ್ತಾನನ ಕಾಲದಲ್ಲಿ ಅವನ್ನು ಮತ್ತಷ್ಟು ಭದ್ರಪಡಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.

ಆಧುನಿಕತೆ ಮತ್ತು ಮುನ್ನೋಟಕ್ಕೆ ಹೆಸರಾಗಿದ್ದ ಟಿಪ್ಪು ಸುಲ್ತಾನ್ ಇಲ್ಲೊಂದು ಬೇಸಿಗೆ ಅರಮನೆ ಕಟ್ಟಿಸಿದ್ದಾರೆ. 1791ರಲ್ಲಿ ಟಿಪ್ಪು ಮತ್ತು ಬ್ರಿಟಿಷರ ನಡುವೆ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸೋಲನ್ನಪ್ಪಿದ ಬಳಿಕ ಇದು ಬ್ರಿಟಿಷರ ಕೈವಶವಾಯಿತು. ನಂತರ ಹಲವು ಬ್ರಿಟಿಷ್ ಅಧಿಕಾರಿಗಳು ಇಲ್ಲಿ ತಂಗುತ್ತಿದ್ದರು ಎನ್ನಲಾಗಿದೆ. ಆದರೆ ಇಂದು ಟಿಪ್ಪುವಿನ ಆ ಬೇಸಿಗೆ ಅರಮನೆ ಸರಿಯಾದ ಮೇಲ್ವೀಚಾರಣೆ ಮತ್ತು ನಿರ್ವಹಣೆ ಇಲ್ಲದ ಕಾರಣ ಅನಾಥವಾಗಿ ಬಿದ್ದಿದೆ. ಐತಿಹಾಸಿಕ ಮಹತ್ವ ಹೊಂದಿದ್ದ ಈ ಪಾರಂಪರಿಕ ತಾಣ ಪಾಳುಬಿದ್ದ ಮನೆಯ ರೀತಿ ಕಾಣುತ್ತಿದೆ. ಇನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿ ಅಪರಾಧಿಗಳನ್ನು ಶಿಕ್ಷಿಸುವುದಕ್ಕಾಗಿ ಬಳಸುತ್ತಿದ್ದ ಟಿಪ್ಪು ಡ್ರಾಪ್ ಎಂಬ ದುರ್ಗಮ ಸ್ಥಳ ಇಂದು ಪ್ರವಾಸಿಸ್ಥಳವಾಗಿ ಬದಲಾವಣೆಯಾಗಿದೆ. ಇಲ್ಲಿಂದ ಕಡಿದಾದ ಆಳವನ್ನು ನೋಡಬಹುದು. ಬಂಡೆ ಮೇಲೆ ಕುಳಿತು ಮೋಡಗಳ ಹಿಂಡನ್ನು, ಅದರ ನೆರಳನ್ನು ಕಾಣಬಹುದು. ಸಂಜೆಯಾಗುತ್ತಿದ್ದಂತೆ ಸೂರ್ಯಾಸ್ತವನ್ನು ನೋಡಲು ಪ್ರಶಸ್ತವಾದ ಜಾಗ ಇದು.

ಟಿಪ್ಪು ಸುಲ್ತಾನ್ ಕಟ್ಟಿಸಿದ್ದ ಬೇಸಿಗೆ ಅರಮನೆ

ಯೋಗ ನಂದೀಶ್ವರ ಸ್ವಾಮಿ ದೇವಾಲಯ, ಗವಿ ವೀರಭದ್ರಸ್ವಾಮಿ ದೇವಾಲಯ, ನೆಲ್ಲಿಕಾಯಿ ಬಸವಣ್ಣ ದೇವಾಲಯ ಸೇರಿ ಹಲವು ದೇವಾಲಯಗಳು ಬೆಟ್ಟದಲ್ಲಿವೆ. ನಂದಿ ಬೆಟ್ಟದಲ್ಲಿನ ಇತರ ಆಕರ್ಷಣೆಯೆಂದರೆ ಬೆಟ್ಟದ ಮೇಲಿಂದ ಸುತ್ತಲಿನ ವಿಹಂಗಮ ನೋಟ. ನೋಡಲು ಹಲವು ವ್ಯೂ ಪಾಯಿಂಟ್‌ಗಳು ಇಲ್ಲಿವೆ. ತೋಟಗಾರಿಕೆ ಇಲಾಖೆಯ ಕೈತೋಟಗಳು, ದೊಡ್ಡ ದೊಡ್ಡ ಮರಗಳು ಇಲ್ಲಿವೆ. ಇಲ್ಲಿ ಹುಟ್ಟುವ ಪಾಲರ್ ಮತ್ತು ಅರ್ಕಾವತಿ ನದಿಮೂಲಗಳ ವೀಕ್ಷಣೆ ಮುದನೀಡುತ್ತವೆ.

ದೂರದ ಊರಿಂದ ಬರುವವರು ರಾತ್ರಿಯೇ ಬಂದು ಇಲ್ಲಿ ಉಳಿದು ಬೆಳಿಗ್ಗೆ ಬೆಟ್ಟಕ್ಕೆ ಬರಬಹುದು. ಬೆಟ್ಟದ ತಪ್ಪಲಿನಲ್ಲಿ ಪ್ರವಾಸಿಮಂದಿರ ಮತ್ತು ಹೋಟೆಲ್‌ಗಳಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವೆಜ್ ಮತ್ತು ನಾನ್‌ವೆಜ್ ಹೋಟೆಲ್ ಒಂದನ್ನು ತೆರೆದಿದೆ. ಇದು ಪ್ಲಾಸ್ಟಿಕ್ ನಿಷೇಧ ವಲಯವಾಗಿದ್ದು ಹೊರಗಿನಿಂದ ನೀರು, ತಿಂಡಿ ತರಲು ಅವಕಾಶವಿಲ್ಲ. ನಂದಿ ಬೆಟ್ಟದಲ್ಲಿಯೇ ತಿಂಡಿ ತಿನಿಸುಗಳು ಲಭ್ಯವಿದ್ದು ಕೋತಿಗಳ ಸಂಖ್ಯೆ ಹೆಚ್ಚಿರುವುದರಿಂದ ನೀವು ತಿಂದು ಅವುಗಳಿಗೂ ಕೊಡಬಹುದು. ಕೋತಿಗಳ ಸಂಗಡ ಸಣ್ಣ ಮಕ್ಕಳಿಗೆ ಹಬ್ಬವಾಗುವುದಂತೂ ನಿಜ.

ನಂದಿಬೆಟ್ಟದ ಪಕ್ಕದಲ್ಲಿಯೇ ಸ್ಕಂದಗಿರಿ ಮತ್ತು ಚನ್ನಗಿರಿ ಎಂಬ ಇನ್ನೆರಡು ಸುಂದರ ಬೆಟ್ಟಗಳಿವೆ. ಚಿಕ್ಕಬಳ್ಳಾಪುರಕ್ಕೆ ಹೋಗುವ ದಾರಿಯಲ್ಲಿ ಭೋಗ ನಂದೀಶ್ವರ ದೇವಾಲಯವಿದೆ. ಒಟ್ಟಿನಲ್ಲಿ ಅರ್ಧದಿನ ಅಥವಾ ದಿನವಿಡೀ ಕಳೆಯಲು ಇದು ಪ್ರಶಸ್ತ ಸ್ಥಳವಾಗಿದೆ.


ಇದನ್ನೂ ಓದಿ: ಜಗತ್‌ ಪ್ರಸಿದ್ಧ ಪ್ರತಿರೋಧದ ಹಾಡು! – ರೈತರ ಹೋರಾಟದಲ್ಲೂ ಪ್ರತಿಧ್ವನಿಸಿದ ‘ಬೆಲ್ಲಾ ಚಾವ್’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಜಾಮೀನಿಗೆ ದೆಹಲಿ ಪೊಲೀಸರ ವಿರೋಧ

2020ರ ಈಶಾನ್ಯ ದೆಹಲಿ ಕೋಮು ಗಲಭೆಯ ಹಿಂದಿನ ಪ್ರಮುಖ ಸಂಚುಕೋರರು ಎಂದು ಆರೋಪಿಸಿರುವ ದೆಹಲಿ ಪೊಲೀಸರು, ಕಾರಾಗೃಹದಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದೆಹಲಿ...

‘ಆರ್‌ಎಸ್‌ಎಸ್-ಬಿಜೆಪಿಯ ರಕ್ತನಾಳಗಳಲ್ಲಿ ತಾರತಮ್ಯ ಹರಿಯುತ್ತಿದೆ’: ಖರ್ಗೆ ರ್ಯಾಲಿ ಸ್ಥಳದ ‘ಶುದ್ಧೀಕರಣ’ ಸಮರ್ಥಿಸಿಕೊಂಡ ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ಕಾಂಗ್ರೆಸ್ ಕಿಡಿ

ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ನಂತರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಸ್ಥಳೀಯ ‘ಶುದ್ಧೀಕರಣ’ ಸಮಾರಂಭದ ಸುತ್ತಲಿನ ರಾಜಕೀಯ ವಿವಾದವು ತೀವ್ರ ಸ್ವರೂಪ...

ಯುಜಿಸಿಇಟಿ ಸೀಟು ರದ್ದುಗೊಳಿಸಲು ರೂ.5,000 ಶುಲ್ಕ; ಕೆಇಎ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಯುಜಿಸಿಇಟಿ 2026ರ ಎರಡನೇ ಹಂತದ ಕೌನ್ಸಿಲಿಂಗ್‌ನಲ್ಲಿ ಹಂಚಿಕೆಯಾದ ಸೀಟುಗಳನ್ನು ರದ್ದುಗೊಳಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ರೂ.5,000 ದಂಡ ವಿಧಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಧಾರವನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಮಲ್ಲೇಶ್ವರದಲ್ಲಿರುವ ಕೆಇಎ...

162 ವರ್ಷಗಳ ಇತಿಹಾಸದಲ್ಲೇ ಪ್ರಥಮ: ಬಾಂಬೆ ಹೈಕೋರ್ಟ್ ವಕೀಲರ ಸಂಘಕ್ಕೆ ಮಹಿಳಾ ಅಧ್ಯಕ್ಷೆ! 

ಮುಂಬೈ: ಭಾರತೀಯ ನ್ಯಾಯಾಂಗ ರಂಗದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕ್ರಾಂತಿಕಾರಿ ನಿರ್ಧಾರವೊಂದನ್ನು ಬಾಂಬೆ ಹೈಕೋರ್ಟ್‌ನ ಪ್ರತಿಷ್ಠಿತ ವಕೀಲರ ಸಂಘಟನೆಯಾದ 'ಅಸೋಸಿಯೇಷನ್‌ ಆಫ್‌ ಅಡ್ವೊಕೇಟ್ಸ್‌ ಆಫ್‌ ವೆಸ್ಟರ್ನ್ ಇಂಡಿಯಾ' (AAWI) ಕೈಗೊಂಡಿದೆ ಎಂದು...

ಫ್ರೀಡಂ ಪಾರ್ಕ್‌: ಧರಣಿಗೆ 1 ಲಕ್ಷ ರೂ. ಶುಲ್ಕ? ಜಿಬಿಎ ನಡೆಗೆ ಹೋರಾಟಗಾರರ ಆಕ್ರೋಶ

ಬೆಂಗಳೂರಿನ ಐತಿಹಾಸಿಕ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಾಗೂ ಧರಣಿ ನಡೆಸಲು ದಿನಕ್ಕೆ 1 ಲಕ್ಷ ರೂ. ಶುಲ್ಕ ಮತ್ತು 10,000 ರೂ. ಮುಂಗಡ ಠೇವಣಿ ವಿಧಿಸಲಾಗುತ್ತಿದೆ ಎಂಬ ಸುದ್ದಿ ಸಾರ್ವಜನಿಕ ಹಾಗೂ ಹೋರಾಟಗಾರರ...

ಅಧಿಕಾರದಲ್ಲಿರುವವರ ವಿರುದ್ಧ ಮಾತನಾಡುವ ಭಯವನ್ನು ನೀಟ್ ಚಳವಳಿ ಹೋಗಲಾಡಿಸಿದೆ: ನೇಹಾ ಬೋರಾ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ 'ಜೆನ್ ಜಿ' ಚಳವಳಿಯು ಜನರಲ್ಲಿದ್ದ ಭಯವನ್ನು ಹೋಗಲಾಡಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ಆರ್‌ಎಸ್‌ಎಸ್‌ನವರು ವಿದ್ಯಾರ್ಥಿ ಮತ್ತು ಯುವಜನರನ್ನು ತಲುಪುವಂತೆ ಮಾಡಿದೆ ಎಂದು ಆಲ್...

Karnataka SIR : ನಿರ್ದೋಷಿ ಜನರೇಕೆ ದಾಖಲೆಗಾಗಿ ಅಲೆದಾಡಬೇಕು? ಲಾಜಿಕಲ್ ಡಿಸ್ಕ್ರಿಪೆನ್ಸಿ ನೋಟಿಸ್‌ಗೆ ನಾಗರಿಕ ಸಂಘಟನೆಗಳ ಆಕ್ಷೇಪ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಭಾಗವಾಗಿ ಮತದಾರರಿಗೆ ನೋಟಿಸ್ ನೀಡಲು ಮುಂದಾಗಿರುವ ಚುನಾವಣಾ ಆಯೋಗದ ಕ್ರಮವನ್ನು ನಾಗರಿಕ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಆಗಸ್ಟ್ 25ರಂದು ಎಸ್‌ಐಆರ್‌ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ...

ಮಳೆಯೇ ಇಲ್ಲದೆ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಕಾರಣವೇನು?

ನೇಪಾಳ-ಟಿಬೆಟ್ ಗಡಿಭಾಗದ ಹಿಮಾಲಯ ಪ್ರದೇಶದಲ್ಲಿ ಹಿಮನದಿ ಇದ್ದಕ್ಕಿದ್ದಂತೆ ಕರಗಿ ಕುಸಿದ ಪರಿಣಾಮ ಭೀಕರ ಪ್ರವಾಹ ಉಂಟಾಗಿದೆ. ಈ ವಿಕೋಪದಲ್ಲಿ ಇದುವರೆಗೆ 160ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, 800ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು...

ರಾಹುಲ್ ಗಾಂಧಿ ಅವರ ‘ಛಾತ್ರೋನ್ ಕೀ ಗೂಂಜ್’ಗೆ ಹೇಳಿಕೆಗಳ ಫ್ಯಾಕ್ಟ್-ಚೆಕ್: ಬಿಜೆಪಿಯಿಂದ ‘ಜೂಠ್ ಕೀ ಗೂಂಜ್’ ವೆಬ್‌ಸೈಟ್ ಆರಂಭ

ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಅವರ 'ಛಾತ್ರೋನ್ ಕೀ ಗೂಂಜ್' ಅಭಿಯಾನದ ವೇಳೆ ನೀಡಲಾದ ಹೇಳಿಕೆಗಳನ್ನು ಫ್ಯಾಕ್ಟ್-ಚೆಕ್ (ಸತ್ಯಾಸತ್ಯತೆ ಪರಿಶೀಲನೆ) ಮಾಡುವ ವೆಬ್‌ಸೈಟ್‌ ಒಂದನ್ನು ಉಲ್ಲೇಖಿಸಿರುವ ಬಿಜೆಪಿ, "ರಾಹುಲ್...

101 ತಾಲ್ಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿದ ರಾಜ್ಯ ಸರ್ಕಾರ

ಮಳೆ ಕೊರತೆಯಿಂದ ತತ್ತರಿಸಿರುವ ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಬರ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಸರ್ಕಾರವು ₹350...