Homeಕರ್ನಾಟಕವಿಜಯಾ ಬ್ಯಾಂಕ್ ವಿಲೀನ - ನಷ್ಟದ ಗುಜರಾತಿ ಬ್ಯಾಂಕ್ ಉಳಿಸಲು ಕನ್ನಡದ ಬ್ಯಾಂಕ್ ಬಲಿಕೊಟ್ಟರಾ ಮೋದಿ?

ವಿಜಯಾ ಬ್ಯಾಂಕ್ ವಿಲೀನ – ನಷ್ಟದ ಗುಜರಾತಿ ಬ್ಯಾಂಕ್ ಉಳಿಸಲು ಕನ್ನಡದ ಬ್ಯಾಂಕ್ ಬಲಿಕೊಟ್ಟರಾ ಮೋದಿ?

- Advertisement -
- Advertisement -

| ನಹುಷ |

ಏಪ್ರಿಲ್ 1ರಂದು ವಿಲೀನದ ಹೆಸರಿನಲ್ಲಿ ಅಜಮಾಸು ಒಂಬತ್ತು ದಶಕಗಳ ಇತಿಹಾಸವಿದ್ದ ಕನ್ನಡ ನೆಲದ ವಿಜಯ ಬ್ಯಾಂಕ್‌ನ ಉಸಿರು ನಿಲ್ಲಿಸಲಾಗಿದೆ. ಮೇಲ್ನೋಟಕ್ಕೆ ಇದು ವ್ಯವಹಾರವನ್ನು ಸರಳಗೊಳಿಸುವ ಪ್ರಕ್ರಿಯೆಯಂತೆ ಕಂಡುಬಂದರೂ ಆಂತರ್ಯದಲ್ಲಿ ಅಪಾಯಕಾರಿ ಕಾರ್ಪೊರೇಟ್ ಅಜೆಂಡಾವನ್ನು ಹೊಂದಿದೆ. ವಿಜಯಾ ಬ್ಯಾಂಕ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಳಗೆ ವಿಲೀನ ಮಾಡುವುದನ್ನು ವಿರೋಧಿಸಿದರೂ ತಲೆ ಕೆಡಿಸಿಕೊಳ್ಳದ ಕೇಂದ್ರ ಸರ್ಕಾರದ ಕ್ರಮದ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆ. ಬ್ಯಾಂಕ್‌ಗಳು ಉದ್ಯಮಿಗಳಿಗೆ ಕೋಟಿಗಟ್ಟಲೆ ಸಾಲ ಕೊಟ್ಟು, ಅವರೆಲ್ಲ ಅನಾಯಾಸವಾಗಿ ದೇಶ ಬಿಟ್ಟು ಪರಾರಿಯಾಗಿ ಸಾಲ ಕೊಟ್ಟ ಬ್ಯಾಂಕುಗಳನ್ನೇ ದಿವಾಳಿಯಂಚಿಗೆ ತಳ್ಳುತ್ತಿರುವ ಈ ಹಂತದಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ಈ ಕ್ರಮ ಬೇರೆಯದೇ ಹಕೀಕತ್ತುಗಳನ್ನು ಒಳಗೊಂಡಿದೆ. ಏನು ಆ ಹಕೀಕತ್ತುಗಳು, ಜನರ ದುಡ್ಡು ಹೇಗೆಲ್ಲ ಯಾಮಾರುವ ಸಾಧ್ಯತೆ ಇದೆ ಅನ್ನೋದನ್ನು ಈ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ರಿಸರ್ವ್ ಬ್ಯಾಂಕಿನ ಮೀಸಲು ನಿಧಿ ಬಳಸಿಕೊಳ್ಳಲು ಹೆಣಗಾಡಿ ಸೋತ ಕೇಂದ್ರ ಸರ್ಕಾರ ಈಗ ಬ್ಯಾಂಕ್ ವಿಲೀನದ ವಿಕೃತ ಆಟ ಆರಂಭಿಸಿದೆ! ನಷ್ಟದಲ್ಲಿರುವ ಬ್ಯಾಂಕುಗಳನ್ನು ಲಾಭದ ಬ್ಯಾಂಕ್‌ನಲ್ಲಿ ಸೇರಿಸುವ ಮೋದಿ ತಂಡದ ಮಸಲತ್ತಿನಲ್ಲಿ ಇಡೀ ಬ್ಯಾಂಕಿಂಗ್ ಕ್ಷೇತ್ರವನ್ನೇ ಖಾಸಗಿಯವರಿಗೆ ವಹಿಸುವ ರಹಸ್ಯ ಕಾರ್ಯಸೂಚಿ ಅಡಗಿದೆ. ವಿಲೀನದ ನಂತರ ಸಹಜವಾಗೇ ಹಾನಿಗೊಳಗಾಗುವ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಹುನ್ನಾರವಿದು!

ಇಂದಿರಾ ಗಾಂಧಿಯವರು ಬ್ಯಾಂಕ್ ರಾಷ್ಟ್ರೀಕರಣದ ದಿಟ್ಟ ನಿರ್ಧಾರದಿಂದ ಬ್ಯಾಂಕುಗಳು ಜನಸಾಮಾನ್ಯರಿಗೂ ಕೈಗೆಟಕುವಂತೆ ಮಾಡಿದ್ದರು. ಆದರೆ ಮೋದಿಯವರು ಮತ್ತೆ ಬ್ಯಾಂಕುಗಳನ್ನು ಖಾಸಗೀಕರಣ ಮಾಡಿ ವಂಚಕ ವರ್ತಕರಿಗಷ್ಟೇ ಸೀಮಿತಗೊಳಿಸುತ್ತಿದ್ದಾರಾ ಎಂಬ ಅನುಮಾನ ಇತ್ತೀಚಿನ ಅವರ ನಡೆಗಳಿಂದ ಮೂಡುತ್ತದೆ. ಕೆಲವು ತಿಂಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರು-ವಿಶ್ವೇಶ್ವರಯ್ಯನವರ ಕಾಲದಲ್ಲಿ ಸ್ಥಾಪನೆಯಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲೀನ ಮಾಡಲಾಗಿತ್ತು. ಈಗ ಕರಾವಳಿ ಜನ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ವಿಜಯ ಬ್ಯಾಂಕನ್ನು ಗುಜರಾತಿ ಬನಿಯಾಗಳ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನ ಮಾಡಲಾಗಿದೆ. ಮಹಾರಾಷ್ಟ್ರದ ದೇನಾ ಬ್ಯಾಂಕ್ ಸಹ ಈ ವಿಲೀನದಲ್ಲಿ ಸೇರಿದೆ. ಮೊದಲು ಕರಾವಳಿಯ ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‌ಗಳನ್ನೆಲ್ಲ ಸೇರಿಸಿ ಒಂದೇ ಬ್ಯಾಂಕ್ ಮಾಡಲಾಗುತ್ತದೆಂಬ ಮಾತು ಕೇಳಿಬಂದಿತ್ತು. ಆದರೆ ಲಾಭದ ವಿಜಯಾ ಬ್ಯಾಂಕನ್ನು ಮಾತ್ರ ನಷ್ಟದ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನದ ಕರಾಮತ್ತು ನಡೆದಿದೆ.

ಸುಂದರ ರಾಮ ಶೆಟ್ಟಿ

ವಿಜಯ ಬ್ಯಾಂಕ್ ಅಂದರೆ, ಅದು ಕರ್ನಾಟಕ-ಕರಾವಳಿಯ ತುಳುವರ ಅಸ್ಮಿತೆಯ ಆಸ್ತಿ; ಸ್ಥಳೀಯ ಬಂಟ ಸಮುದಾಯದ ಆತ್ಮಾಭಿಮಾನದ ಸಂಕೇತ. ಈ ಸಮುದಾಯದ ಶ್ರಮ-ಸಾಹಸದ ಫಲವಾಗಿ ವಿಜಯ ಬ್ಯಾಂಕ್ ಲಾಭದಾಯಕ ಆರ್ಥಿಕ ಆಡಳಿತದ ಬರೋಬ್ಬರಿ 2,129 ಶಾಖೆಗಳ ಬೃಹತ್ ಪ್ರತಿಷ್ಠಿತ ಉದ್ಯಮವಾಗಿ ದೇಶಾದ್ಯಂತ ಕಂಗೊಳಿಸುತ್ತಿತ್ತು! 23 ಅಕ್ಟೋಬರ್ 1931ರಲ್ಲಿ ಎ.ಬಿ.ಶೆಟ್ಟಿ (ಅತ್ತಾವರ ಬಾಲಕೃಷ್ಣ ಶೆಟ್ಟಿ) ಪ್ರಗತಿಪರ ರೈತರ ಸಹಕಾರದಿಂದ ಬಂಟ್ಸ್ ಹಾಸ್ಟೆಲ್ ಬಳಿಯ ಪುಟ್ಟ ಕೊಠಡಿಯಲ್ಲಿ ಬ್ಯಾಂಕ್ ಹುಟ್ಟುಹಾಕಿದ್ದರು. ವಿಜಯ ದಶಮಿ ದಿನದಂದು ಬ್ಯಾಂಕ್ ಸ್ಥಾಪನೆಯಾಗಿದ್ದರಿಂದ ಅದಕ್ಕೆ “ವಿಜಯ ಬ್ಯಾಂಕ್” ಎಂದು ನಾಮಕರಣ ಮಾಡಲಾಗಿತ್ತು. ತುಳುನಾಡಿನ ದುರ್ಬಲ ರೈತರು, ಅಮಾಯಕ ಮಂದಿಯ ಆರ್ಥಿಕ ಅನುಕೂಲದ ಉದ್ದೇಶದಿಂದ ಜನ್ಮತಳೆದಿದ್ದ ವಿಜಯ ಬ್ಯಾಂಕಿಗೆ ಆಧುನಿಕ ಸ್ಪರ್ಶ ಕೊಟ್ಟು ದೇಶಾದ್ಯಂತ ಹಬ್ಬಿಸಿದ್ದು ಮುಲ್ಕಿ ಸುಂದರ ರಾಮಶೆಟ್ಟಿ. ಆ ಕಾಲದ ಮಂಗಳೂರಿನ ಪ್ರತಿಷ್ಠಿತ ಬ್ಯಾಂಕ್ ಅನ್ನಿಸಿದ್ದ ಜಯಲಕ್ಷ್ಮೀ ಬ್ಯಾಂಕ್ ಸೇರಿದಂತೆ ಇನ್ನಿತರ ಹದಿನಾಲ್ಕು ಬ್ಯಾಂಕ್‌ಗಳು ವಿಜಯ ಬ್ಯಾಂಕ್‌ನಲ್ಲಿ ವಿಲೀನವಾಗಿದ್ದವು.

ಎ.ಬಿ ಶೆಟ್ಟಿ

ಪ್ರಗತಿಪರ ರೈತರ ಪರಿಶ್ರಮದಿಂದ ಪ್ರಗತಿಯತ್ತ ಸಾಗಿದ ವಿಜಯ ಬ್ಯಾಂಕ್‌ನ 27 ಶಾಖೆಗಳು 1975ರಲ್ಲಿ ಒಂದೇ ದಿನ ತೆರೆಯಲ್ಪಟ್ಟಿದ್ದು ಬ್ಯಾಂಕಿಂಗ್ ವಲಯದಲ್ಲೊಂದು ಅಚ್ಚಳಿಯದ ಸಾಧನೆ! ಇವತ್ತು ವಿಜಯ ಬ್ಯಾಂಕಿನ 583 ಶಾಖೆಗಳು ಕರ್ನಾಟಕದಲ್ಲಿದ್ದರೆ, ಉಳಿದದ್ದು ದೇಶದ ವಿವಿಧೆಡೆ ಗ್ರಾಹಕಸ್ನೇಹಿಯಾಗಿ ವ್ಯವಹರಿಸುತ್ತಿದ್ದವು. ಗ್ರಾಮಿಣ ಪ್ರದೇಶದಲ್ಲೇ ಶೇ.50ರಷ್ಟು ಶಾಖೆಗಳಿರುವುದು ವಿಜಯ ಬ್ಯಾಂಕಿನ ಹೆಚ್ಚುಗಾರಿಕೆ. ಸಿಂಡಿಕೇಟ್ ಬ್ಯಾಂಕಿಗೆ ಹೇಗೆ ಕೊಂಕಣಿಗರ ಬ್ಯಾಂಕ್ ಎಂದೇ ಛಾಪು ಬಿದ್ದಿದೆಯೋ ಹಾಗೆ ವಿಜಯಾ ಬ್ಯಾಂಕ್ ಅಂದರೆ, ಬಂಟರ ಬ್ಯಾಂಕ್ ಎಂದೇ ಹೆಸರುವಾಸಿ. ಈ ಎರಡು ಬ್ಯಾಂಕುಗಳಿಂದ ಎಲ್ಲ ಸಮುದಾಯದವರಿಗೆ ಪ್ರಯೋಜನವಾಗಿದೆ.

ಬಂಟರು ದೇಶಕ್ಕೆ ಕೊಟ್ಟ ಕೊಡುಗೆಯಲ್ಲಿ ವಿಜಯಾ ಬ್ಯಾಂಕ್ ಎದ್ದು ಕಾಣುವಂತದ್ದು. ರಾಜ್ಯದ ಹಿಡಿತದಲ್ಲಿರುವ ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ನಿರಂತರ ಲಾಭದ ಬ್ಯಾಂಕ್ ಎಂದೇ ಗುರುತಿಸಿಕೊಂಡಿದೆ. ಇಂಥ ಹೆಗ್ಗಳಿಕೆ ಸಾಧನೆಯ ಜನಾನುರಾಗಿ ಬ್ಯಾಂಕನ್ನು ನಾಮಾವಶೇಷ ಮಾಡಲು ಮೋದಿಯ ಕೇಂದ್ರ ಸರ್ಕಾರ ಸಂಚು ಹೂಡಿರುವುದಾದರು ಯಾಕೆ? ಈ ಪ್ರಶ್ನೆಗೆ ಸರ್ಕಾರದ ಬಳಿ ಸಮರ್ಪಕವಾದ ಉತ್ತರವೇ ಇಲ್ಲ.

ಗುಜರಾತಿ ಲಾಬಿ ಅವಸಾನದ ಅಂಚಲ್ಲಿರುವ ತಮ್ಮ ಬ್ಯಾಂಕ್ ಆಫ್ ಬರೋಡ ಎಂಬ ಬರಡು ಆರ್ಥಿಕ ಅಡ್ಡೆಯನ್ನು ಬಚಾವು ಮಾಡಲು ವಿಜಯಾ ಬ್ಯಾಂಕಿನ ಬಲಿ ಕೇಳುತ್ತಿದೆ!! ಮುಳುಗುತ್ತಿರುವ ಮಹಾರಾಷ್ಟ್ರದ ದೇನಾ ಬ್ಯಾಂಕನ್ನು ನೆಪಕ್ಕಷ್ಟೇ ಈ ವಿಲೀನದಲ್ಲಿ ಸೇರಿಸಲಾಗಿದೆ. ಮೂರು ಬ್ಯಾಂಕನ್ನು ಸ್ಯಾಂಡ್‌ವಿಚ್ ಮಾಡಿ ಪಾಪರ್ ಹಾದಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಹೆಸರನ್ನು ಏಕೀಕೃತ ಸಂಸ್ಥೆಗೆ ಇಡಲಾಗಿದೆ.

ವಿಲೀನದ ವಿರುದ್ಧ ಬ್ಯಾಂಕ್ ನೌಕರರ ಪ್ರತಿಭಟನೆ

ಇದೊಂದು ಗುಜರಾತಿ ಬನಿಯಾ ಗ್ಯಾಂಗಿನ ವಂಚನೆ-ಮೋಸದ ವಿಲೀನ! ದೊಡ್ಡ-ದೊಡ್ಡ ವರ್ತಕರು, ಉದ್ಯಮಿಗಳು ಸಾಲ ಮರುಪಾವತಿ ಮಾಡದೆ ಉಂಡೆನಾಮ ತಿಕ್ಕಿದ್ದರಿಂದ ಬರೋಡ ಬ್ಯಾಂಕು ಬಾಗಿಲು ಎಳೆದುಕೊಳ್ಳುವಂತಾಗಿದೆ. ಗುಜರಾತಿನ ದೋಖಾ ದಂಧೆದಾರರು ಹೇಗೆ ಬ್ಯಾಂಕುಗಳನ್ನು ಯೋಜನಾಬದ್ಧವಾಗಿ ದೋಚಿದ್ದಾರೆಂಬುದಕ್ಕೆ ಬರೋಡಾ ಬ್ಯಾಂಕು ಭಾನ್ಗಡಿ ಜೀವಂತ ನಿದರ್ಶನ! ಇಂಥ ಟೈಟಾನಿಕ್ ಹಡಗನ್ನು ಎತ್ತುವ ಹಠಕ್ಕೆ ಬಿದ್ದಿರುವ ಕೇಂದ್ರ ಹಣಕಾಸು ಇಲಾಖೆಗೆ ಕಂಡದ್ದು ಕರ್ನಾಟಕ ಮೂಲದ ಸಮೃದ್ಧ ವಿಜಯಾ ಬ್ಯಾಂಕ್. 2017-18ರ ವಿತ್ತೀಯ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಇಪ್ಪತ್ತೊಂದು ಬ್ಯಾಂಕುಗಳಲ್ಲಿ ವಿಜಯಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಬಿಟ್ಟರೆ ಉಳಿದೆಲ್ಲವೂ ಹಾನಿಯಲ್ಲಿ ಏದುಸಿರು ಬಿಡುತ್ತಿದ್ದವು. ವಿಜಯಾ ಬ್ಯಾಂಕ್ ಭರ್ಜರಿ 727 ಕೋಟಿ ರೂ. ಲಾಭದ ಸಾಧನೆ ಮಾಡಿತ್ತು. ಇದು ಗುಜರಾತಿ ಗ್ಯಾಂಗಿನ ಕಣ್ಣು ಕುಕ್ಕಿತು.

ಗುಜರಾತಿನ ಬರೋಡಾ ಬ್ಯಾಂಕ್ ಮತ್ತು ಮಹಾರಾಷ್ಟçದ ದೇನಾ ಬ್ಯಾಂಕ್ ಪೈಪೋಟಿಗೆ ಬಿದ್ದಂತೆ ನಷ್ಟ ಮಾಡಿಕೊಂಡಿವೆ. 2017-18ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬರೋಡ ಬ್ಯಾಂಕ್‌ಗೆ 3.102.34 ಕೋಟಿ ಹಾನಿಯಾಗಿದೆ. ಅತ್ತ ದೇನಾ ಬ್ಯಾಂಕ್‌ಗೆ 2016-17ರ ಸೆಪ್ಟಂಬರ್‌ಗೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ 416.70 ಕೋಟಿ ರೂಪಾಯಿ ಟೋಪಿ ಬಿದ್ದಿದೆ! ಹಿಂದಿನ ವರ್ಷ ಇದೇ ಅವಧಿಯಲ್ಲಿ ಆದದ್ದಕಿಂತ ದುಪ್ಪಟ್ಟು ನಷ್ಟವಾಯಿತೆಂದು ದೇನಾ ಬ್ಯಾಂಕ್ ಹೇಳಿಕೆ ನೀಡಿದೆ. ಕೆಟ್ಟ ಸಾಲಗಳಿಗಾಗಿನ ಬರೋಡ ಬ್ಯಾಂಕ್ ಮೀಸಲು ನಿಧಿ 2016-17ನೇ ಸಾಲಿನಲ್ಲಿ 2.425.07 ಕೋಟಿ; 2017-18ನೇ ವರ್ಷದಲ್ಲಿ ಕೆಟ್ಟ ಸಾಲಗಳ ಮಿಸಲು ನಿಧಿ 7.052.53 ಕೋಟಿಯಷ್ಟು ಏರಿಕೆಯಾಗಿದೆ. ಹಾಗಂತ ಬರೋಡ ಬ್ಯಾಂಕ್ ವರದಿಯೇ ಹೇಳುತ್ತಿದೆ.

ಬೇಕಾಬಿಟ್ಟಿ ಸಾಲ ಕೊಟ್ಟಿರೋ ಬರೋಡ ಬ್ಯಾಂಕ್ ಅದನ್ನು ಮರುಪಾವತಿ ಮಾಡಿಸಿಕೊಳ್ಳಲಾಗದೆ ಎಡವಿದೆ. ಅಸಮರ್ಥ ಕಾರ್ಯವೈಖರಿಯ ಈ ಗುಜರಾತಿ ಬ್ಯಾಂಕ್ ಬದುಕಿಸಲು ಮೋದಿ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರದ ಫೈನಾನ್ಸಿಯಲ್ ಟೆಕ್‌ಟೀಸ್ ತನ್ನದೆಂಬಂತೆ ಬಿಂಬಿಸುತ್ತಿದೆ. ದುರ್ಬಲ ಬ್ಯಾಂಕ್ ಉಳಿಸಲು ಸದೃಢ ಬ್ಯಾಂಕನ್ನು ನುಂಗಿ ಹಾಕೋದು ಯಾವ ಸೀಮೆ ನ್ಯಾಯ? ದುರ್ಬಲ ಬ್ಯಾಂಕ್-ಬಲಿಷ್ಟ ಬ್ಯಾಂಕ್ ಒಂದಾಗಿಸುವುದಕ್ಕೆ ಆಕ್ಷೇಪ ಬರಲಾರದು. ಆದರೆ ಯಾವ ಪ್ರಮಾದ ಮಾಡದ ನ್ಯೂನತೆ ಇಲ್ಲದ ಬ್ಯಾಂಕಿನ ಹೆಸರೇಕೆ ಅಳಿಸಲಾಗುತ್ತಿದೆ? ಸದ್ರಿ ವಿಲೀನ ಪ್ರಕ್ರಿಯೆಯಲ್ಲಿ ಶಕ್ತಿಶಾಲಿ, ಕಳಂಕ ರಹಿತ ಆರ್ಥಿಕ ವಹಿವಾಟಿನ ಸಂಸ್ಥೆ ವಿಜಯ ಬ್ಯಾಂಕ್ ನ್ಯಾಯಯುತವಾಗಿ ದಿವಾಳಿಗೊಂಡ ದೇನಾ ಮತ್ತು ಬರೋಡ ಬ್ಯಾಂಕ್‌ನ ಬೋರ್ಡ್ ತೆಗೆದು ವಿಜಯ ಬ್ಯಾಂಕ್ ಎಂದು ಹೆಸರಿಡಬೇಕಿತ್ತು. ಇದು ನೈಸರ್ಗಿಕ ನ್ಯಾಯತತ್ವವಷ್ಟೇ ಅಲ್ಲ ನೈತಿಕ ನಡೆಯೂ ಹೌದು. ಇಂಥ ನೀತಿ ಮೋದಿ ಮತ್ತವರ ಸಲಹೆಗಾರ ಪಂಡಿತರಿಗೆ ಅದ್ಹೇಗೆ ಅರ್ಥವಾದೀತು?

ಮೋದಿಯವರ ರಾಜ್ಯ ಗುಜರಾತಿ ಬ್ಯಾಂಕ್‌ನ ಹೆಸರನ್ನು ನಿರ್ಲಜ್ಜವಾಗಿ ಮೆರೆಸಲು ವಿಜಯ ಬ್ಯಾಂಕಿನ ಅಸ್ತಿತ್ವವನ್ನೇ ತುಳಿದು ಹಾಕಿದೆ. ಕರ್ನಾಟಕದ ಮಣ್ಣಿನ ಮಕ್ಕಳು ಕಟ್ಟಿ ಬೆಳೆಸಿದ ಬ್ಯಾಂಕನ್ನು ಗುಜರಾತಿಗಳು ಅಪಹರಿಸಿದ್ದಾರೆ. ಈಗ ವಿಜಯ ಬ್ಯಾಂಕ್ ಅನ್ನು ಆಪೋಷನ ತೆಗೆದುಕೊಂಡಂತೆ ನಂತರದ ದಿನಗಳಲ್ಲಿ ಬ್ಯಾಂಕುಗಳ ತವರು ಕರಾವಳಿಯ ಕೆನರಾ, ಕಾರ್ಪೋರೇಷನ್, ಸಿಂಡಿಕೇಟ್ ಬ್ಯಾಂಕುಗಳನ್ನು ಒಂದೊಂದಾಗಿ ಉತ್ತರ ಭಾರತದ ಮುಳುಗುವ ಬ್ಯಾಂಕುಗಳ ಉಳಿಸಲು ಬೇಟೆ ಆಡಿದರೆ ಅಚ್ಚರಿಯಿಲ್ಲ.

ಈ ವಿಲೀನದ ವಿಕೃತಿ ಹಲವು ತಿಂಗಳಿಂದ ನಡೆಯುತ್ತಲೇ ಇತ್ತು. ವಿಜಯಾ ಬ್ಯಾಂಕಿನ ಉದ್ಯೋಗಿಗಳು ಹಾಗೂ ನಿವೃತ್ತ ನೌಕರರು ವಿಲೀನ ಬೇಡವೆಂದು ಪ್ರತಿಭಟನೆ ಮಾಡಿದ್ದರು. ಪ್ರತಿರೋಧದ ಮೂಲಕ ಕೇಂದ್ರ ಸರ್ಕಾರದ ಪ್ರಭೃತಿಗಳ ಕಣ್ಣುತೆರೆಸಲು ಪ್ರಯತ್ನಿಸಿದ್ದರು. ಆದರೆ ಇದ್ಯಾವುದನ್ನು ಆಳುವ ವರ್ಗ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಏಕಪಕ್ಷೀಯವಾಗಿ ಕೇಂದ್ರ ಸಚಿವ ಸಂಪುಟ ವಿಲೀನಕ್ಕೆ ತಥಾಸ್ತು ಎಂದಿದೆ! ಇಷ್ಟಾದರೂ ಕೇಂದ್ರದಲ್ಲಿ ಮಂತ್ರಿಯಾಗಿರುವ ಕರಾವಳಿಯ ಸದಾನಂದಗೌಡ, ಅನಂತ್ಕುಮಾರ ಹೆಗಡೆ, ಸಂಸದ ನಳೀನ್‌ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮೊದಲಾದವರು ತಮ್ಮದೇ ಸರ್ಕಾರದ ಮುಂದೆ ಕನ್ನಡ ನೆಲದ ಬ್ಯಾಂಕು ಉಳಿಸಲು ಪ್ರಯತ್ನ ನಡೆಸಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...