Homeಮುಖಪುಟಟ್ರಂಪ್‌ ಟ್ವಿಟರ್‌ ಖಾತೆ ಬ್ಯಾನ್: ಭಾರತದಲ್ಲಿ‌ ಬೆದರಿದ BJP ನಾಯಕರ ಪ್ರತಿಕ್ರಿಯೆ ಏನು?

ಟ್ರಂಪ್‌ ಟ್ವಿಟರ್‌ ಖಾತೆ ಬ್ಯಾನ್: ಭಾರತದಲ್ಲಿ‌ ಬೆದರಿದ BJP ನಾಯಕರ ಪ್ರತಿಕ್ರಿಯೆ ಏನು?

- Advertisement -
- Advertisement -

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟರ್‌ ಖಾತೆಯನ್ನು ಟ್ವಿಟರ್‌ ಕಂಪನಿ ಶಾಶ್ವತವಾಗಿ ನಿರ್ಬಂಧಿಸಿದ್ದು, ಇದರ ಕುರಿತು ಜಗತ್ತಿನಾದ್ಯಂತ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ. ಅಂತೆಯೇ ಭಾರತದ ಬಿಜೆಪಿ ನಾಯಕರೂ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಟ್ವಿಟರ್‌ ಕಂಪನಿಯ ಈ ಕ್ರಮವನ್ನು ಖಂಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರ ಮೇಲೆಯೇ ಇಂತಹ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿರುವ ಟ್ವಿಟರ್‌, ನಮ್ಮಂತಹವರನ್ನು ಬಿಡುತ್ತದೆಯೇ ಎನ್ನುವ ಭಯ ಬಿಜೆಪಿ ನಾಯಕರಿಗೆ ಆರಂಭವಾದಂತಿದೆ. ಈ ಭಯವನ್ನು ಬಿಜೆಪಿ ನಾಯಕರು ತಮ್ಮ ಟ್ವೀಟ್‌ಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, “ಯಾರ ನಿಯಂತ್ರಣವೂ ಇಲ್ಲದ ಈ ದೈತ್ಯ ತಂತ್ರಜ್ಞಾನ ಕಂಪನಿಗಳಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಇರುವ ಅಪಾಯವನ್ನು ಇನ್ನೂ ಅರ್ಥಮಾಡಿಕೊಳ್ಳದವರಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಅವರು ಅಮೆರಿಕ ಅಧ್ಯಕ್ಷರಿಗೆ ಈ ರೀತಿ ಮಾಡಿದ್ದಾರೆ ಎಂದರೆ, ಇದನ್ನು ಯಾರಿಗಾದರೂ ಮಾಡಬಹುದು. ಭಾರತವು ನಮ್ಮ ಪ್ರಜಾಪ್ರಭುತ್ವದ ಒಳಿತಿಗಾಗಿ ಈ ಶೀಘ್ರದಲ್ಲೇ ಮಧ್ಯವರ್ತಿಗಳ ನಿಯಮಗಳನ್ನು ಪರಿಶೀಲಿಸಲಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ತನ್ನ ವ್ಯವಹಾರದ ರಕ್ಷಣೆಗೆ ಭಜರಂಗದಳದ ಪರ ನಿಂತ ಫೇಸ್‌ಬುಕ್‌: ವಾಲ್‌ಸ್ಟ್ರೀಟ್ ಜರ್ನಲ್ ವರದಿ

ಇದನ್ನೂ ಓದಿ: ಅಂಬೇಡ್ಕರ್‌‌ ಮೊಮ್ಮಗ ’ರಾಜರತ್ನ’ ಪೇಜನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ ಫೇಸ್‌ಬುಕ್‌!

ಬಿಜೆಪಿ ಐಟಿ ಸೆಲ್‌ನ ರಾಷ್ಟ್ರೀಯ ಉಸ್ತುವಾರಿ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿ, “ಪ್ರಸ್ತುತ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ನಿರ್ಬಂಧಿಸಿರುವುದು ಅಪಾಯಕಾರಿಯಾಗಿದ್ದು, ಇದು ಒಂದು ಪೂರ್ವ ನಿದರ್ಶನವಾಗಿದೆ. ವಿಪರ್ಯಾಸವೆಂದರೆ ವಾಕ್‌ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಇದನ್ನು ಸಂಭ್ರಮಿಸುತ್ತಿದ್ದಾರೆ. ದೈತ್ಯ ತಂತ್ರಜ್ಞಾನ ಕಂಪನಿಗಳು ಈಗ ಓಲಿಗಾರ್ಚ್‌ಗಾಳಗಿವೆ (ಮಿತಜನ ಕೇಂದ್ರಿತ)” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ್ದ ಫೇಸ್‌ಬುಕ್‌ನ ಅಂಖಿದಾಸ್: ವಾಲ್ ಸ್ಟ್ರೀಟ್ ಜರ್ನಲ್ ತೆರೆದಿಟ್ಟ ಸ್ಪೋಟಕ ಸತ್ಯ!

ಇತ್ತೀಚೆಗೆ ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಎನ್ನುವ ಪತ್ರಿಕೆಯೊಂದು ಭಾರತದಲ್ಲಿನ ಫೇಸ್‌ಬುಕ್‌ ಅಲ್ಲಿನ ಆಡಳಿತ ಪಕ್ಷದೊಂದಿಗೆ ಶಾಮೀಲಾಗಿದೆ ಎನ್ನುವ ವರದಿಯೊಂದನ್ನು ಬಿಡುಗಡೆ ಮಾಡಿತ್ತು. 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಬೇಕಾಗುವ ಎಲ್ಲಾ ತಂತ್ರಗಳನ್ನು ಫೇಸ್‌ಬುಕ್‌ ಅನಧಿಕೃತವಾಗಿ ಮಾಡಿತ್ತು ಎನ್ನುವುದನ್ನು ದಾಖಲೆ ಸಮೇತ ಸಾಬೀತುಪಡಿಸಲಾಗಿತ್ತು.

ಬಿಜೆಪಿಯವರ ದ್ವೇಷ ಭಾಷಣಗಳನ್ನು ನಿರ್ಬಂಧಿಸುವಲ್ಲಿ ಫೇಸ್‌ಬುಕ್‌ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದನ್ನು ಅಮೆರಿಕದ ಪತ್ರಿಕೆ ವರದಿ ಮಾಡಿದ ನಂತರ ಭಾರತದಲ್ಲಿ ಇದಕ್ಕೆ ಸಂಬಂಧಪಟ್ಟ ಚರ್ಚೆಗಳು ತೀವ್ರವಾಗಿ ನಡೆದಿದ್ದವು. ಇದರ ಭಾಗವಾಗಿ ಫೇಸ್‌ಬುಕ್‌ ಇಂಡಿಯಾದ ಮುಖ್ಯಸ್ಥೆ ಆಂಖಿದಾಸ್‌ ಕೂಡ ಇತ್ತೀಚೆಗೆ ರಾಜೀನಾಮೆ ನೀಡಿದ್ದರು.

ಇಷ್ಟೇ ಅಲ್ಲದೇ ಭಾರತದಲ್ಲಿನ ಸಾಮಾಜಿಕ ಮಾಧ್ಯಮಗಳನ್ನು ಬಿಜೆಪಿಯು ತನಗೆ ಬೇಕಾದಂತೆ ಕಾನೂನುಭಾಹಿರವಾಗಿ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪವಿದೆ.

ಇದನ್ನೂ ಓದಿ: ಫೇಸ್‌ಬುಕ್‌ಗೆ ಬಿಜೆಪಿಯೇ ಅತಿದೊಡ್ಡ ಜಾಹೀರಾತುದಾರ: ಮೋದಿ ಪಕ್ಷದಿಂದ ಶೇ.70ರಷ್ಟು ಜಾಹೀರಾತುಗಳು

ಇದಕ್ಕೆ ಪುಷ್ಟಿ ನೀಡುವ ಹತ್ತಾರು ಅಂಶಗಳನ್ನು ಕೇಂದ್ರ ಸರ್ಕಾರದ ನೀತಿಗಳು ಬಹಿರಂಗಪಡಿಸಿವೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳನ್ನು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌‌ನಲ್ಲಿ ಮನವಿ ಸಲ್ಲಿಸಿತ್ತು. ಇದರ ಭಾಗವಾಗಿ ವಾಟ್ಸಾಪ್‌ ಅನ್ನು ಫೇಸ್‌ಬುಕ್‌ಗೆ ಲಿಂಕ್‌ ಮಾಡುವಂತೆ ಹೊಸ ಅಪ್ಡೇಟ್‌ ವರ್ಶನ್‌ ಬಂದಿದೆ. ಈ ಮೂಲಕ ಬಿಜೆಪಿಗೆ ವಿರುದ್ಧವಾಗಿ ಹೊರಡುವ ಸಂದೇಶಗಳನ್ನು ಕೇಂದ್ರ ಸರ್ಕಾರವು ಕದ್ದಾಲಿಕೆ ಮಾಡುವುದರರೊಂದಿಗೆ ನಿಯಂತ್ರಿಸಲು ಪ್ರಯತ್ನಿಸುತ್ತಿದೆ.

ಇಂತಹುದೇ ಕ್ರಮವನ್ನು ಫೇಸ್‌ಬುಕ್‌ ಇಂಡಿಯಾ ಈ ಹಿಂದೆ ತೆಗೆದುಕೊಂಡಿತ್ತು. ಬಿಜೆಪಿಗೆ ವಿರುದ್ಧವಾಗಿ ವ್ಯವಹರಿಸುವ ಎಲ್ಲಾ ಪೇಜ್‌ಗಳನ್ನು ನಿರ್ಬಂಧಿಸಿತ್ತು. ಭಾರತದ ಟ್ವಿಟರ್‌ ಕೂಡ ಇದರಿಂದ ಹೊರತಾಗಿಲ್ಲ. ಹಾಗಾಗಿ ಫೇಸ್‌ಬುಕ್‌ ಮತ್ತು ಟ್ವಿಟರ್‌ ಕಂಪನಿಗಳು ಭಾರತದಲ್ಲಿ ಬಿಜೆಪಿಯ ಪರವಾಗಿವೆ. ಆದರೆ ಅದು ಜಾಗತಿಕ ಮಟ್ಟದಲ್ಲಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುವಂತೆ ಒತ್ತಡ ಬರುತ್ತಿದೆ.

ಇದರಿಂದ ಭಯಬಿದ್ದ ಭಾರತೀಯ ಬಿಜೆಪಿ ನಾಯಕರು ಮತ್ತು ಇನ್ನಿತರರು ತಮಗೂ ಇದೇ ಗತಿ ಬರಬಹುದು ಎಂದು ಊಹಿಸಿ, ʼತಮ್ಮ ದೊಡ್ಡಣ್ಣʼನಿಗಾದ ಗತಿಯನ್ನು ಖಂಡಿಸುತ್ತಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್‌ನ “ಹೇಟ್‌ಸ್ಪೀಚ್” ನಿಯಮಗಳು ಮತ್ತು ಭಾರತದ ರಾಜಕೀಯ: ವಾಲ್‌ಸ್ಟ್ರೀಟ್‌ ಜರ್ನಲ್ ಲೇಖನದ ಅನುವಾದ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ವೈಯಕ್ತಿಕ ಖಾತೆಯನ್ನು (realDonaldTrump) ಟ್ವಿಟರ್ ಶಾಶ್ವತವಾಗಿ ಬ್ಯಾನ್ ಮಾಡಿದ್ದು, ಅಮೆರಿಕ ಕ್ಯಾಪಿಟಲ್ ಮೇಲಿನ ಮತ್ತೊಂದು ದಾಳಿಯನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಟ್ವಿಟರ್ ಹೇಳಿದೆ.

ಇದರಿಂದ ಕೆರಳಿದ ಟ್ರಂಪ್ ‘ಟ್ವಿಟರ್ ನನ್ನ ಮಾತನಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ’ ಎಂದು ತನ್ನ ಕಾರ್ಯಕ್ರಮಗಳ ಮತ್ತು ಚುನಾವಣಾ ಪ್ರಚಾರಕ್ಕಾಗಿ ಬಳಸುತ್ತಿದ್ದ ಟೀಮ್ ಟ್ರಂಪ್ ಖಾತೆಯಿಂದ ಟ್ವೀಟ್ ಮಾಡಿದ್ದರು. ಕೂಡಲೇ ಆ ಖಾತೆಯನ್ನೂ ಸಹ ಟ್ವಿಟರ್ ಅಮಾನತು ಮಾಡಿದೆ.

ನಾವು ಟ್ರಂಪ್‌ ಟ್ವೀಟ್‌ಗಳನ್ನು ಹತ್ತಿರದಿಂದ ಅವಲೋಕಿಸಿದ್ದೇವೆ. ಮುಂದಿನ ಹಿಂಸಾತ್ಮಕ ಅಪಾಯಗಳನ್ನು ತಡೆಯಲು ಅವರ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡುತ್ತಿದ್ದೇವೆ ಎಂದು ಟ್ವಿಟರ್ ತಿಳಿಸಿದೆ.

ಇದನ್ನೂ ಓದಿ: ಫೇಸ್‌ಬುಕ್‌ ಇಂಡಿಯಾ ಸಿಇಓ ಅಂಖಿ ದಾಸ್ ವಿರುದ್ದ ಸಿಡಿದೆದ್ದ ಸಹೋದ್ಯೋಗಿಗಳು!

ಟ್ರಂಪ್‌ ಆಡಳಿತವಧಿಯಲ್ಲಿ ತನ್ನ ವೈಯಕ್ತಿಕ ಖಾತೆಯ ಮೂಲಕ ಆಧಾರವಿಲ್ಲದ ಆರೋಪಗಳು, ಸುಳ್ಳು ಘೋಷಣೆಗಳು, ತಪ್ಪು ಮಾಹಿತಿಗಳನ್ನು ಹರಡಿದ್ದಾರೆ ಎಂದು ಟ್ವಿಟರ್ ಆರೋಪಿಸಿದೆ.

ಟ್ರಂಪ್ ಅಧಿಕಾರವಧಿ ಮುಗಿಯುತ್ತಿದ್ದು, ಬುಧವಾರ ನಡೆದ ಯುಸ್ ಸಂಸತ್ ಮೇಲಿನ ದಾಳಿಗೆ ಟ್ರಂಪ್‌ ಅನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಇದೇ ಸಮಯಕ್ಕೆ ಕಾಯುತ್ತಿದ್ದ ಟ್ವಿಟರ್ ಟ್ರಂಪ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ಎಚ್ಚರಿಕೆ ರವಾನಿಸಿದೆ.

ಬಹುದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ದೇಶದ ಅಧ್ಯಕ್ಷರಾಗಿ ಟ್ರಂಪ್ ನಡೆದುಕೊಂಡಿದ್ದು, ಗಲಭೆಗೆ ಪ್ರಚೋದನೆ ನೀಡಿದ್ದು, ಅದರಿಂದಾಗಿ ಅವರ ಟ್ವಿಟರ್ ಖಾತೆ ಖಾಯಂ ಬ್ಯಾನ್‌ ಆಗಿದ್ದು ಎಲ್ಲವೂ ಅವರಿಗೆ ಮುಜುಗರ ಉಂಟುಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಫೇಸ್‌ಬುಕ್‌ ಅನ್ನು ನಿಯಂತ್ರಿಸುತ್ತಿದ್ದಾರೆ: ರಾಹುಲ್ ಗಾಂಧಿ

ತದನಂತರ ಟ್ರಂಪ್ ಅಧ್ಯಕ್ಷರ ಅಧಿಕೃತ ಖಾತೆ @POTUS ಮೂಲಕ ಟ್ವಿಟರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ತೀವ್ರ ಎಡಪಂಥೀಯರ ಜೊತೆ ಸೇರಿ ಟ್ವಿಟರ್ ನನ್ನ ಮೇಲೆ ಪಿತೂರಿ ನಡೆಸುತ್ತಿದೆ ಎಂದು ದೂರಿದ್ದಾರೆ. ಆ ಟ್ವೀಟ್ ಅನ್ನು ಸಹ ಟ್ವಿಟರ್ ಡಿಲೀಟ್ ಮಾಡಿದೆ.

ಮತ್ತೊಂದು ಖಾತೆಯನ್ನು ಬಳಸಿ ಟ್ವಿಟರ್ ಅನ್ನು ಹಣಿಯಲು ಮುಂದಾಗುವುದು ನಮ್ಮ ನಿಯಮಗಳ ಉಲ್ಲಂಘಟನೆ ಎಂದು ಟ್ವಿಟರ್ ತಿಳಿಸಿದೆ.

ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ನಡೆದಾಗ ತಾತ್ಕಾಲಿಕವಾಗಿ ಟ್ರಂಪ್ ಖಾತೆಯನ್ನು ಸ್ಥಗಿತಗೊಳಿಸಿತ್ತು. ಅದಕ್ಕೂ ಮೊದಲು ಟ್ರಂಪ್ “ನಾನು ಜನವರಿ 20ರ ಜೋ ಬೈಡೆನ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ, ನನ್ನ ಅಭಿಮಾನಿಗಳು ನನ್ನ ಮಾತು ಮೀರುವುದಿಲ್ಲ” ಎಂದು ಟ್ವೀಟ್ ಮಾಡಿದ್ದರು.


ಇದನ್ನೂ ಓದಿ: ಅನೋಷ್ಕಾ ಚೋಪ್ರಾ ಫೇಸ್‌ಬುಕ್‌ ಖಾತೆ ಮೂಲಕ ಪಾಕ್‌ ಪರ ಗೂಢಾಚರ್ಯೆ: ಇಬ್ಬರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತದ ಬಿಜೆಪಿ ನಾಯಕರು ಹೆದರುವುದರಲ್ಲಿ ಅರ್ಥವಿದೆ ಏಕೆಂದರೆ ಬ್ಯಾನ್ ಆಗುವಂತಹ ಸಮಾಜದಲ್ಲಿ ವಿಷ ಹರಡುವಂತಹ ಹೇಳಿಕೆಗಳನ್ನ ನೀಡುವವರು ಹೆದರುವುದರಲ್ಲಿ ತಪ್ಪೇನಿದೆ, ಸಮಾಜದಲ್ಲಿ ಗೊಂದಲ ಗದ್ದಲ ಕಲಹಗಳಿಲ್ಲದಿದ್ದರೆ ಇಂತವರಿಗೆ ಇಲ್ಲಿ ಮತ ಕೇಳಲು ಮಾತುಗಳಿರುವುದಿಲ್ಲವಲ್ಲಾ….. ಟ್ರಂಪ್ ನಂತಹ ವಿಷಕಾರಿಯನ್ನು ಜನರಿಂದ ದೂರವಿಡುವ ಪ್ರಯತ್ನ ಮಾಡಿದ ಟ್ವಿಟರ್ ಕಂಪನಿಗೆ ಅಬಿನಂದನೆ.

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...