Homeಮುಖಪುಟಸ್ನೇಹಿತರು-ಸಂಬಂಧಿಕರೊಂದಿಗಿನ ಚಾಟ್‌ಗಳು ಸುರಕ್ಷಿತ: ಸ್ಪಷ್ಟನೆ ನೀಡಿದ ವಾಟ್ಸಾಪ್!

ಸ್ನೇಹಿತರು-ಸಂಬಂಧಿಕರೊಂದಿಗಿನ ಚಾಟ್‌ಗಳು ಸುರಕ್ಷಿತ: ಸ್ಪಷ್ಟನೆ ನೀಡಿದ ವಾಟ್ಸಾಪ್!

ಈಗಾಗಲೇ ವಾಟ್ಸಾಪ್‌ನ ಹೊಸ ನಿಯಮಗಳಿಂದಾಗಿ ಕೋಟ್ಯಾಂತರ ಬಳಕೆದಾರರು ವಾಟ್ಸಾಪ್ ತೊರೆದು ಸಿಗ್ನಲ್ ಆಪ್ ಸೇರಿಕೊಂಡಿದ್ದಾರೆ.

- Advertisement -
- Advertisement -

ಫೇಸ್‌ಬುಕ್ ಮಾಲಿಕತ್ವದ ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತದೆ/ಮಾರುತ್ತದೆ, ಚಾಟ್‌ಗಳನ್ನು ನೋಡುತ್ತದೆ ಎಂಬ ಟೀಕೆಗಳ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ವಾಟ್ಸಾಪ್ ಸ್ಪಷ್ಟೀಕರಣ ನೀಡಿದೆ.

“ತನ್ನ ಗೌಪ್ಯತಾ ನೀತಿಗಳಲ್ಲಿ ತಂದ ಬದಲಾವಣೆಗಳಲ್ಲಿ ಕೆಲವನ್ನು ತಿದ್ದುಪಡಿ ಮಾಡುತ್ತಿದ್ದೇವೆ. ನಿಮ್ಮ ಸ್ನೇಹಿತರು-ಸಂಬಂಧಿಕರೊಂದಿಗಿನ ಚಾಟ್‌ಗಳು ಸುರಕ್ಷಿತವಾಗಿರಲಿವೆ, ಎಂಡ್ ಟು ಎಂಡ್ encryption 100% ಮುಂದುವರೆಯಲಿದೆ” ಎಂದು ವಾಟ್ಸಾಪ್ ಟ್ವೀಟ್ ಮಾಡಿದೆ.

ವಾಟ್ಸಾಪ್ ಘೋಷಿಸಿರುವ/ಸ್ಪಷ್ಟನೆ ನೀಡಿರುವ ಅಂಶಗಳು ಈ ಕೆಳಗಿನಂತಿವೆ.

  • ವಾಟ್ಸಾಪ್ ಆಗಲಿ ಅಥವಾ ಫೇಸ್‌ಬುಕ್‌ ಆಗಲಿ ನಿಮ್ಮ ಖಾಸಗಿ ಸಂದೇಶಗಳನ್ನು ನೋಡುವುದಿಲ್ಲ ಅಥವಾ ನಿಮ್ಮ ಕರೆಗಳನ್ನು ಕೇಳಿಸಿಕೊಳ್ಳುವುದಿಲ್ಲ.
  • ಪ್ರತಿಯೊಬ್ಬರ ಸಂದೇಶ ಕಳುಹಿಸುವ ಅಥವಾ ಕರೆ ಮಾಡುವವರ ದಾಖಲೆಗಳನ್ನು ವಾಟ್ಸಾಪ್ ಇರಿಸಿಕೊಳ್ಳುವುದಿಲ್ಲ.
  • ನಿಮ್ಮ ಲೊಕೇಶನ್ ನೋಡಲು ವಾಟ್ಸಾಪ್ ಮತ್ತು ಫೇಸ್‌ಬುಕ್‌ಗೆ ಸಾಧ್ಯವಿಲ್ಲ.
  • ವಾಟ್ಸಾಪ್ ನಿಮ್ಮ ಸಂಪರ್ಕಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದಿಲ್ಲ.
  • ವಾಟ್ಸಾಪ್ ಗುಂಪುಗಳು ಖಾಸಗಿಯಾಗಿ ಉಳಿಯುತ್ತವೆ.
  • ನಿಮ್ಮ ಸಂದೇಶಗಳನ್ನು ಕಣ್ಮರೆಯಾಗುವಂತೆ ನೀವು ಹೊಂದಿಸಬಹುದು.
  • ನಿಮ್ಮ ಡೇಟಾವನ್ನು ನೀವು ಡೌನ್‌ಲೋಡ್ ಮಾಡಬಹುದು.

ಒಂದು ವಾರದ ಹಿಂದೆ ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೋಟಿಸ್ ಮೂಲಕ ತನ್ನ ಗೌಪ್ಯತಾ ನೀತಿಗಳನ್ನು ಬದಲಿಸುತ್ತಿರುವುದಾಗಿ ಮಾಹಿತಿ ನೀಡಿತ್ತು. “ಪ್ರಸ್ತುತ ಕೆಲವು ವರ್ಗಗಳ ಮಾಹಿತಿಯನ್ನು ಫೇಸ್‌ಬುಕ್ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಇತರ ಕಂಪನಿಗಳೊಂದಿಗೆ ನಾವು ಹಂಚಿಕೊಳ್ಳುವ ಮಾಹಿತಿಯು ನಿಮ್ಮ ಖಾತೆ ನೋಂದಣಿ ಮಾಹಿತಿಯನ್ನು ಒಳಗೊಂಡಿದೆ (ಉದಾಹರಣೆಗೆ ನಿಮ್ಮ ಫೋನ್ ಸಂಖ್ಯೆ), ವಹಿವಾಟು ಡೇಟಾ, ಸೇವೆ-ಸಂಬಂಧಿತ ಮಾಹಿತಿ, ನಮ್ಮ ಸೇವೆಗಳನ್ನು ಬಳಸುವಾಗ ನೀವು ಇತರರೊಂದಿಗೆ ಹೇಗೆ ವರ್ತಿಸುತ್ತೀರಿ (ವ್ಯವಹಾರಗಳು ಸೇರಿದಂತೆ), ಮೊಬೈಲ್ ಸಾಧನ ಮಾಹಿತಿ, ನಿಮ್ಮ ಐಪಿ ವಿಳಾಸ, ಮತ್ತು ಗೌಪ್ಯತೆ ನೀತಿ ವಿಭಾಗದಲ್ಲಿ ಗುರುತಿಸಲಾದ ಇತರ ಮಾಹಿತಿಯನ್ನು ‘ನಾವು ಸಂಗ್ರಹಿಸುವ ಮಾಹಿತಿ ‘ಅಥವಾ ನಿಮಗೆ ಸೂಚನೆಯ ಮೇರೆಗೆ ಅಥವಾ ನಿಮ್ಮ ಒಪ್ಪಿಗೆಯ ಆಧಾರದ ಮೇಲೆ ಪಡೆಯಲಾಗಿದೆ” ಎಂದು ವಾಟ್ಸಾಪ್ ತಿಳಿಸಿತ್ತು.

ಇದನ್ನೂ ಓದಿ: ನಿಮ್ಮ ವೈಯಕ್ತಿಕ ಡೇಟಾ ಬಳಸಲು ಅನುಮತಿಸಿ, ಇಲ್ಲವೆ ಹೊರನಡೆಯಿರಿ: ವಾಟ್ಸಾಪ್ ಎಚ್ಚರಿಕೆ

ಇದಕ್ಕಾಗಿ 2021ರ ಫೆಬ್ರವರಿ 8ರವರೆಗೆ ಗಡುವು ನೀಡಿದ್ದು, ಬಳಕೆದಾರರು ಈ ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕಿದೆ. ಇಲ್ಲದಿದ್ದಲ್ಲಿ ಅಂತಹ ವಾಟ್ಸಾಪ್ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಅದು ಎಚ್ಚರಿಸಿತ್ತು.

ಇದರಿಂದ ಕೆರಳಿದ ಕೋಟ್ಯಾಂತರ ಬಳಕೆದಾರರು ವಾಟ್ಸಾಪ್ ತ್ಯಜಿಸಿ ಸಿಗ್ನಲ್ ಎಂಬ ಸುರಕ್ಷತಾ ಆಪ್‌ಗೆ ಸೇರಿಕೊಂಡಿದ್ದರು. ಹಾಗಾಗಿ ಭಾರತ ಸೇರಿದಂತೆ ಆರು ರಾಷ್ಟ್ರಗಳಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಆಪ್‌ಗಳ ಪಟ್ಟಿಯಲ್ಲಿ ಸಿಗ್ನಲ್ ನಂಬರ್‌ ಒನ್ ಸ್ಥಾನಕ್ಕೇರಿದೆ.


ಇದನ್ನೂ ಓದಿ: ವಾಟ್ಸಾಪ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಸಿಗ್ನಲ್: ಭಾರತ ಸೇರಿ 7 ದೇಶಗಳಲ್ಲಿ ಸಿಗ್ನಲ್ ಪಾರುಪತ್ಯ ಶುರು


ಸಿಗ್ನಲ್ ಆಪ್‌ನ ಘೋಷವಾಕ್ಯವೇ ಖಾಸಗಿತನಕ್ಕೆ ಹೆಲೋ ಹೇಳಿ ಎಂಬುದಾಗಿದೆ. ಇದರಲ್ಲಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಡೆಡ್ ಇದ್ದು ಯಾವುದೇ ಸಂದೇಶ-ಸಂಭಾಷಣೆಯನ್ನು ಬೇರೆಯವರು ತಿಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಸಿಗ್ನಲ್ ಆಪ್‌ ಅನ್ನು ಸ್ವತಂತ್ರ ಲಾಭರಹಿತ ಸಂಸ್ಥಯು ಅಭಿವೃದ್ದಿಪಡಿಸಿದೆ.


ಇದನ್ನೂ ಓದಿ: ವಾಟ್ಸಾಪ್‌ಗೆ ಗುಡ್‌ಬೈ ಹೇಳಿ, ಸಿಗ್ನಲ್‌ಗೆ ಹೆಲೋ ಹೇಳಿ: ಏನಿದು ಸಿಗ್ನಲ್ ಆಪ್?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...