Homeಮುಖಪುಟರಾಹುಲ್ ಗಾಂಧಿ ಮೇಲಿನ ಪ್ರತಿ ಜೋಕಿಗೆ ಬಿಜೆಪಿ ಐಟಿ ಸೆಲ್ ನೂರು ರೂ ಕೊಡುತ್ತೆ

ರಾಹುಲ್ ಗಾಂಧಿ ಮೇಲಿನ ಪ್ರತಿ ಜೋಕಿಗೆ ಬಿಜೆಪಿ ಐಟಿ ಸೆಲ್ ನೂರು ರೂ ಕೊಡುತ್ತೆ

- Advertisement -
- Advertisement -

| ಪ್ರವೀಣ್ ಎಸ್ ಶೆಟ್ಟಿ |
ನಾನು ಕಳೆದ ತಿಂಗಳು ಮಂಗಳೂರಿನ ಒಂದು ಪುಸ್ತಕದ ಮಳಿಗೆಯಲ್ಲಿ ನನಗೆ ಬೇಕಾಗಿದ್ದ ಒಂದು ಪುಸ್ತಕ ಹುಡುಕುತ್ತಿದ್ದೆ. ಅಲ್ಲಿ ನನಗೆ ಒಬ್ಬ ಹಳೆಯ ಪರಿಚಿತರು ಸಿಕ್ಕಿದರು. ಅವರು ನನ್ನ ಜತೆ ಮಾತನಾಡುತ್ತಾ, ನಿಮ್ಮ ಹತ್ತಿರ ಯಾವುದಾದರೂ ಉತ್ತಮ ಸರ್ದಾರ್ಜಿ ಜೋಕ್ ಪುಸ್ತಕಗಳು ಇದ್ದರೆ ಕೊಡಿ ಎಂದು ಹೇಳಿದರು. 55 ವರ್ಷ ದಾಟಿದ ಅವರಿಗೆ ಜೋಕ್ ಪುಸ್ತಕಗಳ ಬಗ್ಗೆ ಯಾಕೆ ಒಮ್ಮೆಲೇ ಆಸಕ್ತಿ ಹುಟ್ಟಿತು ಎಂದು ನನಗೆ ಆಶ್ಚರ್ಯವಾಯಿತು. ಹಾಗಾಗಿ ನಾನು ಅವರಲ್ಲಿ ಕೇಳಿದೆ- ನಿಮಗೆ ಈ ಇಳಿ ವಯಸ್ಸಿನಲ್ಲಿ ಜೋಕುಗಳ ಪುಸ್ತಕ ಯಾಕೆ ಬೇಕಾಯಿತು ಎಂದು.

ಆಗ ಅವರು ಮುಜುಗರ ಪಡುತ್ತಾ -ನಾನು ಬಿ‌ಜೆ‌ಪಿ ಐ‌ಟಿ ಸೆಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ, ಅವರು ಕಳುಹಿಸುವ ಪೋಸ್ಟ್ ಗಳನ್ನು ಸಾಮಾಜಿಕ ಮೀಡಿಯಾದಲ್ಲಿ ಯಥಾವತ್ ಕಾಪಿ ಪೇಸ್ಟ್ ಫಾರ್ವರ್ಡ್ ಮಾಡುವುದೇ ನನ್ನ ಕೆಲಸ. ಒಂದು ಪೋಸ್ಟ್ ಗೆ ರೂ.3/- ಕೊಡುತ್ತಾರೆ. ಯೂಟೂಬ್ ನಲ್ಲಿ ರಾಜಕೀಯ ವಿಡಿಯೋಗಳ ಕೆಳಗೆ ಹಾಕುವ ಹೊಲಸು ಬೈಗುಳಗಳ ಕಾಮೆಂಟಿಗೂ ನಮಗೆ ಹಣ ಸಿಗುತ್ತದೆ. ಮೋದಿಗೆ ತನ್ನ ಭಕ್ತರು ಎದುರಾಳಿಗಳಿಗೆ ಕೊಡುವ ಹೊಲಸು ಬೈಗುಳ ಓದುವುದೆಂದರೆ ತುಂಬಾ ಇಷ್ಟವಂತೆ, ಅವರು ದಿನದ 12 ಗಂಟೆ ಸಾಮಾಜಿಕ ಮೀಡಿಯಾ ಜಾಲಾಡುವುದರಲ್ಲಿಯೇ ಕಳೆಯುತ್ತಾರೆ ಎಂದು ಅವರು ನನಗೆ ಹೇಳಿದರು. (ಇದನ್ನೇ ಅವರ ಭಕ್ತರು ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ ಎಂದು ಬಡಾಯಿ ಕೊಚ್ಚುವುದು).

ಅವರಿಗೆ ಜೋಕ್ ಪುಸ್ತಕಗಳು ಬೇಕಿರುವುದಕ್ಕೆ ಕಾರಣ ಅವುಗಳಲ್ಲಿಯ ಜೋಕುಗಳನ್ನು ಸ್ವಲ್ಪ ಬದಲಾವಣೆ ಮಾಡಿ ಅವು ರಾಹುಲ್ ಗಾಂಧಿಗೆ ಅನ್ವಯ ಆಗುವಂತೆ ತಿರುಚಿ ಬಿ‌ಜೆ‌ಪಿ ಐ‌ಟಿ ಸೆಲ್ ಗೆ ಕಳುಹಿಸಿದರೆ ಒಂದು ಒಳ್ಳೆಯ ಜೋಕಿಗೆ ಕನಿಷ್ಠ ರೂ. 100/- ಕೊಡುತ್ತಾರೆ, ಹೊಸತರದ ಉತ್ತಮ ಜೋಕ್ ಆಗಿದ್ದರೆ ರೂ 200/- ಸಹಾ ಕೊಡುತ್ತಾರಂತೆ. ಅದಕ್ಕಾಗಿ ಅವರು ಜೋಕ್ ಪುಸ್ತಕಗಳನ್ನು ಹುಡುಕುತ್ತಿದ್ದದ್ದು.

ರಾಹುಲ್ ಗಾಂಧಿ ಕ್ಯಾಂಬ್ರೀಡ್ಜ್ ನಲ್ಲಿ ಎಂ.ಫಿಲ್ ಮಾಡಿದ್ದಾರೆ, ಜತೆಗೆ ಬಿಜ್ನೆಸ್ ಮ್ಯಾನೇಜ್ಮೆಂಟ್ ಕೋರ್ಸ್ ಸಹಾ ಮಾಡಿದ್ದಾರೆ. ಲಂಡನ್ ನಲ್ಲಿ ಒಂದು ಟೆಕ್ ಕಂಪನಿಯಲ್ಲಿ ಡೈರೆಕ್ಟರ್ ಸಹಾ ಆಗಿದ್ದರು. ಅವರನ್ನು ಲೇವಡಿ ಮಾಡುವಷ್ಟು ಯೋಗ್ಯತೆ ಪಿ‌ಯೂ‌ಸಿಯಲ್ಲಿ ಮೂರು ಸಾರಿ ಫೇಲಾಗಿ ಶಾಲೆ ಅರ್ಧಕ್ಕೆ ಬಿಟ್ಟಿರುವ ಸ್ವತಃ ನಿಮಗೆ ಅಥವಾ ನಿಮ್ಮ ಅರೆಸಾಕ್ಷರ ಮೋದಿಗೆ ಇದೆಯೇ? ಗುಜರಾತಿ ಮಾಧ್ಯಮ ಶಾಲೆಯಲ್ಲಿ ಕೇವಲ ಎಂಟನೇ ಕ್ಲಾಸ್ ವರೆಗೆ ಮಾತ್ರ ಕಲಿತಿರುವ ಮೋದಿಗೆ ಸರಿಯಾಗಿ ಇಂಗ್ಲೀಷ್ ಸಹಾ ಮಾತನಾಡಲು ಬರುವುದಿಲ್ಲ, ಆದರೂ ನೀವು ಅವಿದ್ಯಾವಂತ ಮೋದಿಗಾಗಿ ವಿದ್ಯಾವಂತ ರಾಹುಲ್ ಗಾಂಧಿಯನ್ನು ಲೇವಡಿ ಮಾಡುವುದು ಸರಿಯೇ? ಎಂದು ನಾನು ಕೇಳಿದೆ.

ಅದಕ್ಕೆ ಅವರು – ಹೌದು ನೀವು ಹೇಳುವುದು ಸರಿ. ರಾಹುಲ್ ಗಾಂಧಿ ಮೋದಿಗಿಂತ ಹೆಚ್ಚು ವಿದ್ಯಾವಂತ, ಬುದ್ದಿವಂತ ಮತ್ತು ಸಂಭಾವಿತ, ಆದರೆ ಸತತ ಲೇವಡಿ ಅಪಹಾಸ್ಯಗಳ ಮೂಲಕ ಅವರೊಬ್ಬ ಪೆದ್ದ ಮಂದಬುದ್ದಿಯವ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಲೇ ಇರಬೇಕು, ಇದರಿಂದ ಹೊಸ ಪೀಳಿಗೆಯ ಯುವ ಮತದಾರರು ಅವರನ್ನು ಹಗುರವಾಗಿ ಪರಿಗಣಿಸುತ್ತಾರೆ ಹಾಗೂ ಅವರಿಗೆ ಹೆಚ್ಚು ಮಹತ್ವ ಮತ್ತು ಗೌರವ ಕೊಡುವುದಿಲ್ಲ, ಕೊನೆಗೆ ಇದು ಕಾಂಗ್ರೆಸ್ಸಿಗೆ ನೆಗೆಟಿವ್ ವೋಟ್ ಆಗಿ ಪರಿಣಮಿಸುತ್ತದೆ ಎಂಬುದು ನಮ್ಮ ಬಿ‌ಜೆ‌ಪಿ ಪ್ರಚಾರ ವಿಭಾಗದವರ ಮನೋವೈಜ್ನಾನಿಕ ರಣತಂತ್ರ ವಾಗಿದೆ ಎಂದು ಅವರು ಗುಟ್ಟು ಬಿಟ್ಟುಕೊಟ್ಟರು. ಅದಕ್ಕಾಗಿಯೇ ಬಿ‌ಜೆ‌ಪಿ ಐ‌ಟಿ ಸೆಲ್ ನವರೇ ರಾಹುಲ್ ಗಾಂಧಿಗೆ ‘ಪಪ್ಪು’ ಚೋಟಾ ಭೀಮ್ ಎಂದು ಅಡ್ಡ ಹೆಸರಿಟ್ಟು ಲೇವಡಿ ಶುರು ಮಾಡಿದ್ದು, ಅದನ್ನೇ ನಾವೂ ಅನುಸರಿಸಬೇಕು ಎಂದು ನಮಗೆ ಆದೇಶವಿದೆ ಎಂದು ಆ ಮಿತ್ರರು ನನಗೆ ಹೇಳಿದರು.

ಅರೆಸಾಕ್ಷರ ಮೋದಿಗೆ “ರಾಜಕೀಯ ತಂತ್ರಗಾರಿಕೆ” ಗೊತ್ತಿದೆಯೇ ವಿನಹ ನಮ್ಮ ಬೃಹತ್ ದೇಶದ ಆರ್ಥಿಕತೆಯ ಬಗ್ಗೆ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲ, ಅವರು ಗುಜರಾತ್ ಮುಖ್ಯ ಮಂತ್ರಿ ಆಗುವುದಕ್ಕೇ ಮೊದಲು ಒಂದು ಪಂಚಾಯತ್ ಸದಸ್ಯನಾಗಿಯೂ ಜನ ಸೇವೆ ಮಾಡಿಲ್ಲ. ಕೇವಲ ಆಗಿನ ಗುಜರಾತ್ ಮುಖ್ಯಮಂತ್ರಿಗಳಾದ ಕೇಶುಭಾಯಿ ಪಟೇಲ್, ಸುರೇಶ್ ಮೆಹತಾ, ಮತ್ತು ಮಾಧವ ಸಿಂಹ್ ಸೋಲಂಕಿ ಇವರುಗಳ ಬೆನ್ನಿಗೆ ಮೋದಿ ಇರಿಯುತ್ತಾ ಬಂದು 2001 ರಲ್ಲಿ ನೇರವಾಗಿ ಮುಖ್ಯಮಂತ್ರಿ ಖುರ್ಚಿ ಕಬಳಿಸಿದ್ದು. ಮತ್ತೂ ನಂತರ ಅದನ್ನು ಉಳಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಕರಾಳ ಗೋಧ್ರಾಕಾಂಡ ರಚಿಸಿದ್ದು ಅಷ್ಟೇ. ಸ್ವಲ್ಪವೂ ಆರ್ಥಿಕ ತಜ್ನತೆ ಇಲ್ಲದರಿಂದಾಗಿಯೇ ಮೋದಿ ಪೆದ್ದು ಪೆದ್ದಾಗಿ ನೋಟು ರದ್ದತಿ ಮಾಡಿ ಇಡೀ ದೇಶದ ಆರ್ಥಿಕತೆಗೆ ಮಾರಣಾಂತಿಕ ಪೆಟ್ಟು ಕೊಟ್ಟಿದ್ದು ನಿಜ ಎಂದು ಆ ಸರ್ದಾರ್ಜಿ ಜೋಕುಪ್ರಿಯರು ಒಪ್ಪಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...