ಪ್ರಸ್ತುತ ಚುನಾವಣಾ ಹೊಸ್ತಿಲಲ್ಲಿರುವ ಕೇರಳದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಮೀನುಗಾರ ಸಮುದಾಯದೊಂದಿಗೆ ಸಂವಹನ ನಡೆಸುತ್ತಾ ತಮ್ಮ ಸಮಯವನ್ನು ಕಳೆದರು. ಅವರು ಇಂದು ಮೀನುಗಾರರೊಂದಿಗೆ ಸಮುದ್ರಯಾನ ಮಾಡುತ್ತಿದ್ದಾಗ, ಅರೇಬಿಯನ್ ಸಮುದ್ರಕ್ಕೆ ಹಾರಿ, ಮೀನುಗಾರರೊಂದಿಗೆ ಸುಮಾರು 10 ನಿಮಿಷಗಳ ಕಾಲ ಈಜಿದರು.
ಮೀನುಗಾರರ ದೈನಂದಿನ ಜೀವನದ ಅರಿವನ್ನು ಪಡೆಯಲು, ಕಾಂಗ್ರೆಸ್ ನಾಯಕ, ಕೊಲ್ಲಂನ ಸಮುದ್ರದಲ್ಲಿ ಸ್ಥಳೀಯ ಮೀನುಗಾರರೊಂದಿಗೆ ಬಲೆಯನ್ನು ಎಳೆದರು. ಇದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋಗಳನ್ನು ಅವರು ಮತ್ತು ಅವರ ಪಕ್ಷವು ಹಂಚಿಕೊಂಡಿದೆ.
#CongressWithFishermen@RahulGandhi ji with fishermen
??❣️❣️❣️ pic.twitter.com/MOJ0Ccid1U— Truth@Honest✋ (@Thecongressian) February 25, 2021
ಮೀನುಗಾರರೊಂದಿಗೆ ದೋಣಿಯಲ್ಲಿ ಸಾಗುವಾಗ ರಾಹುಲ್ ಮೀನು ಸಾರು ಮತ್ತು ಬ್ರೆಡ್ ಉಪಹಾರ ಸೇವಿಸಿದರು. ’ನಾನು ನಿಮ್ಮ ಕೆಲಸವನ್ನು ಅರ್ಥ ಮಾಡಿಕೊಂಡಿದ್ದೇನೆ. ಖಾಲಿ ಬಲೆ ಎಳೆಯುವ ನಿರಾಶೆಯನ್ನೂ ನಾನು ನೋಡಿದೆ’ ಎಂದು ವಯನಾಡ್ ಸಂಸದ ರಾಹುಲ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಬೆಳಿಗ್ಗೆ ದೋಣಿ ಸವಾರಿಯಿಂದ ಹಿಂತಿರುಗಿದ ನಂತರ, ಕೊಲ್ಲಂನ ತಂಗಸ್ಸೆರಿ ಬೀಚ್‌ನಲ್ಲಿ ಮೀನುಗಾರರೊಂದಿಗೆ ಸಂವಹನ ನಡೆಸಿದರು. ಅವರ ಸಮಸ್ಯೆಗಳನ್ನು ಆಲಿಸಿದರು ಮತ್ತು ಖಾಲಿ ಬಲೆ ಎಳೆಯುವ ನಿರಾಶೆಯ ಕುರಿತೂ ಮಾತನಾಡಿದರು.
“ನೀವು ಮಾಡುವ ಕೆಲಸವನ್ನು ನಾನು ಗೌರವಿಸುತ್ತೇನೆ. ನಾವು ಮೀನುಗಳನ್ನು ತಿನ್ನುತ್ತೇವೆ, ಆದರೆ ಅದರ ಹಿಂದಿನ ಶ್ರಮ ಮತ್ತು ಅದು ನಮ್ಮ ತಟ್ಟೆಯನ್ನು ಹೇಗೆ ತಲುಪಿತು ಎಂಬುದು ನಮಗೆ ಅರ್ಥವಾಗುವುದಿಲ್ಲ” ಎಂದು ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಪಕ್ಷೇತರ ಸಂಸದನ ಅಸಹಜ ಸಾವು: ಡೆತ್‌ನೋಟ್‌ನಲ್ಲಿ ಬಿಜೆಪಿ ನಾಯಕನ ಹೆಸರಿದೆಯೇ?



what a great man Rahul Gandhi is. He has food with poor people, swims in the ocean with the fishermen and he is a great parliamentarian, nay, a politician and statesman par excellence!