Homeಮುಖಪುಟಬೆಳ್ಳಿ ಚುಕ್ಕಿ: ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ನಮಗೆ ಬೇಸಿಗೆ ಕಾಲ ಬರುತ್ತದೆಯೇ?

ಬೆಳ್ಳಿ ಚುಕ್ಕಿ: ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ನಮಗೆ ಬೇಸಿಗೆ ಕಾಲ ಬರುತ್ತದೆಯೇ?

- Advertisement -
- Advertisement -

ಒಂದು ಪ್ರಸಂಗ: ಅಂದು ಶನಿವಾರ. ಕಿರಣ್ ಮತ್ತು ಆರಿಫ್ ಇಬ್ಬರೂ ಅರ್ಧ ದಿನದ ಶಾಲೆ ಮುಗಿಸಿ, ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ, ಕಿರಣ್ ಆರಿಫ್‌ಗೆ ಹೀಗಂದ: ’ಲೇ, ಆರಿಫ್ ಏನೋ ಇಷ್ಟೊಂದ್ ಬಿಸಿಲಿದೆ ಇವತ್ತು. ಮೈಯಲ್ಲಾ ಚುರ್ ಚುರ್ ಅಂತಿದೆ’. ಅದಕ್ಕೆ ಆರಿಫ್, ’ಏ ಬೇಸಿಗೆ ಕಾಲದಲ್ಲಿ ಬಿಸಿಲು ಬರ್‌ದಿರಾ ಮಳೆನಾ ಬರತ್ತೆ’ ಅಂದಾ. ಕಿರಣ್: ’ಏ ಅದ್ ನನಗೂ ಗೊತ್ತೋ. ಬೇಸಿಗೆ ಕಾಲ ಇದು ಅಂತ. ಆದರೆ, ಅದೆಂಗೋ ಬೇಸಿಗೆ ಕಾಲದಲ್ಲಿ ಬಿಸ್ಲು, ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ ಬರತ್ತೆ? ನಂಗಂತೂ ಇದು ಅರ್ಥಾನೇ ಆಗಿಲ್ಲ. ಆರಿಫ್: ’ಏ ಬಿಡೋ, ನನಗೆ ಈ ವರ್ಷ ಕಾಲಗಳು ಅನ್ನೋ ಪಾಠ ಐತೆ. ಅದನ್ನ ಇನ್ನೂ ಮೇಷ್ಟ್ರು ಪಾಠ ಹೇಳಿಲ್ಲ. ಅವ್ರು ಪಾಠ ಮಾಡಿದ್ಮೇಲೆ ನಾನೇ ನಿನಗೆ ಹೇಳ್ತಿನಿ. ಆದ್ರೇ ಈ ಜೋಸೆಫ್ ಅವ್ನಲ್ಲಾ’. ಕಿರಣ್: ’ಯಾರೇಳು? ಅದೇ ಆ ಪಕ್ದೂರೋನ್ ಅಲ್ವಾ’. ಆರಿಫ್: ’ಹೌದೋ ಅವ್ನೇ, ಅವ್ನು ಒಂದ್ ಕಥೆ ಹೇಳ್ತಿದ್ದಾ.. ಭೂಮಿ ಸೂರ್ಯನ ಸುತ್ತ ಅಂಡಾಕಾರದಲ್ಲಿರುವ ಕಕ್ಷೆಯಲ್ಲಿ ಸುತ್ತುತ್ತಿರಬೇಕಾದ್ರೆ, ಸೂರ್ಯನಿಗೆ ಹತ್ತಿರ ಬಂದಾಗ ಬೇಸಿಗೆ ಕಾಲ, ದೂರ ಹೊದಾಗ ಮಳೆಗಾಲ ಅಂತ. ಅದೆ ಇರಬೇಕೆನೊ!’.

ಈ ಪ್ರಸಂಗದಲ್ಲಿ ಆರಿಫ್ ಹೇಳಿದ ಉತ್ತರ ನಿಮಗೆ ಸರಿ ಅನ್ನಿಸತ್ತಾ? ಭೂಮಿ ಸೂರ್ಯನಿಗೆ ಹತ್ತಿರವಿದ್ದಾಗ ಭೂಮಿಗೆ ಶಾಖವು ಹೆಚ್ಚಿರುತ್ತದೆ ಹಾಗಾಗಿ ಬೇಸಿಗೆ ಕಾಲ ಬರುತ್ತದೆ ಎಂಬ ಈ ವಿವರಣೆ ಸರಿಯೇ? ಅಥವಾ ತಪ್ಪೇ? ನಿಮಗೂ ಕೂತಹಲ ಹೆಚ್ಚುತ್ತಿರಬೇಕಲ್ಲವಾ?

ನಮಗೆಲ್ಲರಿಗೂ ತಿಳಿದಿರುವಹಾಗೆ ಭೂಮಿ ಸೂರ್ಯನ ಸುತ್ತ ಗೋಳಾಕಾರದಲ್ಲಿ ಸುತ್ತುತ್ತಿದೆ. ಅಲ್ಲದೇ, ಆ ಗೋಳಾಕಾರಕ್ಕೆ ಎರಡು ಕೇಂದ್ರ ಬಿಂದು ಇದ್ದು, ಸೂರ್ಯನು ಒಂದು ಕೇಂದ್ರ ಬಿಂದುವಿನಲ್ಲಿದ್ದಾನೆ ಎಂಬುದು ತಿಳಿದಿದೆ. ಹಾಗಿದ್ದಾಗ, ಭೂಮಿಯು ಸೂರ್ಯನ ಸುತ್ತ ಸುತ್ತವಾಗ, ವರ್ಷದ ಕೆಲವು ತಿಂಗಳು ಸೂರ್ಯನಿಂದ ದೂರ ಮತ್ತು ಕೆಲವು ತಿಂಗಳು ಸೂರ್ಯನ ಹತ್ತಿರ ಬರುವುದು ಸಹಜ. ಆದರೆ, ಭೂಮಿಯು ಸೂರ್ಯನಿಂದ ದೂರವಿದ್ದಾಗಿನ ಅಂತರ ಮತ್ತು ಹತ್ತಿರವಿದ್ದಾಗಿನ ಅಂತರವನ್ನು ತೆಗೆದುಕೊಂಡು ಅದರ ವ್ಯತ್ಯಾಸ ನೋಡಿದರೆ, ಕೇವಲ ಶೇ.2ರಷ್ಟು ಮಾತ್ರ ಬದಲಾಗುತ್ತದೆ. ಅಂದರೆ, ಖಗೋಳ ವಿಜ್ಞಾನದ ಮಾಪನದಲ್ಲಿ ಶೇ.೨ರಷ್ಟು ವ್ಯತ್ಯಾಸ ಅತೀ ಕಡಿಮೆಯದ್ದು. ಇದು ಭೂಮಿಗೆ ಭೌತಿಕವಾಗಿ ಅಥವಾ ಭೂಮಿಯ ವಾತಾವರಣಕ್ಕೆ ಯಾವ ಬದಲಾವಣೆಯನ್ನು ತರುವುದಿಲ್ಲ. ಈ ಅಂತರವು ಭೂಮಿಯಲ್ಲಿ ಬೇಸಿಗೆ ಕಾಲ, ಚಳಿ ಕಾಲ ಮತ್ತು ಮಳೆ ಕಾಲ ಎಂಬ ಯಾವ ಋತು ಬದಲಾವಣೆಯನ್ನು ಉಂಟುಮಾಡುವುದಿಲ್ಲ. ಹಾಗಾದರೆ, ಭೂಮಿಯ ಮೇಲೆ ಕಾಲಗಳು (seasons) ಹೇಗೆ ಉಂಟಾಗುತ್ತವೆ?

ಭೂಮಿಯ ಮೇಲೆ ವಿವಿಧ ಕಾಲಗಳು ಉಂಟಾಗಲು ಕಾರಣ ಭೂಮಿ ಸೂರ್ಯನಿಂದ ಹತ್ತಿರ ಮತ್ತು ದೂರ ಹೋಗುವುದರಿಂದಲ್ಲ ಬದಲಾಗಿ, ಭೂಮಿಯು ಸೂರ್ಯನ ಸುತ್ತ ತಿರುಗುತ್ತಿರುವ ಕಕ್ಷೆಯ ಲಂಭಕ್ಕೆ, ಭೂಮಿಯ ಅಕ್ಷವು 23.5 ಡಿಗ್ರಿ ಕೋನದಲ್ಲಿ ಬಾಗಿರುವುದರಿಂದ ಮತ್ತು ಭೂಮಿ ಸೂರ್ಯನ ಸುತ್ತು ಸುತ್ತುತ್ತಿದ್ದರೂ ಈ ಕೋನವು ಒಂದೇ ದಿಕ್ಕನಲ್ಲಿ ಮುಖ ಮಾಡಿರುತ್ತದೆ. ಈ ಕೋನದಿಂಲೇ, ಭೂಮಿಯ ಮೇಲೆ ಕಾಲಗಳು (seasons) ಬದಲಾಗುವುದು.

ಮತ್ತೊಂದು ವಿಸ್ಮಯದ ವಿಚಾರವೇಂದರೆ, ಉತ್ತರ ಗೋಳದಲ್ಲಿ ಬೇಸಿಗೆ ಕಾಲ ಇರುವಾಗ ಅಂದರೆ ನಮಗೆ ಬೇಸಿಗೆ ಕಾಲ ಇರುವಾಗ, ಭೂಮಿಯು ಸೂರ್ಯನಿಂದ ದೂರದಲ್ಲಿರುತ್ತಾನೆ! ಆದರೂ ನಮಗೆ ಬೇಸಿಗೆ ಕಾಲವಿರುತ್ತದೆ. ಏಕೆಂದರೆ, ಈ 23.5 ಡಿಗ್ರಿ ಕೋನವು ಆ ಸ್ಥಾನದಲ್ಲಿ ಸೂರ್ಯವಿರುವ ದಿಕ್ಕೆಗೆ ಬಾಗಿದ್ದು, ಉತ್ತರ ಗೋಳದಲ್ಲಿ ಸೂರ್ಯನ ಕಿರಣ ನೇರವಾಗಿ ಬೀಳುತ್ತಿರುತ್ತದೆ, ದಕ್ಷಿಣ ಗೋಳದಲ್ಲಿ ನೇರವಾಗಿ ಬೀಳದೆ, ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಬಾಗಿರುತ್ತದೆ. ಆದುದರಿಂದ, ಉತ್ತರ ಗೋಳದಲ್ಲಿ ಬೇಸಿಗೆ ಕಾಲ, ದಕ್ಷಿಣ ಗೋಳದಲ್ಲಿ ಚಳಿಗಾಲ! ಹಾಗಾಗಿ, ಯಾವುದೇ ಸಂದರ್ಭದಲ್ಲಿ, ಭೂಮಿಯ 23.5 ಡಿಗ್ರಿ ಭಾಗುವಿಕೆಯ ಕಾರಣದಿಂದಾಗಿ, ಭೂಮಿಯ ಉತ್ತರ ಗೋಳದಲ್ಲಿ ಯಾವ ಕಾಲವಿರುವುದೋ, ದಕ್ಷಿಣ ಗೋಳದಲ್ಲಿ ಅದರ ವಿರುದ್ಧ ಕಾಲವಿರುತ್ತದೆ.


ಇದನ್ನೂ ಓದಿ: ಬೆಳ್ಳಿಚುಕ್ಕಿ: ಪಶ್ಚಿಮದಲ್ಲಿ ಹುಟ್ಟುವ ಸೂರ್ಯ ಮತ್ತು ಒಂದು ವರ್ಷಕ್ಕೂ ದೀರ್ಘವಾದ ಒಂದು ದಿನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...