Homeಚಳವಳಿವಿವಾದಿತ ಕೃಷಿ ಕಾಯ್ದೆಗಳ ಬಗ್ಗೆ ಅಧ್ಯಯನ: ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ ಸ್ಥಾಯಿ ಸಮಿತಿ

ವಿವಾದಿತ ಕೃಷಿ ಕಾಯ್ದೆಗಳ ಬಗ್ಗೆ ಅಧ್ಯಯನ: ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ ಸ್ಥಾಯಿ ಸಮಿತಿ

- Advertisement -
- Advertisement -

ಒಕ್ಕೂಟ ಸರ್ಕಾರ ಜಾರಿಗೆ ತಂದಿದ್ದ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಅಧ್ಯಯನ ಮಾಡಲು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನಾಲ್ವರು ಸದಸ್ಯರ ಸ್ಥಾಯಿ ಸಮಿತಿಯು ಕಾನೂನುಗಳ ಬಗ್ಗೆ ತನ್ನ ವರದಿಯನ್ನು ಮೊಹರು ಮಾಡಿದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಸಮಿತಿಯ ಸದಸ್ಯರಲ್ಲೊಬ್ಬರಾದ ಅನಿಲ್ ಘನ್ವಾತ್, “ಮಾರ್ಚ್ 19 ರಂದು ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ” ಎಂದು ಹೇಳಿದ್ದಾರೆ. ಸುಮಾರು 85 ರೈತ ಸಂಘಟನೆಗಳೊಂದಿಗೆ ಸಭೆ ನಡೆಸಿ ಕೆಲವು ತಿಂಗಳುಗಳವರೆಗೆ ಈ ವಿಷಯದ ಬಗ್ಗೆ ಚರ್ಚಿಸಿದ ನಂತರ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ ಎಂದು ಹೇಳಲಾಗಿದೆ

ಸಮಿತಿ ಸಲ್ಲಿಸಿರುವ ವರದಿಯ ವಿಷಯವು ಗೌಪ್ಯವಾಗಿರುವುದರಿಂದ ಅದರಲ್ಲಿನ ವಿಷಯಗಳು ಇದುವರೆಗೂ ಬಹಿರಂಗಗೊಂಡಿಲ್ಲ ಮತ್ತು ನ್ಯಾಯಾಲಯವು ಏಪ್ರಿಲ್ 5 ರಂದು ವಿಚಾರಣೆ ನಡೆಸಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಜನವರಿ 12 ರಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್ ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರು ಮೂರು ಕೃಷಿ ಕಾನೂನುಗಳ ಅನುಷ್ಠಾನವನ್ನು ಸ್ಥಗಿತಗೊಳಿಸಿದ್ದರು. ಈ ಬಿಕ್ಕಟ್ಟನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ನಾಲ್ವರು ಸದಸ್ಯರ ಅಧ್ಯಯನ ಸಮಿತಿಯನ್ನೂ ನೇಮಕ ಮಾಡಿತ್ತು.

ಇದನ್ನೂ ಓದಿ: ಸ್ಥಾಯಿ ಸಮಿತಿ ವರದಿ ಒಪ್ಪದ ಕಾಂಗ್ರೆಸ್ – ಮೂರೂ ಕೃಷಿ ಕಾಯ್ದೆ ರದ್ಧುಪಡಿಸಲು ರಾಹುಲ್ ಒತ್ತಾಯ

ನ್ಯಾಯಾಲಯ ನೇಮಕ ಮಾಡಿದ ಸಮಿತಿಯಲ್ಲಿ ಭೂಪಿಂದರ್ ಸಿಂಗ್ ಮನ್ (ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ), ಪ್ರಮೋದ್ ಕುಮಾರ್ ಜೋಶಿ (ಕೃಷಿ ಅರ್ಥಶಾಸ್ತ್ರಜ್ಞ), ಅಶೋಕ್ ಗುಲಾಟಿ (ಕೃಷಿ ಅರ್ಥಶಾಸ್ತ್ರಜ್ಞ ಮತ್ತು ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷರು) ಮತ್ತು ಅನಿಲ್ ಘನ್ವತ್ (ಶೆಟ್ಕಾರಿ ಸಂಘಟನೆಯ ಅಧ್ಯಕ್ಷ ) ಇದ್ದರು. ಈ ಸದಸ್ಯರೆಲ್ಲರೂ ಬಿಜೆಪಿ ಮತ್ತು ಕೃಷಿ ಕಾಯ್ದೆಗಳ ಪರವಾಗಿರುವವರು ಎಂದು ದೊಡ್ಡ ಆರೋಪ ವ್ಯಕ್ತವಾಗಿತ್ತು. ಹಾಗಾಗಿ ಸಂಯುಕ್ತ ಕಿಸಾನ್ ಮೋರ್ಚಾ ಈ ಅಧ್ಯಯನದಲ್ಲಿ ಭಾಗಿಯಾಗುವುದಿಲ್ಲ ಎಂದು ಘೋಷಿಸಿತ್ತು.

ಕೆಲವು ದಿನಗಳ ನಂತರ, ಸಮಿತಿ ಸದಸ್ಯರಲ್ಲೊಬ್ಬರಾದ ಭೂಪಿಂದರ್ ಸಿಂಗ್ ಮನ್ ಅವರು ದೇಶದ ರೈತರ ಹಿತಾಸಕ್ತಿಗಳಿಗೆ ಧಕ್ಕೆಯುಂಟುಮಾಡಲು ಬಯಸುವುದಿಲ್ಲ ಎಂದು ಹೇಳಿ ಸದಸ್ಯತ್ವದಿಂದ ಹಿಂದೆ ಸರಿದಿದ್ದರು. “ಅಗತ್ಯ ಸರಕು ತಿದ್ದುಪಡಿ ಕಾಯ್ದೆ 2020” ಅನ್ನು ಜಾರಿಗೆ ತರಲು ಸರ್ಕಾರವನ್ನು ಕೇಳಿದ ಸ್ಥಾಯಿ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ, ಸಮಿತಿಯ ಭಾಗವಾಗಿರುವ ಕಾಂಗ್ರೆಸ್ ಸಂಸದರು ಅದರಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸಿದ್ದರು.

ಸಮಿತಿ ರಚನೆಯ ನಂತರವು ಅನೇಕ ರೈತ ಮುಖಂಡರು ಯಾವುದೇ ಸಮಿತಿಯ ನಡಾವಳಿಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ವಿವಾದಿತ ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಪ್ರತ್ಯೇಕ ಶಾಸನವನ್ನು ಜಾರಿಗೆ ತರುವವರೆಗೆ ಅವರು ತಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದಿದ್ದರು.


ಇದನ್ನೂ ಓದಿ: ಅಗತ್ಯ ಸರಕು ಕಾಯ್ದೆ ಪರ ಸ್ಥಾಯಿ ಸಮಿತಿ: ರೈತ ವಿರೋಧಿ ನಡೆ ಎಂದು ಕಿಸಾನ್‌ ಸಭಾ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಗೂಗಲ್ ಲೊಕೇಶನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರಬಹುದು:...

0
ಆರೋಪಿ ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಮೌಖಿಕವಾಗಿ  ಹೇಳಿದೆ. ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಲು...