Homeಮುಖಪುಟಸಂಪಾದಕರ ವಿರುದ್ಧ ಪತ್ರ: ಟೈಮ್ಸ್ ನೌ ಚಾನೆಲ್‌ನ ಹಾಲಿ, ಮಾಜಿ ಪತ್ರಕರ್ತರ ಜೊತೆ ನಿಲ್ಲೋಣ

ಸಂಪಾದಕರ ವಿರುದ್ಧ ಪತ್ರ: ಟೈಮ್ಸ್ ನೌ ಚಾನೆಲ್‌ನ ಹಾಲಿ, ಮಾಜಿ ಪತ್ರಕರ್ತರ ಜೊತೆ ನಿಲ್ಲೋಣ

- Advertisement -
- Advertisement -

ಕೋವಿಡ್ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿದ್ದರೂ ಟೈಮ್ಸ್ ನೌ ಮಾತ್ರ ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಟೈಮ್ಸ್ ನೌ ಇಂಗ್ಲಿಷ್ ಚಾನೆಲ್‌ನ ಮಾಜಿ ಮತ್ತು ಹಾಲಿ ವರದಿಗಾರರು, ಉದ್ಯೋಗಿಗಳು ಸಂಪಾದಕ ಮಂಡಳಿಗೆ ಬರೆದ ಪತ್ರಕ್ಕೆ ಶಿಕ್ಷಣ ತಜ್ಞ ಅನಿಲ್ ಸದ್ಗೋಪಾಲ್ ಪ್ರತಿಕ್ರಿಯಿಸಿದ್ದಾರೆ.

‘ಟೈಮ್ಸ್ ನೌ’ನ ಹಿಂದಿನ ಮತ್ತು ಪ್ರಸ್ತುತ ಉದ್ಯೋಗಿಗಳ’ ಈ ಪತ್ರವು ಕೇವಲ ದಂಗೆಯಲ್ಲ. ಸಂವಿಧಾನಕ್ಕೆ ಅನುಗುಣವಾಗಿ ಭಾರತವನ್ನು ನಿರ್ಮಿಸುವ ಆಕಾಂಕ್ಷೆಯದ್ದು. ಜಾತಿ ವಿರೋಧಿ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ನೆಲೆಯಲ್ಲಿ ಸ್ವಾತಂತ್ರ‍್ಯ ಹೋರಾಟದ ಆಕಾಂಕ್ಷೆಗಳಿಗೆ ಅನುಗುಣವಾಗಿ ಒಂದು ಪ್ರಮುಖ ಸಾಮಾಜಿಕ-ರಾಜಕೀಯ ಪರಿವರ್ತನೆಗಾಗಿ ಬಿತ್ತಲ್ಪಟ್ಟ ಬೀಜವಾಗಿದೆ ಎಂದು ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯ ಮುಖಂಡರಾದ ಪ್ರೊ. ಅನಿಲ್ ಸದ್ಗೋಪಾಲ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಸಿಗಲು ಕಾರಣರಾದ ನಿಜವಾದ ಶಿಕ್ಷಣದ ಸಂತ ಅನಿಲ್ ಸದ್ಗೋಪಾಲ್

ಈ ಐತಿಹಾಸಿಕ ಪತ್ರದ ಲೇಖಕರ ಧೈರ್ಯ, ನೇರ, ಒಳನೋಟ, ಸತ್ಯಕ್ಕೆ ಬದ್ಧತೆ ಮತ್ತು ಭಾರತದ ಜನರ ಮೇಲಿನ ಪ್ರೀತಿಗಾಗಿ ನಮಸ್ಕರಿಸೋಣ ಎಂದು ಅವರು ತಿಳಿಸಿದ್ದಾರೆ.

ಈ ಪತ್ರದ ಲೇಖಕರು, ಈಗ ಅಧಿಕಾರದ ಆಕ್ರಮಣಕ್ಕೆ ಒಳಗಾಗಿರುವ ಸಾರ್ವತ್ರಿಕ ಪತ್ರಿಕೋದ್ಯಮದ ಮೂರು ಮೂಲಭೂತ ಸಿದ್ಧಾಂತಗಳನ್ನು ರೂಪಿಸುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. “ಯಾವಾಗಲೂ ಜನರ ಪರವಾಗಿರಿ. ಯಾವಾಗಲೂ ಮಾನವೀಯತೆಯ ಬದಿಯಲ್ಲಿರಿ. ತಪ್ಪುಗಳಾದಾಗ ಅಧಿಕಾರದಲ್ಲಿರುವವರನ್ನು ಜವಾಬ್ದಾರರನ್ನಾಗಿ ಮಾಡಿ…” ಎಂದಿದ್ದಾರೆ.

ನಮ್ಮ ದೇಶದ ಭವಿಷ್ಯಕ್ಕಾಗಿ ನಾವು ಮಾಡಬಹುದಾದ ಕನಿಷ್ಠವೆಂದರೆ, ಸತ್ಯ ದಾಖಲಿಸಲು ಧೈರ್ಯ ಮಾಡಿದ ಟೈಮ್ಸ್ ನೌ ಚಾನೆಲ್‌ನ ಈ ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳೊಂದಿಗೆ ನಿಲ್ಲುವುದು ಎಂದು ಅನಿಲ್ ಸದ್ಗೋಪಾಲ್ ಕರೆ ನೀಡಿದ್ದಾರೆ.


ಇದನ್ನೂ ಓದಿ: ಜನರ ಸಂಕಷ್ಟ ಮರೆತು ಬಿಜೆಪಿಯ ಪಿಆರ್ ಕೆಲಸ ಮಾಡುತ್ತಿರುವ ಟೈಮ್ಸ್ ನೌ: ಸಂಪಾದಕರಿಗೆ ಚಾನೆಲ್ ವರದಿಗಾರರ ‘ದಿಟ್ಟ ಪತ್ರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕೊನೆಗೂ ಪತ್ರಕರ್ತರು ಧ್ವನಿ ಎತ್ತುತ್ತಿರುವುದು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಒಂದು ಒಳ್ಳೆಯ ಲಕ್ಷಣ. ಜನ ಇವರ ಪರವಾಗಿ ನಿಲ್ಲಬೇಕಾಗಿದೆ. ಸರ್ವಾಧಿಕಾರದ ದೌರ್ಜನ್ಯವನ್ನು ಖಂಡಿಸಬೇಕಾಗಿದೆ.

LEAVE A REPLY

Please enter your comment!
Please enter your name here

- Advertisment -

ಕೋಗಿಲು ಬಡಾವಣೆ ಮನೆಗಳ ನೆಲಸಮ : ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಎಷ್ಟು ಮನೆಗಳನ್ನು ನೆಲಸಮ ಮಾಡಲಾಗಿದೆ. ಇದರಿಂದಾಗಿ ಎಷ್ಟು ಕುಟುಂಬಗಳು ನಿರಾಶ್ರಿತರಾಗಿದ್ದಾರೆ ಮತ್ತು ಪುನರ್ವವಸತಿಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸುವಂತೆ ಪ್ರಕರಣದಲ್ಲಿ ನ್ಯಾಯಾಲಯದ ನೆರವುಗಾರರಾಗಿರುವ...

ಫೈಝಾನ್ ಸಾವು ಪ್ರಕರಣ : ಆರು ವರ್ಷಗಳ ಬಳಿಕ ಇಬ್ಬರು ಪೊಲೀಸರಿಗೆ ಕೋರ್ಟ್ ಸಮನ್ಸ್

ಈಶಾನ್ಯ ದೆಹಲಿಯ 2020ರ ಗಲಭೆ ವೇಳೆ ಮುಸ್ಲಿಂ ಯುವಕ ಫೈಝಾನ್ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಸಾವನ್ನಪ್ಪುವ ಮುನ್ನ ಇತರ ನಾಲ್ಕೈದು ಯುವಕರೊಂದಿಗೆ...

ಗಂಗಾವತಿ : ವಿದೇಶಿ ಮಹಿಳೆ ಸೇರಿ ಇಬ್ಬರ ಅತ್ಯಾಚಾರ, ಓರ್ವನ ಕೊಲೆ ಪ್ರಕರಣ : ಮೂವರು ದೋಷಿಗಳು ಎಂದ ಕೋರ್ಟ್

ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ಸ್ಥಳೀಯ ಹೋಮ್‌ ಸ್ಟೇ ಮಾಲಕಿ ಮತ್ತು ಇಸ್ರೇಲಿ ಯುವತಿ ಮೇಲೆ ಅತ್ಯಾಚಾರವೆಸಗಿ, ಅವರ ಜೊತೆಗಿದ್ದ ಯುವಕನನ್ನು ಕೊಲೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಒಂದನೇ ಹೆಚ್ಚುವರಿ...

ರಾಜಸ್ಥಾನದ ಬುಂಡಿಯಲ್ಲಿ ಎರಡು ಬಾಲ್ಯ ವಿವಾಹಗಳು ಸ್ಥಗಿತ; ಬಾಲಕಿಯರ ದೂರಿನ ಮೇರೆಗೆ ಅಧಿಕಾರಿಗಳ ಮಧ್ಯಪ್ರವೇಶ

ಕೋಟಾ: ಫೆಬ್ರವರಿ 10ರಂದು ನಿಗದಿಯಾಗಿದ್ದ ತಮ್ಮ ವಿವಾಹಗಳನ್ನು ನಿಲ್ಲಿಸುವಂತೆ ರಾಜಸ್ಥಾನದ ಬುಂಡಿ ಜಿಲ್ಲೆಯ 12ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಹುಡುಗಿಯರು ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. 17 ವರ್ಷದ ಬಾಲಕಿಯೊಬ್ಬಳು ತನ್ನ...

ಮುಂಬೈ ಮೇಯರ್ ಅಭ್ಯರ್ಥಿಯಾಗಿ ಬಿಜೆಪಿಯ ರಿತು ತಾವ್ಡೆ, ಉಪಮೇಯರ್ ಹುದ್ದೆಗೆ ಶಿವಸೇನೆಯ ಸಂಜಯ್ ಶಂಕರ್ ಘಾಡಿ ಹೆಸರು ಘೋಷಣೆ

ಮುಂಬೈ: ಭಾರತೀಯ ಜನತಾ ಪಕ್ಷ (ಬಿಜೆಪಿ) ಶನಿವಾರ ಮುಂಬೈ ಮೇಯರ್ ಚುನಾವಣೆಗೆ ಕಾರ್ಪೊರೇಟರ್ ರಿತು ತವಾಡೆ ಅವರನ್ನು ನಾಮನಿರ್ದೇಶನ ಮಾಡಿದ್ದರೆ, ಅದರ ಮಿತ್ರ ಪಕ್ಷ ಶಿವಸೇನೆ ಸಂಜಯ್ ಘಾಡಿ ಅವರನ್ನು ಉಪ ಮೇಯರ್...

ಪಾಕಿಸ್ತಾನದ ಶಿಯಾ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ ಹೊಣೆ ಹೊತ್ತ ಐಸಿಸ್ 

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಎಂದು ಕರೆಯಲ್ಪಡುವ ಗುಂಪು ಹೊತ್ತುಕೊಂಡಿದೆ, ಈ ಬಾಂಬ್ ಸ್ಫೋಟದಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು 169...

ಸಮನ್ಸ್ ಚರ್ಚೆ ನಡುವೆ ‘ಸಹಯೋಗ್’ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಕುನಾಲ್ ಕಾಮ್ರಾ

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ವಿಧಾನಪರಿಷತ್ತಿನ ಹಕ್ಕುಚ್ಯುತಿ ಸಮಿತಿ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರಿಗೆ...

ದ್ವೇಷ ಭಾಷಣ-ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು AI ತಂತ್ರಜ್ಞಾನ ಬಳಕೆಗೆ ಮುಂದಾದ ರಾಜ್ಯ ಸರ್ಕಾರ: 67.26 ಕೋಟಿ ರೂ ವೆಚ್ಚದಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ..!

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆ, 2025 ಬಾಕಿ ಉಳಿದಿರುವುದರಿಂದ, ದ್ವೇಷ ಭಾಷಣ, ನಕಲಿ ಸುದ್ದಿ ಮತ್ತು ಸಂಘಟಿತ ಆನ್‌ಲೈನ್ ತಪ್ಪು ಮಾಹಿತಿಯ ಹೆಚ್ಚಳವನ್ನು ನಿಭಾಯಿಸಲು ರಾಜ್ಯ ಸರ್ಕಾರ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ : ಭಾರತದ ಮೇಲಿನ ಸುಂಕ ಶೇ.18ಕ್ಕೆ ಇಳಿಕೆ

ವ್ಯಾಪಾರ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಭಾರತ ಮತ್ತು ಅಮೆರಿಕ ಶನಿವಾರ (ಫೆ.7) ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು (Interim Trade Agreement Framework) ಅಂತಿಮಗೊಳಿಸಿರುವುದಾಗಿ ತಿಳಿಸಿವೆ. ಈ ಒಪ್ಪಂದದ ಅಡಿಯಲ್ಲಿ,...

‘ಮಹಿಳೆಯನ್ನು ಗರ್ಭಧಾರಣೆ ಪೂರ್ಣಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ’: ಅಪ್ರಾಪ್ತೆಗೆ 30 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಸುಪ್ರೀಂ ಅನುಮತಿ

ನವದೆಹಲಿ: 17 ವರ್ಷದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು ಮಹಿಳೆಯನ್ನು, ಅಪ್ರಾಪ್ತ ವಯಸ್ಕಳನ್ನು ಹೊರತುಪಡಿಸಿ, ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ...