Homeಮುಖಪುಟಮಸ್ಕಿ: ನೀರಾವರಿ ಹೋರಾಟದ ಕಾಲುವೆಯಲ್ಲಿ ಕೊಚ್ಚಿ ಹೋದ ಬಿಜೆಪಿಯ ಹಣದ ಹೊಳೆ...

ಮಸ್ಕಿ: ನೀರಾವರಿ ಹೋರಾಟದ ಕಾಲುವೆಯಲ್ಲಿ ಕೊಚ್ಚಿ ಹೋದ ಬಿಜೆಪಿಯ ಹಣದ ಹೊಳೆ…

- Advertisement -
- Advertisement -

ಹಿಂದುಳಿದ ತಾಲೂಕಾದ ಮಸ್ಕಿಯ ಉಪ ಚುನಾವಣೆಯಲ್ಲಿ ಯಾರು ಗೆದ್ದರು ಎಂಬುದಕ್ಕಿಂತ, ಯಾರು ಸೋತರು, ಅದಕ್ಕೂ ಮುಖ್ಯವಾಗಿ ಯಾವ ಪಕ್ಷ ಸೋತಿತು ಎಂಬುದು ಮಹತ್ವದ ಸಂಗತಿಯಾಗಿದೆ.

ಇಲ್ಲೀಗ ಕಾಂಗ್ರೆಸ್ ಪಕ್ಷವು ಸುಮಾರು 30 ಸಾವಿರ ಲೀಡ್‌ನಿಂದ ಗೆದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ್ 86,222 ಮತಗಳನ್ನು ಪಡೆದರೆ ಬಿಜೆಪಿಯ ಪ್ರತಾಪಗೌಡ ಪಾಟೀಲ್ 55,581 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದಾರೆ. ಅಲ್ಲಿಗೆ 30,641 ಮತಗಳ ಅಂತರದಿಂದ ಸೋಲನ್ನಪಿದ್ದಾರೆ. 2019ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು, ನಂತರ ಆಪರೇಷನ್ ಕಮಲದ ಬಲೆಗೆ ಬಿದ್ದು ಬಿಜೆಪಿ ಸರ್ಕಾರ ಸ್ಥಾಪನೆಗೆ ‘ಕೊಡುಗೆ’ ನೀಡಿದ್ದ ಪ್ರತಾಪಗೌಡ ಪಾಟೀಲರನ್ನು ಹೀನಾಯವಾಗಿ ಸೋತಿದ್ದಾರೆ.

ನಾನುಗೌರಿ.ಕಾಂ ಮಸ್ಕಿ ಉಪ ಚುನಾವಣೆ ಕುರಿತು ಏಳೆಂಟು ವರದಿಗಳನ್ನು ಪ್ರಕಟಿಸಿದೆ, ಮೊದಲ ವರದಿಯೇ, ‘ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?’ ಎಂಬ ಶೀರ್ಷಿಕೆ ಹೊಂದಿತ್ತು. ಇವತ್ತು ಅದು ನಿಜವಾಗಿದೆ.

ಎನ್‌ಆರ್‌ಸಿಬಿ 5-ಎ ( ಕೃಷ್ಣಾ ನೀರಿನ ನಾರಾಯಣಪೂರ ಬಲದಂಡೆ ನೀರಾವರಿ ಯೋಜನೆಗೆ ಒಳಪಡುತ್ತದೆ) ಕಾಲುವೆ ಹೋರಾಟ ಸುದೀರ್ಘವಾಗಿದೆ. 13 ವರ್ಷಗಳಿಂದ ಈ ಬೇಡಿಕೆ ಇದೆ. ಈ 13 ವರ್ಷ ಕಾಲ ಕಾಂಗ್ರೆಸ್ ಮತ್ತು ಬಿಜೆಪಿ ಎರಡರ ಲಾಭ ಪಡೆದು ಶಾಸಕರಾಗಿದ್ದ ಪ್ರತಾಪಗೌಡರು ಎಂದೂ 5-ಎ ಕಾಲುವೆ ಬಗ್ಗೆ ಸದನದಲ್ಲಿ ಧ್ವನಿ ಎತ್ತಲೇ ಇಲ್ಲ. ಅದಿರಲಿ, ‘ಏ ಅದು ಅವೈಜ್ಞಾನಿಕ ಯೋಜನಾ ಅದ… ಕೋಟೆಕಲ್ ಬಸವಣ್ಣ ನೀರಾವರಿ ಯೋಜನಾ ಮಾಡಿಸ್ತೀನಿ’ ಎಂದು ಉಡಾಫೆಯ ಮಾತು ಹೇಳುತ್ತ ಬಂದರು.

ಈ ಸಲ ಗೆಲ್ಲುವುದು ಕಷ್ಟ ಅನಿಸಿದ ಕೂಡಲೇ ಕೃಷ್ಣಾ ನದಿಯಿಂದ ಮಸ್ಕಿ ಕ್ಷೇತ್ರದ 18 ಕೆರೆಗಳಿಗೆ ನೀರು ಹರಿಸುವ 500 ಕೋಟಿ ರೂ, ಯೋಜನೆ ಬಜೆಟ್‌ನಲ್ಲಿ ಘೋಷಣೆ ಆಗುವಂತೆ ಮಾಡಿದರು. ಆದರೆ ಈ 18 ಕೆರೆಗಳೋ, ಅದರಲ್ಲಿ ಭಾಗಶಃ ಮುಚ್ಚಿವೆ, ಭಾಗಶಃ ಕಿರಿದಾಗಿವೆ. 480 ಕೋಟಿ ರೂ,ಗಳನ್ನು ಇದಕ್ಕೆ ವೆಚ್ಚ ಮಾಡಿ ಲೂಟಿ ಹೊಡೆಯಲಾಗಿದೆ ಎಂಬುದು ರೈತರ ಆರೋಪವಾಗಿದೆ.

ವಿಜಯೇಂದ್ರರ ಉಸ್ತುವಾರಿ

ಈ ಕ್ಷೇತ್ರದ ಬಗ್ಗೆ ತುಂಬ ತಲೆ ಕೆಡಿಸಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ, ಚುನವಣಾ ಪ್ರಕ್ರಿಯೆ ಶುರುವಾದಾಗ ಇಲ್ಲೇ ಠಿಕಾಣಿ ಹಾಕಿದ್ದರು. ಜಾತಿವಾರು ಸಭೆಗಳನ್ನು ನಡೆಸಿ, ಚುನಾವಣಾ ‘ವಹಿವಾಟು’ ನಡೆಸಿದ ಅವರು ಇಲ್ಲಿ ಸಾಕಷ್ಟು ರೊಕ್ಕದ ಹೊಳೆ ಹರಿಸಿದರು ಎಂದು ರೈತ ಹೋರಾಟಗಾರರು ಮತ್ತು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಹಲವರು ಬಿಜೆಪಿ ಕಾರ್ಯಕರ್ತರು ಹಣ ಹಂಚುವಾಗ ಸಿಕ್ಕಬಿದ್ದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಹಾಸನ, ದಾವಣಗೆರೆ ಮುಂತಾದ ಕಡೆಯಿಂದ ಸಂಘ ಪರಿವಾರದವರನ್ನು ಕರೆ ತಂದು ಹಣಹಂಚುವ ಕೆಲಸಕ್ಕೆ ನಿಯೋಜಿಸಿದ್ದರು ಎಂಬ ಆರೋಪಗಳಿಗೆ ಸಾಕ್ಷಿಯಾಗಿ ಹತ್ತಾರು ವಿಡಿಯೋ ಹೊರಬಂದವು, ಎರಡು-ಮೂರು ಕೇಸುಗಳು ದಾಖಲಾದವು, ತುರವಿಹಾಳದಲ್ಲಿ ಹಾಸನದ ಮುವರು ಯುವಕರು ಬಿಜೆಪಿ ಪರ ಹಣ ಹಂಚಿ ಜನರ ಕೈಗೆ ಸಿಕ್ಕಿ ಬಿದ್ದು ಬಂಧನಕ್ಕೆ ಒಳಗಾದರು.

‘ಮೂಟೆಗಳಲ್ಲಿ ಬಿಜೆಪಿ ಹಣ ಸಾಗಿಸಿದೆ, ಪಿಎಸ್‌ಐ ಒಬ್ಬರು ಇದಕ್ಕೆ ನೆರವಾಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಸ್ಕಿಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದ್ದರು.
ಬಂಜಾರಾ ಸಮುದಾಯದ ಪ್ರತಿಭಾನ್ವಿತ ಗಾಯಕಿ ಮಂಗ್ಲಿ (ಸಾವಿತ್ರಿ ರಾಠೋಡ್) ಅವರನ್ನು ಇಲ್ಲಿಗೆ ಕರೆ ತಂದು ಕ್ಷೇತ್ರದ ತಾಂಡಾಗಳಲ್ಲಿ ಬಿಜೆಪಿ ಪ್ರಚಾರ ಮಾಡಿಸಿತು!

ಹಣದ ಹೊಳೆ ವರ್ಸಸ್ ಹೋರಾಟದ ಕಾಲುವೆ!

ಹಿಂದಿನ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷವಾದ ಬಿಜೆಪಿ ಹಣದ ಹೊಳೆ ಹರಿಸಿ, ಜಾತಿವಾರು ಧೂರ್ತ ನಾಯಕರನ್ನು ಖರೀದಿಸಿ ಮತ್ತು ಭಾವನಾತ್ಮಕ ವಿಷಯವನ್ನು ಅಲ್ಲಲ್ಲಿ ಮುಂದು ಮಾಡಿ ಗೆಲ್ಲುತ್ತಲೇ ಬಂದಿದೆ. ಆದರೆ, ಈ ಎಲ್ಲವನ್ನೂ ಪ್ರಯೋಗಿಸಿಯೂ ಅದು 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದೆ.

ಇದಕ್ಕೆ ಹಲವು ಕಾರಣಗಳಿವೆ:
• ಪ್ರತಾಪಗೌಡ ಸತತವಾಗಿ ಮುರು ಸಲ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. 2018ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದು ಗೆದ್ದರು. ಆಪರೇಷನ್ ಕಮಲದಲ್ಲಿ ಆಸಕ್ತಿ ವಹಿಸಿದರೆ ಹೊರತು ನೀರಾವರಿ ಮನವಿಯ ಕುರಿತಲ್ಲ ಎಂದು ಅವರ ಬಗ್ಗೆ ಅಸಮಾಧಾನವಿತ್ತು.
• ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರವಿಹಾಳ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರತಾಪಗೌಡರ ಎದುರು ಕೇವಲ 231 ಮತಗಳಿಂದ ಸೋತಿದ್ದರು. ಈ ಸಲ ಕಾಂಗ್ರೆಸ್ ಅಭ್ಯರ್ಥಿ ಆದ ಅವರಿಗೆ ಒಂದು ಮಟ್ಟದ ಅನುಕಂಪ ಇತ್ತು.

ಟರ್ನಿಂಗ್ ಪಾಯಿಂಟ್!

ಮೇಲಿನ ಎರಡು ಕಾರಣಗಳಷ್ಟೇ ಇದ್ದರೆ ಹಣ ಮತ್ತು ಜಾತಿ ಲೆಕ್ಕದಲ್ಲಿ ಪ್ರತಾಪಗೌಡ ಹೇಗೋ ಗೆಲ್ಲುತ್ತಿದ್ದರು. ಇಡೀ ಚುನಾವಣಾ ಪ್ರಕ್ರಿಯೆಗೆ ಟ್ವಿಸ್ಟ್ ಕೊಟ್ಟಿದ್ದೇ 5-ಎ ಕಾಲುವೆ ನೀರಾವರಿ ಹೋರಾಟ. 58 ಹಳ್ಳಿಗಳ ಈ ಹೋರಾಟವು, ಭೂ ಮಾಲೀಕ ಲಿಂಗಾಯತ ರೆಡ್ಡಿಗಳು, ಸಣ್ಣ ಹಿಡುವಳಿಯ ಕುರುಬರು, ನಾಯಕರು, ದಲಿತರು ಮತ್ತು ಗುಳೆ ಹೋಗಿಯೇ ಬದುಕು ಸವೆಸುತ್ತ ಬಂದ ಎಲ್ಲ ಜಾತಿಗಳ ಭೂರಹಿತರನ್ನು ಒಟ್ಟು ಮಾಡಿತು.

ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಜಪ್ಪ ಹರ್ವಾಪುರ, ಪ್ರಧಾನ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ, ಖಜಾಂಚಿ ಶಿವನಗೌಡ ವಟಗಲ್ ಮತ್ತು ಸಾವಿರಾರು ಯುವ ಹೋರಾಟಗಾರರು ಹಳ್ಳಿ ಹಳ್ಳಿಗಳಿಗೆ ತಲುಪಿ, ಬಿಜೆಪಿ ಸೋಲಿಸಿ ಎಂಬ ಭಾಷಣಗಳನ್ನು ಮಾಡಿದ್ದಲ್ಲದೇ, ಪ್ರಜಾಪ್ರಭುತ್ವದ ಆಶಯಗಳ ಅರಿವು ಮೂಡಿಸಿದರು. ಈಗ ಹೋರಾಟ 164ನೇ ದಿನಕ್ಕೆ ತಲುಪಿದೆ. ಈಗಿನ ಹೊಸ ಶಾಸಕ ಕನಿಷ್ಠ, ಕೊಡೆಕಲ್ ಬಸವಣ್ಣ ಯೋಜನೆ ಬದಲು ಎನ್‌ಆರ್‌ಬಿಸಿ 5-ಎ ಕಾಲುವೆ ಯೋಜನೆ ಬಗ್ಗೆ ಧ್ವನಿ ಎತ್ತಬೇಕು ಎಂದು ಹೋರಾಟ ಸಮಿತಿ ಹೇಳಿದೆ. ಹೋರಾಟ ಎಂದಿನಂತೆ ಮುಂದುವರೆಯಲಿದೆ ಎಂದೂ ಸ್ಪಷ್ಟಪಡಿಸಿದೆ. ಇಂದು ಫಲಿತಾಂಶದ ದಿನವೂ ಹೋರಾಟ ನಡೆಯುತ್ತಿದೆ.

ಹಣದ ಹೊಳೆಯನ್ನು ಒಂದು ಹೋರಾಟದ ಪುಟ್ಟ ಕಾಲುವೆ ಹಿಮ್ಮೆಟ್ಟಿಸಿದ ಕತೆಯಿದು. ಇಲ್ಲಿ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಹೋರಾಟ ಮಾಡುವವರಿಗೆ ಕೆಲವು ಪಾಠಗಳಂತೂ ಇವೆ…
* ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಮಸ್ಕಿ ಉಪಚುನಾವಣೆ: NRBC_5A ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...