Homeಕರ್ನಾಟಕಜ್ಯೋತಿಷಿಗಳಿಗೆ ನಿಖರ ಚುನಾವಣಾ ಫಲಿತಾಂಶ ಹೇಳುವಂತೆ ಸವಾಲು ಹಾಕಿದ ವಿಚಾರವಾದಿಗಳು

ಜ್ಯೋತಿಷಿಗಳಿಗೆ ನಿಖರ ಚುನಾವಣಾ ಫಲಿತಾಂಶ ಹೇಳುವಂತೆ ಸವಾಲು ಹಾಕಿದ ವಿಚಾರವಾದಿಗಳು

"ವಿವಿಧ ಪಕ್ಷಗಳು ಗೆಲ್ಲುವ ಸ್ಥಾನ ಗಳಸಂಖ್ಯೆ ಹಾಗು ಸ್ವತಂತ್ರ ಅಭ್ಯರ್ಥಿಗಳು ಗೆಲ್ಲುವ ಕ್ಷೇತ್ರಗಳು ಅವುಗಳ ಸಂಖ್ಯೆಗಳ ನಿಖರ ಲೆಕ್ಕ ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ" ಎಂದು ತಿಳಿಸಬೇಕು.

- Advertisement -
ಚುನಾವಣೆಯ ಸಂದರ್ಭದಲ್ಲಿ ಯಾರ್ಯಾರೋ ಹಣ ಮಾಡಿಕೊಳ್ಳಲ್ಲಿಕ್ಕೆ ಮುಗಿಬೀಳುತ್ತಾರೆ. ಅದರಲ್ಲಿ ಜ್ಯೋತಿಷ್ಯ ಹೇಳುವವರ ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದು ಮನಸ್ಸಿಗೆ ಬಂದ ಲೆಕ್ಕ ಹೇಳಿ ಕೆಲವು ಜನರಿಂದ ಹಣ ಕೀಳುತ್ತಿದ್ದಾರೆ. ರಾಜಕಾರಣಿಗಳು ಸೇರಿದಂತೆ ಹಲವು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಜ್ಯೋತಿಷಿಗಳು ಚುನಾವಣೆಗೂ ಮುನ್ನವೇ ಕೆಲವು ಅಂಕಿ ಸಂಖ್ಯೆಗಳನ್ನು ಹೇಳುವ ಮೂಲಕ ಪ್ರಭಾವ ಬೀರಲು, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಹವಣಿಸುತ್ತಾರೆ. ಇದರ ವಿರುದ್ಧ ಜನಜಾಗೃತಿ ಮೂಡಿಸಲು ಹಲವು ಪ್ರಜ್ಞಾವಂತರು ದಶಕಗಳ ಕಾಲದಿಂದಲೇ ಪ್ರಯತ್ನಿಸುತ್ತಿದ್ದಾರೆ. ಸರಿಯಾದ ಜ್ಯೋತಿಷ್ಯ ಹೇಳುವಂತೆ ಸವಾಲು ಹಾಕಿ ಬಹುಮಾನ ಘೋಷಿಸುವುದು ಸಹ ಒಂದು ವಿಧಾನ.
ಅಖಿಲ ಕರ್ನಾಟಕ ವಿಚಾರವಾದಿ ಸಂಘ (ರಿ) ಬೆಂಗಳೂರು. ಇವರಿಂದ ಚುನಾವಣಾ ಭವಿಷ್ಯ ಹೇಳುವ  ಜ್ಯೋತಿಷಿಗಳ ಭವಿಷ್ಯ ವಾಣಿಗಳ ಸತ್ಯಾ ಸತ್ಯತೆಗಳ ಬಗ್ಗೆ  ಜ್ಯೋತಿಷ್ಯ ಶಾಸ್ತ್ರ ಕಲಿತು ಭವಿಷ್ಯ ಹೇಳುವವರಿಗೆ ಒಂದು ಕೋಟಿ ರೂ ಬಹುಮಾನದ ಸವಾಲು ಹಾಕಲಾಗಿದೆ. ಪ್ರತಿ ವರ್ಷ ಪ್ರೊ ನರೇಂದ್ರ ನಾಯಕ್ ರವರು ಜ್ಯೋತಿಷ್ಯ ಹೇಳುವವರ ಬಣ್ಣ ಬಯಲು ಮಾಡುವ ಉದ್ದೇಶದಿಂದ ಈ ರೀತಿಯ ಸವಾಲುಗಳನ್ನು ಹಾಕುತ್ತಿದ್ದರು. ಈ ಬಾರಿ ಹಲವು ಜನರು ಸವಾಲು ಹಾಕಿದ್ದಾರೆ. ಈಗಾಗಲೇ ವಾಟ್ಸಾಪ್,  ಫೇಸ್ ಬುಕ್ ಗಳಲ್ಲಿ ಈ ವಿವರಗಳು ಹರಿದಾಡುತ್ತಿದ್ದು ಸಾರ್ವಜನಿಕರ ಕುತೂಹಲ ಕೆರಳಿಸಿವೆ.
ಸವಾಲುಗಳ ವಿವರ
ವಿಚಾರವಾದಿ ಸಂಘ ಬೆಂಗಳೂರು
ಒಂದು ಕೋಟಿ ರೂ ಬಹುಮಾನದ ಸವಾಲು ಇದು – “ವಿವಿಧ ಪಕ್ಷಗಳು ಗೆಲ್ಲುವ ಸ್ಥಾನ ಗಳಸಂಖ್ಯೆ ಹಾಗು ಸ್ವತಂತ್ರ ಅಭ್ಯರ್ಥಿಗಳು ಗೆಲ್ಲುವ ಕ್ಷೇತ್ರಗಳು ಅವುಗಳ ಸಂಖ್ಯೆಗಳ ನಿಖರ ಲೆಕ್ಕ ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ” ಎಂದು ತಿಳಿಸಬೇಕು.
ವಿವರ- 2019 ರ ಲೋಕಸಭೆ ಚುನಾವಣೆಯಲ್ಲಿ  ಚುನಾವಣಾ ಆಯೋಗದಿಂದ  ಅಂಗೀಕೃತವಾದ ರಾಜಕೀಯ ಪಕ್ಷಗಳು ಇಡೀ ಭಾರತದಲ್ಲಿ ಈಗ ಲೋಕಸಭೆಗೆ ನಡೆದ, ನಡೆಯುತ್ತಿರುವ ಚುನಾವಣೆಯ ಎಲ್ಲಾ ಒಟ್ಟು ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಪಕ್ಷಾವಾರು ಎಷ್ಟೆಷ್ಟು  ಸ್ಥಾನಗಳನ್ನು ಗೆಲ್ಲುತ್ತಾರೆ ಎಂಬ ಸಂಖ್ಯೆಗಳು  ಮತ್ತು ಅಂಗೀಕೃತ ಅಲ್ಲದ ಪಕ್ಷ ಇಲ್ಲವೇ ಪಕ್ಷೇತರ ಸ್ವತಂತ್ರ ಅಭ್ಯರ್ಥಿ ಗಳಾಗಿ ಸ್ಪರ್ಧಿಸಿದವರು  ಯಾವ ಯಾವ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ  ಎಂದು ಮುಂಚಿತ ಭವಿಷ್ಯ  ಹೇಳಬೇಕು. ಹಾಗು ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರ್ಯಾರು ಗೆಲ್ಲುತ್ತಾರೆ ಎಂದು ತಿಳಿಸ ಬೇಕು.
ಈ ಸವಾಲಿಗೆ ಇರುವ ಕೆಲ ನಿಯಮಗಳು
ದೇಶದ ಯಾವ ಜ್ಯೋತಿಷಿಯಾದರೂ ಭಾಗವಹಿಸಬಹುದು. ಆದರೆ ಭಾಗವಹಿಸುವವರು ಗಣಿತ ನೈಪುಣ್ಯದ ಮೇಲೆ ಹಾಗು ಊಹೆಯ ಮೇಲೆ ಹಲವು ವಿವಿಧ ಸಂಯೋಜನೆಗಳ ಮೇಲೆ ಲೆಕ್ಕಹಾಕಿ (multiple combinations) ಮಾಡಿ ಬಹುಮುಖ ಉತ್ತರಗಳನ್ನು, ಒಬ್ಬರೇ ಬೇರೆ ಬೇರೆ ಹೆಸರಿನಿಂದ ಹಲವಾರು ಉತ್ತರಗಳನ್ನು ಕಳುಹಿಸ ಬಾರದೆಂಬ ಕಾರಣಕ್ಕಾಗಿ ಹಾಗೂ ಈ ಸ್ಪರ್ಧೆಗೆ  ಒಂದು ಗಂಭೀರತೆ ಹಾಗು ಸತ್ಯದ ದೃಢತೆಯ ಮನಸಾಕ್ಷಿಗಾಗಿ, ಕಳುಹಿಸುವ ಪ್ರತೀ ಉತ್ತರದ ಅರ್ಜಿಗೆ ತಲಾ  ಹತ್ತು ಸಾವಿರ ರೂ. ನ್ನು  ಭದ್ರತಾ ಠೇವಣಿಯಾಗಿ ನೀಡ ಬೇಕಾಗುತ್ತದೆ. ಠೇವಣಿಯನ್ನು “ವಿಚಾರವಾದಿ ಸಂಘ ಬೆಂಗಳೂರು” – ಈ ಹೆಸರಿಗೆ ಡಿ.ಡಿ. ಕಳುಹಿಸ ಬೇಕು. ಗೆದ್ದವರಿಗೆ ಮಾತ್ರ ಠೇವಣಿ ಹಣ ಹಿಂತಿರುಗಿಸ ಲಾಗುವುದು ಮತ್ತು ಜೊತೆಗೆ ಒಂದು ಕೋಟಿ ರೂ. ಬಹುಮಾನವನ್ನು  ನೀಡಲಾಗುವುದು. ಒಂದಕ್ಕಿಂತ ಹೆಚ್ಚು ಸ್ಪರ್ಧಿಗಳು ಸರಿ ಉತ್ತರ ಕೊಟ್ಟರೆ ಬಹುಮಾನ ಹಣವನ್ನು ಗೆದ್ದವರಿಗೆ ಸಮನಾಗಿ ಹಂಚಲಾಗುತ್ತದೆ.
ಮೇ 20ನೇ ತಾರೀಖಿನ ಒಳಗೆ ಈ ಕೆಳಗಿನ ಬೆಂಗಳೂರಿನ ವಿಚಾರವಾದಿಗಳ ಸಂಘದ ಕಛೇರಿಗೆ ಉತ್ತರವನ್ನು ದಾಖಲಾತಿ ಮೂಲಕ ತಲುಪಿಸತಕ್ಕದ್ದು.
ವಿಳಾಸ- ಅಖಿಲ ಕರ್ನಾಟಕ ವಿಚಾರವಾದಿ ಸಂಘ (ರಿ ) 43. ರೋಹಿಣಿ   5ನೇ ಮೇನ್ ಪದ್ಮನಾಭನಗರ, ಬೆಂಗಳೂರು- 560070. ಕಾರ್ಯದರ್ಶಿ-
ಮೊ: 9342176030
ನಾಗೇಶ್ ಅರಳಕುಪ್ಪೆ
ಸ್ಪರ್ಧೆ ಹಾಗು ಉತ್ತರ ಮತ್ತು ಭದ್ರತಾ ಠೇವಣಿಯ ಹಾಗು ಸ್ಪರ್ಧೆ ನಡೆಸುವ ಜವಾಬ್ದಾರಿಗಾಗಿ ಸಂಘವು ನೇಮಿಸಿದ ಒಂದು ತಜ್ಞರ ಸಮಿತಿಯು ನಿರ್ವಹಿಸುತ್ತದೆ. ಸಂಘದ ಕಡೆಯಿಂದ ಒಂದು ಕೋಟಿ ರೂ.ಗಳಿಗೆ ಭದ್ರತೆಗಾಗಿ ಠೇವಣಿ ಪತ್ರ, ಶೇರು ಪತ್ರ, ಸ್ಥಿರಾಸ್ತಿ ಪತ್ರ ಇವುಗಳಲ್ಲಿ ಯಾವುದನ್ನು ಸಂಘದಿಂದ  ನೇಮಕಗೊಂಡ ಅದೇ ಸಮಿತಿಯ ವಶ ಕೊಡಲಾಗುತ್ತದೆ. ಆದರೆ ಯಾವುದೇ ಸ್ಪರ್ಧಿಗಳ ಕೈಗೆ ಕೊಡಲಾಗುವುದಿಲ್ಲ. ಸ್ಪರ್ಧೆಯ ಫಲಿತಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಗೆದ್ದ ಸ್ಪರ್ಧಿಯನ್ನು ಮಾತ್ರ ಸಂಪರ್ಕಿಸಲಾಗುವುದು. ಚುನಾವಣಾ ಫಲಿತಾಂಶ ಪತ್ರಿಕೆಗಳಲ್ಲಿ ಬರುವುದರಿಂದ ಸ್ಪರ್ಧಿಗಳು ಏನು ಉತ್ತರ ಕೊಟ್ಟಿದ್ದಾರೆ ಅದು ಹೇಗೆ ತಪ್ಪಾಗಿದೆ ಎನ್ನುವುದು  ಸೋತವರಿಗೆ ಸ್ವತಃ ತಿಳಿಯುವುದರಿಂದ ಅವರಿಗೆ ನಾವು ಮತ್ತೆ ತಿಳಿಸಬೇಕಾಗಿಲ್ಲ ಎಂದು ವಿಚಾರವಾದಿ ಸಂಘದ ಕಾರ್ಯದರ್ಶಿಗಳಾದ ನಾಗೇಶ್ ಅರಳಕುಪ್ಪೆ ತಿಳಿಸಿದ್ದಾರೆ.
ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ವಿಚಾರವಾದಿ ಡಾ. ನರೇಂದ್ರ ನಾಯಕರ ರವರು ಸಹ 10ಲಕ್ಷ ರೂ. ಬಹುಮಾನದ ಸವಾಲು ಒಡ್ಡಿದ್ದಾರೆ. ಈ ಬಾರಿಯ ಚುನಾವಣೆ ಸಂಬಂಧಿತ 20 ಪ್ರಶ್ನೆಗಳನ್ನು ನೀಡಿರುವ ಅವರು ಅದರಲ್ಲಿ 18 ಅಥವಾ ಅದಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ವಿವರಗಳಿಗೆ ಅವರ ಮೊ. 9448216343 ಸಂಪರ್ಕಿಸಿರಿ‌.

ಪ್ರೊ.ನರೇಂದ್ರ ನಾಯಕ್
ಅದೇ ರೀತಿ ಡಾ‌ ಲಲಿತಾ ನಾಯಕ್ ರವರ  ರೂ10,000/ ಬಹುಮಾನ ಸವಾಲು ಹಾಕಿದ್ದು ವಿವರಗಳಿಗೆ ಅವರ  ಮೊ. 9448067193. ಸಂಪರ್ಕಿಸಿ. ಮತ್ತು ಒಂದು ಲಕ್ಷ ರೂ ಹಾಗು ಚಿನ್ನದ ಉಂಗುರ ಬಹುಮಾನ ಸವಾಲು ಹಾಕಿರುವ ಶ್ರೀ ನರಸಿಂಹಮೂರ್ತಿಯವರ ವಿವರಗಳಿಗೆ ಅವರ  ಮೊ: 9980627609 ಸಂಪರ್ಕಿಸಿಬಹುದಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...