- Advertisement -
- Advertisement -
ಹರ್ಮನ್ಪ್ರೀತ್ ಸಿಂಗ್ರವರ ಎರಡು ಮೌಲ್ಯಯುತ ಗೋಲುಗಳು ಮತ್ತು ಗೋಲ್ಕೀಪರ್ ಪಿ ಆರ್ ಶ್ರೀಜೇಶ್ರವರ ಅಮೋಘ ಆಟದ ನೆರವಿನಿಂದ ಭಾರತ ಒಲಪಿಂಕ್ಸ್ನ ಮೊದಲ ಪುರುಷರ ಹಾಕಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಅಂತರದಿಂದ ಜಯಗಳಿಸಿ ಶುಭಾರಂಭ ಮಾಡಿದೆ.
ಪಂದ್ಯದ 10 ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಸಿಂಗ್ ಮತ್ತೊಂದು ಗೋಲು ಗಳಿಸಿ ಹರ್ಮನ್ಪ್ರೀತ್ ಜೊತೆಗೆ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಪಂದ್ಯದ ಆರಂಭದಲ್ಲಿಯೇ ಆರನೇ ನಿಮಿಷದಲ್ಲಿ ನ್ಯೂಜಿಲೆಂಡ್ ಪರವಾಗಿ ಕೇನ್ ರಸ್ಸೇಲ್ ಗೋಲು ಗಳಿಸಿ ಭಾರತದ ಪಾಳಯದಲ್ಲಿ ಆತಂಕದ ವಾತವಾರಣ ನಿರ್ಮಾಣ ಮಾಡಿದ್ದರು. ಆದರೆ ನಂತರ 43ನೇ ನಿಮಿಷದಲ್ಲಿ ಸ್ಟೀಫನ್ ಜೆನ್ನೆಸ್ ಗೋಲು ಗಳಿಸಿದರಾದರೂ ತಂಡಕ್ಕೆ ಗೆಲುವು ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ ಭಾರತ ತಂಡವು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಸೆಣಸುವ ಸಂಭವವಿದೆ.
ಇದನ್ನೂ ಓದಿ; ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಸಿಗದ ನಿರೀಕ್ಷಿತ ಯಶಸ್ಸು; 120 ವರ್ಷಗಳಲ್ಲಿ ಸಿಕ್ಕಿದ್ದು 28 ಮೆಡಲ್