Homeಅಂತರಾಷ್ಟ್ರೀಯರಾಜಕಾರಣದಲ್ಲಿ ನಲುಗಿದ ನಾವು: ಸ್ಟಾನ್ ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್

ರಾಜಕಾರಣದಲ್ಲಿ ನಲುಗಿದ ನಾವು: ಸ್ಟಾನ್ ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್

ಈ ಪ್ರಯೋಗದ ಬಗ್ಗೆ ಹಲವಾರು ಟೀಕೆ ವಿಮರ್ಶೆಗಳೆದುರು ಸಹ ಅಧಿಕಾರ ಮತ್ತು ‘ಪ್ರಭುತ್ವ’ವನ್ನು ಅರ್ಥ ಮಾಡಿಕೊಳ್ಳಲು ಇದು ಸ್ಪಷ್ಟವಾದ ನಿದರ್ಶನವಾಗಿದೆ.

- Advertisement -
- Advertisement -

| ಆರ್.ಜಗನ್ನಾಥ್ |

ಮನಶಾಸ್ತ್ರದ ಬಗ್ಗೆ ಪಾಠ ಮಾಡುವ ಪ್ರೊಫೆಸರ್ ಫಿಲಿಪ್ ಜಿಂಬರ್‍ಡೊ ಒಂದು ಅಸಾಧರಿವಾದ ಪ್ರಯೋಗವನ್ನು ದಿನಾಂಕ 1971 ಆಗಸ್ಟ್ 14 ರಿಂದ 21ರ ವರೆಗೆ ನಡೆಸಿದ್ದು ಇದಕ್ಕೆ (Stanford Prison Experiment) ಸ್ಟಾನ್‍ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್(ಎಸ್‍ಪಿಇ) ಎಂದು ಕರೆದಿರುತ್ತಾರೆ.

ಅಮೇರಿಕಾದ ನೌಕಾಪಡೆಯ ಸಂಶೋಧನೆಗಾಗಿ ನಡೆದ ಪ್ರಯೋಗದಲ್ಲಿ ಪ್ರೊ.ಫಿಲಿಪ್ ಜಿಂಬರ್‍ಡೊ ಪ್ರಯೋಗಕ್ಕಾಗಿ ಸೇರಿಸಿಕೊಂಡದ್ದು ತನ್ನ ಇಪ್ಪತ್ತನಾಲ್ಕು ಜನ ವಿದ್ಯಾರ್ಥಿಗಳನ್ನು. ಈ ಇಪ್ಪತ್ತನಾಲ್ಕು ಜನರನ್ನು ಆಯ್ಕೆ ಮಾಡಿಕೊಳ್ಳುವಾಗ ಆರೋಗ್ಯ ಸಮಸ್ಯೆ ಇಲ್ಲದ ಕ್ರಿಮಿನಲ್ ಹಿನ್ನೆಲೆಯಿಲ್ಲದ, ಮಾನಸಿಕ ಸಮಸ್ಯೆ ಇಲ್ಲದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿರುತ್ತದೆ.

ಇಪ್ಪತ್ನಾಲ್ಕು ಜನರನ್ನು ತಲಾ ಎರಡು ತಂಡಗಳಾಗಿ ವಿಭಜಿಸಿ 12 ಜನರ ಒಂದು ತಂಡವನ್ನು ಸೆರೆವಾಸಿಗಳಾಗಿ, ಮತ್ತೊಂದು 12 ಜನರ ತಂಡವನ್ನು ಜೈಲರ್‍ಗಳಾಗಿ ವಿಭಾಗಿಸಲಾಗುತ್ತದೆ. ಯೂನಿವರ್ಸಿಟಿಯ ಸೆಲ್ಲರ್‍ನ್ನು ನಿಜವಾದ ಜೈಲಿನ ರೀತಿಯಲ್ಲಿ ಪರಿವರ್ತಿಸಿ ಸದರಿ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ.

ಹನ್ನೆರಡು ಜನರ ಸೆರೆವಾಸಿಗಳಿಗೆ ಹೆಸರಿನ ಬದಲಾಗಿ ನಂಬರ್‍ಗಳನ್ನು, ಸೆರೆವಾಸಿಗಳ ಯೂನಿಫಾರಂನ್ನು ನೀಡಲಾಗಿರುತ್ತದೆ. ಅದೇ ರೀತಿ ಜೈಲರ್‍ಗಳಿಗೂ ಸಹ ನಿಜವಾದ ಜೈಲರ್‍ಗಳಿಗೆ ನೀಡಲಾಗುವ ಸಮವಸ್ತ್ರ ಮತ್ತು ಪರಿಕರಗಳನ್ನು ನೀಡಲಾಗುತ್ತದೆ.

ಜೊತೆಯಲ್ಲಿ ಊಟ ಮಾಡುತ್ತಿದ್ದ, ಜೊತೆಯಲ್ಲಿ ಪಾಠ ಕೇಳುತ್ತಿದ್ದ, ಜೊತೆಯಲ್ಲಿ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಗಳಲ್ಲಿನ ಒಂದು ತಂಡಕ್ಕೆ ‘ಅಧಿಕಾರ’ ಸಿಕ್ಕಕೂಡಲೇ ಯಾವ ರೀತಿಯಲ್ಲಿ ವರ್ತಿಸತೊಡಗುತ್ತಾರೆ ಎಂಬುದೇ ಪ್ರಯೋಗದ ಉದ್ದೇಶ.

ಸ್ವತಃ ಪ್ರೊಫೆಸರ್ ಫಿಲಿಪ್ ಜಿಂಬರ್‍ಡೊ ಜೈಲಿನ ಸೂಪರಿಂಟೆಂಡೆಟ್ ಆಗಿ ಜೈಲರ್‍ಗಳನ್ನು ಮುನ್ನಡೆಸುತ್ತಿರುತ್ತಾನೆ. 15 ದಿನಗಳ ಕಾಲದ ಈ ಪ್ರಯೋಗ ಜೈಲರ್‍ಗಳ ಮಿತಿಮೀರಿದ ಅಧಿಕಾರದ ದುರ್ಬಳಕೆಯ ಕಾರಣ 6ನೇ ದಿವಸಕ್ಕೇ ಕೊನೆಯಾಗಬೇಕಾಗುತ್ತದೆ.

ಈ ಪ್ರಯೋಗದ ಬಗ್ಗೆ ಹಲವಾರು ಟೀಕೆ ವಿಮರ್ಶೆಗಳೆದುರು ಸಹ ಅಧಿಕಾರ ಮತ್ತು ‘ಪ್ರಭುತ್ವ’ವನ್ನು ಅರ್ಥ ಮಾಡಿಕೊಳ್ಳಲು ಇದು ಸ್ಪಷ್ಟವಾದ ನಿದರ್ಶನವಾಗಿದೆ.

ಇವತ್ತು ದೇಶದಲ್ಲಿ ಒಟ್ಟಿಗೆ ಬೆಳೆದ, ಒಟ್ಟಿಗೆ ಆಟವಾಡಿದ, ಒಟ್ಟಿಗೆ ಬದುಕು ಕಟ್ಟಿಕೊಂಡ ಸ್ನೇಹಿತರ ನಡುವೆ ಜೈಲರ್‍ಗಳು ಮತ್ತು ಸೆರೆವಾಸಿಗಳು ಎಂಬ ಸ್ಪಷ್ಟವಾದ ವಿಭಾಗ ಉಂಟಾಗಿದೆ.

ಈ ಸೊಕಾಲ್ಡ್ ಜೈಲರ್‍ಗಳು ತಮ್ಮನ್ನು ತಾವೇ ಅಪರಿಮಿತ ಅಧಿಕಾರವುಳ್ಳ ದೇಶಭಕ್ತರೆಂದು, ಗೋರಕ್ಷಕರೆಂದೂ, ಈ ದೇಶದ ನಿಜವಾದ ರಕ್ಷಕರೆಂದೂ ಬಿಂಬಿಸಿಕೊಂಡಿದ್ದಾರೆ. ವಾಟ್ಸಾಪ್, ಫೇಸ್‍ಬುಕ್, ಸಮಾಜ ಎಲ್ಲಾ ಕಡೆ ತನ್ನ ರಾಜಕೀಯ ವಿರೋಧಿಗಳನ್ನು ತನ್ನ ವಿಚಾರಧಾರೆಯ ವಿರೋಧಿಗಳನ್ನು ಸೆರೆಯಾಳುಗಳ ರೀತಿಯಲ್ಲಿ ಭಾವಿಸಿ ಬಗ್ಗುಬಡಿಯಲೆತ್ನಿಸುತ್ತಿದ್ದಾರೆ. ಅವರುಗಳ ವಿರುದ್ಧ ಸುಳ್ಳುಗಳನ್ನು ಸೃಷ್ಟಿಸಿ ದೇಶವಿರೋಧಿಗಳು, ತುಕಡೆ ತುಕಡೆ ಗ್ಯಾಂಗ್, ಕಾಂಗಿ, ಕಮ್ಮಿ, ಹುಸಿ ಜಾತ್ಯಾತೀತರೆಂದು ಕರೆದು ವಿವಿಧ ರೀತಿಯ ಮಾನಸಿಕ ಹಿಂಸೆ ಮತ್ತು ಒತ್ತಡ ಹೇರುವ ಕೆಲಸದಲ್ಲಿ ನಿರತವಾಗಿದೆ.

ಸ್ಟಾನ್‍ಫೋರ್ಡ್ ಪ್ರಿಸನ್ ಎಕ್ಸ್‍ಪೆರಿಮೆಂಟ್ (ಎಸ್.ಪಿ.ಎ) ಹದಿನೈದು ದಿನ ನಡೆಯಬೇಕಾದ ಪ್ರಯೋಗ ‘ಅಧಿಕಾರ’ದ ಅಪರಿಮಿತ ದುರ್ಬಳಕೆಯ ಕಾರಣ ಆರು ದಿವಸಕ್ಕೆ ಮುಕ್ತಾಯವಾಯಿತು. ಅದೇ ರೀತಿಯಲ್ಲಿ ಇಂದು ದೇಶದಲ್ಲಿ ನಡೆಯುತ್ತಿರುವ ಪ್ರಯೋಗ ಸಹ ಅದಷ್ಟು ಬೇಗ ಮುಕ್ತಾಯಗೊಳ್ಳಲಿ ಎಂಬುದಷ್ಟೇ ಸದ್ಯದ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...