Homeಕರ್ನಾಟಕಸುಮಲತಾ ಮಾಡಿದ 3 ದಾಖಲೆಗಳು

ಸುಮಲತಾ ಮಾಡಿದ 3 ದಾಖಲೆಗಳು

ಅಂತೂ ಚುನಾವಣೆ ಫಲಿತಾಂಶದ ದಿನ ಬಂತು. ಆ ದಿನ ಊರಿನ ಊರ ಭದ್ರದೇವರ ಪೂಜೆಯಿತ್ತು. ಇದರಲ್ಲೂ ಕೂಡ ಸುಮಲತಾ ನಿಖಿಲ್ ಪ್ರವೇಶ ಪಡೆದು, ಭಕ್ತಿಯು ರೋಷದಿಂದ ಪ್ರಕಟವಾಗುತ್ತಿತ್ತು.

- Advertisement -
- Advertisement -

| ಬಿ. ಚಂದ್ರೇಗೌಡ |

ಚುನಾವಣೆ ನಂತರ ಅಭ್ಯರ್ಥಿಗಳು ಸತತ ಒಂದು ತಿಂಗಳು ಮತಪೆಟ್ಟಿಗೆಯೊಳಗೆ ಸಿಕ್ಕಿ ನರಳಿದ್ದು ಇದೇ ಮೊದಲಿರಬೇಕು. ಸಹಜವಾಗಿ, ಮತ ನೀಡಿದ ಕೆಲ ಮದ್ಯ ವ್ಯಸನಿ ಮತದಾರರು, ನಿದ್ರೆ ಬಾರದ ಕಾರಣ ನೀಡಿ ಸರಿಯಾಗಿ ಗುಂಡೇರಿಸತೊಡಗಿದರು. ಜೊತೆಯಲ್ಲಿದ್ದ ಮಂಜೇಗೌಡ ಒಳಗಿನ ಎಣ್ಣೆ ವ್ಯಯವಾದಂತೆ ಹೋಗಿ ಹೋಗಿ ತುಂಬಿಸಿಕೊಂಡು ಬರುತ್ತಿದ್ದ. ಹಾಗಾಗಿ ಕಣ್ಣು ಸದಾ ಕೆಂಪಗೆ ಉರಿಯತೊಡಗಿದ್ದವು. ಕೆಲವರಂತೂ ಇವುಳೆಲ್ಲಿದ್ದಳಯ್ಯ ಸುಮಲತ ಬಂದು ಯಲಕ್ಷನ್ನಿಗೆ ನಿಂತು ನಮ್ಮ ಸರೀಳನೆ ಹಾಳಾಗೋಯ್ತು ಎಂದು ಗೊಣಗಿದ್ದರು.”

ಈ ನಡುವೆ ಸುಮಲತ ಗೆಲ್ಲುವ ಬಗ್ಗೆ ಗೆಳೆಯನೊಬ್ಬ ಒಂದು ಲಕ್ಷ ಬೆಟ್ ಕಟ್ಟುವುದಾಗಿ ಘೋಷಣೆ ಮಾಡಿದ, ಯಾರೂ ಬರಲಿಲ್ಲ. ಅದನ್ನು ಐವತ್ತು ಸಾವಿರಕ್ಕೆ ಇಳಿಸಿದ ನಂತರ ಒಬ್ಬ ಬಂದ. ಆತ ಬರಲು ಕಾರಣವೇನೆಂದರೆ, ಈ ಮನೆ ಮುರುಕ ಟಿವಿಗಳು ಮತ್ತೆ ಸುಮಲತ ವಿಷಯ ತೆಗೆದುಕೊಂಡು ಕಾದಿದೆ ಮಂಡ್ಯಕ್ಕೆ ಅಚ್ಚರಿ ಫಲಿತಾಂಶ ಎಂದು ಬೊಗಳತೊಡಗಿದ್ದವು. ಕೊನೆಗೆ ನೆಕ್ ಟು ನೆಕ್ ಎಂದು ಬಿಕ್ಕ ತೊಡಗಿದವು. ಇದರಿಂದ ಸ್ಫೂರ್ತಿಗೊಂಡ ಜೂಜುಗಾರರು ಆತ್ಮವಿಶ್ವಾಸದಿಂದಲೇ ಐವತ್ತು ಸಾವಿರ ತಂದರು. ಅದೈವತ್ತು ಇದೈವತ್ತು ಒಟ್ಟು ಒಂದು ಲಕ್ಷವನ್ನು ಮೂರನೆ ವ್ಯಕ್ತಿ ಕೈಗಿತ್ತು, ಫಲಿತಾಂಶದ ದಿನ ಪಾರ್ಟಿ ಮಾಡಲು ಒಂದು ಸಾವಿರ ತೆಗೆದಿರಿಸಿ, ಆದಿನ ಮದ್ಯದಂಗಡಿ ಬಂದ್ ಆಗುವ ಅಪಾಯವನ್ನ ಗ್ರಹಿಸಿ ಕೂಡಲೇ ಒಂದು ಸಾವಿರಕ್ಕೆ ಎಂಸಿ ಬ್ರಾಂಡಿ ತಂದಿರಿಸಲು ಹೇಳಿದೆವು. ನಿಖಿಲ್ ಗೆಲ್ಲುವ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡುವವರನ್ನು ಕಂಡು ದಿಗಿಲಾಯ್ತು, ಅವರ ಪ್ರಕಾರ ನೂರಾರು ಬೂತಿನಲ್ಲಿ ನಮ್ಮ ಏಜೆಂಟರೇ ಇರಲಿಲ್ಲ. ಜೊತೆಗೆ ಕುಮಾರಣ್ಣ ಕೆ.ಆರ್.ಎಸ್‍ನಲ್ಲಿ ಬೀಡುಬಿಟ್ಟು ಪುಡಿ ಜಾತಿ ಲೀಡರುಗಳನ್ನೆಲ್ಲಾ ಕೊಂಡಿದ್ದಾರಂತೆ, ಈ ಪೈಕಿ ಕುರುಬರ ಮತಗಳನ್ನ ಅಟ್ಟಿಕೊಂಡು ಬಂದು ಬೂತನ್ನ ತುಂಬಿಸುತ್ತೇನೆಂದು ಹೇಳಿದವನೊಬ್ಬನಿಗೆ ಕುಮಾರಣ್ಣ ಹತ್ತು ಲಕ್ಷ ಕೊಟ್ಟನೆಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಸಾಕ್ಷಿಯೊದಗಿಸುವಂತೆ ಇಪ್ಪತೈದು ಲಕ್ಷದ ಕಾರಿನಲ್ಲಿ ಬಂದ ಆತ ನಿಖಿಲ್‍ಗೆ ಓಟು ಮಾಡಿ ಎಂದು ಬೈಸಿಕೊಂಡು ಹೋಗಿದ್ದ.

ಇದೆಲ್ಲಕ್ಕಿಂತ ನಮಗೆ ಇನ್ನ ದಿಗಿಲು ಹುಟ್ಟಿಸಿದ್ದು, ಸುಮಲತ ಗೆದ್ದು ಬಿಜೆಪಿ ಸೇರುತ್ತಾಳೆಂದು ಭಾವಿಸಿರುವ ಮುಸ್ಲಿಮರು ನಿಖಿಲನಿಗೆ ಓಟು ಮಾಡಿದ್ದಾರೆಂಬುದು, ಅಂತೂ ದಶದಿಕ್ಕಿನಿಂದ ನಮಗೆ ಅಶುಭ ಸುದ್ದಿಗಳೇ ಬರತೊಡಗಿದವು. ಇಂತಹ ಸಮಯದಲ್ಲಿ ನಾನು ಕೇವಲ ಐದು ಸಾವಿರ ಬೆಟ್ ಕಟ್ಟಿದ್ದೆ. ಚುನಾವಣೆ ಫಲಿತಾಂಶದ ವರೆಗೂ ನಾನು ಊರಲ್ಲೇ ಇದ್ದುಬಿಟ್ಟೆ. ಇಲ್ಲಿಗೆ ಪತ್ರಿಕೆಗಳು ಬರುವುದಿಲ್ಲ, ಹಾಗೆ ಟಿವಿ ನೋಡಿ ತಿಂಗಳ ಮೇಲಾಯ್ತು. ಹಳ್ಳಿಗಳು ಇನ್ನ ಉಳಿಸಿಕೊಂಡಿರುವ ಶಕ್ತಿಯಲ್ಲಿ ಪೇಪರ್, ಟಿವಿ ಬೇಕೆನಿಸುವುದಿಲ್ಲ. ಆದರೆ ಜನ ಸಮೂಹದ ಜೊತೆ ಮಾತನಾಡಲು ಸಾಧ್ಯವೇ ಇಲ್ಲ. ಬಾಯಿ ಬಿಟ್ಟರೆ ಸಾಕು ಮೊರೆಯುತ್ತಾರೆ. ಯಾರು ಏನನ್ನ ಕೇಳಿಸಿಕೊಳ್ಳುವುದಿಲ್ಲ. ನಮ್ಮ ಮನೆಯಲ್ಲೇ ಹೆಬ್ಬೆಟ್ಟಿನ ಸಹೋದರನೊಬ್ಬ ರಾಜಕಾರಣದ ಬಗ್ಗೆ ನನಗೇ ಹೇಳಲು ಬರುತ್ತಾನೆ. ಅವನ ಲೆಕ್ಕದಲ್ಲಿ ನಾನು ಕಿರಿಯ ಅವನು ಹಿರಿಯ ಅದಕ್ಕಾಗಿ ಕೇಳಿಸಿಕೊಳ್ಳಬೇಕಂತೆ!

ಅಂತೂ ಚುನಾವಣೆ ಫಲಿತಾಂಶದ ದಿನ ಬಂತು. ಆ ದಿನ ಊರಿನ ಊರ ಭದ್ರದೇವರ ಪೂಜೆಯಿತ್ತು. ಇದರಲ್ಲೂ ಕೂಡ ಸುಮಲತಾ ನಿಖಿಲ್ ಪ್ರವೇಶ ಪಡೆದು, ಭಕ್ತಿಯು ರೋಷದಿಂದ ಪ್ರಕಟವಾಗುತ್ತಿತ್ತು. ಒಂಚೂರು ನಿಖಿಲ್ ಮುಂದೆ ಹೋದ ಸುದ್ದಿಯಿಂದ ಅವನ ಅಭಿಮಾನಿಗಳು ಅವನಂತೆಯೇ ಆಡತೊಡಗಿದರು. ಒಂದಿಷ್ಟು ಆತಂಕವಾಯ್ತು, ನಮ್ಮ ನಾಗಮಂಗಲ ಕ್ಷೇತ್ರದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ಗೆ ನಲವತ್ತೇಳು ಸಾವಿರ ಲೀಡು ಬಂದಿತ್ತು ಅದನ್ನ ಹತ್ತಿಕ್ಕಿ ಕನಿಷ್ಟ ಹತ್ತು ಸಾವಿರ ನಿಖಿಲ್ ಲೀಡ್ ಬರಬಹುದೆಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಅದು ನಿಜವಾಯ್ತು. ಇದು ಬಿಟ್ಟರೆ ಜಿಲ್ಲೆಯ ಇನ್ನಾವ ತಾಲ್ಲೂಕು ಜೆಡಿಎಸ್‍ಗೆ ಲೀಡ್ ಕೊಡಲಿಲ್ಲ. ನಮ್ಮೂರಿಗೆ ಸುಮಲತ ಲಕ್ಷ ಲೀಡ್‍ನಲ್ಲಿ ಗೆದ್ದಳು ಎಂಬ ಸುದ್ದಿ ತಲುಪಿದಾಗ, ಜನ ಊರ ಮುಂದಿದ್ದರು. ಅದೇ ಸಮಯಕ್ಕೆ ಮಳೆ ಆರಂಭವಾಯ್ತು, ಜನ ಮಳೆಯಲ್ಲೇ ಕುಣಿಯತೊಡಗಿದರು. ಅದು ರಂಗದ ಕುಣಿತ, ತಮ್ಮಟೆ ಚಿಕ್ಕಣ್ಣ ಮಾಯಪ್ಪ ಇವರೆಲ್ಲಾ ತಮಟೆ ಬಡಿಯತೊಡಗಿದಂತೆ ಒಂದು ಗಂಟೆ ಸುರಿದ ಮಳೆಯಲ್ಲಿ ಹೊಸ ತಲೆಮಾರಿನ ಹುಡುಗರು ಕುಣಿಯತೊಡಗಿದರು. ಆಶ್ಚರ್ಯವೆಂದರೆ, ಈ ಕುಣಿತದ ಸಂಭ್ರಮ ನೋಡಲಾಗದ ನಿಖಿಲ್ ಕಡೆಯವರೂ ಬಂದು ಕುಣಿಯತೊಡಗಿದರು. ಈ ಸಮ್ಮಿಲನಕ್ಕೆ ಜನ ಹರ್ಷೋದ್ಘಾರ ಮಾಡಿ ಸೀಟಿ ಹೊಡೆದರು. ವಾಸ್ತವವಾಗಿ ದೇವೇಗೌಡ ಮತ್ತು ಕುಮಾರಸ್ವಮಿಯನ್ನು ಬೆಂಬಲಿಸಿದ್ದವರು ಸ್ವಾಭಿಮಾನ ಕಳೆದುಕೊಂಡವರಂತೆ ಮುಖರಹಿತರಾಗಿದ್ದರು. ಈಗ ಅವರ ಸಂಭ್ರಮ ನೋಡಿದರೆ ಅವರಿಗೂ ಸುಮಲತ ಗೆಲ್ಲಬೇಕಿತ್ತೇನೋ ಅನ್ನಿಸುತ್ತದೆ.

ಇದೇನೆ ಆದರು ಸುಮಲತ ಮೂರು ದಾಖಲೆ ಮಾಡಿದ್ದಾರೆ. ಅದೇನೆಂದರೆ 1. ಮಂಡ್ಯದಿಂದ ಆಯ್ಕೆಯಾದ ಮೊದಲ ಪಕ್ಷೇತರ ಅಭ್ಯರ್ಥಿ. 2. ರಾಜ್ಯದ ಕಳೆದ 52 ವರ್ಷದಲ್ಲಿ ಮೊದಲ ಬಾರಿಗೆ ಸ್ವತಂತ್ರವಾಗಿ ಆಯ್ಕೆಯಾದ ಮಹಿಳಾ ಅಭ್ಯರ್ಥಿ. 3. ದೇಶದ ಮಹಿಳಾ ಪಕ್ಷೇತರ ಸದಸ್ಯೆ. ಇರಲಿ ನನ್ನ ಜೊತೆ ಬೆಟ್ ಕಟ್ಟಿದ್ದವನು ಪತ್ತೆಯಿಲ್ಲ. ನಾನು ಊರಿಂದ ಬಂದ ಮೇಲೆ ಊರಿಗೆ ಬಂದಿರಬಹುದು. ನಮ್ಮ ಸ್ವಾಭಿಮಾನ ಗೆದ್ದಿತಲ್ಲ ಅಷ್ಟೇ ಸಾಕು.

ಇದನ್ನು ಓದಿರಿ ಮಂಡ್ಯದಲ್ಲಿ ನಾ ಕಂಡದ್ದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...