Homeಮುಖಪುಟಭಾರತದ ನೈಜ ಪತ್ರಿಕೋದ್ಯಮದ ಆತ್ಮಸಾಕ್ಷಿಯ ಮೂವರು ಕೀಪರ್‍ಗಳು

ಭಾರತದ ನೈಜ ಪತ್ರಿಕೋದ್ಯಮದ ಆತ್ಮಸಾಕ್ಷಿಯ ಮೂವರು ಕೀಪರ್‍ಗಳು

ಪ್ರಧಾನಿ ಕಛೇರಿಯಿಂದ ಹಬ್ಬಿಸಲಾಗುವ ಸುಳ್ಳುಗಳನ್ನು ಬಹಿರಂಗಪಡಿಸುವ ಮೂಲಕ ಪುಣ್ಯ ಪ್ರಸೂನ್ ಬಾಜ್‍ಪಾಯಿ ಎಬಿಪಿ ನ್ಯೂಸ್‍ನಲ್ಲಿ ಅವರ ಮಾಸ್ಟರ್‍ಸ್ಟ್ರೋಕ್ ಕಾರ್ಯಕ್ರಮದಲ್ಲಿ ಪ್ರಖ್ಯಾತರಾದವರು.

- Advertisement -
- Advertisement -

ಮೂಲ: ದಿ ವಲ್ಡ್ ಸಿಖ್ ನ್ಯೂಸ್ 

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ತಮ್ಮ ಜೀವ ಮತ್ತು ತಮ್ಮ ಕುಟುಂಬಗಳಿಗೆ ಬೆದರಿಕೆಗಳಿದ್ದರೂ ಎನ್‍ಡಿಟಿವಿಯ ರವೀಶ್ ಕುಮಾರ್, ಎಬಿಪಿಯ ಪುಣ್ಯ ಪ್ರಸುನ್ ಬಾಜ್ಪೈ ಮತ್ತು ಅಭಿಶಾರ್ ಶರ್ಮಾರವರು ದೇಶದ ಚುನಾವಣೆಯ ಸಂದರ್ಭದಲ್ಲಿ ದೇಶದ ಆತ್ಮಸಾಕ್ಷಿಯ ಕೀಪರ್‍ಗಳಾಗಿ ನಿಂತಿದ್ದರು. ಭಾರತದ ಪ್ರಧಾನಿ ಮೋದಿರವರ ಅಭಿಪ್ರಾಯ ಉತ್ಪಾದನಾ ಯಂತ್ರದ ಮುಖವಾಡ ಕಳಚುವ ಅವರ ಪ್ರಾಮಾಣಿಕ ಮತ್ತು ನಿರ್ಣಾಯಕ ಕೆಲಸಕ್ಕಾಗಿ ದಿ ವಲ್ಡ್ ಸಿಖ್ ನ್ಯೂಸ್ (ಡಬ್ಲ್ಯೂಎಸ್‍ಎನ್) ಅವರನ್ನು ಗೌರವಿಸಿದೆ.

ರವೀಶ್ ಕುಮಾರ್‍ರವರು ಯಾವುದೇ ಮಿಂಚಿನ ಪದಗಳನ್ನು ಬಳಸದೇ ರಾಜಕೀಯ ನಾಯಕರನ್ನು ನೇರವಾಗಿ ಟೀಕೆ ಮಾಡುವ ಮತ್ತು ಜನರ ನೈಜ ಅಜೆಂಡಾಗಳನ್ನು ಮುಂದೆತರುವಲ್ಲಿ ಯಶಸ್ವಿಯಾದ ಪತ್ರಕರ್ತರಾಗಿದ್ದಾರೆ. ಆದ ಕಾರಣ ಭಾರತೀಯ ಜನತಾ ಪಾರ್ಟಿ ಬಹಿಷ್ಕರಿಸಿದ ಮೊದಲ ಪತ್ರಕರ್ತರಾಗಿದ್ದಾರೆ. ಇವರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿರುವ ಬಲಪಂಥೀಯ ನೂರು ಕಾರ್ಯಕರ್ತರು ಓದುವುದಕ್ಕಿಂತ ಹೆಚ್ಚು ಓದಿರುವ ವಿಚಾರವಂತರಾಗಿದ್ದಾರೆ. ಹಿಂದಿ ಮಾತನಾಡುತ್ತಾ, ಅವರ ಆಲೋಚನೆಗಳನ್ನು ಗ್ರಹಿಸುವ ಯುವಜನರ ಆದರ್ಶವಾಗಿದ್ದಾರೆ. ಇವರ ಆದರ್ಶಗಳು ಮೋಡಿ ಮಾಡುವಂತವಲ್ಲದೆ ನೈಜತೆಯಿಂದ ಕೂಡಿವೆ. ಅವರ ಪ್ರಕಾರ ನೈಜ ಪತ್ರಿಕೋದ್ಯಮವನ್ನು ಅನುಸರಿಸಲು ಪ್ರಯತ್ನಸುವ ಕೆಲವು ಯೂಟ್ಯೂಬ್ ಚಾನಲ್‍ಗಳು, ಹವ್ಯಾಸಿ ಮತ್ತು ವೃತ್ತಿಪರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಪೂರ್ತಿಗೊಳಿಸುವುದರಿಂದ ಅವರನ್ನು ಪತ್ರಿಕೋದ್ಯಮದ ಭಾಗವಾಗಿಸಬಹುದು.

ಪ್ರಧಾನಿ ಮತ್ತು ಪ್ರಧಾನಿ ಕಛೇರಿಯಿಂದ ಹಬ್ಬಿಸಲಾಗುವ ಸುಳ್ಳುಗಳನ್ನು ಬಹಿರಂಗಪಡಿಸುವ ಮೂಲಕ ಪುಣ್ಯ ಪ್ರಸೂನ್ ಬಾಜ್‍ಪಾಯಿ ಎಬಿಪಿ ನ್ಯೂಸ್‍ನಲ್ಲಿ ಅವರ ಮಾಸ್ಟರ್‍ಸ್ಟ್ರೋಕ್ ಕಾರ್ಯಕ್ರಮದಲ್ಲಿ ಪ್ರಖ್ಯಾತರಾದವರು. ಇತ್ತೀಚೆಗೆ ಈ ಚಾನೆಲ್ ಒಂದು ಪಕ್ಷದ ಪರವಾಗಿ ಕೆಲಸ ಮಾಡಿದ ಕಾರಣ ಎಬಿಪಿ ನ್ಯೂಸ್ ಪ್ರಾಮಾಣೀಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಪುಣ್ಯ ಪ್ರಸಾನ್ ಎಬಿಪಿಗೆ ರಾಜಿನಾಮೆ ನೀಡಿದರು. ಸುದ್ದಿವಾಹಿನಿಗಳು ಮತ್ತು ಪತ್ರಿಕೆಗಳ ಮೇಲ್ವಿಚಾರಣೆ ಮಾಡಿರುವ ಅವರು ಮೋದಿ ಸರ್ಕಾರ ಸಂಪೂರ್ಣ ಗೊಬೆಲಿಯನ್ ತಂತ್ರಗಳ ಸುತ್ತ ಕೆಲಸ ಮಾಡುತ್ತಿದೆ ಎಂದು ಅವರು ನಿರೂಪಿಸಿದ್ದರು. ಅವರ ಯೂಟ್ಯೂಬ್ ನ್ಯೂಸ್ ಚಾನೆಲ್ ಪ್ರಖ್ಯಾತವಾಗಿದ್ದು ಪರ್ಯಾಯ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ.

ಎಬಿಪಿಗೆ ರಾಜಿನಾಮೆ ನೀಡಿ ಹೊರಬಂದ ಇನ್ನೊರ್ವ ಪತ್ರಕರ್ತ ಅಭಿಶಾರ್ ಶರ್ಮಾ ಸಹ ಯೂಟ್ಯೂಬ್ ಚಾಲನ್‍ ಶುರುಮಾಡಿದ್ದಾರೆ. ಚುನಾವಣಾ ಆಯೋಗದ ಎಲ್ಲಾ ರೀತಿಯ ಗಿಮಿಕ್ ಮತ್ತು ಲೋಪಗಳನ್ನು ಪದೇ ಪದೇ ಪಟ್ಟು ಬಿಡದೆ ಎತ್ತಿಹಿಡಿದ ಕಾರ್ಯವೈಖರಿ ಅವರ ಪತ್ರಿಕೊದ್ಯಮದ ಬದ್ದತೆಯನ್ನು ತೋರಿಸಿದೆ. ಅವರ ಹಸನ್ಮುಖ ಮಾತುಗಳು ಮತ್ತು ಕಟು ಸತ್ಯಗಳು ವೀಕ್ಷಕರಿಗೆ ಸುಲಭ ರೀತಿಯಲ್ಲಿ ತಲುಪುತ್ತಿವೆ.

ಈ ಮೂವರು ಆತ್ಮಸಾಕ್ಷಿಯುಳ ಪತ್ರಕರ್ತರು ಚುನಾವಣೆಯ ಮುಂಚೆ ಮತ್ತು ನಂತರದಲ್ಲಿ ನಿಸಂದೇಹವಾಗಿ ಹೀರೋಗಳಾಗಿದ್ದಾರೆ. ಆದರೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಮಾಧ್ಯಮ ಸಂಸ್ಥೆಗಳ ಕಪಟ ಮೌನದಿಂದ ಹಲವು ಸಂಸ್ಥೆಗಳಿಗೆ ಇವರು ಖಳನಾಯಕರಾಗಿ ಕಾಣಿಸುತ್ತಾರೆ.

ಚುನಾವಣೆಯ ನಂತರ ಭಾರತ ಯಾವ ಹಾದಿಯಲ್ಲಿ ಹೋಗುತ್ತದೆಯೋ ತಿಳಿದಿಲ್ಲ. ಆದರೆ ದಿ ವಲ್ಡ್ ಸಿಖ್ ನ್ಯೂಸ್ ಫ್ಯಾಸಿಸಂ ವಿರುದ್ದದ ಹೋರಾಟದಲ್ಲಿ ಮತ್ತು ಪತ್ರಿಕೋದ್ಯಮದ ನೈತಿಕತೆಯನ್ನು ಉಳಿಸಲು ಬದ್ದವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಡಬ್ಲ್ಯೂಎಸ್‍ಎನ್ ಪ್ರಕಟಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...