Homeಕರ್ನಾಟಕಕನ್ನಡದಲ್ಲಿ ಬರೆದಿದ್ದ ಚೆಕ್‌ ಅಮಾನ್ಯ: ಎಸ್‌ಬಿಐಗೆ 85 ಸಾವಿರ ರೂ. ದಂಡ

ಕನ್ನಡದಲ್ಲಿ ಬರೆದಿದ್ದ ಚೆಕ್‌ ಅಮಾನ್ಯ: ಎಸ್‌ಬಿಐಗೆ 85 ಸಾವಿರ ರೂ. ದಂಡ

- Advertisement -
- Advertisement -

ಕನ್ನಡದಲ್ಲಿ ಬರೆದಿದ್ದ ಚೆಕ್‌‌ ಅನ್ನು ಅಮಾನ್ಯ ಮಾಡಿದ್ದ ಸ್ಟೇಟ್‌ ಬ್ಯಾಂಕ್‌‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆಯು 85,177 ರೂ. ದಂಡ ವಿಧಿಸಿದೆ. ಚೆಕ್‌ನಲ್ಲಿ ಬರೆದಿದ್ದ ಕನ್ನಡ ಅಂಕಿಗಳನ್ನು ಸರಿಯಾಗಿ ಗುರುತಿಸದೆ ಅದನ್ನು ಅಮಾನ್ಯ ಮಾಡಲಾಗಿತ್ತು ಎಂದು ವರದಿಯಾಗಿದೆ.

ವಾದಿರಾಜಾಚಾರ್ಯ ಇನಾಂದಾರ್‌‌ ಅವರು ತಮ್ಮ ವಿದ್ಯುತ್‌ ಬಿಲ್ ಕಟ್ಟಲು 2020ರ ಸೆಪ್ಟೆಂಬರ್ 3 ರಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಹೆಸ್ಕಾಂ) ಗೆ 6,000 ರೂ.ಗಳ ಎಸ್‌ಬಿಐ ಚೆಕ್ ಅನ್ನು ನೀಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹೆಸ್ಕಾಂ ತನ್ನ ಖಾತೆಯನ್ನು ಕೆನರಾ ಬ್ಯಾಂಕ್‌ನಲ್ಲಿ ಹೊಂದಿದ್ದರಿಂದ ಚೆಕ್ ಅನ್ನು ಉತ್ತರ ಕನ್ನಡದ ಹಳಿಯಾಳದಲ್ಲಿರುವ ಎಸ್‌ಬಿಐ ಶಾಖೆಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಸಾವರ್ಕರ್ ಕುರಿತ ಉತ್ಪ್ರೇಕ್ಷಿತ ಕನ್ನಡ ಪಠ್ಯಕ್ಕೆ ತೀವ್ರ ವಿರೋಧ: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

ಈ ಚೆಕ್‌ನಲ್ಲಿ ಅಂಕಿಗಳು ಸೇರಿದಂತೆ ಎಲ್ಲವನ್ನೂ ಕನ್ನಡದಲ್ಲಿ ಭರ್ತಿ ಮಾಡಲಾಗಿತ್ತು. ಹಳಿಯಾಳದಲ್ಲಿರುವ ಎಸ್‌ಬಿಐ ಶಾಖೆಯು ಕನ್ನಡದ ಒಂಬತ್ತನ್ನು ಆರು ಎಂದು ತಪ್ಪಾಗಿ ಗುರುತಿಸಿ ಚೆಕ್ ಅನ್ನು ಅಮಾನ್ಯ ಮಾಡಿತ್ತು.

ಚೆಕ್‌ನಲ್ಲಿ ಸೆಪ್ಟೆಂಬರ್‌ ತಿಂಗಳನ್ನು ಸೂಚಿಸಲು ಕನ್ನಡದ ಅಂಕಿಯ ಒಂಬತ್ತನ್ನು ಬರೆಯಲಾಗಿತ್ತು. ಆದರೆ ಬ್ಯಾಂಖ್ ಅದನ್ನು ಆರು ಎಂದು ಭಾವಿಸಿ ಅದನ್ನು ಅಮಾನ್ಯ ಮಾಡಿತ್ತು.

ಹುಬ್ಬಳ್ಳಿಯ ಸರ್ಕಾರಿ ಪಿಯು ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾಗಿರುವ ಇನಾಂದಾರ್ ಅವರು ತಮ್ಮ ದೂರಿನೊಂದಿಗೆ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿದ್ದರು.

ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆಯಿಂದ ಆಯುಧ ತರಬೇತಿ ಆರೋಪ: ಟ್ವಿಟರ್‌ನಲ್ಲಿ ಕನ್ನಡಿಗರ ಆಕ್ಷೇಪ

ಬುಧವಾರ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಿಶೆಟ್ಟಿ, ಪಿಸಿ.ಹಿರೇಮಠ ಅವರನ್ನೊಳಗೊಂಡ ವೇದಿಕೆ ಎಸ್‌ಬಿಐ ಸೇವೆಯಲ್ಲಿ ಲೋಪ ಕಂಡು ಬಂದಿದೆ ಎಂದು ತೀರ್ಮಾನಿಸಿ ದಂಡ ವಿಧಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...