Homeಮುಖಪುಟಲೈಂಗಿಕ ಕಿರುಕುಳದ ಬಗ್ಗೆ ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಮೂರ್ತಿಯ ಸೇವಾವಧಿ ಕಡಿತಗೊಳಿಸಿದ ಸರ್ಕಾರ

ಲೈಂಗಿಕ ಕಿರುಕುಳದ ಬಗ್ಗೆ ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಮೂರ್ತಿಯ ಸೇವಾವಧಿ ಕಡಿತಗೊಳಿಸಿದ ಸರ್ಕಾರ

- Advertisement -
- Advertisement -

ಲೈಂಗಿಕ ಕಿರುಕುಳಗಳ ಬಗ್ಗೆ ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಪುಷ್ಪಾ ಗಣೆಡಿವಾಲಾ ಅವರ ಒಂದು ವರ್ಷದ ಸೇವಾವಧಿಯನ್ನು ಕಡಿತಗೊಳಿಸಲಾಗಿದೆ. ಪುಷ್ಪಾ ಅವರನ್ನು ಹೆಚ್ಚುವರಿ ನ್ಯಾಯಾಧೀಶೆಯಗಿ ಎರಡು ವರ್ಷಗಳ ಅವಧಿಗೆ ಸುಪ್ರೀಂಕೋರ್ಟ್ ಕೊಲೀಜಿಯಂ ಶಿಫಾರಸ್ಸು ಮಾಡಿತ್ತು.

ವಿವಾದಾತ್ಮಕ ತೀರ್ಪು ನೀಡಿದ್ದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಕೊಲೀಜಿಯಂ ಅವರಿಗೆ ನೀಡಿದ್ದ ಖಾಯಂ ನ್ಯಾಯಮೂರ್ತಿಯ ಅನುಮೋದನೆಯನ್ನು ವಾಪಾಸು ಪಡೆದುಕೊಂಡಿತ್ತು. ಅದರ ಬದಲು ಅವರಿಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅವಕಾಶ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಸರ್ಕಾರವು ಅವರಿಗೆ ಕೇವಲ ಒಂದು ವರ್ಷವಷ್ಟೇ ಹೆಚ್ಚುವರಿಯಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದೆ.

ಇದನ್ನೂ ಓದಿ: ಅಪ್ರಾಪ್ತರ ಎದುರು ಪ್ಯಾಂಟ್ ಜಿಪ್ ತೆಗೆಯುವುದು…: ಬಾಂಬೆ ಹೈಕೋರ್ಟ್ ಹೇಳಿದ್ದೇನು?

ಅವರ ಹಿಂದಿನ ಅವಧಿಯು ಕಳೆದ ಶುಕ್ರವಾರವಷ್ಟೇ ಅಂತ್ಯಗೊಂಡಿತ್ತು. ಅವರಿಗೆ ಸುಪ್ರೀಂಕೋರ್ಟ್ ಶಿಫಾರಸ್ಸು ಮಾಡಿದ್ದ ಎರಡು ವರ್ಷಗಳ ಹೆಚ್ಚುವರಿ ಅವಧಿ ಇಂದಿನಿಂದ ಪ್ರಾರಂಭವಾಗಿತ್ತು. ಆದರೆ ಸರ್ಕಾರದ ಅಧಿಸೂಚನೆಯಂತೆ ಈಗ ಅವರ ಸೇವೆಯ ಅವಧಿಯು ಒಂದು ವರ್ಷಕ್ಕೆ ಮೊಟಕುಗೊಂಡಿದೆ.

ನ್ಯಾಯಮೂರ್ತಿಯು ಜನವರಿ 28 ರಂದು ಅಪ್ರಾಪ್ತ ವಯಸ್ಕ ಬಾಲಕ ಅಥವಾ ಬಾಲಕಿಯ ಕೈಗಳನ್ನು ಹಿಡಿದುಕೊಳ್ಳುವುದು ಮತ್ತು ಪ್ಯಾಂಟ್ ಜಿಪ್ ಅನ್ನು ಅಪ್ರಾಪ್ತ ವಯಸ್ಕನ ಮುಂದೆ ತೆಗೆಯುವುದು ಪೋಕ್ಸೋ ಕಾಯ್ದೆ ಅಡಿ ಲೈಂಗಿಕ ಅಪರಾಧಗಳ ಅಡಿಯಲ್ಲಿ ಬರುವುದಿಲ್ಲ ಎಂದು ತೀರ್ಪು ನೀಡಿದ್ದರು.

ಅದಕ್ಕಿಂತಲೂ ಮೊದಲ ಪ್ರಕರಣವೊಂದಲ್ಲಿ ನ್ಯಾಯಮೂರ್ತಿ ಪುಷ್ಪಾ ಗಣೆಡಿವಾಲಾ ಅವರು, “ಚರ್ಮದಿಂದ ಚರ್ಮಕ್ಕೆ ಸಂಪರ್ಕವಿಲ್ಲದೆ” ಮುಟ್ಟುವುದು ಲೈಂಗಿಕ ಅಪರಾಧ ಆಗುವುದಿಲ್ಲ ಎಂದು ತೀರ್ಪು ನೀಡಿ 12 ವರ್ಷದ ಮಗುವಿನ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾನೆ ಎನ್ನಲಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿದ್ದರು.

ಇದನ್ನೂ ಓದಿ: 10 ಲಕ್ಷ ರೂ. ‘ಶಾಂತಿ ಉಲ್ಲಂಘನೆ’ ಬಾಂಡ್ ನೀಡಲು ರೈತರಿಗೆ ನೋಟಿಸ್! ಯುಪಿ ಸರ್ಕಾರಕ್ಕೆ ವಿವರಣೆ ಕೇಳಿದ ನ್ಯಾಯಾಲಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...