Homeಮುಖಪುಟಹರಿಯಾಣ ಉಪಮುಖ್ಯಮಂತ್ರಿಯ ರಾಜೀನಾಮೆ ನನ್ನ ಕಿಸೆಯಲ್ಲಿದೆ: ಜೆಜೆಪಿ ನಾಯಕ ಅಜಯ್ ಚೌಟಾಲ

ಹರಿಯಾಣ ಉಪಮುಖ್ಯಮಂತ್ರಿಯ ರಾಜೀನಾಮೆ ನನ್ನ ಕಿಸೆಯಲ್ಲಿದೆ: ಜೆಜೆಪಿ ನಾಯಕ ಅಜಯ್ ಚೌಟಾಲ

ರೈತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಹರಿಯಾಣ ಮೈತ್ರಿ ಸರ್ಕಾರದಲ್ಲಿ ಮಿತ್ರಪಕ್ಷವಾಗಿರುವ ಜೆಜೆಪಿಗೆ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಾಸು ಪಡೆಯುವಂತೆ ಒತ್ತಡ ಹೆಚ್ಚಾಗುತ್ತಿದೆ.

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ದ ರೈತರು ಹೋರಾಟ ನಡೆಸುತ್ತಿರುವ ನಡುವೆಯೆ, ಹರಿಯಾಣದ ಮೈತ್ರಿ ಸರ್ಕಾರದಲ್ಲಿ ಮಿತ್ರಪಕ್ಷವಾಗಿರುವ ಜೆಜೆಪಿ ಮೇಲೆ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಾಸು ಪಡೆಯಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಈ ಬಗ್ಗೆ ಜೆಜೆಪಿ ನಾಯಕ ಅಜಯ್ ಚೌಟಾಲಾ ಶನಿವಾರ ಮಾತನಾಡಿದ್ದು “ಉಪಮುಖ್ಯಮಂತ್ರಿ ದುಶ್ಯಂತ್ ಅವರ ರಾಜೀನಾಮೆ ನನ್ನ ಕಿಸೆಯಲ್ಲಿದ್ದು, ಉದ್ದೇಶಗಳು ಪೂರೈಸುವುದಿದ್ದರೆ ತಕ್ಷಣವೆ ರಾಜೀನಾಮೆ ನೀಡುತ್ತಾರೆ” ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ದುಶ್ಯಂತ್ ಅವರ ತಂದೆ ಅಜಯ್ ಚೌಟಾಲಾ ಪ್ರಸ್ತುತ ನವದೆಹಲಿಯ ತಿಹಾರ್ ಜೈಲಿನಿಂದ ಪೆರೋಲ್‌‌‌ನಲ್ಲಿ ಹೊರಗಿದ್ದಾರೆ, ಅವರು ಶಿಕ್ಷಕರ ನೇಮಕಾತಿ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಜಯ್ ಚೌಟಾಲಾ, “ದುಶ್ಯಂತ್ ಅವರ ರಾಜೀನಾಮೆ ನನ್ನ ಜೇಬಿನಲ್ಲಿದೆ. ಉದ್ದೇಶಗಳು ಪೂರೈಸುವುದಿದ್ದರೆ ನಾನು ತಕ್ಷಣ ಅದನ್ನು ನೀಡಬಲ್ಲೆ. ಈ ಕಾನೂನನ್ನು ಕೇಂದ್ರ ಸರ್ಕಾರ ಮಾಡಿದೆ. ಒಂದೋ ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಬೇಕು ಅಥವಾ ಹರಿಯಾಣದ ಎಲ್ಲಾ 10 ಲೋಕಸಭಾ ಸಂಸದರು ರಾಜೀನಾಮೆ ನೀಡಬೇಕು ಅಥವಾ ಈ ಕಾನೂನುಗಳನ್ನು ಅನುಮೋದಿಸಿದ ರಾಜ್ಯಸಭೆಯ ಎಲ್ಲಾ ಐವರು ಸದಸ್ಯರು ರಾಜೀನಾಮೆ ನೀಡಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತರಿಗೆ ಬೆಂಬಲ: ಹರಿಯಾಣದ ಪ್ರತಿ ಹಳ್ಳಿಗೂ ಹರಡಿದ ಮಹಾಪಂಚಾಯತ್ – ಗ್ರೌಂಡ್ ರಿಪೋರ್ಟ್

“ಉಪಮುಖ್ಯಮಂತ್ರಿ ದುಶ್ಯಂತ್ ಅವರ ರಾಜೀನಾಮೆಯಿಂದಲೋ ಅಥವಾ ಯಾವುದೇ ಸಚಿವರ ರಾಜೀನಾಮೆಯೊಂದಿಗೆ, ಉದ್ದೇಶಗಳು ಪೂರೈಸುವುದಾದರೆ, ಉಪ ಮುಖ್ಯಮಂತ್ರಿಯ ರಾಜೀನಾಮೆ ನನ್ನ ಜೇಬಿನಲ್ಲಿದೆ. ನಾನು ಒಂದು ನಿಮಿಷ ತೆಗೆದುಕೊಳ್ಳುವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಆದರೆ,  ವಿರೋಧ ಪಕ್ಷಗಳು ಮೊದಲು ಸಟ್ಲೇಜ್ ಯಮುನಾ ಲಿಂಕ್ ನೀರಿನ ಸಮಸ್ಯೆಯನ್ನು ಸಹ ಪಡೆಯುತ್ತಾರೆಯೆ ಎಂದು ಹೇಳಬೇಕು” ಎಂದು ಹೇಳಿದ್ದಾರೆ. ಹರಿಯಾಣಕ್ಕೆ ಸಟ್ಲೇಜ್ ಯಮುನಾ ಲಿಂಕ್‌ ನೀರಿನ ಆಧಾರವಾಗಿದೆ.

ಐಎನ್‌ಎಲ್‌ಡಿಯ ಏಕೈಕ ಶಾಸಕ ಮತ್ತು ಅವರ ಹಿರಿಯ ಸಹೋದರ ಅಭಯ್ ಸಿಂಗ್ ಚೌಟಾಲಾ ಅವರು ಎಲ್ಲೆನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅಜಯ್ ಚೌಟಾಲಾ, “ಅವರ ರಾಜೀನಾಮೆಯೊಂದಿಗೆ ಯಾವುದೇ ಉದ್ದೇಶಗಳು ಪೂರೈಸಲಾಗಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಹರಿಯಾಣದಲ್ಲಿ ಮತ್ತೊಂದು ಮಹಾಪಂಚಾಯತ್ – 50,000 ಜನ ಸೇರುವ ನಿರೀಕ್ಷೆ!

ನಡೆಯುತ್ತಿರುವ ಹೋರಾಟದ ಬಗ್ಗೆ ಮತ್ತಷ್ಟು ಮಾತನಾಡಿದ, ಅಜಯ್ ಚೌಟಾಲಾ, “ಚರ್ಚೆಯ ಮೂಲಕ ಮಾತ್ರ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಾನು ಮೊದಲ ದಿನದಿಂದಲೇ ಹೇಳುತ್ತಿದ್ದೆ. ಮಾತುಕತೆ ನಡೆಸಿದರೆ,ಎರಡೂ ಕಡೆಯವರು ಒಂದು ಹೆಜ್ಜೆ ಹಿಂದಕ್ಕೆ ಇಟ್ಟರೆ ಮಾತ್ರ ನಿರ್ಣಯವನ್ನು ಸಾಧಿಸಬಹುದು” ಎಂದು ಹೇಳಿದ್ದಾರೆ.

“ರೈತರು ಕೆಲವು ವಿಷಯಗಳೊಂದಿಗೆ ಹೋರಾಟ ಪ್ರಾರಂಭಿಸಿದ್ದರು, ಕೃಷಿ ಸಚಿವರು ಸ್ಪಷ್ಟೀಕರಣಗಳನ್ನು ನೀಡಿದ್ದರು. ಪ್ರಧಾನ ಮಂತ್ರಿ, ಉಭಯ ಸದನಗಳಲ್ಲಿ ನಿರ್ದಿಷ್ಟವಾಗಿ ಯಾವ ವಿಷಯಗಳ ಬಗ್ಗೆ ಆಕ್ಷೇಪಣೆಗಳಿವೆ ಅದನ್ನು ಪರಿಹರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು. ಆದರೂ, ಜನರು ತೃಪ್ತರಾಗದಿದ್ದರೆ, ಏನು ಮಾಡಬಹುದು. ಅವರು ಹೋಗಿ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು. ಎರಡೂ ಕಡೆಯಿಂದ ಸ್ವಲ್ಪ ಬಾಗಿದಾಗ ಮಾತ್ರ ಪರಿಹಾರವಾಗಲಿದೆ” ಎಂದು ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ, ಉಪಮುಖ್ಯಮಂತ್ರಿ ದುಶ್ಯಂತ್ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ವಿವಿಧ ಹಿರಿಯ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ಎದುರಿಸುತ್ತಿದ್ದಾರೆ. ಅವರು ನಡೆಸಲು ಉದ್ದೇಶಿಸಿ ಸ್ಥಳಗಳಲ್ಲಿ ಹಿಂಸಾಚಾರ ಮತ್ತು ಪ್ರತಿಭಟನೆಗಳಿಂದಾಗಿ ಅವರಿಗೆ ಯಾವುದೇ ಸಾರ್ವಜನಿಕ ಸಮಾರಂಭವನ್ನು ನಡೆಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಹರಿಯಾಣ: ರೈತ ಹೋರಾಟ ಬೆಂಬಲಿಸಿ ಜೆಜೆಪಿ ಪಕ್ಷ ತೊರೆದ ಮುಖಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...