Homeಮುಖಪುಟವಿವಾದಿತ ಯತಿ ನರಸಿಂಗಾನಂದ ಅರ್ಚಕನಾಗಿರುವ ದೇವಾಲಯದಲ್ಲಿ ವ್ಯಕ್ತಿಗೆ ಚೂರಿ ಇರಿತ

ವಿವಾದಿತ ಯತಿ ನರಸಿಂಗಾನಂದ ಅರ್ಚಕನಾಗಿರುವ ದೇವಾಲಯದಲ್ಲಿ ವ್ಯಕ್ತಿಗೆ ಚೂರಿ ಇರಿತ

- Advertisement -
- Advertisement -

ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಆವರಣದಲ್ಲಿ ನಿದ್ರಿಸುತ್ತಿದ್ದ 52 ವರ್ಷದ ವ್ಯಕ್ತಿಯ ಮೇಲೆ ಪೇಪರ್‌ ಕಟ್ಟರ್‌ ಚಾಕುವಿನಿಂದ ಹಲವು ಬಾರಿ ಚುಚ್ಚಲಾಗಿದ್ದು, ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.

ಘಟನೆಯು ಆಗಸ್ಟ್ 9 ಮತ್ತು 10 ರ ಮಧ್ಯರಾತ್ರಿ ನಡೆದ್ದಿದ್ದು, ಘಟನೆ ನಡೆಯುವ ಸಮಯದಲ್ಲಿ, ದೇವಸ್ಥಾನದ ಮುಖ್ಯ ಮಹಂತ್‌‌‌ ಆಗಿರುವ, ಸದಾ ದ್ವೇಷ ಭಾಷಣಗಳಿಂದಲೇ ಸುದ್ದಿಯಲ್ಲಿರುವ ವಿವಾದಿತ ಅರ್ಚಕ ನರಸಿಂಹಾನಂದ್ ಅವರು, ದೇವಸ್ಥಾನದ ಆವರಣದಲ್ಲಿರುವ ಕೊಠಡಿಯಲ್ಲಿದ್ದರು ಎಂದು ದಿಕ್ವಿಂಟ್‌ ವರದಿ ಮಾಡಿದೆ.

ಇದನ್ನೂ ಓದಿ: ವಿವಾದಿತ ಯತಿ ನರಸಿಂಗಾನಂದ್ ವಿರುದ್ದ FIR ದಾಖಲಿಸಲು ಮಹಿಳಾ ಆಯೋಗ ಒತ್ತಾಯ

ಸಂತ್ರಸ್ತ ವ್ಯಕ್ತಿಯನ್ನು ಸ್ವಾಮಿ ನರೇಶಾನಂದ್, ಬಿಹಾರದ ಸಮಸ್ತಿಪುರ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ. ಅವರು ಆಗಸ್ಟ್ 7 ರಂದು ಸಮಾರಂಭವೊಂದರಲ್ಲಿ ಭಾಗವಹಿಸಲು ಗಾಜಿಯಾಬಾದ್‌ಗೆ ಬಂದಿದ್ದರು.

ದೇವಸ್ಥಾನದಲ್ಲಿನ ಸಿಸಿಟಿವಿ ಕ್ಯಾಮೆರಾಗಳು

ದಾಳಿಯ ನಂತರ, ನರೇಶಾನಂದ್ ಅವರನ್ನು ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಬಗ್ಗೆ ಯಾವುದೆ ದೂರು ದಾಖಲಾಗದಿದ್ದರೂ ಗಾಜಿಯಾಬಾದ್ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ದೇವಾಲಯದ ಒಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಜೈ ಶ್ರೀರಾಮ್ ಹೇಳುವಂತೆ ಪತ್ರಕರ್ತನಿಗೆ ಬೆದರಿಕೆ: ನಿಮ್ಮ ಒತ್ತಡಕ್ಕೆ ಜಗ್ಗಲಾರೆ ಎಂದ ಅನ್ಮೋಲ್ ಪ್ರೀತಮ್

“ದೇವಸ್ಥಾನದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ. ನಾವು ಸ್ಥಳೀಯವಾಗಿ ಇರುವ ಇತರ ಸಿಸಿಟಿವಿ ಕ್ಯಾಮೆರಾಗಳ ತುಣುಕನ್ನು ಸ್ಕ್ಯಾನ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಮಗೆ ಬಂದ ದೂರಿನ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸುತ್ತೇವೆ” ಎಂದು ಗಾಜಿಯಾಬಾದ್ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಇರಾಜ್ ರಾಜ ಹೇಳಿದ್ದಾರೆ.

ವಿವಾದದ ಕೇಂದ್ರ ದಾಸ್ನಾ ದೇವಿ ದೇವಸ್ಥಾನ!

ವಿವಾದಿತ ಯತಿ ನರಸಿಂಹಾನಂದ ಅವರ ವೈಯಕ್ತಿಕ ಭದ್ರತೆಗಾಗಿ ನಾಲ್ಕು ಪೊಲೀಸ್ ಗನ್ನರ್‌ಗಳನ್ನು ಹೊರತುಪಡಿಸಿ, ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ಯನ್ನು ಮುಖ್ಯ ದ್ವಾರದಲ್ಲಿ ಮತ್ತು ದೇವಸ್ಥಾನದ ಆವರಣದಲ್ಲಿ ನಿಯೋಜಿಸಲಾಗಿದೆ. ಆದ್ದರಿಂದ ದಾಳಿಕೋರ ಮುಖ್ಯ ದ್ವಾರದ ಮೂಲಕ ದಾಟಿ ಹೋಗುವುದು ಅಸಂಭವವಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಕ್ವಿಂಟ್‌ ವರದಿ ಮಾಡಿದೆ.

ಇದನ್ನೂ ಓದಿ: ‘ಧರ್ಮಯುದ್ಧ ಮಾಡಲು ನನಗೆ ಆಯುಧ ಹಿಡಿದಿರುವವರು ಬೇಕಿದೆ’: ಬಹಿರಂಗ ಭಯೋತ್ಪಾದನೆಗೆ ಕರೆ ನೀಡಿದ ಯತಿ ನರಸಿಂಗಾನಂದ?

“ದೇವಾಲಯದ ಆವರಣದ ಸುತ್ತಲೂ ಒಂದು ಗೋಡೆಯಿದೆ. ಆದರೆ ಕೆಲವು ಕಡೆ ಅದರ ಎತ್ತರ ಕಡಿಮೆಯಾಗಿದೆ. ಬಹುಶಃ ದಾಳಿಕೋರ ದಾಳಿಯ ನಂತರ ಅಂತಹ ಒಂದು ಸ್ಥಳದಲ್ಲಿ ಗೋಡೆಯನ್ನು ಹಾರಿ ತಪ್ಪಿಸಿಕೊಂಡಿರಬಹುದು” ಎಂದು ಇರಾಜ್ ರಾಜಾ ಹೇಳಿದ್ದಾರೆ.

ಇತ್ತೀಚೆಗೆ ದಾಸ್ನಾ ದೇವಿ ದೇವಸ್ಥಾನವು ವಿವಾದದ ಕೇಂದ್ರವಾಗಿತ್ತು. ಮಾರ್ಚ್ 11 ರಂದು, ನರಸಿಂಗಾನಂದ್ ಅವರ ಶಿಷ್ಯರಲ್ಲಿ ಒಬ್ಬರಾದ ಶೃಂಗಿ ಯಾದವ್ ಎಂಬ ವ್ಯಕ್ತಿ, ನೀರು ಕುಡಿಯಲು ದೇವಸ್ಥಾನ ಪ್ರವೇಶಿಸಿದ್ದ 14 ವರ್ಷದ ಮುಸ್ಲಿಂ ಬಾಲಕನಿಗೆ ಕ್ರೂರವಾಗಿ ಥಳಿಸಿರುವುದು ವಿಡಿಯೋದಲ್ಲಿ ದಾಖಲಾಗಿತ್ತು. ಇದರ ವಿರುದ್ದ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ದೇವಾಲಯದ ಆವರಣದ ಹೊರಗೆ ಒಂದು ಬೋರ್ಡ್ ಇದ್ದು, ಅದರಲ್ಲಿ, “ಈ ದೇವಸ್ಥಾನವು ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಮುಸ್ಲಿಮರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ” ಎಂದು ಬರೆಯಲಾಗಿದೆ.

ಇದನ್ನೂ ಓದಿ: ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ: ನನ್ನ ಅನುಯಾಯಿ ಸೂಕ್ತ ಉತ್ತರ ನೀಡಿದ್ದಾನೆ ಎಂದ ಸ್ವಾಮೀಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...