Homeಮುಖಪುಟದೆಹಲಿ ಗಲಭೆ: ಐಬಿ ಉದ್ಯೋಗಿ ಅಂಕಿತ್‌ ಶರ್ಮಾನಿಗೆ ಇರಿದಿದ್ದು 400 ಬಾರಿ ಎಂಬುದು ಸುಳ್ಳು ಎಂದ...

ದೆಹಲಿ ಗಲಭೆ: ಐಬಿ ಉದ್ಯೋಗಿ ಅಂಕಿತ್‌ ಶರ್ಮಾನಿಗೆ ಇರಿದಿದ್ದು 400 ಬಾರಿ ಎಂಬುದು ಸುಳ್ಳು ಎಂದ ಮರಣೋತ್ತರ ಪರೀಕ್ಷೆ

- Advertisement -
- Advertisement -

ಈಶಾನ್ಯ ದೆಹಲಿ ಹಿಂಸಾಚಾರದ ಸಂದರ್ಭದಲ್ಲಿ ಗುಪ್ತಚರ ದಳದ 26 ವರ್ಷದ ಅಂಕಿತ್ ಶರ್ಮಾ ಅವರ ಶವ ಪತ್ತೆಯಾದ ಎರಡು ವಾರಗಳ ನಂತರ ಬಂದ ಮರಣೋತ್ತರ ವರದಿಯು ಶರ್ಮಾ ಅವರಿಗೆ “400 ಕ್ಕೂ ಹೆಚ್ಚು ಬಾರಿ ಇರಿದಿದೆ” ಎಂಬ ಹೇಳಿಕೆಯನ್ನು ತಳ್ಳಿಹಾಕಿದೆ.

ಫೆಬ್ರವರಿ 26 ರಂದು ಈಶಾನ್ಯ ದೆಹಲಿಯ ಚಾಂದ್ ಬಾಗ್ ಪ್ರದೇಶದ ಚರಂಡಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಬಲಪಂಥೀಯ ವೆಬ್‌ಸೈಟ್‌ಗಳು “400 ಕ್ಕೂ ಹೆಚ್ಚು ಬಾರಿ ಇರಿದಿದೆ” ಎಂದು ವರದಿ ಮಾಡಿದ ನಂತರ ಮಂತ್ರಿಗಳು, ಸಂಸದರು, ಸೋಷಿಯಲ್ ಮೀಡಿಯಾ ಪ್ರಭಾವಿಗಳು ಸಹ ಅದೇ ಮಾತುಗಳನ್ನಾಡಿದ್ದರು.

ಫೆಬ್ರವರಿ 24 ರಿಂದ 26 ರವರೆಗೆ ರಾಷ್ಟ್ರ ರಾಜಧಾನಿಯನ್ನು ಹಿಡಿತದಲ್ಲಿಟ್ಟುಕೊಂಡ ಕೋಮು ಹಿಂಸಾಚಾರದ ಸಂದರ್ಭದಲ್ಲಿ ದಾಳಿಯಲ್ಲಿ ಅಂಕಿತ್ ಶರ್ಮಾ ತೀವ್ರ ಮಾರಣಾಂತಿಕ ಗಾಯಗಳನ್ನು ಅನುಭವಿಸಿದ್ದು ನಿಜ. ಆದರೆ ಅವರಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಲಾಗಿದೆ ಎಂಬುದು ಉತ್ಪ್ರೇಕ್ಷೆಯಾಗಿದೆ ಪ್ರಸಾರ್ ಭಾರತಿ ಸಿಇಒ ಬಿಬಿಸಿಗೆ ಅಧಿಕೃತ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಮರಣೋತ್ತರ ವರದಿಯ ಪ್ರಕಾರ, ಅಂಕಿತ್‌ ಶರ್ಮಾ ಅವರಿಗೆ 12 ಬಾರಿ ಇರಿತ ಮತ್ತು ಒಟ್ಟು 51 ಗಾಯಗಳಾಗಿವೆ.

ಮರಣೋತ್ತರ ವರದಿಯಲ್ಲೇನಿದೆ?

ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾದ ಸಾವಿಗೆ ಕಾರಣವೆಂದರೆ, “ಶ್ವಾಸಕೋಶ ಮತ್ತು ಮೆದುಳಿಗೆ ಗಾಯಗಳಿಂದಾಗಿ ರಕ್ತಸ್ರಾವವುಂಟಾಗಿ ಆಘಾತ ಉಂಟಾಗಿದೆ. ಚೂಪಾದ ಆಯುಧಗಳಿಂದ ಕೆಲವು ಗಾಯಗಳು ಸಂಭವಿಸಿವೆ”.

ಶರ್ಮಾರವರು ದೇಹದಾದ್ಯಂತ ಇರಿತದ ಗಾಯಗಳನ್ನು ಅನುಭವಿಸಿದ್ದರು. ಹೆಚ್ಚಾಗಿ ಅವರ ಬೆನ್ನು ಮತ್ತು ಬೆನ್ನುಮೂಳೆಯ ಮೇಲೆ. ಮೊಂಡಾದ ವಸ್ತುವಿನಿಂದ ಹೊಡೆಯುವುದರಿಂದ ಅವರು 13 ಗಾಯಗಳನ್ನು ಸಹ ಅನುಭವಿಸಿದ್ದಾರೆ ಎಂದು ವರದಿ ಹೇಳುತ್ತದೆ.


ಇದನ್ನೂ ಓದಿ: Fact check: ವೈರಲ್ ಫೋಟೊದಲ್ಲಿನ ಮಗುವನ್ನು ಹಿಂದೂ ಎಂದು ಸುದ್ದಿ ಹರಡಿದ ನರೇಂದ್ರ ಮೋದಿ ಬೆಂಬಲಿಗರು!


ರಾಜಕಾರಣಿಗಳು, ಮಾಧ್ಯಮಗಳು ಮಾಡಿದ ಸುಳ್ಳು ಪ್ರಚಾರಗಳು

ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು “400 ಬಾರಿ ಇರಿಯಲಾಗಿದೆ” ಎಂಬ ಅಂಕಿ ಅಂಶವನ್ನು ಉಲ್ಲೇಖಿಸಿದ್ದಾರೆ. ರಿಪಬ್ಲಿಕ್, ಟೈಮ್ಸ್ ನೌ, ದಿ ಫ್ರೀ ಪ್ರೆಸ್ ಜರ್ನಲ್ ಮತ್ತು ಬಲಪಂಥೀಯ ವೆಬ್‌ಸೈಟ್ ಒಪಿಂಡಿಯಾ ಸೇರಿದಂತೆ ಹಲವಾರು ಮಾಧ್ಯಮಗಳು ಐಬಿ ಉದ್ಯೋಗಿಯನ್ನು “400 ಕ್ಕೂ ಹೆಚ್ಚು ಬಾರಿ ಇರಿದಿದೆ” ಎಂದು ವರದಿಗಳನ್ನು ನೀಡಿವೆ.

ಬಿಜೆಪಿ ದೆಹಲಿ ಅಧ್ಯಕ್ಷ ಮನೋಜ್ ತಿವಾರಿ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಕೂಡ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಇದೇ ನಿರೂಪಣೆಯನ್ನು ಮುಂದಿಟ್ಟಿದ್ದರು.

ಈ ಬಗ್ಗೆ ಹೆಸರು ಹೇಳಲು ಇಚ್ಚಿಸದ ಈ ಪ್ರಕರಣದ ಪರಿಚಯವಿರುವ ವೈದ್ಯಕೀಯ ವಿಧಿವಿಜ್ಞಾನ ತಜ್ಞರು ದಿ ಕ್ವಿಂಟ್‌ನೊಂದಿಗೆ ಮಾತನಾಡಿ ಈ ವರದಿಗಳನ್ನು “ಪ್ರಚೋದಿತ ವರದಿಗಳು” ಎಂದಿದ್ದಾರೆ.

“ಅವನ ದೇಹದ ಮೇಲೆ ಕತ್ತರಿಸಿದ ಗುರುತುಗಳು ಇದ್ದವು. ಮೂಗೇಟುಗಳು, ಒರಟಾದ ಗಾಯಗಳು ಮತ್ತು ಅನೇಕ ಇರಿತದ ಗಾಯಗಳು ಇದ್ದವು, ಆದರೆ ಅವನನ್ನು 400 ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ ಎಂಬ ಹೇಳಿಕೆ 100% ಸುಳ್ಳು ಎಂದಿದ್ದಾರೆ”.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...