HomeಮುಖಪುಟFact check: ವೈರಲ್ ಫೋಟೊದಲ್ಲಿನ ಮಗುವನ್ನು ಹಿಂದೂ ಎಂದು ಸುದ್ದಿ ಹರಡಿದ ನರೇಂದ್ರ ಮೋದಿ ಬೆಂಬಲಿಗರು!

Fact check: ವೈರಲ್ ಫೋಟೊದಲ್ಲಿನ ಮಗುವನ್ನು ಹಿಂದೂ ಎಂದು ಸುದ್ದಿ ಹರಡಿದ ನರೇಂದ್ರ ಮೋದಿ ಬೆಂಬಲಿಗರು!

ಐಬಿ ಉದ್ಯೋಗಿ 26 ವರ್ಷ ವಯಸ್ಸಿನ ಅಂಕಿತ್‌ ಶರ್ಮಾ ಅವಿವಾಹಿತನಾಗಿರುವುದು ಕಂಡುಬಂದಿದೆ. ಇನ್ನು ಮಕ್ಕಳೆಲ್ಲಿಂದ ಅನ್ನುವ ಕಾಮನ್ ಸೆನ್ಸ್‌ ಕೂಡ ಈ ಫೇಸ್‌ಬುಕ್‌ ಪೇಜ್‌ನ ಅಡ್ಮಿನ್‌ ಇಲ್ಲದಿರುವುದು ದುರಂತವಾಗಿದೆ.

- Advertisement -
- Advertisement -

ದೆಹಲಿ ಗಲಭೆಯಲ್ಲಿನ ಚಿತ್ರಗಳು ಮನಕಲಕುತ್ತಿವೆ, ಕಣ್ಣೀರು ತರಿಸುತ್ತಿವೆ. ಆದರೆ ಕೆಲವು ಧರ್ಮಾಂಧರು ಅಲ್ಲಿಯೂ ಜಾತಿ ಧರ್ಮ ನೋಡುತ್ತಿದ್ದಾರೆ.

ಉದಾಹರಣೆಗೆ ಇಲ್ಲಿನ ತಂದೆಯ ಮೃತದೇಹದ ಮುಂದೆ ಕೂತು ಅಳುತ್ತಿರುವ ಈ ಮಗುವಿನ ಚಿತ್ರ ದೇಶ-ವಿದೇಶಗಳಲ್ಲಿ ವೈರಲ್ ಆಗಿದ್ದು ಮನುಷ್ಯತ್ವವನ್ನು ಬಡಿದೆಬ್ಬಿಸಿದೆ.

ಆದರೆ ನರೇಂದ್ರ ಮೋದಿ ಹಿಂದು ಸಪೋರ್ಟರ್‍ಸ್‌ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ತಾಹೀರ್ ಹುಸೇನ್‌ನಿಂದ ಕೊಲೆಯಾದ ಐಬಿ ಉದ್ಯೋಗಿ ಅಂಕಿತ್ ಶರ್ಮಾರ ಮಗ ಈತ ಎಂದು ಬರೆದುಕೊಂಡಿದೆ. ವೈರಲ್ ಫೋಟೊದಲ್ಲಿನ ಮಗುವನ್ನು ಹಿಂದೂ ಎಂದು ಬಿಂಬಿಸುವುದು ಅವರ ಉದ್ದೇಶವಿರುವುದು ಸ್ಪಷ್ಟವಾಗಿದೆ.

ಈ ಕುರಿತ ಫ್ಯಾಕ್ಟ್ ಚೆಕ್ ನಡೆಸಿದಾಗ ಅದು ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದ್ದು ದೆಹಲಿ ಗಲಭೆಯಲ್ಲಿ ಮೃತಪಟ್ಟ ಇನ್ನೊಬ್ಬ ನತದೃಷ್ಟ ಮುದಾಸ್ಸಿರ್ ಖಾನ್ ಎಂಬುವವರ ಮಗ ಎಂದು ತಿಳಿದುಬಂದಿದೆ.

ಇನ್ನು ಮುಂದುವರೆದು ಹೇಳುವುದಾದರೆ ಐಬಿ ಉದ್ಯೋಗಿ 26 ವರ್ಷ ವಯಸ್ಸಿನ ಅಂಕಿತ್‌ ಶರ್ಮಾ ಅವಿವಾಹಿತನಾಗಿರುವುದು ಕಂಡುಬಂದಿದೆ. ಇನ್ನು ಮಕ್ಕಳೆಲ್ಲಿಂದ ಅನ್ನುವ ಕಾಮನ್ ಸೆನ್ಸ್‌ ಕೂಡ ಈ ಫೇಸ್‌ಬುಕ್‌ ಪೇಜ್‌ನ ಅಡ್ಮಿನ್‌ ಇಲ್ಲದಿರುವುದು ದುರಂತವಾಗಿದೆ.

ಈ ಚಿತ್ರವನ್ನು ರಾಯ್ಟರ್‍ಸ್‌ ಫೆ.27ರಂದು ಸೆರೆ ಹಿಡಿದಿದೆ. ಅಲ್ಲಿಂದ ಅದು ದೇಶ ವಿದೇಶದ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...