Homeಮುಖಪುಟದೆಹಲಿ ದಾಳಿಕೋರರಿಗೆ ಪೆಟ್ರೋಲ್ ಬಾಂಬ್ ಸಾಗಿಸಲು ಪೊಲೀಸರು ಸಹಾಯ ಮಾಡಿದರೆ?

ದೆಹಲಿ ದಾಳಿಕೋರರಿಗೆ ಪೆಟ್ರೋಲ್ ಬಾಂಬ್ ಸಾಗಿಸಲು ಪೊಲೀಸರು ಸಹಾಯ ಮಾಡಿದರೆ?

- Advertisement -
- Advertisement -

ದೆಹಲಿ ದಾಳಿಕೋರರಿಗೆ ಪೆಟ್ರೋಲ್ ಬಾಂಬ್ ಸಾಗಿಸಲು ಪೊಲೀಸರು ಸಹಾಯ ಮಾಡಿದ್ದಾರೆ ಎಂಬ ಸುದ್ದಿಯೊಂದು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

ಆಪ್ ಪಕ್ಷದ ಕೌನ್ಸಿಲರ್ ಆಗಿರುವ ತಾಹೀರ್ ಹುಸೇನ್ ಐಬಿ ಉದ್ಯೋಗಿ ಸಾವಿನ ಕೇಸಿನಲ್ಲಿ ಪ್ರಧಾನ ಆರೋಪಿಯಾಗಿದ್ದಾರೆ. ಅವರ ಮನೆಯ ತಾರಸಿಗೆ ಪೆಟ್ರೋಲ್ ಬಾಂಬುಗಳನ್ನು ಸಾಗಿಸಲು ಗಲಭೆಕೋರರಿಗೆ ಪೊಲೀಸರು ಸಹಾಯ ಮಾಡುತ್ತಿದ್ದಾರೆ ಎಂದು Barkat Khiljee ಎಂಬುವವರು ಫೇಸ್‌ಬುಕ್‌ನಲ್ಲಿ ಫೋಟೊವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಇದನ್ನು ನಂಬಿ ಬರೋಬ್ಬರಿ 22 ಸಾವಿರ ಆ ಪೋಸ್ಟ್ ಅನ್ನು ಷೇರ್ ಮಾಡಿದ್ದಾರೆ.

ಗಲಭೇಕೋರರಿಗೆ ಪೊಲೀಸರು ಸಹಾಯ ಮಾಡಿರುವ ಹಲವಾರು ಉದಾಹರಣೆಗಳು ಇದ್ದುದರಿಂದ ಇದು ಸತ್ಯವೇ ಎಂದು ಪರೀಶೀಲಿಸಿದಾಗ ಅಪ್ಪಟ ಸುಳ್ಳು ಎಂದು ತಿಳಿದುಬಂದಿದೆ. ಏಕೆಂದರೆ ಇದು ಗಲಭೆಯ ಸಂದರ್ಭಧಲ್ಲಿ ಜನರನ್ನು ರಕ್ಷಿಸಲು ಮಾಡುತ್ತಿರುವ ಕಾರ್ಯಾಚರಣೆಯ ದೃಶ್ಯವಾಗಿದೆಯೇ ಹೊರತು ಗಲಭೆಗೆ ಪ್ರಚೋದನೆಯಲ್ಲ ಎಂದು ಆಪ್ ಸಂಸದ ಸಂಜಯ್ ಕುಮಾರ್ ಹಾಕಿದ ವಿಡಿಯೋದಿಂದ ತಿಳಿದುಬಂದಿದೆ.

ದೆಹಲಿಯ ಗಮ್ರಿ ಪ್ರದೇಶದಲ್ಲಿ ಹಿಂಸಾಚಾರದಲ್ಲಿ ಜನರನ್ನು ರಕ್ಷಿಸುವ ಧೈರ್ಯಶಾಲಿ ಪೊಲೀಸ್ ಅಧಿಕಾರಿಗಳು ”ಎಂದು ಅವರು ಬರೆದಿದ್ದಾರೆ. ಈ ವಿಡಿಯೋದಲ್ಲಿ ಜನರನ್ನು ರಕ್ಷಿಸುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಇದೇ ವಿಡಿಯೋದ ಫೋಟೊವನ್ನೇ ಮೇಲಿನ ರೀತಿ ತಿರುಚಲಾಗಿದೆ ಅಷ್ಟೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...