Homeಮುಖಪುಟ"ಪವಾರ್ ಜೀ ನೀವು ಗ್ರೇಟ್ ಬಿಡಿ..! ನೀವು ಅದ್ಭುತ": ಅಭಿಷೇಕ್ ಮನುಸಿಂಘ್ವಿ ಟ್ವೀಟ್

“ಪವಾರ್ ಜೀ ನೀವು ಗ್ರೇಟ್ ಬಿಡಿ..! ನೀವು ಅದ್ಭುತ”: ಅಭಿಷೇಕ್ ಮನುಸಿಂಘ್ವಿ ಟ್ವೀಟ್

- Advertisement -
- Advertisement -

ಮಹಾರಾಷ್ಟ್ರದಲ್ಲಿ ನಡೆದ ನಾಟಕೀಯ ಬೆಳವಣಿಗೆಯ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದಾರೆ. ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಶಿವಸೇನೆಯ ಮಾತುಕತೆ ವಿಳಂಬವಾಗಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮಹಾರಾಷ್ಟ್ರ ಸಾಹಿತ್ಯ ಮತ್ತು ಸಿದ್ಧಾಂತಗಳ ಕುರಿತು ನಾನೇನು ಓದಿಕೊಂಡಿದ್ದೆನೋ, ಅದೆಲ್ಲವೂ ಈಗ ಸುಳ್ಳು ಸುದ್ದಿ ಎಂದು ಅನ್ನಿಸುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ. ನಾನು ಪಕ್ಷದ ಅಭ್ಯರ್ಥಿಯಾಗಿ ಮತ್ತು ವೈಯಕ್ತಿಕವಾಗಿ ಮಾತನಾಡುವುದಾದರೆ, ಮೂರು ಪಕ್ಷಗಳು ಸರ್ಕಾರ ರಚನೆಗೆ ಸರ್ಕಸ್ ನಡೆಸಿದ್ದು ಕೇವಲ ಮೂರು ದಿನಗಳಲ್ಲ. ಬದಲಾಗಿ ಇದು ತುಂಬಾ ಸಮಯ ಹಾಗೂ ದಿನಗಳಿಂದ ನಡೆದಿತ್ತು. ಆದರೆ ಅತಿ ಬೇಗನೆ ನಿರ್ಧಾರ ತೆಗೆದುಕೊಳ್ಳುವವರಿಗೆ ಬಾಗಿಲು ತೆರೆದಿತ್ತು. #ಪವಾರ್ ಜೀ ನೀವು ಗ್ರೇಟ್ ಬಿಡಿ! ನೀವು ಅದ್ಭುತ, ಆದರೆ ಇದಕ್ಕಿನ್ನೂ ಸ್ಪಷ್ಟತೆ ಸಿಕ್ಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ’ಅಜಿತ್ ಪವಾರ್‌ ಬೆನ್ನಿಗೆ ಇರಿದಿದ್ದಾರೆ’: ಶಿವಸೇನೆಯ ಸಂಜಯ್ ರಾವತ್ ಕಿಡಿ

ಇನ್ನು ಶುಕ್ರವಾರ ತಡರಾತ್ರಿಯವರೆಗೂ ಎನ್ ಸಿಪಿ ಮತ್ತು ಶಿವಸೇನೆ ಮೈತ್ರಿ ಪಕ್ಕಾ ಆಗಿತ್ತು. ಮೂರು ಪಕ್ಷಗಳು ಸುದ್ದಿಗೋಷ್ಠಿ ನಡೆಸಿ, ಸರ್ಕಾರ ರಚನೆಯ ನಿರ್ಧಾರವನ್ನು ಪ್ರಕಟಿಸಬೇಕಿತ್ತು. ಆದರೆ ತಡರಾತ್ರಿ ನಡೆದ ಬೆಳವಣಿಗೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರುವಂತೆ ಮಾಡಿದೆ.

ಇನ್ನೊಂದೆಡೆ ಎನ್‌ಸಿಪಿ ಮುಖಂಡ ಶರಾದ್‌ ಪವಾರ್‌ “ಅಜಿತ್‌ ಪವಾರ್‌ ನಿರ್ಧಾರ ವಯಕ್ತಿಕವಾದುದೆ ವಿನಃ ಪಕ್ಷದ ನಿಲುವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಎನ್ ಸಿಪಿಯ ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿ, ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆಯಾಗುವ ಅವಶ್ಯಕತೆಯಿತ್ತು. ಹೀಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...