Homeಮುಖಪುಟಮುಂಬೈನಲ್ಲಿ NCP - ಶಿವಸೇನೆ ಜಂಟಿ ಪತ್ರಿಕಾಗೋಷ್ಟಿ: NCP ಶಾಸಕಾಂಗ ನಾಯಕತ್ವದಿಂದ ಅಜಿತ್‌ ಪವಾರ್‌ ಉಚ್ಚಾಟನೆ

ಮುಂಬೈನಲ್ಲಿ NCP – ಶಿವಸೇನೆ ಜಂಟಿ ಪತ್ರಿಕಾಗೋಷ್ಟಿ: NCP ಶಾಸಕಾಂಗ ನಾಯಕತ್ವದಿಂದ ಅಜಿತ್‌ ಪವಾರ್‌ ಉಚ್ಚಾಟನೆ

- Advertisement -
- Advertisement -

ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಪ್ರಮಾಣವಚನ ಸ್ವೀಕರಿಸಿದ ನಂತರ ಅಜಿತ್ ಪವಾರ್ ಅವರನ್ನು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕತ್ವದಿಂದ ಉಚ್ಚಾಟನೆ ಮಾಡಲಾಗಿದೆ.

ಇನ್ನು ಮುಂಬೈನಲ್ಲಿ NCP- ಶಿವಸೇನೆ ಜಂಟಿ ಪತ್ರಿಕಾಗೋಷ್ಟಿ ನಡೆಸಲು ತೀರ್ಮಾನಿಸಲಾಗಿದ್ದು ಬಿಜೆಪಿಯ ನಡೆಯನ್ನು ತೀವ್ರವಾಗಿ ವಿರೋಧಿಸಲು ಮುಂದಾಗಿದ್ದಾರೆ. ಶರಾದ್‌ ಪವಾರ್‌, ಉದ್ಧವ್‌ ಠಾಕ್ರೆ, ಆದಿತ್ಯಾ ಠಾಕ್ರೆಯವರು ಸಹ ಪತ್ರಿಕಾಗೋಷ್ಠಿಯಲ್ಲಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲರು ನವೆಂಬರ್‌ 30 ರವರೆಗೆ ಬಹುಮತ ಸಾಬೀತಿಗೆ ಕಾಲಾವಕಾಶ ಕೊಟ್ಟಿರುವುದರಿಂದ ಅಷ್ಟರಲ್ಲಿ ಏನೇನು ಮಾಡಬಹುದು ಎಂದು NCP, ಶಿವಸೇನೆ ನಿರ್ಧರಿಸಲಿವೆ.

ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಜೊತೆ ಇನ್ನೊರ್ವ ಎನ್‌ಸಿಪಿಯ ಶಾಸಕ ಧನಂಜಯ್‌ ಮುಂಡೆ ಕೂಡ ಹೊಸ ಸರ್ಕಾರದ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಅವರೇ ದೇವೇಂದ್ರ ಫಡ್ನಾವೀಸ್‌ರನ್ನು ಭೇಟಿಯಾಗಿ ಬೆಂಬಲದ ಪತ್ರ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಅಜಿತ್ ಪವಾರ್ ನಿರ್ಧಾರವನ್ನು ಕೇರಳ ಎನ್‌ಸಿಪಿ ಖಂಡಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹಿರೇಮಠ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

0
ನೇಹಾ ಹಿರೇಮಠ್ ಕೊಲೆ ಅತ್ಯಂತ ದುರದೃಷ್ಟಕರ. ತ್ವರಿತ ವಿಚಾರಣೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಪ್ರತ್ಯೇಕ ವಿಚಾರಣೆ ಮಾಡಿ ಅಪರಾಧಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಬದ್ದವಾಗಿದೆ ಎಂದು...