Homeಕರ್ನಾಟಕಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು...

ಬೈ ಎಲೆಕ್ಷನ್ ಅನ್ನು ಬೈಯ್ಯೋ ಎಲೆಕ್ಷನ್ನು ಅಂತ ತಿರುಗಿಸಿಬಿಟ್ಟ ನಮ್ಮ ಠೀವಿ ಚಾನಲ್ಲುಗಳು…

- Advertisement -
- Advertisement -

ಈಗ ಸುದ್ದಿ ಏನಂದರ ಬೈ ಎಲೆಕ್ಷನ್ನು. ಇದನ್ನು ಅವರು ಇವರಿಗೆ, ಇವರು ಅವರಿಗೆ ಬೈಯೋ ಎಲೆಕ್ಷನ್ನು ಅಂತ ತಿರುಗಿಸಿ ಬಿಟ್ಟ ಠೀವಿ ನಮ್ಮ ಚಾನಲ್ಲುಗಳದು.

ಅನರ್ಹ ಶಾಸಕರ ರಾಜೀನಾಮೆ ಇಂದ ಉಪಚುನಾವಣೆ 17 ಕಡೆ ನಡೀಬೇಕಾಗೇದ. ಅದರೊಳಗ ಎಂಟು ಕಡೆ ಪ್ರವಾಹ ಬಂದಿತ್ತು. ಅವುದರಾಗ ಏಳು ಉತ್ತರ ಕರ್ನಾಟಕದವು, ಒಂದು ಹಳೇ ಮೈಸೂರಿಂದು. ಅಲ್ಲಿ ಸರಿಯಾಗಿ ಪರಿಹಾರ ಸಿಗದೇ ಪ್ರವಾಹದಿಂದ ಜನಾ ಸಾಯಲಿಕ್ಕೆ ಹತ್ಯಾರ. ಅವರ ಗೋಳು, ಸಂಕಟದ ಸುತ್ತ ಚುನಾವಣೆ ನಡೀಬೇಕಾಗಿತ್ತು ಅಂತ ಸ್ಟುಡಿಯೋಗಳಲ್ಲಿ ಕೂತ ಯಾವ ಠೀವಿ ಹಿಡಿಗೂಟ (ಆಂಕರ್) ಗಳಿಗೆ ಅನಿಸವಲ್ಲದು.

ಗೋಕಾಕದ ಸಾಹುಕಾರರ ಚುನಾವಣಾ ಕಾದಾಟ ಅವರಿಗೆ ನಮ್ಮ ಹಳ್ಳಿಯೊಳಗ ಸಾಹುಕಾರರು ತಮ್ಮ ಮನಿ ಮುಂದಿನ ಮೈದಾನದಾಗ ನಡೆಸೋ ಕುಸ್ತಿ ಥರಾ ಕಾಣಲಿಕ್ಕೆ ಹತ್ತೇದ. ಈ ಚುನಾವಣೆಯೊಳಗ ಮಾತಾಡಲಿಕ್ಕೆ ಭಾಳ ಐತಿ. ಅದರೊಳಗ ಒಂದು ಮಾದರಿ ನೀತಿಸಂಹಿತೆ.

ಈ ಸಲಾ ಏನಾತಪಾ ಅಂದರ ನಮ್ಮಂಥ ಅನರ್ಹರಿಂದ ಆಯ್ಕೆಯಾಗಿ ಬೆಂಗಳೂರಿಗೆ ಹೋದ ಅನರ್ಹರು ಅನರ್ಹತೆಯ ಚರಮಸೀಮೆಗಳನ್ನು ಮುಟ್ಟಬೇಕು ಅಂತ ಹೇಳಿ ಆಟ ಗೂಟ ಜೈ ಅನ್ನಲು ನಿರ್ಧಾರ ಮಾಡಿದರು.

ಮೂರು ದಿನದೊಳಗ 17 ಜನ ತಾವು ಗೆದ್ದುಬಂದ ಪಾರ್ಟಿಗಳಿಗೆ ರಾಜೀನಾಮೆ ಕೊಟ್ಟರು. ಇದರಿಂದ ಆ ಸ್ಥಾನಗಳಿಗೆ ಚುನಾವಣೆ ಆಗಬೇಕಾತು. ಜನಪ್ರತಿನಿಧಿ ಕಾಯಿದೆ ಪ್ರಕಾರ ಯಾವುದೋ ಒಂದು ಎಮ್ಮಲ್ಲೆ ಸೀಟು 180 ದಿನಗಳಿಗೂ ಹೆಚ್ಚು ಖಾಲಿ ಇರಬಾರದು. ಅಲ್ಲಿಯ ಜನರಿಗೆ ಪ್ರಾತಿನಿಧ್ಯ ಇಲ್ಲದಂಗ ಆಗತದ ಅಂತ. (ಅವರಿದ್ದಾಗ ಏನು ಪ್ರತಿನಿಧಿತ್ವ ಮಾಡತಾರ ಏನು ಕಡದು ಕಟ್ಟಿಹಾಕತಾರ ಅನ್ನೋದು ಬ್ಯಾರೆ ವಿಷಯಾ).

ಅವರು ಯಾವ ರಾಜೀನಾಮಾಗಳನ್ನು ಬೀಸಾಕಿ ಹೋಗಿದ್ದರೋ ಅಲ್ಲಿಂದ ಸುಮಾರು 300 ಮೀಟರಿನೊಳಗ ರಾಜ್ಯ ಉಚ್ಚ ನ್ಯಾಯಾಲಯದ ಅದ. ಗೂಗಲ್ ಮ್ಯಾಪು ಇರಲಾರದ ಬೆಂಗಳೂರಿನಲ್ಲಿ ಹೋಗಬಲ್ಲಂಥಾ ಕೆಲವೇ ಕೆಲವು ಸ್ಥಳಗಳೊಳಗ ಅದೂ ಒಂದು. ನಡಕೋತ ಹೋದರ ಐದು ನಿಮಿಷ ಮತ್ತ ಬಡವರ ಸುಂಕದಾಗ ಸರಕಾರ ಖರೀದಿ ಮಾಡಿ ಎಮ್ಮೆಲ್ಲೆಗಳಿಗೆ ಕೊಟ್ಟಿರೋ ಎಸ್ಸುಯುವಿಯೊಳಗ ಹೋದರ ಒಂದು ನಿಮಿಷ ಆಗತದ.

ಆದರ ನಮ್ಮ ಪ್ರತಿನಿಧಿಗಳು ಅಲ್ಲಿಗೆ ಹೋಗಲಿಲ್ಲ. ಅವರು ಸಾದಾ ಜನ ಉಪಯೋಗಿಸುವ ವಿಮಾನಗಳಲ್ಲಿ ಹೋದರ ಲೇಟು ಆಗತದ ಅಂತ ಹೇಳಿ ವಿಶೇಷ ವಿಮಾನದೊಳಗ ದೆಹಲಿಗೆ ಹೋದರು. ಹೋಗೋಬೇಕಾರ ಪ್ರವಾಸಾಯಾಸ ಕಳೀಬೇಕು ಅಂತ ಹೇಳಿ ಮುಂಬೈಯೊಳಗ ಒಂದು ಎರಡು ತಿಂಗಳು ರಾಜಾತಿಥ್ಯ ಸ್ವೀಕರಿಸಿದರು.

ವಿಧಾನಸೌಧದಿಂದ ಹೈಕೋರ್ಟಿಗೆ ಹೋದರ ಸಮೀಪ ಆಗತಿತ್ತು, ವಕೀಲರು ಖರ್ಚುನು ಕಡಿಮೆ ಆಗತಿತ್ತು. ಆದರ ಅವರಿಗೆ ಅದನ್ನು ಹೇಳಲಿಲ್ಲ ಅಂತ ಅನಸ್ತದ. ಅವರಿಗೆ ಷಾಹೀ ಫರ್ಮಾನು ಜಾರಿ ಆಗಿತ್ತು. ಭಾರತದ ಹೊಸ್ತಿಲು (ದೆಹಲೀಜು) ದಾಟಿ, ನಮಸ್ಕಾರ ಮಾಡಿ ಒಳಗ ಬರಬೇಕು ಅಂತ. ಅವರು ಹಂಗ ಮಾಡಿದರು. ಸರ್ವೋಚ್ಚ ನ್ಯಾಯಾಲಕ್ಕ ಹೋದರು. ಅಲ್ಲಿ ನಿಮಿಷಕ್ಕ ಇಂತಿಷ್ಟು ಅಂತ ಚಾರ್ಜು ಮಾಡುವ ವಕೀಲರನ್ನು ಹಿಡದು, ಅವರಿಗೆ ಗಂಟು ಬಿದ್ದು, ನ್ಯಾಯಾಲಯದ ಮುಂದೆ ಅಂಗಲಾಚಿ, ಗಡಿಬಿಡಿ ಹಿಯರಿಂಗು ಮಾಡಿಸಿದರು.

ಅವರು ಅಲ್ಲಿಗೆ ಹೋದದ್ದೇ ತಡ, ಚುನಾವಣಾ ಆಯೋಗದವರು ಅವರ ಸ್ಥಾನಗಳಿಗೆ ಉಪಚುನಾವಣೆ ಘೋಷಿಣಾ ಮಾಡಿದರು. ಆಮ್ಯಾಲೆ ಕೋರ್ಟಿನ ಡೇಟು ಬಿದ್ದಮ್ಯಾಲೆ ಇವರಿಗೆ ಅನುಕೂಲ ಆಗಲೀ ಅಂತ ಇರಬೇಕು, ಮತ್ತ ಮುಂದಕ್ಕ ಹಾಕಿದರು.

ಮಜಾ ಏನಂದರ ಚುನಾವಣೆ ಘೋಷಣೆ ಆದ ಕ್ಷಣದಿಂದ ಮಾದರಿ ನೀತಿಸಂಹಿತೆ (ಮಾನೀಸಂ) ಜಾರಿಗೆ ಬರತದ. ಅದಕ್ಕನ ಆಯೋಗದ ಪತ್ರಿಕಾಗೋಷ್ಠಿಯೊಳಗ ಕಡೇ ಮಾತು ಏನಪಾ ಅಂದರ ದಿನಾಂಕ ಘೋಷಣೆ. ಆದರೆ ನಂಬಸಲದಳವಾದ ಕರ್ನಾಟಕದ ಉಪಚುನಾವಣೆಗೆ ಎರಡೂ ಸಲೇನೂ ಮಾನೀಸಂ ಘೋಷಣೆ ತಕ್ಷಣದಿಂದ ಆಗಲಿಲ್ಲ. ಮೊದಲನೇ ಸಲಾ ಅಂತೂ ಆಗಲೇ ಇಲ್ಲ. ಮುಂದ ಹೋದ ದಿನಾಂಕಕ್ಕ ಘೋಷಣಾ ಆದಾಗ ಆಗಲಿಲ್ಲ. ಚುನಾವಣೆ ಪ್ರಕಟಣೆ ಆದಾಗ ಆತು. ಅದುನೂ ಬಹುಚರ್ಚಿತ ಮಾದರಿಯೊಳಗ ಆತು. ನಾಲ್ಕು ಜಿಲ್ಲೆಗಳೊಳಗ ಇಡೀ ಜಿಲ್ಲೆಗೆ ಆತು. ಇನ್ನು ಉಳಿದ ಕಡೆ ಕೇವಲ ಆ ಕ್ಷೇತ್ರಕ್ಕ ಅಷ್ಟನ ಆತು.

ಇದು ಯಾಕ ಹಿಂಗಾತು ಅಂತ ಆಳುವ ಪಕ್ಷದ ದೊರೆಗಳು ಕೇಳಲಿಲ್ಲ. ಕಾಂಗ್ರೆಸ್ಸಿನ ಕುಂಭಕರ್ಣರಿಗೆ ಕೇಳಬೇಕು ಅಂತ ಅನ್ನಿಸಲಿಲ್ಲ. ಪ್ರಜೆಗಳಿಗಂತೂ ಗೊತ್ತೇ ಆಗಲಿಲ್ಲ, ದಿ ನೇಷನ್ ವಾಂಟ್ಸು ನೋ ಅನ್ನುವ ರಾಷ್ಟ್ರೀಯ ಹಿಡಿಗೂಟಗಳಿಗೂ, ಖನ್ನಡ ಮಾತಾಡುವ ಕಿಡಿಗೂಟಗಳಿಗೂ ಇದು ಟಿಆರ್‌ಪಿ ಮಟೀರಿಯಲ್ಲು ಅಂತ ಅನ್ನಿಸಿಲ್ಲ ಅಂತ ಕಾಣತದ.

ಇನ್ನು ಮಾನ್ಯ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಎರಡು ಕ್ಷೇತ್ರಗಳ ಹುದ್ದರಿಗಳ ಚುನಾವಣೆಗೆ ಹೋದಾಗ ನಿಮ್ಮ ನಾಯಕರನ್ನು ಗೆಲ್ಲಿಸಿ ಕೊಡಿ ಅವರನ್ನು ಮಂತ್ರಿ ಮಾಡುತ್ತೇನೆ ಅಂತಂದರು. ಇನ್ನು ಒಂದು ಕಡೆ ಇವರಿಗೆ ಟೀಕೀಟು ಸಿಗಲಿಲ್ಲ. ಇವರನ್ನು ಮೇಲ್ಮನೆಗೆ ಕಳಿಸಿ ಮಂತ್ರಿ ಮಾಡುತ್ತೇನೆ ಅಂತನೂ ಅಂದರು. ಇದು ಮಾನೀಸಂ ಉಲ್ಲಂಘನೆ ಅಂತ ಠೀವಿಗಳಲ್ಲಿ ಕೇಳಿಬರಲಿಲ್ಲ.

ಇದನ್ನು ಓದಿ : ಮಾದರಿ ನೀತಿಸಂಹಿತೆ ಎಂದರೇನು? : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಇದರಿಂದ ಕೆಲವು ಜಿಲ್ಲೆಗಳಲ್ಲಿ ಸರಕಾರ ಹೊಸ ಯೋಜನೆ ಶುರುಮಾಡಬಹುದು, ಇನ್ನು ಕೆಲವು ಜಿಲ್ಲೆಗಳಲ್ಲಿ ಶುರು ಮಾಡಲಿಕ್ಕೆ ಬರೋದಿಲ್ಲಾ. ಇದರಿಂದ ಸರಕಾರಿ ಯಂತ್ರದ ದುರುಪಯೋಗ ಆಗಬಹುದು ಅಂತ ಜನಾ ಮಾತಾಡಲಿಕ್ಕೆ ಶುರು ಮಾಡಬೇಕಾಗಿತ್ತು. ಅದೂ ಆಗಲಿಲ್ಲ.

ಇಡೀ ಜಗತ್ತಿನಲ್ಲಿಯೇ ಅತಿಹೆಚ್ಚು ಮತದಾರರಿರುವ, ಅತಿ ದೊಡ್ಡ ಚುನಾವಣೆ ಪ್ರಕ್ರಿಯೆ ನಡೆಯುವ, ಅತಿಹೆಚ್ಚು ಚುನಾವಣೆ ಹಾಗೂ ಸುರಕ್ಷಾ ಸಿಬ್ಬಂದಿ ಒಂದು ನೂರಕ್ಕೂ ಹೆಚ್ಚು ಕೆಲಸ ಮಾಡುವ ಈ ದೇಶದ ಪ್ರಜಾಸತ್ತೆಯ ಮಾನ ಇಷ್ಟು ದಿನ ಕಾಪಾಡಿದ್ದು ಈ ಸಂಹಿತೆ.

`ಜಗವೊಂದು ನಾಟಕರಂಗ’ ಅಂತ ನಮ್ಮ ದಾಸರು ಹೇಳಿದಂಥಾ ಮಾತನ್ನ
ಆವೊನ್ ನದಿ ತೀರದ ಜಾದೂಗಾರ ಶೇಕ್ಸಪಿಯರನೂ ಹೇಳ್ಯಾನ.

ಆ ನಾಟಕಕಾರನ ಸುನೀತವೊಂದರ ಕೊನೆಯ ಸಾಲು ಇವು.
“….ಅಲ್ಲಿಗೆ ಈ ವಿಚಿತ್ರ ಘಟನಾವಳಿ ಮುಗೀಲಿಕ್ಕೆ ಬಂದಂಗ
ಅದೊಂಥರಾ ಮನುಷ್ಯನ ಎರಡನೇ ಎಳವೆ,
ಬರೇ ವಿಸ್ಮೃತಿ:
ಹಲ್ಲಿಲ್ಲ, ಕಣ್ಣಿಲ್ಲ, ರುಚಿ ಇಲ್ಲ
ಏನೂ ಇಲ್ಲ ”

ತಿರುಣೆಲೈ ನಾರಾಯಾಣ ಅಯ್ಯರ್ ಶೇಷನ್ ತೀರಿಕೊಂಡ ವಾರದಲ್ಲಿ ಈ ಮಾತು ಬರೆಯುವುದು ಕಷ್ಟ.

ಅವರಿಗೆ ಸುರಿಸಿದ ಕಂಬನಿಯ ಹಸಿ ಚುನಾವಣೆ ಸ್ವಾಯತ್ತತೆಗೂ ಹತ್ತಿದಂಗ ಕಾಣಬಾರದು ಅಷ್ಟ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...