Homeಕರ್ನಾಟಕಎಬಿವಿಪಿಯನ್ನು ಪುಂಡರು, ರೌಡಿಗಳೆಂದು ಕರೆದು ದೂರು ನೀಡಿದ ಉಪಕುಲಪತಿ: ಪಬ್ಲಿಕ್ ಟಿವಿ ವರದಿಗಾರನ ಬಂಧನ

ಎಬಿವಿಪಿಯನ್ನು ಪುಂಡರು, ರೌಡಿಗಳೆಂದು ಕರೆದು ದೂರು ನೀಡಿದ ಉಪಕುಲಪತಿ: ಪಬ್ಲಿಕ್ ಟಿವಿ ವರದಿಗಾರನ ಬಂಧನ

ನೇಮಕಾತಿ ವಿಚಾರದಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯದೆ ಪ್ರವೇಶ್ ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯಪಾಲ ವಜುಬಾಯಿವಾಲರವರ ಪೋಟೊ ಅಂಟಿಸಿ ಅದನ್ನು ಟಿವಿಯಲ್ಲಿ ಬೇಕಾಬಿಟ್ಟಿ ಪ್ರಸಾರ ಮಾಡಿದ್ದಾರೆ.

- Advertisement -
- Advertisement -

| ಮುತ್ತುರಾಜು |

ನಾನು ಹಣ ವಸೂಲಿ ಮಾಡುತ್ತಿರುವುದು ರಾಮಚಂದ್ರ ಮಠಕ್ಕೆ ಹೊರತು ನನಗಲ್ಲ. ಹಾಗಾಗಿ ನೇಮಕಾತಿಯಾಗುವಾಗ ಪ್ರತಿಯೊಬ್ಬರೂ ಹಣ ಕೊಡಲೇಬೇಕು. ಹೀಗೆಂದವರು ಬಳ್ಳಾರಿ ವಿ.ವಿಯ ಮಾಜಿ ಉಪಕುಲಪತಿ ಮಂಜಪ್ಪ ಹೊಸಮನಿ. ಆಗ ಈತನಿಗೆ ಜೈಕಾರ ಹಾಕಿ ವಸೂಲಿಗೆ ಸಹಕರಿಸಿದವರು ಇದೇ ಬಿಜೆಪಿಯ ಮರಿಸಂಘಟನೆಯಾದ ಎಬಿವಿಪಿಯವರು. ಅಲ್ಲೊಂದಿಷ್ಟು ಪಾಲು ಪಡೆದು ತಮ್ಮವರನ್ನು ವಿ.ವಿಯ ಆಯಾಕಟ್ಟಿನ ಜಾಗದಲ್ಲಿ ಕೂಡಿಸಿ ಮೇಯಲು ಜಾಗಮಾಡಿಕೊಂಡಿದ್ದ ಎಬಿವಿಪಿ ನಾಯಕರಿಗೆ ಈಗ ಮೇವು ಸಾಲುತ್ತಿಲ್ಲ. ಹಾಗಾಗಿ ಹಾಲಿ ಉಪಕುಲಪತಿ ಡಾ.ಸುಭಾಷ್ ವಿರುದ್ಧ ಜೋರಾಗಿಯೇ ಗುಟುರು ಹಾಕುತ್ತಿದ್ದಾರೆ. ಆದರೆ ಇವರ ಗುಟುರಿಗೆ ಜಗ್ಗದ ಉಪಕುಲಪತಿಗಳು ಸೆಡ್ಡು ಹೊಡೆದಿದ್ದಾರೆ. ಮೇಲ್ನೋಟಕ್ಕೆ ಇದು ನೇಮಕಾತಿ ವಿಚಾರದಲ್ಲಿನ ಭ್ರಷ್ಟಾಚಾರ ಎಂದು ಕಾಣಿಸಿದರೂ ಆಳ ಅಗಲ ಎಲ್ಲೆಲ್ಲಿಗೋ ಹೋಗಿ ನಿಲ್ಲುತ್ತಿದೆ. ಬನ್ನಿ ನೋಡೋಣ

ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ ಕಳೆದೆರಡು ತಿಂಗಳಿಂದ ಜೋರಾಗಿಯೇ ಸದ್ದು ಮಾಡುತ್ತಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದಿದ್ದ ಕುಲಸಚಿವರಾದ ಬಿ.ಕೆ ತುಳಸಿಮಾಲರವರನ್ನು ಪತ್ರಿಕಾಗೋಷ್ಟಿಯಿಂದ ಹೊರಕಳಿಸಿದ್ದು ಎಲ್ಲಾ ಕಡೆ ಸುದ್ದಿಯಾಗಿತ್ತು. ತದನಂತರ ಅಲ್ಲಿಗೆ ಎಂಟ್ರಿಯಾದವರು ಎಬಿವಿಪಿ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿರುವ ಕೆಲ ಯುವಕರು. ಓದಿ ಮುಗಿಸಿ ಎಷ್ಟೊ ವರ್ಷಗಳಾದರೂ ನಾವಿನ್ನು ವಿದ್ಯಾರ್ಥಿ ನಾಯಕರು ಎಂದು ಪೋಸು ಕೊಡುತ್ತಿರುವ ಇವರ ಹಾವಳಿ ಜಿಲ್ಲೆಯಲ್ಲಿ ಜೋರಾಗಿದೆ.

ಅವರ ಮೊದಲ ಉದ್ದೇಶ ತಮ್ಮವರನ್ನು ವಿ.ವಿಯಲ್ಲಿ ಪ್ರತಿಷ್ಠಾಪಿಸುವುದು. ಆ ಮೂಲಕ ವಿ.ವಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ರಾಜಕಾರಣ ಮಾಡುವುದು. ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಹೇಗಾದರೂ ಮಾಡಿ ವಿ.ವಿಯ ಒಳಕ್ಕೆ ತೂರಿಸಿಬಿಟ್ಟರೆ ತಮ್ಮ ಆಟ ಸಲೀಸು ಎಂದು ಇನ್ನಿಲ್ಲದ ಪ್ರಯತ್ನವನ್ನು ಎಬಿವಿಪಿ ಮಾಡಿತು. ಆದರೆ ಯಾರಾದರೇನು, ತನಗೆ ಬರಬೇಕಿದ್ದ ದುಡ್ಡು ಬಂದರೆ ಸಾಕು ಎಂದು ಉಪಕುಲಪತಿಗಳು ದುಡ್ಡು ಕೊಟ್ಟವರಿಗೆ ಮಾತ್ರ ಮಣೆ ಹಾಕಿದರು. ಇದರಿಂದ ಕುಪಿತರಾದ ಎಬಿವಿಪಿಯ ಕೆಲ ಮುಖಂಡರು ಕುಲಪತಿಗಳ ವಿರುದ್ಧ ಯುದ್ಧ ಸಾರಿದರು.

ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ದೊಡ್ಡ ಬಸನಗೌಡ ಆರ್.ಎಸ್.ಎಸ್ ಹಿನ್ನೆಲೆಯ ವ್ಯಕ್ತಿ, ಜಾತಿ ಮತ್ತು ರಾಜಕೀಯ ಬಲದೊಂದಿಗೆ ಸಿಂಡಿಕೇಟ್ ಮೆಂಬರ್ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. ಇನ್ನು ಅಡವಿಸ್ವಾಮಿ ಎಬಿವಿಪಿಯಲ್ಲಿದ್ದುಕೊಂಡು ಸಂಘಟನೆ ಕಾರ್ಯಕ್ರಮಗಳ ಆಯೋಜನೆಯ ಹೆಸರಿನಲ್ಲಿ ಯುವಕರನ್ನು ದಾರಿತಪ್ಪಿಸುತ್ತಲೇ ಹಣ ಬಾಚುತ್ತಿರುವ ವ್ಯಕ್ತಿ. ಇನ್ನು ವರುಣ್ ಕುಮಾರ್ ರೆಡ್ಡಿ, ಎಂ.ಎಲ್.ಎ ಸೋಮಶೇಖರ ರೆಡ್ಡಿ ಕೃಪಾಕಟಾಕ್ಷದಿಂದ ಸಿಂಡಿಕೇಟ್ ಮೆಂಬರ್ ಆಗಿದ್ದಾನೆ. ಇವರಿಷ್ಟು ಜನ ಸೇರಿಕೊಂಡು ಒಂದಿಷ್ಟು ಜನರನ್ನು ವಿ.ವಿ ಸೇರಿಸಲು ದಳ್ಳಾಳಿಗಳಾಗಿ ಕೆಲಸ ಮಾಡಿದರು. ಆದರೆ ಉಪಕುಲಪತಿ ಸುಭಾಷ್ ಕೇರ್ ಮಾಡಲಿಲ್ಲ. ಇದರಿಂದ ಕುಪಿತಗೊಂಡ ಇವರು ಅವರ ವಿರುದ್ಧ ತಿರುಗಿ ಬಿದ್ದರು.

ದೊಡ್ಡಬಸವನಗೌಡ

ಉಪಕುಲಪತಿ ದಲಿತರಾಗಿದ್ದು ಅವರನ್ನು ಮತ್ತಷ್ಟು ಕೆರಳಿಸಿತು. ಲಿಂಗಾಯತ ಸಮುದಾಯದ ಅಡವಿಸ್ವಾಮಿ ಇದನ್ನೇ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡ. ಮೊದಲನೇಯದಾಗಿ ಅಲ್ಲಿನ ಬಿಜೆಪಿ ಎಂ.ಎಲ್.ಎಗಳಿಗೆ ವಿ.ವಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ದೂರು ನೀಡಿದ. ನಂತರ ರಾಜ್ಯಪಾಲರಿಗೆ ದೂರು ನೀಡಿ ರಾಜ್ಯಮಟ್ಟದ ಸುದ್ದಿ ಮಾಡಲು ನೋಡಿದರು. ಆಗ ಅವರ ಕೈಗೆ ಸಿಕ್ಕಿದ್ದು ವಿ.ವಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಚಿದಾನಂದ್ ಎಂಬುವವರು. ಅವನನ್ನು ಪುಸಲಾಯಿಸಿ ಅಡವಿಸ್ವಾಮಿ ಪತ್ರಿಕಾಗೋಷ್ಠಿಯೊಂದನ್ನು ಮಾಡಿ ಆರೋಪಗಳ ಮಳೆ ಸುರಿಸಿದ. ಇದನ್ನೇ ಕಾದು ಕುಳಿತಿದ್ದ ಮಾಧ್ಯಮಗಳು ಭಾರೀ ಸುದ್ದಿ ಮಾಡಿದವು.

ಇದು ಅಡವಿಸ್ವಾಮಿಗೆ ಬೂಸ್ಟ್ ನೀಡಿದಂತಾಯ್ತು. ಅಲ್ಲಿಂದ ಮುಂದುವರಿದು ನೇಮಕಾತಿ ಮಾಡಿಕೊಳ್ಳುವಂತೆ ಚಿದಾನಂದ್‍ರವರಿಂದ ಗ್ರಂಥ ಪಾಲಕ ಕಟ್ಟಿಮನಿಯವರಿಗೆ ಫೋನ್ ಮಾಡಿಸಿ ಪದೇ ಪದೇ ಒಂದು ಹುದ್ದೆಗೆ ದುಡ್ಡು ಎಷ್ಟು? ಯಾರಿಗೆ ಕೊಡಬೇಕು ಎಂದೆಲ್ಲಾ ಮಾತಾಡಿಸಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದೇ ರೀತಿ ಮಹಿಳೆಯೊಬ್ಬಳು ಇನ್ನೊಬ್ಬ ಪುರುಷನಿಗೆ ಕರೆ ಮಾಡಿ ಈ ರೀತಿ ದುಡ್ಡು ಕೊಟ್ಟರೆ ಉದ್ಯೋಗ ಸಿಗುತ್ತದೆ ಎಂದು ಮಾತಾಡಿರುವ ಆಡಿಯೊ ರೆಕಾರ್ಡ್ ಮಾಡಿದ್ದಾರೆ. ಇವೆರಡನ್ನು ಪ್ರೆಸ್ ಮೀಟ್ ನಲ್ಲಿ ರಿಲೀಸ್ ಮಾಡಿ ತಾನೇನೊ ದೊಡ್ಡ ಸಾಧನೆ ಮಾಡಿದಂತೆ ಪೋಸು ಕೊಟ್ಟಿದ್ದಾರೆ. ಆದರೆ ನಂತರ ಅದೆಲ್ಲವೂ ಆತನಿಗೆ ಉಲ್ಟಾ ಹೊಡಿದಿದೆ.

ಉಪಕುಲಪತಿ ಪ್ರೊ.ಸುಭಾಷ್

ಆಡಿಯೊ ಉಪಕುಲಪತಿ ಕೈ ಸೇರಿದ್ದೆ ತಡ ಕ್ಲರ್ಕ್ ಚಿದಾನಂದ್ ಮತ್ತು ಗ್ರಂಥಪಾಲಕ ಕಟ್ಟಿಮನಿ ಅಮಾನತ್ತಾಗಿದ್ದಾರೆ. ಯಾರ ಯಾರ ವಿರುದ್ಧ ಆರೋಪ ಬಂತೊ ಅವರೆಲ್ಲರನ್ನು ಮನೆಗೆ ಕಳಿಸಲಾಗಿದೆ. ಇನ್ನು ಉಪಕುಲಪತಿ ಸುಭಾಷ್‍ರವರು ನೇಮಕಾತಿಯ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಬಿಟ್ಟಿದ್ದಾರೆ. ದುಡ್ಡು ತಿಂದಿರುವ ಒಂದು ದಾಖಲೆಯೂ ಹೊರಗೆ ಬಾರದಂತೆ ಅವರು ಎಚ್ಚರಿಕೆ ವಹಿಸಿದ್ದಾರೆ. ಅಷ್ಟು ಮಾತ್ರವಲ್ಲ ಇನ್ನ 15 ದಿನದಲ್ಲಿ ಅವರ ಅಧಿಕಾರವದಿ ಮುಗಿಯಲಿದೆ. ಈಗ ಅವರು ತನಗೆ ಯಾರೆಲ್ಲ ತೊಂದರೆ ಕೊಟ್ಟಿದ್ದರೊ ಅವರೆಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.

ಮೊದಲಿಗೆ ಅಡವಿ ಸ್ವಾಮಿ ವಿರುದ್ಧ ಸುಭಾಷ್‍ರವರು ಜೂನ್ 03ರಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈತ ರೌಡಿ ಆಗಿದ್ದು ಹಲವು ಕೇಸ್‍ಗಳು ಈತನ ಮೇಲಿವೆ. ತನ್ನ ಸಹಚರನಿಂದ ಯಾವುದೋ ಕಾರ್ಯಕ್ರಮಕ್ಕೆ 1 ಲಕ್ಷ ದುಡ್ಡು ಕೇಳಿದ್ದನಂತೆ. ಆದರೆ ಸಿಂಡಿಕೇಟ್‍ನಲ್ಲಿ ಚರ್ಚಿಸಿ 10 ಸಾವಿರ ನೀಡಿದ್ದನ್ನು ಉಲ್ಲೇಖಿಸಿರುವ ಅವರು ದುಡ್ಡು ಕೊಡದಿದ್ದರಿಂದ ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಆರ್‍ಎಸ್‍ಎಸ್ ಹಿನ್ನೆಲೆಯ ಸಿಂಡಿಕೇಟ್ ಸದಸ್ಯರಾದ ದೊಡ್ಡ ಬಸನಗೌಡ, ವರುಣ್ ಕುಮಾರ್ ರೆಡ್ಡಿ ಮಾಜಿ ಸಿಂಡಿಕೇಟ್ ಸದಸ್ಯ ಅಲ್ಲಾವಲಿ ಬಾಷಾ ಕೊಲ್ಮಿ ಸೇರಿಕೊಂಡು ತಾವು ಹೇಳಿದವರನ್ನು ವಿ.ವಿ ಗೆ ನೇಮಿಸಬೇಕೆಂದು ಒತ್ತಾಯಿಸಿದ್ದರು ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಜೊತೆಗೆ ಮಲ್ಲೇಶಿ ಎಂಬಾತ ವಿ.ವಿಗೆ ಟ್ಯಾಂಕರ್ ನೀರು ಸರಬರಾಜು ಟೆಂಡರ್‍ಗೆ ಆಕಾಂಕ್ಷಿಯಾಗಿದ್ದ, ಅದು ಅವನಿಗೆ ಸಿಗದಿದ್ದರಿಂದ ಇವರೆಲ್ಲ ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಮತ್ತು ವಿ.ವಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತಾನೊಬ್ಬ ದಲಿತನಾದ ಕಾರಣಕ್ಕೆ ಇವರೆಲ್ಲರ ಉಪಟಳ ಹೆಚ್ಚಾಗಿದೆ ಎಂದು ದೂರಿರುವ ಅವರು ಆ ಪತ್ರವನ್ನು ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಿಗೂ ರವಾನಿಸಿದ್ದಾರೆ.

ಮಂಜಪ್ಪ ಹೊಸಮನಿ

ಮಾಜಿ ಕುಲಪತಿ ಮಂಜಪ್ಪ ಹೊಸಮನಿಯವರು 2012ರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ, 371ಜೆ ಉಲ್ಲಂಘಿಸಿ ಸ್ಥಳೀಯೇತರರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾಗ ಈ ಎಬಿವಿಪಿ ನಾಯಕರು ಬಾಯಿ ಬಿಡಲಿಲ್ಲ ಮಾತ್ರವಲ್ಲ ಉಪಕುಲಪತಿಗಳ ಪರ ನಿಂತರು. ಇದರಿಂದ ನ್ಯಾಯಯುತವಾಗಿ ಹೈದರಾಬಾದ್ ಕರ್ನಾಟದಕ ನಿರುದ್ಯೋಗಿಗಳಿಗೆ ಸಿಗಬೇಕಿದ್ದ ಉದ್ಯೋಗಗಳು ಸಿಗಲಿಲ್ಲ. ಆದರೆ ಈಗ 7 ವರ್ಷಗಳ ನಂತರವಾದರೂ 371ಜೆ ಅನ್ವಯ ನೇಮಕಾತಿ ನಡೆಯುತ್ತಿದ್ದು ಸ್ಥಳೀಯರಿಗೆ ಉದ್ಯೋಗಗಳು ಸಿಗುತ್ತಿವೆ. ಆದರೆ ಈಗ ನೇಮಕಾತಿಗೆ ಎಬಿವಿಪಿನವರು ಕಲ್ಲು ಹಾಕಲು ಹೊರಟಿರುವುದ ಅಕ್ಷಮ್ಯ. ಉಪ ಕುಲಪತಿಗಳು ಭ್ರಷ್ಟಾಚಾರ ಮಾಡಿದರೆ ದಾಖಲೆ ಸಮೇತ ಕಾನೂನು ಹೋರಾಟ ಮಾಡಬೇಕೆ ಹೊರತು ಈ ರೀತಿಯ ರೌಡಿ ವರ್ತನೆ ಸರಿಯಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ವಿದ್ಯಾರ್ಥಿಗಳ ಹಿತಾಸಕ್ತಿ ಪರವಾಗಿ ಹೋರಾಡಬೇಕಾದ ಎಬಿವಿಪಿಯಂತಹ ಸಂಘಟನೆ ಅಡವಿ ಸ್ವಾಮಿಯಂತಹ ರೌಡಿಗಳ ಕೈಯಲ್ಲಿ ಹಣ ಮಾಡುವ ದಂಧೆಯಾಗಿರುವುದ ದುರಂತ. ಈ ಕುರಿತು ಎಬಿವಿಪಿಯ ರಾಜ್ಯ ಪಧಾದಿಕಾರಿಗಳು ಗಮನಹರಿಸಬೇಕಿದೆ. ಇನ್ನು ವಿ.ವಿಯಲ್ಲಿನ ಭ್ರಷ್ಟಾಚಾರ ಸಾಮಾನ್ಯ ಸಂಗತಿಯಾಗಿರುವುದು ನಾಗರೀಕ ಸಮಾಜಕ್ಕೆ ಕಳಂಕ. ಈ ಕುರಿತು ದಿಟ್ಟ ಕ್ರಮಗಳಿಗೆ ಸರ್ಕಾರ ಮುಂದಾಗುವಂತೆ ಸಾರ್ವಜನಿಕರು ಒತ್ತಾಯ ಮಾಡಬೇಕಿದೆ. ವಿ.ವಿಯಲ್ಲಿನ ಮೂಲಸೌಕರ್ಯ ಕೊರತೆಯ ನೂರಾರು ಸಮಸ್ಯೆಗಳಿವೆ. ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಸಿಗದೇ ನರಳುತ್ತಿದ್ದಾರೆ. ಇದರ ವಿರುದ್ಧ ಮಾತ್ರ ಯಾರು ದನಿಯೆತ್ತದಿರುವುದು ದುರಂತವಾಗಿದೆ.

ಪಬ್ಲಿಕ್ ಟಿವಿ ವರದಿಗಾರನ ಬಂಧನ

ಒಂದು ಕಡೆ ಇಷ್ಟೆಲ್ಲಾ ರಗಳೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಉಪಕುಲಪತಿ ಸುಭಾಷ್ ವಿರುದ್ಧ ಹಠ ಸಾಧಿಸಲು ಹೋದ ನಾಲ್ವರು ಜೈಲು ಪಾಲಾಗಿದ್ದಾರೆ. ಪಬ್ಲಿಕ್ ಟಿವಿಯ ವೀರೇಶ್ ದಾನಿ, ಇಂಚರ ಟಿವಿಯ ಮಾಜಿ ರಿಪೋರ್ಟರ್ ನಾಗಭೂಷಣ, ಸಿ.ಎಂ ಮಂಜುನಾಥಯ್ಯ ಮತ್ತು ಅವರ ಸ್ನೇಹಿತ ವಿರೇಶ ಬಂಧನವಾಗಿರುವ ಆ ಮಹಾನುಭಾವರು. ನೇಮಕಾತಿ ವಿಚಾರದಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯದೆ ಪ್ರವೇಶ್ ಪತ್ರದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯಪಾಲ ವಜುಬಾಯಿವಾಲರವರ ಪೋಟೊ ಅಂಟಿಸಿ ಅದನ್ನು ಟಿವಿಯಲ್ಲಿ ಬೇಕಾಬಿಟ್ಟಿ ಪ್ರಸಾರ ಮಾಡಿದ್ದಾರೆ.

ಉಪಕುಲಪತಿಗಳು ಇದನ್ನು ನೋಡಿದ್ದೆ ತಡ ಪೊಲೀಸರಿಗೆ ದೂರು ನೀಡಿದ್ದಾರೆ. ನವರಂಗಿ ಆಟ ಆಡಲು ಹೋದ ಆ ನಾಲ್ವರು ಅಂದರ್ ಆಗಿದ್ದಾರೆ. ಹುಚ್ಚುಚ್ಚು ಸುದ್ದಿ ಪ್ರಸಾರ ಮಾಡುವ ಪಬ್ಲಿಕ್ ಟಿವಿಗೆ ಸರಿಯಾಗಿ ಮಂಗಳಾರತಿ ಆಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...