ಕೇರಳ ಸರ್ಕಾರ ಡ್ರಗ್ಸ್ ಮತ್ತು ಸೆಕ್ಸ್‌ಗೆ ಕೇರಳದ ಅಪ್ರಾಪ್ತ ಬಾಲಕಿಯರನ್ನು ಬಲಿ ನೀಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ ಎಂದು ಆರೋಪ ಕೇಳಿಬಂದಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ಇಲ್ಲಿನ ಏಷ್ಯಾನೆಟ್ ನ್ಯೂಸ್‌ನ ಪ್ರಾದೇಶಿಕ ಕಚೇರಿಯಲ್ಲಿ ಸಹಾಯಕ ಆಯುಕ್ತ ಪಿ.ವಿ ಸುರೇಶ್ ಅವರ ನೇತೃತ್ವದ ಎಂಟು ಸದಸ್ಯರ ಪೊಲೀಸ್ ತುಕಡಿ ತಪಾಸಣೆ ನಡೆಸಿದೆ.
ಚಾನೆಲ್‌ನ ಸ್ಟುಡಿಯೋದಲ್ಲಿ ಇರಿಸಲಾಗಿದ್ದ ಬಹುತೇಕ ಎಲ್ಲಾ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಐಟಿ ತಜ್ಞರೊಂದಿಗೆ ಪೊಲೀಸ್ ತಂಡವು ಪರಿಶೀಲನೆ ಮಾಡಿದೆ. ಕಾನೂನು ಪ್ರಕ್ರಿಯೆಗಳ ಮೇಲ್ವಿಚಾರಣೆಗೆ ಇಬ್ಬರು ಹಿರಿಯ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ನ್ಯೂಸ್ ಸ್ಟುಡಿಯೋದಲ್ಲಿ ಎಡಿಟಿಂಗ್ ಕಾರ್ಯಕ್ಕೆ ಅಡ್ಡಿಯುಂಟಾದರೂ ವಾಹಿನಿಯು ಪರಿಶೀಲನೆಯ ನೇರ ದೃಶ್ಯಗಳನ್ನು ಕೊನೆಯವರೆಗೂ ಪ್ರಸಾರ ಮಾಡುವುದನ್ನು ಮುಂದುವರೆಸಿತು.
ಇದನ್ನೂ ಓದಿ: ಫೇಕ್‌ನ್ಯೂಸ್ ಪ್ರಸಾರ ಆರೋಪ: ಏಷ್ಯಾನೆಟ್ ಕಚೇರಿಗೆ ನುಗ್ಗಿದ SFI ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು
ಈ ಬಗ್ಗೆ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಕೆಯುಡಬ್ಲ್ಯುಜೆ) ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮಾತನಾಡಿದ್ದು, “ಪೊಲೀಸರ ಕ್ರಮವು ಸಾಕಷ್ಟು ಅನುಮಾನಾಸ್ಪದವಾಗಿದೆ ಮತ್ತು ಇದು ಫ್ಯಾಸಿಸ್ಟ್ ರೀತಿಯಲ್ಲಿ ಮಾಧ್ಯಮದ ಸ್ವಾತಂತ್ರ್ಯವನ್ನು ಪ್ರಶ್ನಿಸಿದೆ” ಎಂದು ಆರೋಪಿಸಿದರು.
ಕೆಯುಡಬ್ಲ್ಯುಜೆ ಜಿಲ್ಲಾಧ್ಯಕ್ಷ ಎಂ.ಫಿರೋಸ್ ಖಾನ್, ಕಾರ್ಯದರ್ಶಿ ಪಿ.ಎಸ್. ರಾಗೇಶ್ ಮಾತನಾಡಿ, “ಪೊಲೀಸರು ಪ್ರತೀಕಾರದಿಂದ 24×7 ಸುದ್ದಿವಾಹಿನಿಯ ಸುತ್ತಲೂ ಭಯಾನಕ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ” ಎಂದು ದೂರಿದ್ದಾರೆ.
“ವಿವಾದಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಹೊರತುಪಡಿಸಿ ಕಂಪ್ಯೂಟರ್‌ಗಳಿಂದ ಎಲ್ಲಾ ಫೈಲ್‌ಗಳನ್ನು ತರೆಯಲಾಗಿದೆ. ಇದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ತಪಾಸಣೆಯ ಸುದೀರ್ಘ ಸಮಯದ ವೇಳೆ ಸುದ್ದಿಮನೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು” ಎಂದು ಶೋಧದ ಸಮಯದಲ್ಲಿ ಸ್ಥಳದಲ್ಲಿದ್ದ ಪತ್ರಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ಪಿವಿ ಅನ್ವರ್ ಅವರು ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ, ಪ್ರಸಾರ ಮಾಡಿದ ಸುಳ್ಳು ಸುದ್ದಿಯ ವೀಡಿಯೊ ತುಣುಕನ್ನು ಪಡೆಯಲು ತಪಾಸಣೆ ನಡೆಸಲಾಗಿದೆ. ಚಾನೆಲ್‌ನ ನೇರ ಪ್ರಸಾರಕ್ಕೆ ಅಡ್ಡಿಪಡಿಸುವ ಯಾವುದೇ ಪ್ರಯತ್ನಗಳಿಲ್ಲ ಎಂದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.