Homeಮುಖಪುಟವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಅದಾನಿ; ದಿನದಿಂದ ದಿನಕ್ಕೆ ಮತ್ತಷ್ಟು ನಷ್ಟ

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಅದಾನಿ; ದಿನದಿಂದ ದಿನಕ್ಕೆ ಮತ್ತಷ್ಟು ನಷ್ಟ

- Advertisement -
- Advertisement -

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಗೌತಮ್ ಅದಾನಿ ಹೊರಬಿದ್ದಿದ್ದಾರೆ. ಇದೇ ರೀತಿ ಅವರ ಸಂಸ್ಥೆಯಲ್ಲಿನ ಷೇರುಗಳು ಕುಸಿಯುತ್ತಲೇ ಹೋದರೆ ಶೀಘ್ರದಲ್ಲೇ ಏಷ್ಯಾದ ಶ್ರೀಮಂತ ವ್ಯಕ್ತಿ ಎನ್ನುವ ಸ್ಥಾನವೂ ಕಳೆದುಕೊಳ್ಳಬಹುದು.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಭಾರತೀಯ ಉದ್ಯಮಿ ಗೌತಮ್ ಅದಾನಿ ನಾಲ್ಕನೇ ಸ್ಥಾನದಿಂದ 11 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕೇವಲ ಮೂರು ದಿನಗಳಲ್ಲಿ $34 ಶತಕೋಟಿಯ ವೈಯಕ್ತಿಕ ಸಂಪತ್ತು ಕಲೆದುಕೊಂಡಿದ್ದಾರೆ.

ಪ್ರಸ್ತುತ $84.4 ಶತಕೋಟಿ ಸಂಪತ್ತಿನೊಂದಿಗೆ, ಅದಾನಿಯು ತಮ್ಮ ಪ್ರತಿಸ್ಪರ್ಧಿಯಾಗಿಂತ ಒಂದು ಸ್ಥಾನ ಮುಂದೆ ಇದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯ $82.2 ಬಿಲಿಯನ್ ಆಗಿದೆ.

ಇದನ್ನೂ ಓದಿ: ಹಿಂಡನ್‌ಬರ್ಗ್‌ ವರದಿ: ಭಾರತದ ಮೇಲಿನ ದಾಳಿ ಎಂದ ಅದಾನಿ; ರಾಷ್ಟ್ರೀಯತೆ ಹೆಸರಿನಲ್ಲಿ ವಂಚನೆ ಮರೆಯಾಗಿಸಬೇಡಿ ಎಂದ ಸಂಶೋಧನಾ ಸಂಸ್ಥೆ

ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಮೂರು ದಿನಗಳ ಮಾರಾಟದಲ್ಲಿ ಕುಸಿತ ಕಂಡಿದೆ. $68 ಶತಕೋಟಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಅದಾನಿ ಈಗ ಬಿಲಿಯನೇರ್‌ಗಳ ಸೂಚ್ಯಂಕದಲ್ಲಿ, ಮೆಕ್ಸಿಕೋದ ಕಾರ್ಲೋಸ್ ಸ್ಲಿಮ್, ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಮತ್ತು ಮಾಜಿ ಮೈಕ್ರೋಸಾಫ್ಟ್ ಸಿಇಒ ಸ್ಟೀವ್ ಬಾಲ್ಮರ್ ಅವರಿಗಿಂತ ಕೆಳಗೆ ಕುಸಿದಿದ್ದಾರೆ.

ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ಪ್ರಕಟಣೆಯು “ಬ್ರೇಜನ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಅಕೌಂಟಿಂಗ್ ವಂಚನೆ” ಎಂದು ಆರೋಪಿಸಿದೆ.

ಹಿಂಡೆನ್‌ಬರ್ಗ್ ವರದಿಯಲ್ಲೇನಿದೆ?

ಅದಾನಿ ಸಮೂಹದ ಕಂಪನಿಗಳು ಸಾಲ ಪಡೆಯುವುದಕ್ಕಾಗಿ ಕೃತಕವಾಗಿ ತಮ್ಮ ಷೇರುಗಳ ಬೆಲೆ ಏರಿಸಿಕೊಂಡಿದೆ. ತಮ್ಮ ಷೇರುಗಳ ಬೆಲೆಯನ್ನು ಅಕ್ರಮವಾಗಿ ಏರಿಸಿ, ಅವುಗಳ ಮೌಲ್ಯ ಹೆಚ್ಚಿಸಿಕೊಂಡು ನಂತರ ಅವುಗಳನ್ನು ಅಡವಿಟ್ಟು ಸಾಲ ಪಡೆದಿವೆ. ಸಾಗರದಾಚೆಗಿನ ವ್ಯವಹಾರಗಳಲ್ಲಿ ತೆರಿಗೆ ವಂಚಿಸುವುದಕ್ಕಾಗಿ ದಶಕಗಳ ಕಾಲ ಲೆಕ್ಕಪತ್ರಗಳಲ್ಲಿ ವಂಚನೆ ನಡೆಸಿವೆ. ಆ ಮೂಲಕ ಅತಿ ಹೆಚ್ಚು ಸಾಲದ ಸುಳಿಗೆ ಸಿಲುಕಿದ್ದು, ಒಟ್ಟಾರೆ ಅದರ ಆರ್ಥಿಕ ತಳಪಾಯವೇ ಅಪಾಯದಲ್ಲಿದೆ ಎಂದು ಹಿಂಡೆನ್‌ಬರ್ಗ್ ವರದಿ ಆರೋಪಿಸಿದೆ.

“ನಾವು ಎರಡು ವರ್ಷದ ಸಂಶೋಧನೆಯ ವರದಿಯನ್ನು ಇಂದು ಬಹಿರಂಗಪಡಿಸುತ್ತಿದ್ದೇವೆ. 17.8 ಟ್ರಿಲಿಯನ್ (218 ಬಿಲಿಯನ್ ಅಮೆರಿಕನ್ ಡಾಲರ್) ಮೌಲ್ಯದ ವಹಿವಾಟು ನಡೆಸುವ ಭಾರತೀಯ ಅದಾನಿ ಸಮೂಹವು ದಶಕಗಳ ಕಾಲ ಸ್ಟಾಕ್ ತಿರುಚುವಿಕೆ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿದೆ ಎಂಬುದಕ್ಕೆ ಪುರಾವೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ” ಎಂದು ಸರಣಿ ಟ್ವೀಟ್‌ಗಳನ್ನು ಹಿಂಡೆನ್‌ಬರ್ಗ್‌ ಅಧಿಕೃತ ಟ್ವಿಟರ್‌ನಲ್ಲಿ ಮಾಡಲಾಗಿದೆ.

ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ ಸುಮಾರು 120 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಸಂಗ್ರಹಿಸಿದ್ದಾರೆ. ಕಳೆದ 3 ವರ್ಷಗಳಲ್ಲಿಯೇ 100 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಮೌಲ್ಯವನ್ನು ತಮ್ಮ 7 ಕಂಪನಿಗಳ ಸ್ಟಾಕ್ ಬೆಲೆ ಏರಿಸುವ ಮೂಲಕ ಗಳಿಸಿದ್ದಾರೆ. ಆ 7 ಲಿಸ್ಟೆಡ್‌ ಕಂಪನಿಗಳು ಈ ಅವಧಿಯಲ್ಲಿ ಸರಾಸರಿ ಶೇ. 819 ಏರಿಕೆ ಕಂಡಿವೆ ಎಂದು ವರದಿ ತಿಳಿಸಿದೆ.

ಅದಾನಿ ಸಮೂಹದ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ 22 ಜನರಲ್ಲಿ 8 ಜನರು ಅದಾನಿ ಕುಟುಂಬದವರೆ ಆಗಿದ್ದಾರೆ. ಸಾಗರದಾಚೆಗಿನ ತೆರಿಗೆ ಸ್ವರ್ಗ ಎಂದು ಕರೆಸಿಕೊಳ್ಳುವ ಮಾರಿಷಸ್, ಯುಎಇ, ಕೆರಿಬಿಯನ್ ದ್ವೀಪಗಳು ಸೇರಿದಂತೆ ದೇಶಗಳಲ್ಲಿ ಹಲವಾರು ಶೆಲ್ ಕಂಪನಿಗಳನ್ನು ತೆರೆಯುವಲ್ಲಿ ಅದಾನಿ ಕುಟುಂಬ ನಿರತವಾಗಿದೆ. ಆ ಮೂಲಕ ಮನಿ ಲಾಂಡರಿಂಗ್, ತೆರಿಗೆದಾರರ ಹಣ ಕಬಳಿಕೆ ಮತ್ತು ಅಂದಾಜು 17 ಬಿಲಿಯನ್ ಅಮೆರಿಕನ್ ಡಾಲರ್ ಭ್ರಷ್ಟಾಚಾರ ನಡೆಸಿದ್ದಾರೆ. ಈ ಪ್ರಯತ್ನದಲ್ಲಿ ಕಾನೂನುಬಾಹಿರ ವಜ್ರದ ರಫ್ತು / ಆಮದು ಪ್ರಕರಣದಲ್ಲಿ ಅದಾನಿ ಸಹೋದರ ರಾಜೇಶ್ ಅದಾನಿ ಆರೋಪಿಯಾಗಿದ್ದು, ಅವರನ್ನು 2004-05ರಲ್ಲಿ ಎರಡು ಬಾರಿ ಬಂಧಿಸಲಾಗಿತ್ತು. ಆದರೆ ನಂತರ ಅವರನ್ನು ಅದಾನಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ನೀಡಲಾಯಿತು. ಅದೇ ರೀತಿ ಅದಾನಿ ಅವರ ಸೋದರ ಮಾವ ಸಮೀರ್ ವೋರಾ ಮತ್ತು ಅದಾನಿಯವರ ಹಿರಿಯ ಸಹೋದರ ವಿನೋದ್ ಅದಾನಿ ಸಹ ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದು ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ. ನಮ್ಮ ಸಂಶೋಧನೆಯು ಅದಾನಿ ಗ್ರೂಪ್‌ನ ಮಾಜಿ ಹಿರಿಯ ಅಧಿಕಾರಿಗಳು ಸೇರಿದಂತೆ ಹತ್ತಾರು ವ್ಯಕ್ತಿಗಳ ಸಂದರ್ಶನ, ಸಾವಿರಾರು ದಾಖಲೆಗಳ ಪರಿಶೀಲನೆ ಮತ್ತು ಹಲವು ದೇಶಗಳ ಭೇಟಿಯನ್ನು ಆಧರಿಸಿದೆ ಎಂದು ಹಿಂಡೆನ್‌ಬರ್ಗ್ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...