HomeUncategorizedಕೃಷಿ ಕಾಯ್ದೆಗಳನ್ನು ತಿರಸ್ಕರಿಸಿದ ಮಧ್ಯಪ್ರದೇಶದ ಆದಿವಾಸಿಗಳು - ಬೃಹತ್‌ ಪ್ರತಿಭಟನೆ

ಕೃಷಿ ಕಾಯ್ದೆಗಳನ್ನು ತಿರಸ್ಕರಿಸಿದ ಮಧ್ಯಪ್ರದೇಶದ ಆದಿವಾಸಿಗಳು – ಬೃಹತ್‌ ಪ್ರತಿಭಟನೆ

ರೈತರು ದೇಶಾದ್ಯಂತದ ನಡೆಸುತ್ತಿರುವ ಆಂದೋಲನವನ್ನು ಬೆಂಬಲಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 'ಜಾಗೃತ ಆದಿವಾಸಿ ದಲಿತ ಸಂಘಟನೆ'ಯ ಸಾವಿರಾರು ಆದಿವಾಸಿ ರೈತರು ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ...

- Advertisement -
- Advertisement -

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳು ಮತ್ತು ಪ್ರಸ್ತಾವಿತ ವಿದ್ಯುತ್ ಮಸೂದೆ 2020 ರ ವಿರುದ್ಧ ರೈತರು ದೇಶಾದ್ಯಂತದ ನಡೆಸುತ್ತಿರುವ ಆಂದೋಲನವನ್ನು ಬೆಂಬಲಿಸಿ ಮಧ್ಯಪ್ರದೇಶದ ಜಾಗೃತ ಆದಿವಾಸಿ ದಲಿತ ಸಂಘಟನೆಯ ಸಾವಿರಾರು ಆದಿವಾಸಿ ರೈತರು ಬಾರ್ವಾನಿ ಜಿಲ್ಲೆಯಲ್ಲಿ 2020 ರ ಡಿಸೆಂಬರ್ 9 ರಂದು ಬೃಹತ್ ಪ್ರತಿಭಟನೆ ನಡೆಸಿದರು.

ತಮ್ಮ ಪ್ರತಿಭಟನೆಯ ಭಾಗವಾಗಿ ವಿದ್ಯುತ್, ರಸಗೊಬ್ಬರಗಳು, ಪಡಿತರ, ಬೆಳೆ ವಿಮೆ, ಶಿಕ್ಷಣ ಮತ್ತು ರೈತರ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪ್ರಧಾನಿ, ಕೇಂದ್ರ ಕೃಷಿ ಸಚಿವರು, ಮುಖ್ಯಮಂತ್ರಿ ಮತ್ತು ಇತರೆ ಅಧಿಕಾರಿಗಳಿಗೆ ಜ್ಞಾಪನಾ ಪತ್ರವನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ: ದಲಿತ ಬಾಲಕರ ಬರಿಗೈಯಲ್ಲಿ ಮಲ ಎತ್ತಿಸಿದ ಮೇಲ್ಜಾತಿಯ ಗುಂಪು – ಬಂಧನ

ಈ ಪತ್ರದಲ್ಲಿ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗಿದೆ ಎಂದು ಸಬ್‌ರಂಗ್ ವರದಿ ಮಾಡಿದೆ.

“ರೈತರ ಬೆಳೆಗಳಿಗೆ ನಿಗದಿತ ಬೆಂಬಲ ಬೆಲೆ ನೀಡುವ ಬದಲು, ಸರ್ಕಾರಿ ಮಂಡಿಗಳನ್ನು ಬೈಪಾಸ್ ಮಾಡಿ ರೈತರನ್ನು ವ್ಯಾಪಾರಿಗಳಿಗೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಮಾರಲಾಗುತ್ತಿದೆ. ಈಗಿರುವ ಎಲ್ಲಾ ನಿರ್ಬಂಧಗಳನ್ನೂ ತೆಗೆದುಹಾಕಿದರೆ ರೈತರು ಮತ್ತು ಗ್ರಾಹಕರು ಇಬ್ಬರೂ ಶೋಷಣೆಗೆ ಒಳಗಾಗುತ್ತಾರೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ನಾಳೆಯು ಮುಂದುವರೆಯಲಿರುವ ಕೆಎಸ್‌ಆರ್‌‌ಟಿಸಿ ನೌಕರರ ಮುಷ್ಕರ

“ವಿದ್ಯುತ್ ಮಸೂದೆಗೆ ಸಂಬಂಧಿಸಿದಂತೆ, ಸರ್ಕಾರಿ ವಿದ್ಯುತ್ ವಿತರಣೆಯನ್ನು ಖಾಸಗೀಯವರಿಗೆ ಮಾರಲಾಗುತ್ತಿದೆ. ಇದರಿಂದ ವಿದ್ಯುತ್ ಶುಲ್ಕವನ್ನು ಖಾಸಗಿಯವರು ತಮಗಿಚ್ಚೆಬಂದಂತೆ ವಿಧಿಸುತ್ತಾರೆ. ಹಾಗಾಗಿ ಇಲ್ಲಿಯೂ ರೈತರ ಶೋಷಣೆಯಾಗುತ್ತದೆ. ಈ ಹೊಸ ನೀತಿಗಳು ಕಾರ್ಪೊರೇಟ್‌ಗಳಿಗೆ ಕೃಷಿ ಭೂಮಿಯನ್ನು ಕಡಿಮೆ ದರದಲ್ಲಿ ಖರೀದಿಸಲು ಮತ್ತು ಕಾರ್ಮಿಕರನ್ನು ಕಡಿಮೆ ದರದಲ್ಲಿ ನೇಮಿಸಿಕೊಳ್ಳಲು ದಾರಿ ಮಾಡಿಕೊಡುತ್ತದೆ” ಎಂದು ವಾದಿಸಿದ್ದಾರೆ.

2007 ರಲ್ಲಿ ರಾಷ್ಟ್ರೀಯ ರೈತ ಆಯೋಗವನ್ನು ಉಲ್ಲೇಖಿಸಿ, ಆಯೋಗದ ಶಿಫಾರಸಿನ ಪ್ರಕಾರ, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಾರುಕಟ್ಟೆಗಳನ್ನು ತೆರೆಯುವಂತೆ ಕರೆ ನೀಡಿದರು.

ಇದನ್ನೂ ಓದಿ: ರೈತರು ಮಾತುಕತೆಯಿಂದ ಹೊರನಡೆದರು ಎಂಬ ಸಚಿವರ ಮಾತು ದೊಡ್ಡ ಸುಳ್ಳು: ರೈತ ಸಂಘಟನೆಗಳ ಹೇಳಿಕೆ

ಇದಲ್ಲದೆ, ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದಂತೆ, ರೈತರಿಗೆ 24 ಖರೀದಿ ಬೆಳೆಗಳ ಸಂಪೂರ್ಣ ವೆಚ್ಚವನ್ನು ಒಂದೂವರೆ ಪಟ್ಟು ಖಾತ್ರಿಪಡಿಸಿಕೊಡಬೇಕು ಎಂದೂ ಒತ್ತಾಯಿಸಿದರು.

ಸರ್ಕಾರದ ಜವಾಬ್ದಾರಿಯ ಕುರಿತು ಮಾತನಾಡಿದ ಹೋರಾಟಗಾರರು, “ಬೆಳೆ ನಷ್ಟದ ಸಂದರ್ಭದಲ್ಲಿ ಸರ್ಕಾರವು ರೈತರಿಗೆ ಪರಿಹಾರ ನೀಡಬೇಕು ಮತ್ತು ಸಾಂಕ್ರಾಮಿಕ ರೋಗದ ಕೊನೆಯವರೆಗೂ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಪ್ರಕಾರ ಮಾಸಿಕ ಉಚಿತ ಪಡಿತರವನ್ನು ನೀಡಬೇಕು. ರಸಗೊಬ್ಬರ ಖರೀದಿಯ ಸಮಸ್ಯೆಯನ್ನೂ ಗಮನಾರ್ಹವಾಗಿ ತೆಗೆದುಕೊಳ್ಳುವಂತೆ” ಮನವಿ ಮಾಡಿದರು.

ಇದನ್ನೂ ಓದಿ: ಜೆ.ಪಿ ನಡ್ಡಾ ಕಾರಿನ ಮೇಲೆ ದಾಳಿ: ವಿಚಾರಣೆಗೆ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸುವುದಿಲ್ಲ ಎಂದ ಪಶ್ಚಿಮ…

ಮುಂದುವರೆದು, ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಬುಡಕಟ್ಟು ಜನಾಂಗದವರ ಆಸ್ತಿಯಾಗಿರುವ ಅರಣ್ಯ ಪ್ರದೇಶವನ್ನು ಖಾಸಗೀ ಕಂಪನಿಗಳಿಗೆ 40 ಪ್ರತಿಶತದಷ್ಟು ಗುತ್ತಿಗೆಗೆ ನೀಡಿದ್ದಕ್ಕಾಗಿ ಅವರು ರಾಜ್ಯ ಸರ್ಕಾರವನ್ನು ಖಂಡಿಸಿದ್ದು, ಇಂತಹ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದರು.

ಆನ್‌ಲೈನ್ ಶಿಕ್ಷಣವನ್ನು ಮುಂದುವರೆಸುವ ಬದಲು ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ತೆರೆಯುವಂತೆ ಸರ್ಕಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಎಲ್ಲಾ ಸೌಲಭ್ಯಗಳೂ ಇರುವ ಗುಣಮಟ್ಟದ ಶಿಕ್ಷಣಕ್ಕಾಗಿ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ನಿಲ್ಲದ ರೈತ ಹೋರಾಟ: 100 ಪತ್ರಿಕಾಗೋಷ್ಟಿ, 700 ಸಭೆಗಳ ಮೂಲಕ ಪ್ರಚಾರಕ್ಕೆ ಹೊರಟ ಬಿಜೆಪಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...