Homeಕರ್ನಾಟಕಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ...!!

ಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ…!!

ಬಿ.ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

“ಕರೊನಾದಿಂದ ಏಟು ಜನ ಸತ್ರಲಾ ಉಗ್ರಿ” ಎಂದಳು ಜುಮ್ಮಿ.

“ವಾಟಿಸ್ಸೆ ಬಂದ ಅವುನ್ನೆ ಕೇಳು” ಎಂದ.

“ಲೆ ವಾಟಿಸ್ಸೆ ಏಟು ಜನ ಸತ್ರಲಾ.”

“ನೀನು ತಿಳಕಂಡಂಗೆ ಜನ ಸಾಯ್ತಯಿಲ್ಲ ಕಣ್ಣಕ್ಕ.”

“ಯಾಕ್ಲ.”

“ನಮ್ಮ ಜನಗಳ ಪರ‍್ರಂಗದೆ. ಕರೋನಾನೂ ಫೇಸ್ ಮಾಡ್ತ ಅವುರೆ, ಅಂತ ಯೇಡ್ಸನೆ ತಡಕಂಡ್ರು ಇದ್ಯಾವ ಲ್ಯಕ್ಕ.”

“ಏಡಿಸಿಗಿಂತ್ಲೂ ದ್ಲಡ್ಡ ಕಾಯಲವೆ ಇದು.”

“ಊ ಕಣ್ಣಕ್ಕ, ಏಡಸಾದೋನು ಸತ್ತೇ ಸಾಯ್ತನೆ. ಆದ್ರೆ ಕೊರೋನಾ ಬಂದೋರು ರಿಕವರಿ ಆಯ್ತ ಅವುರೆ ಇದಕೇನೇಳ್ತೀ.”

“ಮತ್ತೆ ಪಾರಿನ್ನಲ್ಲಿ ಭಾಳ ಜನ ಸತ್ರಂತೆ.”

“ಆ ನನ್‌ಮಕ್ಕಳು ಡೆಲಿಕೇಟು ಕಣಕ್ಕ. ಅದ್ಕೆ ಉದಿರೋದ್ರು.”

“ಡೇಲ್ಲಿಕೇಟು ಅಂದ್ರೇನ್ಲ.”

“ಡೆಲಿಕೇಟ್ ಅಂದ್ರೆ. ಯಾವಾಗ್ಲೂ ಕೈಯಿ ಬಾಯಿ ತ್ವಳಕಳದು ದಿನ ಸ್ನಾನ ಮಾಡದು. ಮೈನ್ಯಲ್ಲ ವರಿಸಿಗಳದು. ಸೆಂಟಾಕದು ಇಂತ ವಿಪರೀತ ಮಾಡಿ ಮೈಲಿಗೆ ಮಾಡಿದ್ರೆ ಮನುಸುನ ಬಾಡಿ ಡೆಲಿಕೇಟಾಯ್ತದೆ. ಅಂತಾ ನನ್‌ಮಕ್ಕಳು ಕಾಯ್ಲೆ ತಡಕಳ್ಳದಿಲ್ಲ.”

“ಅಂಗರೆ ಕಿಲೀನಾಗಿರಬಾರ್ದು ಅನ್ನು.”

“ಎಷ್ಟು ಬೇಕೊ ಅಷ್ಟಿರಬೇಕು.”

“ಊ ಯಾವ್ದು ಅತಿಯಾಗಬಾರ್ದು ಅಂತ ಅತಿ ಮಾಡಕ್ಕೋದ ಪಾರಿನ್ನರು ಕರೋನಾ ತಡಿಯಕ್ಕಾಗದೆ ಗ್ವಾತ ವಡಿತಾ ಅವುರೆ ಅದೇ ನಮ್ಮೊರು ನೋಡು ರಿಕವರಿ ಆಯ್ತಾ ಅವುರೆ.”

“ಯಣ್ಣೆ ಸಿಕ್ಕತೇನೊ ನಿನಗೆ” ಎಂದ ಉಗ್ರಿ.

“ಸಿಕ್ತು ಕಣೊ ಉಗ್ರಿ, ಆದ್ರೆ ಒಂದೂವರೆ ತಿಂಗಳು ಅದ ಮುಟ್ಟದಂಗಿದ್ದೆ ನೋಡು, ಅದ್ಕೊ ಏನೊ ವರಕು ಮಾಡಲಿಲ್ಲ ಅದು.”

“ಹಳೆ ಸ್ಟಾಕಿರಬೇಕೇನೊ.”

“ಹಳೆ ಸ್ಟಾಕೆ ಅಲವೆ ಕಿಕ್ ಕೊಡದು. ಎಲ್ಲೊ ಡೂಪ್ಲಿಕೇಟು ಅಂತ ಡವುಟು ಬತ್ತು.”

“ಅಂತೂ ಎಡೂರಪ್ಪ ನಿಮ್ಮ ಕಷ್ಟ ನೋಡಕ್ಕಾಗದೆ ಲಿಕ್ಕರ್ ಅಂಗಡಿ ಬಾಗಲ ತಗಿಸ್ತ ಅತ್ತಗೆ.”

“ಅವುನೆಲ್ಲಿ ತಗದ್ನೊ, ಮೋದಿ ತಗಿರಿ ಅತ್ತಗೆ ಅಂದ ಇವುನು ತಗದ ಅವುರಿಗೇನು ಸರಕಾರಕೆ ಆದಾಯ ಬತ್ತು.”

“ಮೋದಿ ಏನು ಮಾಡಿದುನ್ಲ ಕರೋನ ಕಾಯಿಲಕೆ.”

“ಅವುನು ರಾಮಾಯ್ಣ ದಾರವಾಯಿ ನೋಡ್ತ ಕುಂತವುನೆ.”

“ಅದ್ಯಾಕ್ಲ.”

“ಅಷ್ಟೆ ಅಲವೇನಕ್ಕ ಅವುನ ಕೈಲಾಗದು. ಅವುನೇನು ಕರೋನಾ ಡಾಗುಟ್ರೊ ಅಥವ ಮುಂದಾಲೋಚನೆಯಿರೊ ನಾಯಕನೋ ಇಲ್ಲ ಬುಡಬಗ್ಗರು ಸ್ಥಿತಿ ಗೊತ್ತಿರೊ ಮನುಸನೊ ಯಾವುದೂ ಅಲ್ಲ ಕಣಕ್ಕ ಅದ್ಕೆ ದೇಸವ ಅದರ ಪಾಡಿಗೆ ಬುಟ್ಟು ಅಗಾಗ್ಗೆ ಏನೇನೂ ಆಜ್ಞೆ ವರುಡುಸ್ತನೆ ಅವೂ ಅವನ ಸ್ವಂತ ತೀರಮಾನ ಅಲ್ಲ ಆರೆಸೆಸ್ ಮುಖಂಡ್ರು ಹೇಳಿದವು.”

“ನಮ್ಮ ಎಡೂರಪ್ಪನೆ ವಾಸಿ ಅಲವೇನೊ.”

“ಅದ್ಯಂಗೊ ಉಗ್ರಿ.”

“ಅವುನು ಉಗಾದಿ ಹಬ್ಬದ ಹಿಂದಿನ ದಿನ ಊರಿಗೋಗಿ ಬರೋರು ಬನ್ನಿ ಅಂದೆ ಇದ್ರೆ, ನಮ್ಮೂರರ‍್ಯಲ್ಲ ಬೆಂಗಳೂರಲೇ ಸಾಯಬೇಕಾಗಿತ್ತು.”

“ಅದೇನೊ ನಿಜಕಣೊ ಉಗ್ರಿ, ನೋಡು ಎಡೂರಪ್ಪಾಗ್ಲಿ ಮೋದಿ ಆಗ್ಲಿ ಕರೋನಾ ಸಮಸ್ಯೆಗೆ ಇವುರತ್ರ ಇರೊ ಸಲ್ಯೂಷನ್ ಏನದೆ ಗೊತ್ತೇನೊ.”

“ಅದಯಾವುದಪ್ಪ ಸಲೂಶನ್ನು.”

“ಮನೆಯಿಂದ ಯಾರು ವರಗೆ ಬರಬ್ಯಾಡಿ, ಬಾಯಿಗೆ ಬಟ್ಟೆ ಕಟಿಗಂಡಿರಿ, ದೂರ ನಿಂತಗಂಡು ಯವಾರ ಮಾಡಿ, ದೀಪಹಚ್ಚಿ ಜಾಗಟೆ ಬಾರಿಸಿ, ಅನ್ನದು ಬುಟ್ರೆ ಇನ್ನೆನುಯಿಲ್ಲ.”

“ಅಷ್ಟೆ ಅಂತಿಯಾ.”

“ಅಷ್ಟೆ ಅಂತಿಯಾ ಅಂತ ಕೇಳತಿಯಲ್ಲಾ ಈಗನುಭವುಸ್ತಯಿರದು ಅದೇ ಅಲವೇನೊ ನೀವಿಂಗಿರಿ ನಾವಿಂಗೆ ಮಾಡ್ತಿವಿ ದವಸ ಧಾನ್ಯ ಕೊಡ್ತೀವಿ ಸಾರಿಗೆ ಯವಸ್ಥೆ ಮಾಡ್ತಿವಿ ಊರಿಗೋಗಿ ಹೆದರಬ್ಯಾಡಿ ಅನ್ನೊ ಮಾತು ಅವುರ ಬಾಯಿಲಿ ಬರಲಿಲ್ಲಲ್ವೊ.”

“ಅದ್ಕೆ ಏನೊ ಕಂಡ್ಳ ಸೋನಿಯಗಾಂಧಿ ಊರಿಗೋಗೊ ಜನಕ್ಯಲ್ಲ ಗಾಡಿ ಚಾರ್ಜು ಕೊಡ್ತಿನಿ ಅಂದವುಳೆ.”

“ಆಗ್ಲೆ ಕಣಕ್ಕ ಬಿಜೆಪಿಗಳ ಬಾಯಿಗೆ ಬೀಗ ಬಿದ್ದಿದ್ದು. ಇವುಕೆ ಮಾನ ಮರಿಯಾದಿ ಇದ್ರೆ ಆ ಹೆಣ್ಣೆಂಗಸು ಹತ್ತುವರಸ ದೇಸ ಯಂಗೆ ಮಡಗಿದ್ಲು ಅಂತ ತಿಳಕಬೇಕು ಕಣಕ್ಕ ಆಗ್ಲಾರ ದೇಸ ಯಂಗಾಳಬೇಕು ಅನ್ನದು ವಳಿತದೆ.”

“ನಿಜ ಕಂಡ್ಳ ನೀನೇಳಿದ್ದು.”


ಇದನ್ನೂ ಓದಿ: ಹಿಂಗಾಡಿದ್ರೆ ಸಾಬರ ಕತೆ ಮುಗಿತು ಬುಡು: ಚಂದ್ರೇಗೌಡರ ಕಟ್ಟೆಪುರಾಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...