Homeಕರೋನಾ ತಲ್ಲಣಗಾಳಿಯಲ್ಲಿ 10 ಮೀಟರ್‌ ದೂರ ಸಾಗುತ್ತದೆ ಕೊರೊನಾ ವೈರಸ್ ಸಣ್ಣ ಕಣಗಳು- ಕೇಂದ್ರ ಸರ್ಕಾರ

ಗಾಳಿಯಲ್ಲಿ 10 ಮೀಟರ್‌ ದೂರ ಸಾಗುತ್ತದೆ ಕೊರೊನಾ ವೈರಸ್ ಸಣ್ಣ ಕಣಗಳು- ಕೇಂದ್ರ ಸರ್ಕಾರ

- Advertisement -
- Advertisement -

ಕೊರೊನಾ ಸೋಂಕಿತ ವ್ಯಕ್ತಿ ಸೀನಿದಾಗ, ಉಸಿರು ಬಿಟ್ಟಾಗ ಅಥವಾ ಕೆಮ್ಮಿದಾಗ ಬಾಯಿ ಮತ್ತು ಮೂಗಿನಿಂದ ಹೊರ ಹೊಮ್ಮುವ ಹನಿಗಳು ಎರಡು ಮೀಟರ್‌ ದೂರದವರೆಗೆ ಬೀಳುತ್ತವೆ. ಆ ಹನಿಗಳ ಸಣ್ಣ ಕಣಗಳು (ಏರೋಸಾಲ್) 10 ಮೀಟರ್ ದೂರದವರೆಗೆ ಗಾಳಿಯಲ್ಲಿ ಸಾಗಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಮಾಹಿತಿಯೊಂದಿಗೆ ಕೋವಿಡ್ ವಿರುದ್ಧ ಹೋರಾಡುವ, ಅನುಸರಿಸಲು ಸುಲಭವಾದ ಮಾರ್ಗಸೂಚಿಗಳನ್ನು ಹಂಚಿಕೊಂಡಿದೆ. ಇದರಲ್ಲಿ ಡಬಲ್ ಮಾಸ್ಕ್ ಬಳಸುವುದು, ದೈಹಿಕ ಅಂತರ ಮತ್ತು ಉತ್ತಮ ಗಾಳಿ, ಸ್ವಚ್ಛತೆ ಇರುವ ಸ್ಥಳಗಳಲ್ಲಿ ಇರುವುದನ್ನು ಅನುಸರಿಸಲು ಹೇಳಿದೆ.

“ಸರಿಯಾದ ಗಾಳಿ, ಸ್ವಚ್ಛತೆ ಇರುವ ವಾತಾವರಣದಲ್ಲಿ ಕೊರೊನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಅಪಾಯ ಕಡಿಮೆ ಇದೆ. ತೆರೆದಿರುವ ಕಿಟಕಿಗಳು ಮತ್ತು ಬಾಗಿಲುಗಳು, ಫ್ಯಾನ್ ಮೂಲಕ ಹೆಚ್ಚಿನ ಗಾಳಿ ಒಳ-ಹೊರಗೆ ಹೋಗುವುದರಿಂದ ವೈರಸ್ ಹರಡುವ ಸಾಧ್ಯತೆ ಕಡಿಮೆ ಇದೆ” ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯರಾಘವನ್ ಅವರ ಕಚೇರಿ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮನೆಯಲ್ಲೇ ಕೊರೊನಾ ಟೆಸ್ಟ್ ಮಾಡಿಕೊಳ್ಳಲು ಅನುಮತಿ- ಯಾರು ಬಳಸಬಹುದು ಎಂಬ ಮಾಹಿತಿ ಇಲ್ಲಿದೆ

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಜನರನ್ನು ಒತ್ತಾಯಿಸಿರುವ ಸರ್ಕಾರ, ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಎರಡು ಮೀಟರ್ ಒಳಗೆ ಹನಿಗಳು ಬೀಳುತ್ತಿದ್ದರೆ, ಸಣ್ಣ ಏರೋಸಾಲ್ ಕಣಗಳು 10 ಮೀಟರ್‌ವರೆಗೆ ಗಾಳಿಯಲ್ಲಿ ಸಾಗುತ್ತವೆ ಎಂದು ಹೇಳಿದೆ.

 

ಸೋಂಕಿತ ವ್ಯಕ್ತಿಗೆ ರೋಗ ಲಕ್ಷಣಗಳು ಇಲ್ಲದಿದ್ದರೂ ಸೋಂಕು ಹರಡಬಹುದು. ಮುಖ್ಯವಾಗಿ ಬಾಯಿಯಿಂದ ಹೊರ ಹೊಮ್ಮುವ ಲಾಲಾರಸ ಮತ್ತು ಮೂಗಿನಿಂದ ಬೀಳುವ ಹನಿಗಳು ವೈರಸ್ ಹರಡುವಿಕೆಯ ಪ್ರಾಥಮಿಕ ವಿಧಾನವಾಗಿದೆ.

ಜನರು ಡಬಲ್ ಲೇಯರ್ ಮಾಸ್ಕ್ ಅಥವಾ ಎನ್ 95 ಮಾಸ್ಕ್ ಧರಿಸಬೇಕು, ಅದು ಗರಿಷ್ಠ ರಕ್ಷಣೆ ನೀಡುತ್ತದೆ ಎಂದು ಹೊಸ ಮಾರ್ಗಸೂಚಿಗಳು ತಿಳಿಸಿವೆ. ಡಬಲ್ ಮಾಸ್ಕ್‌ಗಾಗಿ, ಶಸ್ತ್ರಚಿಕಿತ್ಸೆಯ ಮಾಸ್ಕ್‌ ಧರಿಸಿ, ನಂತರ ಅದರ ಮೇಲೆ ಮತ್ತೊಂದು ಬಿಗಿಯಾದ ಬಟ್ಟೆಯ ಮಾಸ್ಕ್‌ ಧರಿಸಿ.  ಶಸ್ತ್ರಚಿಕಿತ್ಸೆಯ ಮಾಸ್ಕ್‌ ಇಲ್ಲದವರು ಎರಡು ಹತ್ತಿಯ ಮಾಸ್ಕ್‌ಗಳನ್ನು ಒಟ್ಟಿಗೆ ಧರಿಸಬಹುದು ಎಂದು ಸಲಹೆ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳಿಗೆ ಪ್ರವೇಶಿಸುವ ಜನರು ಮೊದಲು ರ್‍ಯಾಪಿಡ್ ಆಂಟಿಜೆನ್ ಪರೀಕ್ಷೆಯನ್ನು ಕೈಗೊಳ್ಳಬೇಕು. ಆಶಾ/ ಅಂಗನವಾಡಿ / ಆರೋಗ್ಯ ಕಾರ್ಯಕರ್ತರಿಗೆ ರ್‍ಯಾಪಿಡ್ ಆಂಟಿಜೆನ್ ಪರೀಕ್ಷೆ ನಡೆಸಲು ತರಬೇತಿ ನೀಡಬೇಕು.

ಈ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಿದ್ದರೂ ಸಹ ಪ್ರಮಾಣೀಕೃತ ಎನ್ 95 ಮಾಸ್ಕ್‌ಗಳನ್ನು ನೀಡಬೇಕು. ಕಾರ್ಯಕರ್ತರಿಗೂ ಸೋಂಕಿತ ವ್ಯಕ್ತಿಯನ್ನು ಮೇಲ್ವಿಚಾರಣೆ ಮಾಡಲು ಆಕ್ಸಿಮೀಟರ್‌ಗಳನ್ನು ಒದಗಿಸಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಯುಪಿ: ಸೋಂಕಿತ ರೋಗಿಯ ನಿರ್ಲಕ್ಷ್ಯದ ಬಗ್ಗೆ ಪತ್ರಕರ್ತರಿಗೆ ಮಾಹಿತಿ; ಗ್ರಾಮಸ್ಥನ ಮೇಲೆ ಪ್ರಕರಣ ದಾಖಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...