Homeಅಂತರಾಷ್ಟ್ರೀಯಅಫ್ಘಾನಿಸ್ತಾನ: ಉದ್ಯೋಗ ಬಿಟ್ಟು ಬೇರೆ ಕೆಲಸಕ್ಕೆ ಸೇರಿದ 79% ದಷ್ಟು ಪತ್ರಕರ್ತರು

ಅಫ್ಘಾನಿಸ್ತಾನ: ಉದ್ಯೋಗ ಬಿಟ್ಟು ಬೇರೆ ಕೆಲಸಕ್ಕೆ ಸೇರಿದ 79% ದಷ್ಟು ಪತ್ರಕರ್ತರು

- Advertisement -
- Advertisement -

ಅಫ್ಘಾನಿಸ್ತಾನದಲ್ಲಿ ಮಾಧ್ಯಮ ಪ್ರತಿನಿಧಿಗಳು ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಅವರಲ್ಲಿ ಶೇಕಡಾ 79 ರಷ್ಟು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಜರ್ನಲಿಸ್ಟ್ ಫೌಂಡೇಶನ್ ಹೇಳಿದೆ.

ಆರ್ಥಿಕ ಪರಿಸ್ಥಿತಿ ತೀರ ಕೆಳಮಟ್ಟಕ್ಕೆ ಇಳಿದಿದ್ದು ಹಣ ಸಂಪಾದಿಸಲು ಮತ್ತು ಬದುಕಲು ಪತ್ರಕರ್ತರು ಇತರ ವೃತ್ತಿಗಳನ್ನು ಆಶ್ರಯಿಸಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ:ಅಫ್ಘಾನ್ ಮಹಿಳೆಯರ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್‌ನಿಂದ ಹಲ್ಲೆ

ಫೌಂಡೇಶನ್ ಕಳೆದ ಒಂದೂವರೆ ತಿಂಗಳಲ್ಲಿ ಆಫ್ಘನ್ ಪತ್ರಕರ್ತರ ಜೀವನವನ್ನು ಮೌಲ್ಯಮಾಪನ ಮಾಡಿರುವ ಸಂಸ್ಥೆ, ಪತ್ರಕರ್ತರು ದುರ್ಬಲ ಆರ್ಥಿಕ ಪರಿಸ್ಥಿತಿಯಿಂದಾಗಿ ಅತ್ಯಂತ ಕೆಟ್ಟ ಜೀವನವನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದೆ.

ಪತ್ರಕರ್ತರು ಉದ್ಯೋಗ ಕಳೆದುಕೊಳ್ಳೂವ ಜೊತೆಗೆ, ಅಫ್ಘಾನಿಸ್ತಾನದಲ್ಲಿ ಶೇಕಡಾ 75 ರಷ್ಟು ಮಾಧ್ಯಮಗಳು ಹಣಕಾಸಿನ ತೊಂದರೆಗಳಿಂದ ಮುಚ್ಚಲ್ಪಟ್ಟಿವೆ ಎಂದು ಅಂಕಿಅಂಶಗಳು ತೋರಿಸಿವೆ ಎಂದು ಖಾಮಾ ಪ್ರೆಸ್ ವರದಿ ಹೇಳಿದೆ.

ಅಫ್ಘಾನಿಸ್ತಾನದಾದ್ಯಂತ ಒಟ್ಟು 462 ಆಫ್ಘನ್ ಪತ್ರಕರ್ತರು ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು ಮತ್ತು ಅವರಲ್ಲಿ 390 ಪುರುಷರು ಮತ್ತು 72 ಮಹಿಳೆಯರು ಸೇರಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಆಶ್ರಯ ಪಡೆಯಲು ಕೋರಿ 736 ಅಫ್ಘಾನಿಸ್ತಾನಿಯರಿಂದ ಹೊಸ ಅರ್ಜಿ

ಪತ್ರಕರ್ತರ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಪತ್ರಕರ್ತರ ಫೌಂಡೇಶನ್ ಅಂತರರಾಷ್ಟ್ರೀಯ ಸಮುದಾಯ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕೆ ಕರೆ ನೀಡಿತ್ತು.

ಇನ್ನು, ಇತ್ತೀಚಿಗೆ ಬಿದ್ದ ಹಿಮ ಮತ್ತು ಉಂಟಾದ ಭೀಕರ ಪ್ರವಾಹ ಅಫ್ಘಾನ್‌ ಜನರನ್ನು ದುಸ್ಥಿತಿಗೆ ತಳ್ಳಿದೆ. ಇಂತಹ ಸಮಯದಲ್ಲಿ “ರಾಜಕೀಯ ಪೂರ್ವಾಗ್ರಹ”ವಿಲ್ಲದೆ ತುರ್ತು ಮಾನವೀಯ ನೆರವು ನೀಡಬೇಕು ಎಂದು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ವಿಶ್ವದ ಇತರ ರಾಷ್ಟ್ರಗಳಿಗೆ ಮನವಿ ಮಾಡಿದೆ.

ಉಪಪ್ರಧಾನಿ ಅಬ್ದುಲ್ ಘನಿ ಬರಾದಾರ್, “ವಿವಿಧ ಸ್ಥಳಗಳಲ್ಲಿ, ಜನರಿಗೆ ಊಟ, ವಸತಿ, ಬೆಚ್ಚಗಿನ ಬಟ್ಟೆ ಮತ್ತು ಹಣ ಕೂಡ ಇಲ್ಲ. ಜಗತ್ತು ಯಾವುದೇ ರಾಜಕೀಯ ಪಕ್ಷಪಾತವಿಲ್ಲದೆ, ಪೂರ್ವಾಗ್ರಹಗಳಿಲ್ಲದೇ ಆಫ್ಘನ್ ಜನರನ್ನು ಬೆಂಬಲಿಸಬೇಕು. ಇತರೆ ದೇಶಗಳು ತಮ್ಮ ಮಾನವೀಯ ಜವಾಬ್ದಾರಿಗಳನ್ನು ನಿರ್ವಹಿಸಬೇಕು” ಎಂದು ವಿಡಿಯೊವೊಂದರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಅಫ್ಘಾನ್‌ಗೆ ರಾಜಕೀಯ ಪೂರ್ವಾಗ್ರಹಗಳನ್ನು ಬಿಟ್ಟು ಸಹಾಯ ಮಾಡಿ: ತಾಲಿಬಾನ್ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...