Homeಕರ್ನಾಟಕಮಂಡ್ಯ: ಅಂಗಡಿ ಮುಂದೆ ದಲಿತರು ನಡೆದಾಡಿದ್ದಕ್ಕೆ ಮೈಲಿಗೆಯಾಯಿತೆಂದು ಸವರ್ಣೀಯರಿಂದ ಹಲ್ಲೆ

ಮಂಡ್ಯ: ಅಂಗಡಿ ಮುಂದೆ ದಲಿತರು ನಡೆದಾಡಿದ್ದಕ್ಕೆ ಮೈಲಿಗೆಯಾಯಿತೆಂದು ಸವರ್ಣೀಯರಿಂದ ಹಲ್ಲೆ

- Advertisement -
- Advertisement -

ಸವರ್ಣೀಯರ ಅಂಗಡಿ ಮುಂದೆ ದಲಿತರು ನಡೆದಾಡಿದ್ದಕ್ಕೆ ದಲಿತರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌‌.ಪೇಟೆ ತಾಲ್ಲೂಕಿನ ಎಚ್.ಬಳ್ಳೆಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿಗಳಾದ ದಲಿತ ಸಮುದಾಯದ ದಂಪತಿ ಚಲುವರಾಜು ಹಾಗೂ ಬಿ.ಕೆ.ಚಂಪಕ ಅವರ ಮೇಲೆ ಇದೇ ಗ್ರಾಮದ ನಿವಾಸಿಗಳಾದ ಸೃಶ್ಯ ಜಾತಿಯ ಬಸಪ್ಪ, ರೂಪಾ ಎಂಬವರು ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ:ಉತ್ತರ ಪ್ರದೇಶ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 10 ವರ್ಷ ಜೈಲು

ಕೆ.ಆರ್‌.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 341, 323, 324, 504, 506, 354 (b) ಹಾಗೂ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ಜನವರಿ 9, 2022ರಂದು ಘಟನೆ ನಡೆದಿದೆ. ಅಂದು ಚಲುವರಾಜು ಹಾಗೂ ಅವರ ಹೆಂಡತಿ ಚಂಪಕ ಬಿ.ಕೆ. ಅವರು ಬಳ್ಳೆಕೆರೆ ಗ್ರಾಮದ ಪಕ್ಕದಲ್ಲಿರುವ ತಮ್ಮ ಜಮೀನಿಗೆ ಹೋಗಲೆಂದು ಗ್ರಾಮದ ಬಸಪ್ಪ ಅವರ ಅಂಗಡಿ ಮುಂದೆ ನಡೆದು ಹೋಗುತ್ತಿದ್ದರು. ಸ್ವಲ್ಪ ಅಂತರದಲ್ಲಿನ ಕಾಲುವೆಯ ಏರಿಯ ಮೇಲೆ ಹೋಗುತ್ತಿದ್ದಾಗ ಬಸಪ್ಪ ಮತ್ತು ಆತನ ಹೆಂಡತಿ ರೂಪಾ ಈ ದಲಿತ ದಂಪತಿಯ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ.

ಸಂತ್ರಸ್ತ ವ್ಯಕ್ತಿ ಚೆಲುವರಾಜು ದೂರು ನೀಡಿದ್ದು, “ನೀವು ಕೀಳು ಜಾತಿಯವರು. ನಮ್ಮ ಅಂಗಡಿಯ ಮುಂದೆ ಹೋದರೆ ಮೈಲಿಗೆಯಾಗುತ್ತದೆ. ಇಲ್ಲಿ ಹೋಗಬೇಡಿ ಎಂದು ಬಸಪ್ಪ ಮತ್ತು ರೂಪಾ ನಮ್ಮನ್ನು ಅಡ್ಡಗಟ್ಟಿದರು. ಅವ್ಯಾಚ್ಯ ಪದಗಳಿಂದ ನಿಂದಿಸಿ, ಕೈಗಳಿಂದ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ನನ್ನ ಹೆಂಡತಿಯನ್ನು ಅಶ್ಲೀಲವಾಗಿ ಬೈದರು. ನನ್ನ ಹೆಂಡತಿಯ ಜುಟ್ಟನ್ನು ಹಿಡಿದು ಎಳೆದಾಡಿ ಕಬ್ಬಿಣದ ಸಲಾಕೆಯಿಂದ ತಲೆಯ ಮೇಲೆ ಹೊಡೆದು ರಕ್ತ ಬರುವಂತೆ ಗಾಯಗೊಳಿಸಿದರು. ನಂತರ ಆಕೆಯ ಬಟ್ಟೆಯನ್ನು ಹರಿದುಹಾಕಿದ ಬಸಪ್ಪ ಅವಮಾನವನ್ನು ಮಾಡಿದ್ದಾನೆ” ಎಂದು ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಗೋವಾ BJPಗೆ ಭಾರಿ ಮುಖಭಂಗ: ಒಂದೇ ದಿನದಲ್ಲಿ ಇಬ್ಬರು ಶಾಸಕರು ರಾಜೀನಾಮೆ!

“ನನ್ನ ಹೆಂಡತಿಯನ್ನು ಬಿಡಿಸಿಕೊಳ್ಳಲು ಹೋದ ನನಗೂ ಬಸಪ್ಪನು ದೊಣ್ಣೆಯಿಂದ ಹೊಡೆದು ನನ್ನ ಅಂಗಿಯನ್ನು ಹರಿದುಹಾಕಿ ಕಾಲಿನಿಂದ ತುಳಿದನು. ನನ್ನ ಹೆಂಡತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿ ಬಸಪ್ಪ ಆಕೆಯನ್ನು ಎಳೆದಾಡಿ ಬಟ್ಟೆಯನ್ನು ಹರಿದುಹಾಕಿದ್ದಾನೆ. ಅಷ್ಟರಲ್ಲಿ ಗ್ರಾಮದ ಮುಖಂಡರು ಬಂದು ನಮ್ಮನ್ನು ರಕ್ಷಿಸಿದರು. ನನ್ನ ಹೆಂಡತಿಗೆ ಕೆ.ಆರ್‌.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ” ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

ಕೆ.ಆರ್‌.ಪೇಟೆಯಲ್ಲಿ ಹೆಚ್ಚುತ್ತಿರುವ ದಲಿತ ದೌರ್ಜನ್ಯ

ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಪದೇ ಪದೇ ಜಾತಿ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇತ್ತೀಚೆಗೆ ಇಲ್ಲಿನ ಹರಿಹರಪುರ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆಗಳಾಗಿದ್ದವು. ದಲಿತರು ದೇವಾಲಯ ಪ್ರವೇಶಿಸಿದ್ದಕ್ಕೆ ಸಂಬಂಧಿಸಿದಂತೆ ಸ್ಪಶ್ಯ ಜಾತಿಯವರು ಹಲ್ಲೆ ನಡೆಸಿದ್ದರು. 27 ಮಂದಿಯ ಮೇಲೆ ಪ್ರಕರಣ ದಾಖಲಾಗಿತ್ತು.

ಘಟನೆಯ ಬಳಿಕ ರಾಜೀ ಸಂಧಾನ ನಡೆಸಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನವೂ ನಡೆದಿತ್ತು. ಒಂದು ತಿಂಗಳ ಅವಧಿಯೊಳಗೆ ಮತ್ತೊಂದು ಜಾತಿ ದೌರ್ಜನ್ಯ ಪ್ರಕರಣ ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ದಾಖಲಾಗಿದೆ.

ಇದನ್ನೂ ಓದಿ:ಅಯೋಧ್ಯೆ- ದಲಿತ ಜಮೀನು ಲಪಟಾಯಿಸಿದ ಪ್ರಸಂಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

6 COMMENTS

  1. ಇಲ್ಲಿ ಸ್ಪಶ್ಯ ಅನ್ನೋದರ ಬದಲು ಅವರು ಯಾವ ಜಾತಿ ಅನ್ನೋದನ್ನ ತಿಳಿಸಿಬಿಡಿ… ಮುಂದಿನ ದಿನಗಳಲ್ಲಿ ತಮ್ಮ ಜಾತಿಯ ಮಾನ ಹೋಗುತ್ತದೆ ಅನ್ನೋ ಕಾರಣಕ್ಕಾದರೂ ಸ್ವಲ್ಪ ಈ ರೀತಿಯ ಘಟನೆಗಳು ಕಡಿಮೆಯಾಗಬಹುದು.. ಇಂತಹ ಜಾತಿ- ಮತಗಳ ಹುಚ್ಚು ಹಿಡಿದವರಿಗೆ ಅವರ ಹಾದಿಯಲ್ಲೇ ಅವರಿಗೆ ಬುದ್ಧಿ ಕಲಿಸಬೇಕು….

  2. ಮಂಡ್ಯ ಜಿಲ್ಲೆಯ ನ್ನು ಇನ್ನೂ ,ಮುಂದೆ ಜಾತಿ ದೌರ್ಜನ್ಯ ದ ಜಿಲ್ಲೆ ಎಂದರೆ ತಪ್ಪಾಗಲಾರದು, ಅಲ್ಲಿಯ ಜಾತಿ ತಾರತಮ್ಯ ನೋಡಿದರೆ ಅಲ್ಲಿಯ ಜನರು ಹೊಟ್ಟೆಗೆ ಅನ್ನದ ಬದಲು ನಾಯಿಯ ಮಲ ತಿಂದು ಬದುಕುತ್ತಿದ್ದಾರೆ ಎಂದು ಅನಿಸುತಿದೆ ಈ ಮಾತು ಜಾತಿ ತಾರತಮ್ಯ ಮಾಡುವವರಿಗೆ ಅನ್ವಯಿಸುತ್ತದೆ .

  3. ಜಾತ್ಯತೀತ ಪರಿಕಲ್ಪನೆಯ ಭಾರತದಲ್ಲಿ ಈ ಶತಮಾನದಲ್ಲಾದರೂ ಈ ದರಿದ್ರದ ಜಾತಿಯ ಕೊಚ್ಚೆ ಕೊಚ್ಚಿಹೋಗಲಿ.
    ಅನೇಕ ಅನಕ್ಷರಸ್ಥರೇ ಇಂತಹ ಜಾತಿ ಎಬೋಲಾದಿಂದ ಬಳಲುತ್ತಿದ್ದಾರೆ ಎನ್ನುವುದು ಮತ್ತೂ ವಿಪರ್ಯಾಸದ ಸಂಗತಿ.

  4. ಇಂತಹ ವಿಷಯಗಳು ಸಮಾಜಕ್ಕೆ ಮಾರಕ ಪೊಲೀಸ್ ವ್ಯವಸ್ಥೆ ಸರಿಯಾಗಿ ಕೆಲಸ ನಿರ್ವಹಿಸಿ ತಾಲ್ಲೂಕು ಜಿಲ್ಲಾಡಳಿತಗಳು ಕಾಯ್ದೆಯನ್ನು ಸರಿಯಾಗಿ ಅನುಷ್ಠಾನಗೊಳಿಸಿದರೆ ಎಲ್ಲಾ ಸರಿ ಹೋಗತ್ತೆ

  5. ಈ ಜನಕ್ಕೆ ಬುದ್ಧಿ ಜೀವಿಗಳು ಅಲ್ಲದೆ ಬುದ್ಧ ಬಸವ ರಂಹ ತತ್ವ ಉಪದೇಶ ಗಳು ಕಲ್ಲು ಬಂಡೆಗಳ ಮನಸ್ಸಿಗಳಿಗೆ ,ಹೃದಯಗಳಿಗೆ ತಟ್ಟುವುದಿಲ್ಲ ಇಲ್ಲಿ ಯೆ ಶಿಲೆಯಾಗಿ ಉಳಿದು ಕೂತು ಕೂಳುತ್ತಾರೊ?

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...