Homeಮುಖಪುಟಕೋವಿಡ್‌: ಫ್ರಾನ್ಸ್‌‌ನಲ್ಲಿ ಹೊಸ ತಳಿ ‘ಐಎಚ್‌ಯು’ ಪತ್ತೆ

ಕೋವಿಡ್‌: ಫ್ರಾನ್ಸ್‌‌ನಲ್ಲಿ ಹೊಸ ತಳಿ ‘ಐಎಚ್‌ಯು’ ಪತ್ತೆ

- Advertisement -
- Advertisement -

ಓಮಿಕ್ರಾನ್ ಕೋವಿಡ್ ರೂಪಾಂತರವು ಹರಡುತ್ತಿರುವ ಹಿನ್ನೆಲೆಯಲ್ಲಿ ಕಳವಳ ಹೆಚ್ಚಾಗಿದೆ. ಜಗತ್ತಿನಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ. ಒಮೈಕ್ರಾನ್‌ ಜೊತೆಗೆ ಹೊಸ ರೂಪಾಂತರವು ಇತ್ತೀಚೆಗೆ ಫ್ರಾನ್ಸ್‌ನಲ್ಲಿ ಪತ್ತೆಯಾಗಿರುವುದಾಗಿ ಸಂಶೋಧಕರು ಹೇಳಿದ್ದಾರೆ.

IHU ಎಂದು ಹೆಸರಿಸಲಾದ, B.1.640.2 ರೂಪಾಂತರವನ್ನು ಇನ್‌ಸ್ಟಿಟ್ಯೂಟ್ IHU ಮೆಡಿಟರೇನಿ ಇನ್‌ಫೆಕ್ಷನ್‌ನಲ್ಲಿನ ಶಿಕ್ಷಣ ತಜ್ಞರು ಕಂಡುಹಿಡಿದಿದ್ದಾರೆ. ಸಂಶೋಧಕರ ಪ್ರಕಾರ, ಹೊಸ ರೂಪಾಂತರವು 46 ರೂಪಾಂತರಗಳನ್ನು ಹೊಂದಿದೆ. ಇದು ಓಮಿಕ್ರಾನ್‌ಗಿಂತಲೂ ಹೆಚ್ಚು ರೂಪಾಂತರಗಳನ್ನು ಕಂಡಿದೆ.

ಹೊಸ ರೂಪಾಂತರವು ಕನಿಷ್ಠ 12 ಪ್ರಕರಣಗಳು ಮಾರ್ಸಿಲ್ಲೆಸ್ ಬಳಿ ವರದಿಯಾಗಿದೆ. B.1.640.2 ಅನ್ನು ಇತರ ದೇಶಗಳಲ್ಲಿ ಗುರುತಿಸಲಾಗಿಲ್ಲ. ಫ್ರಾನ್ಸ್‌ನ ವಿಜ್ಞಾನಿಗಳು ಒಮಿಕ್ರಾನ್ ರೂಪಾಂತರಕ್ಕಿಂತ ಹೆಚ್ಚಿನ ರೂಪಾಂತರಗಳೊಂದಿಗೆ ಕರೋನವೈರಸ್‌ನ ಹೊಸ ತಳಿಯಲ್ಲಿ ಗುರುತಿಸಿದ್ದಾರೆ.

“ಈ ಡೇಟಾವು SARS-CoV-2 ರೂಪಾಂತರಗಳ ಹೊರಹೊಮ್ಮುವಿಕೆಯ ಅನಿರೀಕ್ಷಿತತೆಗೆ ಮತ್ತೊಂದು ಉದಾಹರಣೆಯಾಗಿದೆ” ಎಂದು ಸಂಶೋಧಕರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಟ್ವೀಟ್ ಮಾಡಿ, ಹೊಸ ರೂಪಾಂತರಗಳು ಹೊರಹೊಮ್ಮುತ್ತಲೇ ಇರುತ್ತವೆ. ಆದರೆ ಅವುಗಳು ಹೆಚ್ಚು ಅಪಾಯಕಾರಿ ಎಂದು ಅರ್ಥವಲ್ಲ ಎಂದು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಲ್ಲಿ ಒಮೈಕ್ರಾನ್‌ ರೂಪಾಂತರವು ಪತ್ತೆಯಾಯಿತು. ಇದು 100ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ.

ರಾಜ್ಯದಲ್ಲಿ ಕೋವಿಡ್ ಹೆಚ್ಚಳ

ರಾಜ್ಯದಲ್ಲಿ ಒಂದೇ ದಿನ 2,479 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿರುವುದನ್ನು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು ಒಂದರಲ್ಲೇ 2,053 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.2.59 ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ಕಳೆದ ವರ್ಷ ಜುಲೈ 29ರಂದು ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 2 ಸಾವಿರದ ಗಡಿಯನ್ನು ದಾಟಿದ್ದವು.

ಆರೋಗ್ಯ ಸಚಿವರು ನೀಡಿರುವ ಮಾಹಿತಿಯ ಪ್ರಕಾರ ಇಂದು ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಹೊಸದಾಗಿ ಪತ್ತೆಯಾಗಿಲ್ಲ. ರಾಜ್ಯಾದ್ಯಂತ ಕೋವಿಡ್-19 ಸೋಂಕು ಹೆಚ್ಚು ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ಕಠಿಣ ನಿರ್ಬಂಧಗಳು ಜಾರಿಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.


ಇದನ್ನೂ ಓದಿರಿ: ಕಥುವಾ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಅಪರಾಧಿ ಬಿಡುಗಡೆ, ಆತಂಕದಲ್ಲಿ ಸಂತ್ರಸ್ತ ಕುಟುಂಬ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...