Homeಮುಖಪುಟಅಗ್ನಿಪಥ : ವರುಣ್ ಗಾಂಧಿ ಪ್ರತಿದಿನ ವೈಯಕ್ತಿಕ ಅಭಿಪ್ರಾಯ ನೀಡಲು ಇಷ್ಟಪಡುತ್ತಾರೆ ಎಂದ ಕೇಂದ್ರ ಸಚಿವ

ಅಗ್ನಿಪಥ : ವರುಣ್ ಗಾಂಧಿ ಪ್ರತಿದಿನ ವೈಯಕ್ತಿಕ ಅಭಿಪ್ರಾಯ ನೀಡಲು ಇಷ್ಟಪಡುತ್ತಾರೆ ಎಂದ ಕೇಂದ್ರ ಸಚಿವ

- Advertisement -
- Advertisement -

ಅಗ್ನಿಪಥ ಯೋಜನೆ ಘೋಷಣೆಯಾದಾಗಿನಿಂದ ಬಿಜೆಪಿ ಸರ್ಕಾರದ ವಿರುದ್ಧವೇ ಪ್ರಶ್ನೆ ಮಾಡುತ್ತಿರುವ ಬಿಜೆಪಿ ಲೋಕಸಭೆಯ ಸಂಸದ ವರುಣ್ ಗಾಂಧಿ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ “ಅವರು ಪ್ರತಿದಿನವೂ ವೈಯಕ್ತಿಕ ಅಭಿಪ್ರಾಯಗಳನ್ನು ನೀಡಲು ಇಷ್ಟಪಡುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಮಂಗಳವಾರ ತಮ್ಮ ಪಕ್ಷದ ಸಹೋದ್ಯೋಗಿ, ಸಂಸದ ವರುಣ್ ಗಾಂಧಿ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಅಗ್ನಿಪಥ್ ಬಗ್ಗೆ ಅವರು ನೀಡುವ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.

ಬಿಜೆಪಿಯ ಹಲವು ಕಾನೂನುಗಳು ಮತ್ತು ಯೋಚನೆಗಳನ್ನು ಸಂಸದ ವರುಣ್‌ ಗಾಂಧಿ ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ವಿವಾದಿತ ಕೃಷಿ ಕಾನೂನುಗಳು, ಲಖೀಂಪುರ್‌ ಖೇರಿ ಹತ್ಯಾಕಾಂಡವನ್ನು ಖಂಡಿಸಿ ಮಾತನಾಡಿದ್ದರು. ಈಗ ಅಗ್ನಿವೀರರಿಗೆ ನಾಲ್ಕು ವರ್ಷಗಳ ನಂತರ ಪಿಂಚಣಿ ನೀಡದ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: ’ಅಗ್ನಿಪಥ್’ ಯೋಜನೆ; ’ಎಕ್ಸೆಕ್ಯುಟಿವ್’ ಆಡಳಿತ ಎಂಬುದು ಸರ್ವಾಧಿಕಾರದ ’ಪ್ರಾಕ್ಸಿ’

ಕೇಂದ್ರದ ಅಗ್ನಿಪಥ ಸೇನಾ ನೇಮಕಾತಿ ಯೋಜನೆಯಲ್ಲಿ ಆಯ್ಕೆಯಾದವರಿಗೆ ನಾಲ್ಕು ವರ್ಷಗಳ ಅಧಿಕಾರಾವಧಿ ಮುಗಿದ ನಂತರ ಪಿಂಚಣಿ ನೀಡುವುದಿಲ್ಲ ಎಂದಾದರೆ ಚುನಾಯಿತ ಪ್ರತಿನಿಧಿಗಳಿಗೆ ನಿವೃತ್ತಿಯ ನಂತರ ನೀಡಲಾಗುವ ಸವಲತ್ತುಗಳು ಏಕೆ ಬೇಕು ಎಂದು ವರುಣ್ ಗಾಂಧಿ ಕಳೆದ ವಾರ ಪ್ರಶ್ನಿಸಿದ್ದರು.

ವರುಣ್ ಗಾಂಧಿಯವರ ಹೇಳಿಕೆಗಳ ಬಗೆಗಿನ ಪ್ರಶ್ನೆಗೆ ಉತ್ತರಿಸಿರುವ ತೋಮರ್, “ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಏಕೆಂದರೆ ಅವರು ಪ್ರತಿದಿನ ವೈಯಕ್ತಿಕ ಅಭಿಪ್ರಾಯಗಳನ್ನು ನೀಡಲು ಇಷ್ಟಪಡುತ್ತಾರೆ” ಎಂದು ಹೇಳಿದ್ದಾರೆ.

 

“ಅಲ್ಪಾವಧಿ ಸೇವೆ ಸಲ್ಲಿಸಿದ ಅಗ್ನಿವೀರ್ ಅವರಿಗೆ ಪಿಂಚಣಿಗೆ ಅರ್ಹರಲ್ಲ, ಹೀಗಿರುವಾಗ ಜನಪ್ರತಿನಿಧಿಗಳಿಗೆ ಏಕೆ ಈ ‘ಅನುಕೂಲಗಳು’? ರಾಷ್ಟ್ರ ರಕ್ಷಕರಿಗೆ ಪಿಂಚಣಿ ಹಕ್ಕು ಇಲ್ಲದಿದ್ದರೆ, ನಾನು ನನ್ನ ಸ್ವಂತ ಪಿಂಚಣಿಯನ್ನು ತ್ಯಜಿಸಲು ಸಿದ್ಧನಿದ್ದೇನೆ. ನಾವು ಶಾಸಕರು/ಸಂಸದರು ನಮ್ಮ ಪಿಂಚಣಿಯನ್ನು ಬಿಟ್ಟು ಅಗ್ನಿವೀರರಿಗೆ ಪಿಂಚಣಿ ಸಿಗುವಂತೆ ಮಾಡಲು ಸಾಧ್ಯವಿಲ್ಲವೇ..?” ಎಂದು ಪ್ರಶ್ನಿಸಿದ್ದರು.

ಜೂನ್ 14 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಮತ್ತು ಮೂವರು ಸೇನಾ ಮುಖ್ಯಸ್ಥರು ಕೇಂದ್ರ ಸರ್ಕಾರದ ನೂತನ ’ಅಗ್ನಿಪಥ್’ ಎಂಬ ರಕ್ಷಣಾ ನೇಮಕಾತಿಯ ಯೋಜನೆ ಘೋಷಿಸಿದ್ದಾರೆ. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗೆ ನಾಲ್ಕು ವರ್ಷಗಳ ಅಲ್ಪ ಅವಧಿಗೆ ಈ ವರ್ಷ ’ಅಗ್ನಿವೀರ್’ ಹೆಸರಿನ ಯೋಜನೆಯಡಿ 46,000 ಯುವ ಸೈನಿಕರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. 17.5ರಿಂದ 21 ವರ್ಷದವರೆಗಿನ ಬುದ್ಧಿವಂತ, ತಂತ್ರಜ್ಞಾನ ತಿಳಿವಳಿಕೆಯುಳ್ಳ ಯುವಜನರು ಸೇನೆಗೆ ಸೇರ್ಪಡೆಯಾಗುವ ಮೂಲಕ ಭಾರತೀಯ ಸೇನೆಗೆ ತಾರುಣ್ಯ ತಂದುಕೊಡಲಿದ್ದಾರೆ ಎಂದಿದ್ದಾರೆ.

ಸದ್ಯದ ಭಾರತೀಯ ಸೈನಿಕರ ಸರಾಸರಿ ವಯಸ್ಸು 32 ವರ್ಷ ಇದ್ದು, ಅದನ್ನು 24-26 ವರ್ಷಕ್ಕೆ ಇಳಿಸುವ ಮತ್ತು ಪಿಂಚಣಿ-ಗ್ರಾಚ್ಯುಟಿ, ಸಂಬಳ ಸೇರಿದಂತೆ ಇತರ ಭತ್ಯೆಗಳನ್ನು ಕಡಿತಗೊಳಿಸುವುದು ಈ ಯೋಜನೆಯ ಗುರಿ ಎಂದು ಸರ್ಕಾರ ಹೇಳಿಕೊಂಡಿದೆ.


ಇದನ್ನೂ ಓದಿ: ಅಗ್ನಿಪಥ್‌ ಹಿಂಪಡೆಯುವ ಪ್ರಶ್ನೆಯೆ ಇಲ್ಲ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ ಜನರ ಮನಸ್ಸಿನಲ್ಲಿ ಅಪನಂಬಿಕೆ ಸೃಷ್ಟಿಸಿದೆ: ಅಖಿಲೇಶ್ ಯಾದವ್

0
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ ಬಳಕೆಗೆ ಆಗ್ರಹಿಸಿದ್ದು, ಇವಿಎಂಗಳನ್ನು ನೇರವಾಗಿ ಉಲ್ಲೇಖಿಸದೆ ಈ ಯಂತ್ರಗಳು ಮತ್ತು ಮತದಾನದ ಫಲಿತಾಂಶಗಳು ಜನರ ಮನಸ್ಸಿನಲ್ಲಿ ಅಪನಂಬಿಕೆಯ ಭಾವನೆಯನ್ನು ಮೂಡಿಸಿವೆ...