Homeಮುಖಪುಟಮಧ್ಯಪ್ರದೇಶ: ಫಲಿತಾಂಶಕ್ಕೂ ಮುನ್ನವೇ ಕಾಣಿಸಿಕೊಂಡ 'ನೂತನ ಸಿಎಂ ಕಮಲ್‌ನಾಥ್' ಪೋಸ್ಟರ್

ಮಧ್ಯಪ್ರದೇಶ: ಫಲಿತಾಂಶಕ್ಕೂ ಮುನ್ನವೇ ಕಾಣಿಸಿಕೊಂಡ ‘ನೂತನ ಸಿಎಂ ಕಮಲ್‌ನಾಥ್’ ಪೋಸ್ಟರ್

- Advertisement -
- Advertisement -

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳೆ (ಡಿ.2) ಪ್ರಕಟಗೊಳ್ಳಲಿದ್ದು, ಅದಕ್ಕೂ ಮುನ್ನವೇ ಮುಂದಿನ ಮುಖ್ಯಮಂತ್ರಿ ಕಮಲ್ ನಾಥ್ ಎಂಬ ಪೋಸ್ಟರ್‌ ಕಾಣಿಸಿಕೊಂಡಿದೆ.

ಭೋಪಾಲ್‌ನ ರಾಜ್ಯ ಕಾಂಗ್ರೆಸ್‌ ಕಚೇರಿ ಬಳಿ ಮಾಜಿ ಸಿಎಂ ಕಮಲ್‌ ನಾಥ್‌ ಅವರನ್ನು ನೂತನ ಸಿಎಂ ಎಂದು ಬಿಂಬಿಸಿ ಪೋಸ್ಟರ್‌ ಹಾಕಲಾಗಿದೆ. ಪೋಸ್ಟರ್‌ ಕೆಳಗಡೆ, ಅಬ್ಬಾಸ್ ಹಫೀಝ್ ಮಧ್ಯಪ್ರದೇಶ ಕಾಂಗ್ರೆಸ್‌ ಮಾಧ್ಯಮ ವಿಭಾಗ ಎಂದು ಬರೆಯಲಾಗಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಯಾರನ್ನೂ ಸಿಎಂ ಅಭ್ಯರ್ಥಿಯಾಗಿ ಚುನಾವಣಾ ಪೂರ್ವ ಘೋಷಣೆ ಮಾಡಿಲ್ಲ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಮತದಾನ ನವೆಂಬರ್ 17ರಂದು ನಡೆದಿದ್ದು, ನಾಳೆ (ಡಿ.3) ಫಲಿತಾಂಶ ಪ್ರಕಟಗೊಳ್ಳಲಿದೆ. 230 ವಿಧಾನಸಭಾ ಸ್ಥಾನಗಳ ಪೈಕಿ ಯಾವುದೇ ಪಕ್ಷ ಸರ್ಕಾರ ರಚಿಸಬೇಕಾದರೆ 116 ಸ್ಥಾನಗಳ ಅಗತ್ಯವಿದೆ. ಮತದಾನೋತ್ತರ ಸಮೀಕ್ಷೆಗಳು ಮಧ್ಯಪ್ರದೇಶದಲ್ಲಿ ಆಢಳಿತರೂಡ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಳಿದೆ ಎಂದಿದೆ.

ಕಾಂಗ್ರೆಸ್‌ ಗೆದ್ದರೆ ಸಿಎಂ ಆಗುವವರಲ್ಲಿ ಕಮಲ್ ನಾಥ್ ಮುಂಚೂಣಿಯಲ್ಲಿದ್ದಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿದರೆ ಶಿವರಾಜ್ ಸಿಂಗ್ ಚೌಹಾಣ್ ಪುನರಾಯ್ಕೆಯಾಗಬಹುದು ಎನ್ನಲಾಗ್ತಿದೆ.

ತೆಲಂಗಾಣದಲ್ಲೂ ಸಂಭ್ರಮಾಚರಣೆ :

ತೆಲಂಗಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಕೂಡ ಹೊರ ಬೀಳಲಿದೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೆದರೂ, ದೇಶದ ಚಿತ್ತ ತೆಲಂಗಾಣದತ್ತ ನೆಟ್ಟಿದೆ. ಮತದಾನೋತ್ತ ಸಮೀಕ್ಷೆಗಳು ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸುವುದು ಖಂಡಿತ ಎಂದಿವೆ. ಹಾಗಾಗಿ, ಕಾಂಗ್ರೆಸ್‌ ಕಾರ್ಯಕರ್ತರು ಫಲಿತಾಂಶಕ್ಕೂ ಮೊದಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇಂದು ಹೈದರಾಬಾದ್‌ನ ಗಾಂಧಿ ಭವನದ ತೆಲಂಗಾಣ ರಾಜ್ಯ ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿಕೆ ಮಾಡಿದ್ದಾರೆ.

ಇದನ್ನೂ ಓದಿ : 10 ವರ್ಷಗಳಲ್ಲಿ ಶೇ.50 ಮಹಿಳಾ ಮುಖ್ಯಮಂತ್ರಿ ಕಾಂಗ್ರೆಸ್ ಗುರಿ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಟಿಕೆಟ್‌ ಕೈತಪ್ಪಿದಕ್ಕೆ ‘ಮತದಾನ’ ಮಾಡದ ಬಿಜೆಪಿ ಸಂಸದ: ಶೋಕಾಸ್ ನೋಟಿಸ್ ಜಾರಿ

0
ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಜಯಂತ್ ಸಿನ್ಹಾ ಮತದಾನ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಬಿಜೆಪಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದು, ಎರಡು ದಿನಗಳಲ್ಲಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಜಾರ್ಖಂಡ್‌ನ...