Homeಮುಖಪುಟ10 ವರ್ಷಗಳಲ್ಲಿ ಶೇ.50 ಮಹಿಳಾ ಮುಖ್ಯಮಂತ್ರಿ ಕಾಂಗ್ರೆಸ್ ಗುರಿ: ರಾಹುಲ್ ಗಾಂಧಿ

10 ವರ್ಷಗಳಲ್ಲಿ ಶೇ.50 ಮಹಿಳಾ ಮುಖ್ಯಮಂತ್ರಿ ಕಾಂಗ್ರೆಸ್ ಗುರಿ: ರಾಹುಲ್ ಗಾಂಧಿ

- Advertisement -
- Advertisement -

ಮಹಿಳೆಯರಿಗೆ ಆದ್ಯತೆ ನೀಡಿ, ಮುಂದಿನ 10 ವರ್ಷಗಳಲ್ಲಿ ಶೇ.50ರಷ್ಟು ಮಹಿಳೆಯರನ್ನು ಮುಖ್ಯಮಂತ್ರಿ ಮಾಡುವ ಗುರಿಯನ್ನು ಕಾಂಗ್ರೆಸ್‌ ಹೊಂದಿದೆ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕೇರಳದ ಕೊಚ್ಚಿಯಲ್ಲಿ ಶುಕ್ರವಾರ ರಾಜ್ಯ ಮಹಿಳಾ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಜವಬ್ದಾರಿ ನಿಭಾಯಿಸಬಲ್ಲ ಸಾಕಷ್ಟು ಮಹಿಳಾ ನಾಯಕರಿದ್ದಾರೆ ಎಂದಿದ್ದಾರೆ.

ಜಾತಿ, ಭಾಷೆ, ಧರ್ಮ ಸೇರಿದಂತೆ ಸಮಾಜದಲ್ಲಿ ಅನೇಕ ರೀತಿಯ ತಾರತಮ್ಯಗಳಿವೆ. ಆದರೆ, ಇವೆಲ್ಲಕ್ಕಿಂತ ದೊಡ್ಡ ತಾರತಮತ್ಯವೆಂದರೆ ಮಹಿಳಾ ತಾರತಮ್ಯ. ಕಾಂಗ್ರೆಸ್ ಮುಖ್ಯವಾಗಿ ಮಹಿಳೆಯರನ್ನು ಆಡಳಿತ ವ್ಯವಸ್ಥೆಗೆ ಕರೆ ತರಲು ಪ್ರಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ನಮಗೆ ಮಹಿಳಾ ಮುಖ್ಯಮಂತ್ರಿ ಬೇಕಾದರೆ, ನಾವು ವಾರ್ಡ್‌ ಮಟ್ಟದಲ್ಲಿ ನೂರಾರು ಮಹಿಳಾ ನಾಯಕಿಯರನ್ನು ಹೊಂದಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮಹಿಳೆಯರನ್ನು ಬೆಂಬಲಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಂತಹ ಹಲವು ಕಾರ್ಯಕ್ರಮಗಳನ್ನು ಪರಿಚಯಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಮಹಿಳೆಯರನ್ನು ಪರಿಗಣಿಸುವ ರೀತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿಜವಾದ ಪೈಪೋಟಿಯಿದೆ. ಈ ವಿಚಾರದಲ್ಲಿ ನಾನು ಬಿಜೆಪಿಯ ಮಾತೃ ಸಂಸ್ಥೆ ಆರೆಸ್ಸೆಸ್‌ನ್ನು ದೂರಿದರೆ, ಅವರು ನಮ್ಮಲ್ಲೂ ಮಹಿಳಾ ಸಂಘಟನೆಗಳಿವೆ ಎನ್ನುತ್ತಾರೆ. ಆದರೆ, ಆರೆಸ್ಸೆಸ್‌ನಲ್ಲಿ ಅಧಿಕಾರ ನಡೆಸಲು ಮಹಿಳೆಯರಿಗೆ ಅವಕಾಶ ಇದೆಯಾ? ಖಂಡಿತ ಇಲ್ಲ. ಅದೊಂದು ಶುದ್ಧ ಪುರುಷರ ಸಂಘಟನೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಮಹಿಳೆರಿಗೆ ಸ್ವಾತಂತ್ರ್ಯ ಕೊಡಲು ಬಯಸುತ್ತದೆ. ಆದರೆ, ಬಿಜೆಪಿ ಮಹಿಳೆಯರು ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಇರಬೇಕು ಎಂಬ ಕಟ್ಟಳೆಗಳನ್ನು ವಿಧಿಸುತ್ತದೆ. ಕಾಂಗ್ರೆಸ್ ದೇಶಕ್ಕೆ ಅನೇಕ ಮಹಿಳಾ ನಾಯಕಿಯರನ್ನು ಸಮರ್ಪಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ :ಮಹಿಳೆಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬಹುದೇ? ಸುಪ್ರೀಂ ಕೋರ್ಟ್‌ನಿಂದ ಪರಿಶೀಲನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

10 ವರ್ಷ ಅಧಿಕಾರದಲ್ಲಿದ್ದು, ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿದ್ದರೆ ಅವರು ಮತ್ತೆ ಅಧಿಕಾರಕ್ಕೆ ಬರಬಾರದು:...

0
10 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಕೇಸರಿ ಪಕ್ಷವು 'ಹಿಂದೂಗಳು ಅಪಾಯದಲ್ಲಿದ್ದಾರೆ' (ಹಿಂದೂ ಖತ್ರೆ ಮೇ) ಎಂದು ಹೇಳುವುದನ್ನು ಮುಂದುವರಿಸಿದರೆ, ಪಕ್ಷ ಅಧಿಕಾರಕ್ಕೆ ಮರಳುವ ಅಗತ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ, ಅಂತಹ ಪಕ್ಷ ಅಧಿಕಾರಕ್ಕೆ...