Homeಮುಖಪುಟಅಸ್ಸಾಂನ ಸಿಬ್ಸಾಗರ್‌ನಿಂದ ಸ್ಪರ್ಧಿಸಲಿರುವ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯ್

ಅಸ್ಸಾಂನ ಸಿಬ್ಸಾಗರ್‌ನಿಂದ ಸ್ಪರ್ಧಿಸಲಿರುವ ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯ್

- Advertisement -
- Advertisement -

ಸಿಎಎ ಹೋರಾಟದ ಸಮಯದಲ್ಲಿ ದೇಶದ್ರೋಹಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹೋರಾಟಗಾರ ಅಖಿಲ್ ಗೊಗೊಯ್ ಅವರು ಅಸ್ಸಾಂನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಬ್ಸಾಗರ್‌ನಿಂದ ಹೊಸದಾಗಿ ರಚನೆಯಾಗಿರುವ ರೈಜೋರ್ ದಳ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ರಾಜ್ಯದಲ್ಲಿ ನಡೆಯಲಿರುವ ಮೊದಲ ಎರಡು ಹಂತಗಳಲ್ಲಿ ಪಕ್ಷವು ಕಣಕ್ಕಿಳಿಸಿದ 17 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ರೈಜೋರ್ ದಳ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಭಾಸ್ಕೊ ಡಿ ಸೈಕಿಯಾ, ಪಕ್ಷದ ಅಧ್ಯಕ್ಷರಾಗಿರುವ ಅಖಿಲ್ ಗೊಗೊಯ್ ಅವರು ಉತ್ತರ ಅಸ್ಸಾಂನ ಸಿಬ್ಸಾಗರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೇಳಿದ್ದೇನೆ: ಪ್ರಮೋದ್ ಮುತಾಲಿಕ್

ಮೊದಲ ಹಂತದಲ್ಲಿ ಪಕ್ಷವು 12 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದ್ದು, ಎರಡನೇ ಹಂತದಲ್ಲಿ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಲಿದೆ. ಆದರೆ ಉಳಿದಿರುವ ಇನ್ನೂ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಘೋಷಿಸಲಿಲ್ಲ. “ಮತಗಳು ವಿಭಜನೆ ಆಗಬಾರದು ಎಂಬ ಉದ್ದೇಶದಿಂದ ನಾವು ಕೇವಲ 17 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ” ಎಂದು ಭಾಸ್ಕೊ ಸೈಕಿಯಾ ಹೇಳಿದ್ದಾರೆ.

ಮೊದಲ ಹಂತದಲ್ಲಿ, ಸಿಬ್ಸಾಗರ್ ಜೊತೆಗೆ, ಪಕ್ಷವು ಚಾಬುವಾ, ಮೊರನ್, ಮಹ್ಮಾರಾ, ಟಿಯೋಕ್, ಬೊಕಾಖಾಟ್, ರುಪೋಹಿಹತ್, ಧಿಂಗ್, ತೇಜ್ಪುರ್, ಬಿಹಪುರಿಯಾ ಮತ್ತು ರಂಗಪರದಿಂದ ಸ್ಪರ್ಧಿಸಲಿದೆ. ಎರಡನೇ ಹಂತದಲ್ಲಿ ಅದು ರಾಹಾ, ರಂಗಿಯಾ, ಕಮಲ್‌ಪುರ, ದಲ್ಗಾಂವ್ ಮತ್ತು ಜಮುನಮುಖ್‌ನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

2019 ರ ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಅಖಿಲ್ ಗೊಗೊಯ್ ವಿರುದ್ಧ ಕಠಿಣ ಯುಎಪಿಎ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಂದಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

126 ಸದಸ್ಯರ ಅಸ್ಸಾಂ ವಿಧಾನಸಭೆಯ ಚುನಾವಣೆ ಮಾರ್ಚ್ 27 ರಿಂದ ಮೂರು ಹಂತಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: ‘ಭಾರತೀಯ ಸಂಪ್ರದಾಯಕ್ಕೆ ಸೆಕ್ಯುಲರಿಸಂ ಒಂದು ಬೆದರಿಕೆ’: ಯೋಗಿ ಆದಿತ್ಯನಾಥ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...