Homeರಾಷ್ಟ್ರೀಯಲಿಂಗ ತಾರತಮ್ಯವಿಲ್ಲದೆ ಎಲ್ಲಾ ಶಾಲಾ ಶಿಕ್ಷಕರನ್ನು ‘ಟೀಚರ್‌‌’ ಎಂದು ಸಂಬೋಧಿಸಬೇಕು: ಕೇರಳ ಮಕ್ಕಳ ಹಕ್ಕು ಆಯೋಗ

ಲಿಂಗ ತಾರತಮ್ಯವಿಲ್ಲದೆ ಎಲ್ಲಾ ಶಾಲಾ ಶಿಕ್ಷಕರನ್ನು ‘ಟೀಚರ್‌‌’ ಎಂದು ಸಂಬೋಧಿಸಬೇಕು: ಕೇರಳ ಮಕ್ಕಳ ಹಕ್ಕು ಆಯೋಗ

‘ಸರ್’ ಮತ್ತು ‘ಮೇಡಂ’ ಎಂಬಂತಹ ಪದಗಳು ‘ಟೀಚರ್‌’ ಎಂಬ ಪದಕ್ಕೆ ಸಮಾನವಾಗುವುದಿಲ್ಲ ಎಂದು ಆಯೋಗದ ಆದೇಶವು ಹೇಳಿದೆ

- Advertisement -
- Advertisement -

ಗಂಡು, ಹೆಣ್ಣು ಅಥವಾ ಟ್ರಾನ್ಸ್‌ಜೆಂಡರ್‌‌ ಹೀಗೆ ಯಾವುದೆ ಲಿಂಗತಾರತಮ್ಯವಿಲ್ಲದೆ ಎಲ್ಲಾ ಶಾಲಾ ಶಿಕ್ಷಕರನ್ನು ‘ಟೀಚರ್‌‌’ ಎಂದು ಸಂಬೋಧಿಸಬೇಕು ಎಂದು ಕೇರಳ ಮಕ್ಕಳ ಹಕ್ಕುಗಳ ಆಯೋಗ ಆದೇಶಿಸಿದೆ. ಶಿಕ್ಷಕರನ್ನು ಗೌರವಯುತವಾಗಿ ಸಂಬೋಧಿಸಲು ಇದು ಸೂಕ್ತ ಪದವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಅಧ್ಯಕ್ಷ ಕೆ.ವಿ. ಮನೋಜಕುಮಾರ್ ಮತ್ತು ಸದಸ್ಯ ಸಿ. ವಿಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ನೀಡಿರುವ ಆದೇಶದ ಕುರಿತು ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೆ ಮಾಹಿತಿ ನೀಡುವಂತೆ ಆಯೋಗವು ಸಾಮಾನ್ಯ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದು ಅತ್ಯಂತ ಸ್ವಾಗತಾರ್ಹ ತೀರ್ಮಾನವಾಗಿದೆ ಎಂದು ಪಟ್ಟೋಮ್‌ನ ಸರ್ಕಾರಿ ಮಾದರಿ ಬಾಲಕಿಯರ ಶಾಲೆಯ ಶಿಕ್ಷಕಿ ರತಿ ಕಿರಣ್ ಅಭಿಪ್ರಾಯಪಟ್ಟಿದ್ದಾರೆ. “ಇದು ಲಿಂಗ ತಾರತಮ್ಯವಿಲ್ಲದೆ ಎಲ್ಲಾ ಶಿಕ್ಷಕರನ್ನು ಸಂಬೋಧಿಸುವ ಸಾಮಾನ್ಯ ಪದವಾಗಿದೆ. ಕೆಲವು ಶಾಲೆಗಳ ಸಮವಸ್ತ್ರವನ್ನು ಲಿಂಗ ತಟಸ್ಥಗೊಳಿಸುವಲ್ಲಿ ನಾವು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದೇವೆ. ಹುಡುಗಿಯರ ಸ್ಕರ್ಟ್ ಮತ್ತು ಬ್ಲೌಸ್‌ಗಳ ಬದಲಿಗೆ ಹೆಚ್ಚು ಆರಾಮದಾಯಕ ಶರ್ಟ್‌ ಮತ್ತು ಪ್ಯಾಂಟ್‌ಗಳಿಗೆ ಬದಲಾಯಿಸಲು ಅವಕಾಶ ನೀಡಿದ್ದೇವೆ. ಇದು ಲಿಂಗ ತಾರತಮ್ಯವನ್ನು ಹೋಗಲಾಡಿಸುವ ಮತ್ತೊಂದು ಹೆಜ್ಜೆಯಾಗಿದೆ” ಎಂದು ಅವರು ಹೇಳಿದ್ದಾರೆ.

ನಾವು ಎಲ್ಲಾ ವೈದ್ಯರನ್ನು ಡಾಕ್ಟರ್‌‌ ಎಂದು ಕರೆಯಯುತ್ತೇವೆ ಹಾಗೆಯೆ ವೃತ್ತಿಯಿಂದ ಶಿಕ್ಷಕರನ್ನು ನಾವು ಟೀಚರ್‌‌ ಎಂದು ಯಾಕೆ ಕರೆಯಬಾರದು ಎಂದು ಅವರು ಕೇಳಿದ್ದಾರೆ.

ಎಲ್ಲಾ ಲಿಂಗಗಳಿಗೆ ಸೇರಿದ ಶಿಕ್ಷಕರಿಗೆ ‘ಟೀಚರ್‌‌’ ಎಂಬ ಸಾಮಾನ್ಯ ಪದವು ಉತ್ತಮವಾಗಿದೆ ಎಂದು ಕೋಝಿಕ್ಕೋಡ್‌ನ ಮೆಪ್ಪಯೂರ್‌ನಲ್ಲಿರುವ ಸರ್ಕಾರಿ ವೊಕೇಶನಲ್ ಶಾಲೆಯ ಶಿಕ್ಷಕ ದಿನೇಶ ಅಭಿಪ್ರಾಯಪಟ್ಟಿದ್ದಾರೆ. “ನಾನು ನನ್ನ ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಪರಿಗಣಿಸುವ ಶಿಕ್ಷಕ. ಅವರು ನನ್ನನ್ನು ಹೆಸರಿಟ್ಟು ಕರೆದರೆ ಕೂಡಾ ನನಗೆ ಅದು ವಿಷಯವಲ್ಲ. ಆದರೆ ಇದು ಸ್ವಾಗತಾರ್ಹ ಕ್ರಮವಾಗಿದೆ. ಶಿಕ್ಷಕರು ಪುರುಷ ಅಥವಾ ಮಹಿಳೆ ಅಥವಾ ಟ್ರಾನ್ಸ್‌ಜೆಂಡರ್‌ ಆಗಿರಲಿ ‘ಟೀಚರ್‌’ ಎಂಬ ಸಾಮಾನ್ಯ ಪದ ಅವರಿಗಿದೆ” ಎಂದು ಅವರು ಹೇಳಿದ್ದಾರೆ.

ಹೊಸ ಸಮಾಜಗಳನ್ನು ರಚಿಸಲು ಶಿಕ್ಷಕರು ದಾರಿ ಮಾಡಿಕೊಡುತ್ತಾರೆ. ‘ಸರ್’ ಮತ್ತು ‘ಮೇಡಂ’ ಎಂಬಂತಹ ಪದಗಳು ‘ಟೀಚರ್‌’ ಎಂಬ ಪದಕ್ಕೆ ಸಮಾನವಾಗುವುದಿಲ್ಲ ಎಂದು ಆಯೋಗದ ಆದೇಶವು ಹೇಳಿದೆ. ‘ಟೀಚರ್‌’ ಎಂಬ ಪದವನ್ನು ಬಳಸುವುದರಿಂದ ಸಮಾನತೆಯನ್ನು ಕಾಪಾಡಿಕೊಳ್ಳಲು ಮತ್ತು ಮಕ್ಕಳಿಗೆ ಹತ್ತಿರವಾಗಲು ಸಾಧ್ಯವಾಗುತ್ತದೆ. ಶಿಫಾರಸುಗಳನ್ನು ಆಧರಿಸಿದ ಕ್ರಿಯಾ ವರದಿಯನ್ನು ಎರಡು ತಿಂಗಳಲ್ಲಿ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ: ಮೋದಿ ಹುಬ್ಬಳ್ಳಿ ಭೇಟಿ: ಪ್ರಾಂಶುಪಾಲರಿಗೆ 100 ವಿದ್ಯಾರ್ಥಿಗಳನ್ನು ಕರೆತರುವಂತೆ ಟಾರ್ಗೆಟ್‌ ನೀಡಿದ ಶಿಕ್ಷಣ ಇಲಾಖೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದ್ವೇಷ’ ಬಿತ್ತುವ ಮೂರನೇ ಅನಿಮೇಟೆಡ್ ವೀಡಿಯೊವನ್ನು ಹಂಚಿಕೊಂಡ ಬಿಜೆಪಿ: ಮೌನವಹಿಸಿರುವ ಚು. ಆಯೋಗ

0
ಲೋಕಸಭೆಯ ಹೊಸ್ತಿಲಲ್ಲಿ ಬಿಜೆಪಿ ಮೀಸಲಾತಿ ಬಗ್ಗೆ ಮುಸ್ಲಿಮರು ಮತ್ತು ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡು ದ್ವೇಷ ಬಿತ್ತುವ ಮೂರನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಚು.ಅಯೋಗ ಮಾತ್ರ  ಮೌನವಾಗಿರುವುದು ಕಂಡು ಬಂದಿದೆ. ಕರ್ನಾಟಕ ಬಿಜೆಪಿ, ಮೀಸಲಾತಿ...