Homeಮುಖಪುಟದೇಶದ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ ಆರೋಪ: ಇನ್‌ಸ್ಟಾಗ್ರಾಮ್‌‌ಗೆ ನಿರ್ಬಂಧ ಹೇರಿದ ರಷ್ಯಾ

ದೇಶದ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ ಆರೋಪ: ಇನ್‌ಸ್ಟಾಗ್ರಾಮ್‌‌ಗೆ ನಿರ್ಬಂಧ ಹೇರಿದ ರಷ್ಯಾ

- Advertisement -
- Advertisement -

ಇನ್‌ಸ್ಟಾಗ್ರಾಮ್‌ನ ಮಾತೃ ಕಂಪನಿ ಮೆಟಾ ತನ್ನ ವೇದಿಕೆಗಳಲ್ಲಿ ತನ್ನ ಮಿಲಿಟರಿ ಸೇರಿದಂತೆ ರಷ್ಯಾದ ವಿರುದ್ಧ ಹಿಂಸಾಚಾರಕ್ಕೆ ನೀಡಿರುವ ಕರೆಗಳನ್ನು ಅನುಮತಿಸಿದೆ ಎಂದು ಆರೋಪಿಸಿ ಸೋಮವಾರದಂದು ರಷ್ಯಾದಲ್ಲಿ ಇನ್‌ಸ್ಟಾಗ್ರಾಮ್‌ ಆಪ್‌ ಬಳಕೆಗೆ ತಡೆಯೊಡ್ಡಲಾಗಿದೆ.

ದೇಶದಲ್ಲಿ ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಮುಂಬರುವ ಪರಿಸ್ಥಿತಿ ಕುರಿತು ತಿಳಿಸಲಾಗಿರುವುದರಿಂದ ಈ ನಡೆ ಅನಿವಾರ್ಯವಾಗಿತ್ತು. ಉಕ್ರೇನ್‌ ವಿರುದ್ಧ ನಡೆಸಲಾಗುತ್ತಿರುವ ಯುದ್ಧದ ಮಧ್ಯೆ ರಷ್ಯಾದಲ್ಲಿ ತನ್ನ ಎಲ್ಲಾ ಸೇವೆಗಳನ್ನು ಮಧ್ಯೆರಾತ್ರಿಯ ನಂತರ ಭಾನುವಾರ ಮುಚ್ಚಲಾಗುವುದು ಎಂದು ಇನ್‌ಸ್ಟಾಗ್ರಾಮ್‌ ತಿಳಿಸಿದೆ.

ರಷ್ಯಾದ ಇನ್‌ಸ್ಟಾಗ್ರಾಮ್‌ ಮುಖ್ಯಸ್ಥ ಆಡಮ್ ಮೊಸ್ಸೆರಿ, ಈ ನಿರ್ಧಾರದಿಂದ ಇನ್‌ಸ್ಟಾಗ್ರಾಮ್‌ಗೆ ಎಂಟು ಕೋಟಿ ಬಳಕೆದಾರರು ಕಡಿತಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ರಷ್ಯಾದಲ್ಲಿ ಫೇಸ್ಬುಕ್, ಟ್ವಿಟರ್ ಮತ್ತು ಟಿಕ್‌ಟಾಕ್ ನಂತಹ ವೇದಿಕೆಗಳು ಹೆಚ್ಚು ಜನಪ್ರಿಯವಾಗಿವೆ.

ಇದನ್ನೂ ಓದಿ: ರಷ್ಯಾ ಮಾನವೀಯ ಕಾರಿಡಾರ್‌ ಘೋಷಿಸಿದರೂ ಕೈಗೆ ಸಿಕ್ಕ ವಾಹನಗಳಲ್ಲಿ ಸ್ಥಳಾಂತರಗೊಳ್ಳಿ ಎಂದ ಮೋದಿ ನೇತೃತ್ವದ BJP ಸರ್ಕಾರ!

ಮುಚ್ಚುವ ಮೊದಲು ತಮ್ಮ ವಿಡಿಯೊ ಮತ್ತು ಪೋಟೋಗಳನ್ನು ಇನ್ಸ್ಟಾಗ್ರಾಮ್‌ನಿಂದ ತೆಗೆದುಕೊಳ್ಳುವಂತೆ ಸ್ಟೇಟ್ ಕಮ್ಯೂನಿಕೇಶನ್ಸ್ ರೆಗ್ಯುಲೇಟರ್‌ ಬಳಕೆದಾರರಿಗೆ ಇಮೇಲ್ ಸಂದೇಶ ಕಳುಹಿಸಿದ್ದು, ರಷ್ಯಾ ನಿರ್ಮಿತ ಜಾಲತಾಣಗಳನ್ನ ಬಳಸಿ ಪ್ರೋತ್ಸಾಹಿಸಲು ಕೇಳಿಕೊಂಡಿದೆ.

ರಷ್ಯಾ ಈ ಹಿಂದೆ ಮಾರ್ಚ್‌ ಮೊದಲ ವಾರದಲ್ಲಿ ಟ್ವೀಟರ್ ಫೇಸ್‌ಬುಕ್‌ಗಳನ್ನು ನಿರ್ಬಂಧಿಸಿತ್ತು. ಇದೀಗ ಇನ್‌ಸ್ಟಾಗ್ರಾಮ್‌ ಮೇಲೆ ಕೂಡಾ ನಿರ್ಬಂಧ ಹೇರಿದೆ. ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ರಷ್ಯನ್ನರಿಗೆ ಲಭ್ಯವಾಗುವ ಮಾಹಿತಿಯನ್ನು ನಿಯಂತ್ರಿಸಲು ರಷ್ಯಾ ಕ್ರಮ ಜರುಗಿಸಿದೆ ಎಂದು ವರದಿಯಾಗಿವೆ.

ರಷ್ಯಾದ ಮಾಧ್ಯಮ ನಿಯಂತ್ರಕವು ಪ್ರಕಟಿಸಿದ ನಿರ್ಭಂದಿತ ಆನ್‌ಲೈನ್ ಪಟ್ಟಿಯಲ್ಲಿ ಇನ್‌ಸ್ಟಾಗ್ರಾಮ್‌ ಸೋಮವಾರದಂದು ಕಾಣಿಸಿಕೊಂಡಿದೆ.

ರಷ್ಯಾದಲ್ಲಿ VPN ಇಲ್ಲದೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ಬಳಕೆಗೆ ಸಿಗುತ್ತಿಲ್ಲ ಎಂದು AFP ಪತ್ರಕರ್ತರು ಹೇಳಿದ್ದಾರೆ. ಫೇಸ್‌‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ರಷ್ಯಾದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಅದರಲ್ಲೂ ಇನ್‌ಸ್ಟಾಗ್ರಾಮ್‌ ಯುವ ರಷ್ಯನ್ನರ ನಡುವೆ ಅತ್ಯಂತ ಜನಪ್ರಿಯ ಸಾಮಾಜಿಕ ಮಾದ್ಯಮವಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯರೊಂದಿಗೆ ರಷ್ಯಾ ಅಧ್ಯಕ್ಷ ಸಂವಾದ ನಡೆಸಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...