Homeಮುಖಪುಟಗೋಲ್ಡನ್ ಟೆಂಪಲ್‌ ಅಪವಿತ್ರತೆ ಆರೋಪ: ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಥಳಿಸಿ ಕೊಲೆ

ಗೋಲ್ಡನ್ ಟೆಂಪಲ್‌ ಅಪವಿತ್ರತೆ ಆರೋಪ: ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಥಳಿಸಿ ಕೊಲೆ

- Advertisement -
- Advertisement -

ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್‌ನ ಪ್ರಾರ್ಥನಾ ಸ್ಥಳಕ್ಕೆ ನುಗ್ಗಿ, ಕತ್ತಿ ಕಿತ್ತುಕೊಂಡು ಗುರು ಗ್ರಂಥ ಸಾಹಿಬ್‌ಗೆ ಅಪವಿತ್ರಗೊಳಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಶನಿವಾರ ನಡೆದಿದೆ.

ಶನಿವಾರ ಗೋಲ್ಡನ್ ಟೆಂಪಲ್‌ನಲ್ಲಿ ನಿತ್ಯದ ಸಂಜೆ ಪ್ರಾರ್ಥನೆ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಬ್ಯಾರಿಕೇಡ್ ಹಾರಿ ಗುರು ಗ್ರಂಥ ಸಾಹಿಬ್ ಬಳಿ ತೆರಳಿದ್ದಾನೆ. ಅಷ್ಟರಲ್ಲಿ ಅಲ್ಲಿದ್ದವರು ಆತನನ್ನು ವಶಕ್ಕೆ ಪಡೆಯುವುದು ವಿಡಿಯೋದಲ್ಲಿ ದಾಖಲಾಗಿದೆ. ಆನಂತರ ಆ ವ್ಯಕ್ತಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆಗೈಯಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

20-25 ವರ್ಷದ ಆ ವ್ಯಕ್ತಿಯು ತಲೆಗೆ ಹಳದಿ ಬಟ್ಟೆ ಕಟ್ಟಿಕೊಂಡಿದ್ದ. ಆತ ಉತ್ತರ ಪ್ರದೇಶದ ವ್ಯಕ್ತಿಯಾಗಿರಬಹುದು ಎಂದು ಪಿಟಿಐ ತಿಳಿಸಿದ್ದು, ಆತ ಏಕೆ ಬಂದ, ಆತನ ಗುರಿಯೇನಾಗಿತ್ತು? ಜೊತೆಗೆ ಯಾರಿದ್ದರೂ ಎಂಬುದನ್ನು ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಇಂದು ವರದಿ ಬರುವ ಸಾಧ್ಯತೆಯಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ ಚನ್ನಿ, “ಶ್ರೀ ರೆಹ್ರಾಸ್ ಸಾಹಿಬ್ ಅವರ ಮಾರ್ಗದರ್ಶನದಲ್ಲಿ ಶ್ರೀ ಹರಿಮಂದಿರ ಸಾಹಿಬ್ ಅವರ ಗರ್ಭಗುಡಿಯಲ್ಲಿ ಶ್ರೀ ಗುರು ಗ್ರಂಥ ಸಾಹಿಬ್ ಅವರನ್ನು ಅಪವಿತ್ರಗೊಳಿಸಲು ಪ್ರಯತ್ನಿಸುವ ಅತ್ಯಂತ ದುರದೃಷ್ಟಕರ ಮತ್ತು ಹೇಯ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ಈ ದುಷ್ಕೃತ್ಯದ ಹಿಂದಿನ ಮೂಲ ಉದ್ದೇಶ ಮತ್ತು ನಿಜವಾದ ಪಿತೂರಿದಾರರನ್ನು ಪತ್ತೆ ಹಚ್ಚಲು ಸಂಪೂರ್ಣ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದಿದ್ದಾರೆ.

ಗುರು ಗ್ರಂಥ ಸಾಹಿಬ್ ಮತ್ತು ಸಿಖ್ ದೇವಾಲಯಗಳ ಅಪವಿತ್ರಗೊಳಿಸುವಿಕೆಯು ಪಂಜಾಬ್ ಮತ್ತು ಸಿಖ್ಖರಲ್ಲಿ ಹೆಚ್ಚು ಭಾವನಾತ್ಮಕ ವಿಷಯವಾಗಿದೆ, ಅವರು ಪವಿತ್ರ ಪುಸ್ತಕವನ್ನು ತಮ್ಮ 11 ನೇ ಗುರು ಎಂದು ಭಾವಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೆಲ ಅಪವಿತ್ರತೆಗೊಳಿಸುವ ಪ್ರಕರಣಗಳು ತೀವ್ರ ಆಕ್ರೋಶ ಹಾಗೂ ರಾಜಕೀಯ ಕೋಲಾಹಲಕ್ಕೆ ಎಡೆಮಾಡಿಕೊಟ್ಟಿವೆ. ದೆಹಲಿಯ ರೈತ ಹೊರಾಟದಲ್ಲಿಯೂ ಸಹ ಲಕ್ಬೀರ್ ಸಿಂಗ್ ಎಂಬ ದಲಿತ ವ್ಯಕ್ತಿ ಅಪವಿತ್ರಗೊಳಿಸಿದನೆಂಬ ಕಾರಣಕ್ಕೆ ಅಮಾನವೀಯವಾಗಿ ಹತ್ಯೆಗೈಯಲಾಗಿತ್ತು.


ಇದನ್ನೂ ಓದಿ: ಹನುಮ ಜಯಂತಿ: ಕೆ.ಆರ್‌.ಪೇಟೆಯಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ; 27 ಮಂದಿ ಸವರ್ಣೀಯರ ಮೇಲೆ ಎಫ್‌ಐಆರ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...