Homeಕ್ರೀಡೆಕ್ರಿಕೆಟ್ಕೊನೆಯ ಒಂದು ಎಸೆತದಲ್ಲಿ 18ರನ್ ಬಿಟ್ಟುಕೊಟ್ಟ ಬೌಲರ್!: ಇತಿಹಾಸ ನಿರ್ಮಿಸಿದ ತಮಿಳುನಾಡು ಪ್ರೀಮಿಯರ್ ಲೀಗ್

ಕೊನೆಯ ಒಂದು ಎಸೆತದಲ್ಲಿ 18ರನ್ ಬಿಟ್ಟುಕೊಟ್ಟ ಬೌಲರ್!: ಇತಿಹಾಸ ನಿರ್ಮಿಸಿದ ತಮಿಳುನಾಡು ಪ್ರೀಮಿಯರ್ ಲೀಗ್

- Advertisement -
- Advertisement -

ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟಿರುವ ಬೌಲರ್ ಅಪಖ್ಯಾತಿಗೆ ಒಳಗಾಗಿದ್ದಾರೆ. ತಮಿಳುನಾಡು ಪ್ರೀಮಿಯರ್ ಲೀಗ್‌ ನ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್  ತಂಡಗಳ ನಡುವಿನ ಪಂದ್ಯದಲ್ಲಿ ಈ ಇತಿಹಾಸ ನಿರ್ಮಿಸಿದೆ.

ಸ್ಪಾರ್ಟನ್ಸ್ ತಂಡದ ನಾಯಕ ಅಭಿಷೇಕ್ ತನ್ವರ್ ಅವರು ಇನ್ನಿಂಗ್ಸ್‌ನ 20ನೇ ಓವರ್‌ನ ಕೊನೆಯ ಎಸೆತದಲ್ಲಿ 18 ರನ್‌ಗಳನ್ನು ಬಿಟ್ಟುಕೊಟ್ಟರು. ಇದೀಗ ಅವರು ಕೊನೆಯ ಎಸೆತದಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಅಪಖ್ಯಾತಿಗೆ ಒಳಗಾಗಿದ್ದಾರೆ.

ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತನ್ವರ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ ಸೂಪರ್ ಗಿಲ್ಲಿಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಲಯವನ್ನು ಕಂಡುಕೊಳ್ಳಲು ಹೆಣಗಾಡಿದರು. ಕೊನೆಯ ಎಸೆತದಲ್ಲಿ 18 ರನ್‌ಗಳ ಪರಿಣಾಮವಾಗಿ, ಎದುರಾಳಿ ತಂಡವು 217/5 ಬೃಹತ್ ಮೊತ್ತವನ್ನು ಕಲೆಹಾಕಿತು, ಕೊನೆಯ ಓವರ್‌ನಲ್ಲಿ 26 ರನ್ ಗಳಿಸಿತು.

ಅದೇ ಓವರ್‌ನ ಮೊದಲ ಐದು ಎಸೆತಗಳಲ್ಲಿ ಎಂಟು ರನ್ ಬಿಟ್ಟುಕೊಟ್ಟಿರುವ ತನ್ವರ್‌ ಅಂತಿಮವಾಗಿ ಒಟ್ಟು 26 ರನ್ ನೀಡಿದರು.

ತನ್ನ‌ ಅಂತಿಮ ಓವರ್‌ನ ಕೊನೆಯ ಎಸೆತ ಹೀಗಿತ್ತು: NB, NB + 6, NB + 2, WD, 6

1 ಬಾಲ್‌ಗೆ 18 ರನ್ ಗಳಿಕೆಗೆ ಕಾರಣವಾದ ಘಟನೆಗಳ ಅನುಕ್ರಮ ಇಲ್ಲಿದೆ:

– ಮೊದಲಿಗೆ ಬೌಲ್ಡ್ ಮಾಡಿದರು, ಆದರೆ ಅದು ನೋ-ಬಾಲ್ ಆಗಿತ್ತು ಒಂದು ರನ್ ಬಂದಿತು.

– ಆನಂತರದ ಎಸೆತವೂ ನೋ-ಬಾಲ್‌ ಆಯಿತು. ಅದನ್ನು ಸಿಕ್ಸರ್‌ಗೆ ಹೊಡೆದು ಒಟ್ಟು 8 ರನ್‌ಗಳಿಗೆ ತೆಗೆದುಕೊಂಡರು.

– ಮುಂದಿನ ಎಸೆತವೂ ನೋ-ಬಾಲ್ ಆಗಿತ್ತು, ಬ್ಯಾಟರ್‌ಗಳು 2 ರನ್ ಗಳಿಸಿದರು, ಒಟ್ಟು 11 ರನ್ ಗಳಿಸಿದರು.

– ಮತ್ತೆ ಬಾಲ್ ಎಸೆದಾಗ ವೈಡ್ ಆಯಿತು, ಒಟ್ಟು 12 ರನ್‌ಗಳು ಬಂದವು.

– ಕೊನೆಯ ಎಸೆತದಲ್ಲಿ ಸಿಕ್ಸರ್‌ಗೆ ಹೊಡೆದು ಒಟ್ಟಾರೆ ಮೊತ್ತ 18 ರನ್‌ಗಳು ಬಂದವು.

”ಕೊನೆಯ ಓವರ್‌ನ ಹೊಣೆಯನ್ನು ನಾನು ತೆಗೆದುಕೊಳ್ಳಬೇಕಾಗಿದೆ. ಅನುಭವಿ ಬೌಲರ್ ಆಗಿದ್ದರೂ ಕೊನೆಯ ಎಸೆತದಲ್ಲಿ ನಾಲ್ಕು ನೋ-ಬಾಲ್‌ಗಳನ್ನು ಎಸೆದದ್ದು ತುಂಬಾ ಬೇಸರವಾಗಿದೆ” ಎಂದು ಸೇಲಂ ಸ್ಪಾರ್ಟನ್ಸ್ ನಾಯಕ ತನ್ವರ್ ಪಂದ್ಯದ ನಂತರ ಹೇಳಿದರು.

ಸ್ಪಾರ್ಟನ್ನರು ಕೇವಲ 165/9 ಸ್ಕೋರ್ ಮಾಡಿ,  52 ರನ್‌ಗಳ ಭಾರಿ ಅಂತರದಿಂದ ಸೋತರು.

ಇದನ್ನೂ ಓದಿ: ಕ್ರಿಕೆಟ್ ಬೆನ್ನು ಹತ್ತಿದ ರೂಢಿಗಳು, ನಂಬಿಕೆ-ಆಚರಣೆ ಮತ್ತು ಮೂಢನಂಬಿಕೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...