Homeಮುಖಪುಟಕೊರೊನಾದಿಂದ ದೇಶ ತತ್ತರಿಸಿದ್ದರೂ ಫೋರ್ಬ್ಸ್-2022ರ ಶ್ರೀಮಂತ ಪಟ್ಟಿಯಲ್ಲಿ ಅಂಬಾನಿ, ಅದಾನಿ!

ಕೊರೊನಾದಿಂದ ದೇಶ ತತ್ತರಿಸಿದ್ದರೂ ಫೋರ್ಬ್ಸ್-2022ರ ಶ್ರೀಮಂತ ಪಟ್ಟಿಯಲ್ಲಿ ಅಂಬಾನಿ, ಅದಾನಿ!

- Advertisement -
- Advertisement -

ಕಳೆದ ವರ್ಷ ದೇಶವು ಕೊರೊನಾ ಸಾಂಕ್ರಮಿಕದಿಂದಾಗಿ ತತ್ತರಿಸಿದ್ದರೂ 36 ನೇ ವಾರ್ಷಿಕ ಬಿಲಿಯನೇರ್ ಶ್ರೇಯಾಂಕದಲ್ಲಿ ಭಾರತೀಯರು ಗಣನೀಯವಾಗಿ ಕಾಣಿಸಿಕೊಂಡಿದ್ದಾರೆ. ಫೋರ್ಬ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ, ಅದಾನಿಗಳು, ಮಿತ್ತಲ್‌ ಮತ್ತು ಬಿರ್ಲಾ ಸ್ಥಾನಪಡೆದ್ದಾರೆ.

ಟಾಪ್ 10 ಶ್ರೀಮಂತ ಭಾರತೀಯರು:

1. ಮುಖೇಶ್ ಅಂಬಾನಿ

90.7 ಬಿಲಿಯನ್ ಡಾಲರ್‌  ಸಂಪತ್ತಿನೊಂದಿಗೆ, ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಹತ್ತನೇ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

2. ಗೌತಮ್ ಅದಾನಿ ಮತ್ತು ಕುಟುಂಬ

ಪ್ರಸ್ತುತ ಏಷ್ಯಾದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಯಾಗಿದ್ದು, ವಿಶ್ವದ 11 ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

3. ಶಿವ ನಾಡರ್

HCL ಟೆಕ್ನಾಲಜೀಸ್ ಲಿಮಿಟೆಡ್‌ನ ಸಂಸ್ಥಾಪಕ ನಾಡಾರ್ ಅವರು ತಮ್ಮ ಸಂಪತ್ತನ್ನು ಈ ವರ್ಷ 22% ದಷ್ಟು ಹೆಚ್ಚಿಸಿಕೊಂಡಿದ್ದಾರೆ. ಜೊತೆಗೆ 28.7 ಶತಕೋಟಿ ಡಾಲರ್‌  ಸಂಪತ್ತನ್ನು ಹೊಂದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಇವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 47 ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಹೆಚ್ಚಿದ ಕೋಮು ಉದ್ವಿಗ್ನತೆ ಹಿನ್ನಲೆ: ಕಂಪೆನಿಗಳನ್ನು ಕರ್ನಾಟಕದಿಂದ ತಮಿಳುನಾಡಿಗೆ ಸೆಳೆಯಲು ಪ್ರಯತ್ನಿಸುತ್ತಿರುವ ಡಿಎಂಕೆ ಸರ್ಕಾರ

4. ಸೈರಸ್ ಪೂನಾವಾಲ

ಪೂನಾವಾಲ ಅವರ ಸಂಪತ್ತು 24.3 ಶತಕೋಟಿ ಡಾಲರ್‌ಗೆ ತಲುಪಿದೆ. ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷರಾದ ಪೂವಾವಾಲಾ ಅವರು ಕಳೆದ ಬಾರಿಗಿಂತ ನಾಲ್ಕು ಸ್ಥಾನಗಳು ಮೇಲಕ್ಕೆ ಏರಿದ್ದು, ವಿಶ್ವದ ಶ್ರೀಮಂತರ ಪಟ್ಟಿಯ 56 ನೇ ಸ್ಥಾನದಲ್ಲಿದ್ದಾರೆ.

5. ರಾಧಾಕಿಶನ್ ದಮಾನಿ

ರಾಧಾಕಿಶನ್ 20 ಶತಕೋಟಿ ಡಾಲರ್‌‌ ಆಸ್ತಿಯನ್ನು ಹೊಂದಿರುವ ಬಿಲಿಯನೇರ್. ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 81 ನೇ ಸ್ಥಾನದಲ್ಲಿದ್ದಾರೆ. ಇವರು ಅವೆನ್ಯೂ ಸೂಪರ್‌‌  ಮಾರ್ಕೆಟ್‌‌ಗಳನ್ನು ನಡೆಸುತ್ತಿದ್ದು, ಇದು ದೇಶಾದ್ಯಂತ ಡಿ-ಮಾರ್ಟ್ಸ್ ಅನ್ನು ನಿರ್ವಹಿಸುತ್ತದೆ.

6. ಲಕ್ಷ್ಮಿ ಮಿತ್ತಲ್

ಲಕ್ಷ್ಮಿ ಮಿತ್ತಲ್ ಅವರು ವಿಶ್ವದ ಅತಿದೊಡ್ಡ ಕಬ್ಬಿಣ ಮತ್ತು ಉಕ್ಕಿನ ಕಂಪನಿಯಾದ ಆರ್ಸೆಲರ್ ಮಿತ್ತಲ್‌ನ ಅಧ್ಯಕ್ಷರಾಗಿದ್ದಾರೆ. ಅವರ ಸಂಪತ್ತಿನ ಪ್ರಕಾರ ಅವರು ವಿಶ್ವದ ಶ್ರೀಮಂತರ ಪಟ್ಟಿಯ 89 ನೇ ಸ್ಥಾನದಲ್ಲಿದ್ದಾರೆ.

7. ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ

ಒಪಿ ಜಿಂದಾಲ್ ಗ್ರೂಪ್‌ನ ಸಿಇಒ ಸಾವಿತ್ರಿ ಜಿಂದಾಲ್ ಅವರು 17.7 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಅವರು 91 ನೇ ಸ್ಥಾನದಲ್ಲಿದ್ದಾರೆ. ಅವರು ಭಾರತದ ಟಾಪ್ 10 ಶ್ರೀಮಂತ ಭಾರತೀಯರಲ್ಲಿ ಏಕೈಕ ಮಹಿಳೆಯಾಗಿದ್ದು, ಬಿಲಿಯನೇರ್‌ಗಳ ಪಟ್ಟಿಯಲ್ಲಿರುವ 13 ಭಾರತೀಯ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ: ಸುದರ್ಶನ್ ಟಿವಿ ಪತ್ರಕರ್ತೆಯನ್ನು ತರಾಟೆಗೆ ತೆಗೆದುಕೊಂಡ ಹಲ್ದಿರಾಮ್ಸ್ ಉದ್ಯೋಗಿ: ನೆಟ್ಟಿಗರ ಶ್ಲಾಘನೆ

8. ಕುಮಾರ್ ಬಿರ್ಲಾ

ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷರಾಗಿರುವ ಕುಮಾರ್, ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 109 ನೇ ಸ್ಥಾನದಲ್ಲಿದ್ದಾರೆ. ಅವರು 16.5 ಬಿಲಿಯನ್ ಡಾಲರ್‌ ಸಂಪತ್ತನ್ನು ಹೊಂದಿದ್ದಾರೆ.

9. ದಿಲೀಪ್ ಶಾಂಘ್ವಿ

ಶಾಂಘ್ವಿ ಅವರು ವಿಶ್ವದ ಅತಿದೊಡ್ಡ ಫಾರ್ಮಾ ಕಂಪನಿಗಳಲ್ಲಿ ಒಂದಾದ ಸನ್ ಫಾರ್ಮಾಸ್ಯುಟಿಕಲ್ಸ್‌ನ ಮಾಲೀಕರಾಗಿದ್ದಾರೆ. ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 115 ನೇ ಸ್ಥಾನದಲ್ಲಿದ್ದಾರೆ. ಅವರು 15.6 ಬಿಲಿಯನ್ ಡಾಲರ್‌ ಸಂಪತ್ತನ್ನು ಹೊಂದಿದ್ದಾರೆ.

10. ಉದಯ್ ಕೋಟಕ್

ಉದಯ್ ಕೋಟಕ್ ಅವರು ಕೋಟಕ್‌ ಮಹೀಂದ್ರಾ ಬ್ಯಾಂಕ್ ಅನ್ನು ನಿರ್ವಹಿಸುತ್ತಿದ್ದಾರೆ. ಫೋರ್ಬ್ಸ್‌ನಿಂದ “ಭಾರತದ ಅತ್ಯಂತ ಶ್ರೀಮಂತ ಸ್ವಯಂ ನಿರ್ಮಿತ ಬ್ಯಾಂಕರ್” ಎಂಬ ಉದಯ್ ಕೋಟಕ್‌ ಬಣ್ಣಿಸಲ್ಪಟ್ಟಿದ್ದಾರೆ. ಅವರ ಸಂಪತ್ತು 14.3 ಬಿಲಿಯನ್ ಡಾಲರ್‌ ಇದ್ದು, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 129 ನೇ ಸ್ಥಾನದಲ್ಲಿದ್ದಾರೆ.

ಅಜೀಂ ಪ್ರೇಮ್‌ಜಿ, ಬಜಾಜ್ ಸಹೋದರರು, ರಾಕೇಶ್ ಜುಂಜುನ್‌ವಾಲಾ, ಫಲ್ಗುಣಿ ನಾಯರ್ ಸೇರಿದಂತೆ ಹಲವಾರು ಭಾರತೀಯರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭಟ್ಕಳ-ಹೊನ್ನಾವರ: ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್‌ಬಂದಿಯ ಆಖಾಡ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...