Homeಅಂತರಾಷ್ಟ್ರೀಯನೇಪಾಳಿ ಪ್ರಜೆಗೆ ಹಿಂಸೆ: ಯುಪಿ ಸಿಎಂ ಆದಿತ್ಯನಾಥ್‌ರೊಂದಿಗೆ ಮಾತನಾಡಿದ ನೇಪಾಳದ ರಾಯಭಾರಿ

ನೇಪಾಳಿ ಪ್ರಜೆಗೆ ಹಿಂಸೆ: ಯುಪಿ ಸಿಎಂ ಆದಿತ್ಯನಾಥ್‌ರೊಂದಿಗೆ ಮಾತನಾಡಿದ ನೇಪಾಳದ ರಾಯಭಾರಿ

ನೇಪಾಳ ವಿರೋಧಿ ಪೋಸ್ಟರ್‌ಗಳ ವರದಿಗಳು ಮತ್ತು ವಾರಣಾಸಿಯಲ್ಲಿ ನೇಪಾಳಿ ಪ್ರಜೆಯೊಬ್ಬರ ಮೇಲೆ ನಡೆದ ದೌರ್ಜನ್ಯದ ಕುರಿತು ನೇಪಾಳದ ರಾಯಭಾರಿ ಮುಖ್ಯಮಂತ್ರಯೊಂದಿಗೆ ಮಾತನಾಡಿದ್ದಾರೆ.

- Advertisement -
- Advertisement -

ನೇಪಾಳ ವಿರೋಧಿ ಪೋಸ್ಟರ್‌ಗಳ ವರದಿಗಳು ಮತ್ತು ವಾರಣಾಸಿಯಲ್ಲಿ ನೇಪಾಳಿ ಪ್ರಜೆಯೊಬ್ಬರ ಮೇಲೆ ನಡೆದ ದೌರ್ಜನ್ಯದ ನಂತರ ನೇಪಾಳದ ರಾಯಭಾರಿ ನೀಲಾಮಾಬರ್ ಆಚಾರ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ ರಾಜ್ಯದಲ್ಲಿರುವ ನೇಪಾಳ ಪ್ರಜೆಗಳ ಸುರಕ್ಷತೆಯ ಬಗ್ಗೆ ಕೇಳಿದ್ದಾರೆ.

ದಿನಗಳ ಹಿಂದೆಯಷ್ಟೇ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಮನ ಜನ್ಮಸ್ಥಳ ನೇಪಾಳದಲ್ಲಿದೆ ಎಂದು ಹೇಳಿಕೊಂಡಿದ್ದರು.

ಒಂದು ದಿನದ ನಂತರ ನೇಪಾಳ ವಿದೇಶಾಂಗ ಸಚಿವಾಲಯವು ಪ್ರಧಾನಿಯ ಮಾತುಗಳು ಭಾವನೆಗಳನ್ನು ನೋಯಿಸುವಂತಿಲ್ಲ. ರಾಮಾಯಣದ ‘ಸಾಂಸ್ಕೃತಿಕ ಭೌಗೋಳಿಕತೆ’ ಕುರಿತು ಹೆಚ್ಚಿನ ಸಂಶೋಧನೆಗೆ ಒತ್ತಾಯಿಸಿದೆ ಎಂದು ಸ್ಪಷ್ಟನೆ ನೀಡಲಾಯಿತು.

ವಾರಣಾಸಿ ನಗರವು ನೇಪಾಳದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದು, ಅಲ್ಲಿ ನೇಪಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅವರಲ್ಲಿ ಅನೇಕರು ದೇವಾಲಯಗಳಲ್ಲಿ ಕೆಲಸ ಮಾಡುತ್ತಾರೆ.

ನೇಪಾಳದ ರಾಯಭಾರಿ ಆಚಾರ್ಯ ಅವರು ಕಳೆದ ಸಂಜೆ ವಾರಣಾಸಿಯ ಲಲಿತಾ ಘಾಟ್‌ನ ಪಶುಪತಿನಾಥ್ ದೇವಸ್ಥಾನದಲ್ಲಿ ಪ್ರಧಾನಿ ಒಲಿ ಹಾಗೂ ಭಾರತದಲ್ಲಿ ಇರುವ ನೇಪಾಳಿ ಪ್ರಜೆಗಳಿಗೆ ಬೆದರಿಕೆಯನ್ನು ಹಾಕಿ ಪೋಸ್ಟರುಗಳನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಈ ಗುಂಪಿನ ಮುಖ್ಯಸ್ಥ ಅರುಣ್ ಪಾಠಕ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ ಅಪರಿಚಿತ ನೇಪಾಳಿ ಪ್ರಜೆಯ ತಲೆಯ ಮೇಲೆ ಜೈಶ್ರೀರಾಮ್ ಎಂದು ಬರೆಯಲಾಗಿದ್ದು, ಅವರನ್ನು ಜೈಶ್ರೀರಾಮ್ ಹಾಗೂ ಭಾರತ್ ಮಾತಾಕಿ ಜೈ ಎಂದು ಕೂಗಲು ಒತ್ತಾಯಿಸಿಲಾಗಿದೆ.

ನೇಪಾಳಿ ರಾಯಭಾರಿ ಆಚಾರ್ಯ, ತಾನು ಬೆಳಿಗ್ಗೆ ಉತ್ತರ ಪ್ರದೇಶದ ಸಿಎಂ ಅವರೊಂದಿಗೆ ಮಾತನಾಡಿದ್ದೇನೆ ಹಾಗೂ ನೇಪಾಳದ ಪ್ರಜೆಗಳಿಗೆ ಅಸುರಕ್ಷಿತ ಭಾವನೆ ಬರದಂತೆ ನೋಡಿಕೊಳ್ಳಬೇಕೆಂದು ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಕೈಗೊಂಡ ಕ್ರಮದಿಂದ ತೃಪ್ತಿ ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಪ್ರಕರಣದ ಕುರಿತು ಭೆಲಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಾರಣಾಸಿ ಪೊಲೀಸರು ಹೇಳಿದ್ದಾರೆ.


ಓದಿ:ನೇಪಾಳಿ ಯುವಕನ ತಲೆ ಬೋಳಿಸಿ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿದ ಹಿಂದುತ್ವವಾದಿಗಳು


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...