Homeಮುಖಪುಟವಿಶ್ಲೇಷಣೆ: ತಮಿಳುನಾಡು ರಾಜ್ಯಪಾಲರು ತಮ್ಮ ಮಿತಿಗಳನ್ನು ಮೀರುತ್ತಿದ್ದಾರೆಯೇ?

ವಿಶ್ಲೇಷಣೆ: ತಮಿಳುನಾಡು ರಾಜ್ಯಪಾಲರು ತಮ್ಮ ಮಿತಿಗಳನ್ನು ಮೀರುತ್ತಿದ್ದಾರೆಯೇ?

- Advertisement -
- Advertisement -

ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ಸರ್ಕಾರ ಸಿದ್ಧಪಡಿಸಿದ ಭಾಷಣದ ಕೆಲವು ಪದಗಳನ್ನು ಹೇಳದಿದ್ದಾಗ, ಅಲ್ಲಿಯೇ ಡಿಎಂಕೆ ಪಕ್ಷದ ನಾಯಕರೊಬ್ಬರು ವಿರೋಧ ವ್ಯಕ್ತಪಡಿಸಿದರು. ಆಗ ಆರ್.ಎನ್. ರವಿ ಅಲ್ಲಿಂದ ವಾಕ್‌ಔಟ್ ಮಾಡುತ್ತಾರೆ. ಸದನದಲ್ಲಿ ಮತ್ತೊಮ್ಮೆ ರಾಜ್ಯ ಮುಖ್ಯಸ್ಥರ ಮತ್ತು ಕಾರ್ಯಾಂಗದ ನಡುವೆ ಕೋಲಾಹಲ ಆರಂಭವಾಯಿತು.

ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಪಡೆದ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೊಸ ಪದಗಳನ್ನು ಅಳಿಸುವ ಮತ್ತು ಸೇರಿಸುವ ಅಭೂತಪೂರ್ವ ಘಟನೆಯು ಸಾಂವಿಧಾನಿಕ ಔಚಿತ್ಯದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಇದು ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡಬಹುದು.

ಆಡಳಿತಾರೂಢ ಡಿಎಂಕೆ ಸರ್ಕಾರದೊಂದಿಗಿನ ರಾಜ್ಯಪಾಲರ ಸಂಬಂಧ ವಾಸ್ತವಿಕವಾಗಿ ಮುರಿದುಬಿದ್ದಿದೆ. ರಾಜ್ಯಪಾಲ ರವಿ ಅವರು ತಮ್ಮ ವಾಡಿಕೆ ಭಾಷಣದಲ್ಲಿ “ದ್ರಾವಿಡ ಆಡಳಿತ ಮಾದರಿ” ಮತ್ತು ದ್ರಾವಿಡ ಐಕಾನ್‌ಗಳ ಹೆಸರುಗಳನ್ನು ಬಿಟ್ಟುಬಿಡಲು ನಿರ್ಧಾರ ಮಾಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ರಾಜ್ಯಪಾಲರ ಕಾಯ್ದೆ ವಿರುದ್ಧ ನಿರ್ಣಯ ಮಂಡಿಸಿದರು. ಆಗ ರವಿ ಅವರು ರಾಷ್ಟ್ರಗೀತೆ ಹಾಡುವವರೆಗೂ ಕಾಯದೇ ಹೊರನಡೆದರು.

ಈ ವಿಚಾರವಾಗಿ ಸಂವಿಧಾನ ಏನು ಹೇಳುತ್ತದೆ? ಸಂವಿಧಾನದ 176 ನೇ ವಿಧಿಯು ರಾಜ್ಯಪಾಲರ ವಿಶೇಷ ಭಾಷಣದ ಬಗ್ಗೆ ವಿವರಿಸುತ್ತದೆ. “ವಿಧಾನಸಭೆಗೆ ಪ್ರತಿ ಸಾರ್ವತ್ರಿಕ ಚುನಾವಣೆಯ ನಂತರದ ಮೊದಲ ಅಧಿವೇಶನದ ಪ್ರಾರಂಭದಲ್ಲಿ ಮತ್ತು ಪ್ರತಿ ವರ್ಷದ ಮೊದಲ ಅಧಿವೇಶನದ ಪ್ರಾರಂಭದಲ್ಲಿ, ರಾಜ್ಯಪಾಲರು ವಿಧಾನಸಭೆಯನ್ನು ಉದ್ದೇಶಿಸಿ ಅಥವಾ ರಾಜ್ಯವು ವಿಧಾನ ಪರಿಷತ್ತನ್ನು ಹೊಂದಿರುವ ಸಂದರ್ಭದಲ್ಲಿ, ಎರಡೂ ಸದನಗಳು ಒಟ್ಟಿಗೆ ಸೇರುತ್ತವೆ. ಈ ವೇಳೆ ಸಮನ್ಸ್‌ಗಳ ಕಾರಣಗಳನ್ನು ಶಾಸಕಾಂಗಕ್ಕೆ ತಿಳಿಸುತ್ತವೆ”. ಆದ್ದರಿಂದ, ಸಂಬಂಧಿತ ನಿಬಂಧನೆಯು ತಲುಪಿಸಬೇಕಾದ ರೀತಿಯಲ್ಲಿ ಸ್ಪಷ್ಟವಾಗಿ ಮೌನವಾಗಿರುತ್ತದೆ. ಅದರಲ್ಲಿ ಯಾವುದೇ ಪದಗಳ ಅಳಿಸುವಿಕೆಗಳು ಅಥವಾ ಸೇರ್ಪಡೆಗಳನ್ನು ರಾಜ್ಯಪಾಲರು ಮಾಡಬಹುದೇ. ಆದಾಗ್ಯೂ, ರಾಜ್ಯ ಸಚಿವ ಸಂಪುಟವು ಸಿದ್ಧಪಡಿಸಿದ ಮತ್ತು ಅಂಗೀಕರಿಸಿದ ಭಾಷಣವನ್ನು ರಾಜ್ಯಪಾಲರು ಓದುತ್ತಾರೆ ಎಂದು ಕನ್ವೆನ್ಷನ್ ಹೇಳುತ್ತದೆ. ಬಹುಶಃ ರವಿ ಅವರು ಭಾಷಣವನ್ನು ಓದುವಲ್ಲಿ ಒಳಗೊಂಡಿರುವ ವಿಧಾನಗಳು ಅಥವಾ ಅದರ ಕೊರತೆಯ ಬಗ್ಗೆ ಸಂವಿಧಾನದ ಮೌನವನ್ನು ಬಳಸಿದ್ದಾರೆ.

ಸೆಪ್ಟೆಂಬರ್ 2021 ರಲ್ಲಿ ತಮಿಳುನಾಡು ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ರವಿ ಅವರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರ ವಿವೇಚನೆಯನ್ನು ಬಳಸಲು ಅವಕಾಶ ನೀಡುವ ಬಗ್ಗೆ ಮಾತನಾಡುತ್ತಾರೆ. ಆರ್ಟಿಕಲ್ 163(2), ರಾಜ್ಯಪಾಲರಿಗೆ ಸಹಾಯ ಮಾಡಲು ಮತ್ತು ಸಲಹೆ ನೀಡಲು ಮಂತ್ರಿಗಳ ಮಂಡಳಿ ಹೇಳುವುದು- “ಯಾವುದಾದರೂ ಒಂದು ವಿಷಯದ ಮೇಲೆ ಪ್ರಶ್ನೆ ಉದ್ಭವಿಸಿದರೆ ಸಂಬಂಧಿತವಾಗಿ ರಾಜ್ಯಪಾಲರು ಈ ಸಂವಿಧಾನದ ಅಡಿಯಲ್ಲಿ ಅಥವಾ ಅದರ ಅಡಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿದ್ದಲ್ಲಿ ತಮ್ಮ ವಿವೇಚನೆಗೆ ಅನುಗುನವಾಗಿ ರಾಜ್ಯಪಾಲರು ನಿರ್ಧಾರ ತಗೆದುಕೊಳ್ಳಬಹುದು. ರಾಜ್ಯಪಾಲರು ಯಾವುದರ ಸಿಂಧುತ್ವವನ್ನು ಅವರು ತಮ್ಮ ವಿವೇಚನೆಯಿಂದ  ಮಾಡಿದಾಗ ಅದನ್ನು ಪ್ರಶ್ನಿಸಲಾಗುವುದಿಲ್ಲ.

ಆದರೆ ರಾಜ್ಯಪಾಲರ “ವೈಯಕ್ತಿಕ ತೃಪ್ತಿ”ಗೆ ಸಂಬಂಧಿಸಿದ ಪ್ರಕರಣದಲ್ಲಿ ‘ಶಂಶೇರ್ ಸಿಂಗ್ ವಿರುದ್ಧ ಪಂಜಾಬ್ ರಾಜ್ಯ’ ಎಂಬ 1966 ರ ಸುಪ್ರೀಂ ಕೋರ್ಟ್ ತೀರ್ಪನ್ನು ಸಂವಿಧಾನ ತಜ್ಞರು ಎತ್ತಿ ತೋರಿಸುತ್ತಾರೆ. ಅಧ್ಯಕ್ಷರು/ರಾಜ್ಯಪಾಲರು ಕೇವಲ ಸಾಂವಿಧಾನಿಕ ಮುಖ್ಯಸ್ಥರು, ನಿಜವಾದ ಅಧಿಕಾರವನ್ನು ಮಂತ್ರಿಗಳ ಪರಿಷತ್ತಿಗೆ ವಹಿಸಲಾಗಿದೆ. ಅವರ ಸಹಾಯ ಮತ್ತು ಸಲಹೆಯ ಮೇರೆಗೆ ರಾಷ್ಟ್ರಪತಿ/ರಾಜ್ಯಪಾಲರು ಕಾರ್ಯ ನಿರ್ವಹಿಸಬೇಕು ಎಂದ ಏಳು ನ್ಯಾಯಾಧೀಶರ ಪೀಠವು ಪುನರುಚ್ಚರಿಸಿತು.

ಸಂವಿಧಾನದಲ್ಲಿ ರಾಷ್ಟ್ರಪತಿ ಅಥವಾ ರಾಜ್ಯಪಾಲರ ವೈಯಕ್ತಿಕ ತೃಪ್ತಿ ಮುಖ್ಯವಲ್ಲ, ಆದರೆ ಸರ್ಕಾರದ ಕ್ಯಾಬಿನೆಟ್ ವ್ಯವಸ್ಥೆಯಲ್ಲಿ ಮಂತ್ರಿ ಮಂಡಳಿಯ ತೃಪ್ತಿ ಮುಖ್ಯ ಎಂದು ತೀರ್ಪು ನೀಡಲಾಯಿತು. ಸಾಂವಿಧಾನಿಕ ಕಾನೂನಿನಲ್ಲಿ, ರಾಷ್ಟ್ರಪತಿ ಮತ್ತು ರಾಜ್ಯಪಾಲರ ‘ಕಾರ್ಯಗಳು’ ಮತ್ತು ಸರ್ಕಾರದ ‘ವ್ಯವಹಾರಗಳು’ ಮಂತ್ರಿಗಳಿಗೆ ಸೇರಿದ್ದು, ರಾಜ್ಯದ ಮುಖ್ಯಸ್ಥರಿಗೆ ಅಲ್ಲ……” ಎಂದು ಇಬ್ಬರು ವ್ಯಕ್ತಿಗಳ ನೇಮಕಾತಿ ಮತ್ತು ವಜಾಕ್ಕೆ ಸಂಬಂಧಿಸಿದ್ದಂತೆ ಕೆಳ ನ್ಯಾಯಾಲಯ ಹೇಳಿದೆ.

ಹೀಗಾಗಿ ಸಚಿವ ಸಂಪುಟ ಮತ್ತು ರಾಜ್ಯಪಾಲರು ಮತ್ತು ಶಾಸಕಾಂಗ ಮತ್ತು ರಾಜ್ಯಪಾಲರ ನಡುವಿನ ಸಂಬಂಧವನ್ನು ಈ ನಿಲುವು ಪ್ರಶ್ನಿಸುವಂತೆ ಮಾಡಿದೆ. ರಾಜ್ಯಪಾಲರ ಈ ನಡೆಯು ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡಬಹುದು. ಇದು ತಮ್ಮ ಸರ್ಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರದ ಇತರ ರಾಜ್ಯಪಾಲರನ್ನು ಅದೇ ರೀತಿ ಮಾಡಲು ಪ್ರೇರೇಪಿಸಬಹುದು.

ಪದಗಳು/ವಾಕ್ಯಗಳನ್ನು ಅಳಿಸಿ ಅಥವಾ ಪೂರ್ವ-ಅನುಮೋದಿತ ಭಾಷಣಕ್ಕೆ ಅವರ ದೃಷ್ಟಿಕೋನಗಳನ್ನು ಸೇರಿಸಿ. ಸದನದ ಮಹಡಿಯಲ್ಲಿ ರಾಜ್ಯಪಾಲರ ಭಾಷಣವನ್ನು ಸಮರ್ಥಿಸಿಕೊಳ್ಳಬೇಕಾದ ಮುಖ್ಯಮಂತ್ರಿ ಅದನ್ನು ನಿರಾಕರಿಸಿದರೆ ಏನಾಗುತ್ತದೆ? ಸಹಜವಾಗಿ, ಇದು ಸರ್ಕಾರದ ಸೋಲು ಮುಖ್ಯಮಂತ್ರಿಯ ರಾಜೀನಾಮೆ ಅಗತ್ಯವಾಗುತ್ತದೆ.

ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ಬಾಕಿ ಇಡುವುದು ಸೇರಿದಂತೆ ವಿವಿಧ ವಿಷಯಗಳಲ್ಲಿ ಡಿಎಂಕೆ ಸರ್ಕಾರದೊಂದಿಗೆ ಗಂಭೀರ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ರವಿ ಅವರು ಈ ರೀತಿ ಮಾಡಿರಬಹುದು. ಅವರು ತಿಂಗಳುಗಟ್ಟಲೆ 15 ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

ಅವರು ತಮಿಳುನಾಡಿನ ಹೆಸರನ್ನು “ತಮಿಳಗಂ” ಎಂದು ಬದಲಾಯಿಸುವ ಮೂಲಕ ಮತ್ತು ತಮ್ಮ ಪೊಂಗಲ್ ಆಮಂತ್ರಣಗಳನ್ನು ತಮಿಳಗಂ ರಾಜ್ಯದ ಅಡಿಯಲ್ಲಿ ಕಳುಹಿಸುವ ಮೂಲಕ ಡಿಎಂಕೆಯ ಗರಿಗಳನ್ನು ಕೆರಳಿಸಿದರು. ಆದರೆ ಈ ಬಗ್ಗೆ ರಾಜ್ಯಪಾಲರು ಈವರೆಗೂ ಸ್ಪಷ್ಟನೆ ನೀಡಿಲ್ಲ. ರವಿ ಅವರ ಕ್ರಮಗಳು, ಅವರು ಹೊಂದಿರುವ ಉನ್ನತ ಹುದ್ದೆಗೆ ಹೊಂದಿಕೆಯಾಗದಿದ್ದರೂ, ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಹಿತಕರ ಸಂಬಂಧವು ಹೆಚ್ಚುತ್ತಿದೆ, ವಿಶೇಷವಾಗಿ ಬಿಜೆಪಿಯೇತರ ಆಡಳಿತ ಪಕ್ಷಗಳು ನಡೆಸುವ ರಾಜ್ಯಗಳಲ್ಲಿ ಈ ರೀತಿ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕೇಂದ್ರ ಸರ್ಕಾರವನ್ನು ನಡೆಸುವ ಪಕ್ಷಕ್ಕೆ, ರಾಜ್ಯಪಾಲರು ನಿಷ್ಠೆಯ ಪ್ರದರ್ಶನದಲ್ಲಿ ಸ್ಪರ್ಧೆಗಿಳಿದಂತೆ ತೋರುತ್ತದೆ. ಜಗದೀಪ್ ಧನಕರ್ ಅವರು ರಾಜ್ಯಪಾಲರಾಗಿದ್ದಾಗ ತಮಿಳುನಾಡು, ತೆಲಂಗಾಣ, ಜಾರ್ಖಂಡ್, ರಾಜಸ್ಥಾನ, ಪಂಜಾಬ್, ದೆಹಲಿ ಮತ್ತು ಪಶ್ಚಿಮ ಬಂಗಾಳಗಳಲ್ಲೂ ಹೀಗೆ ಹಳಸಿದ ಸಂಬಂಧಗಳನ್ನು ಕಂಡಿವೆ. ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನಡುವಿನ ಉತ್ತಮ ಸಮನ್ವಯತೆ ಮುಖ್ಯವಾಗಬೇಕಿದೆ.

ಲೇಖನ ಕೃಪೆ: ಡೆಕ್ಕನ್ ಹೆರಾಲ್ಡ್

ಇದನ್ನೂ ಓದಿ: ಮೋದಿ ಸರ್ಕಾರ ಭಾರತದ ಬಹುತ್ವವನ್ನು ಧ್ವಂಸಗೊಳಿಸುತ್ತಿದೆ: ಅಮರ್ತ್ಯ ಸೇನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...