Homeಮುಖಪುಟರಿಲಯನ್ಸ್ ಪವರ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ: ಕಾರಣ?

ರಿಲಯನ್ಸ್ ಪವರ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ: ಕಾರಣ?

- Advertisement -
- Advertisement -

ನವ ದೆಹಲಿ: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಯವರು ಶುಕ್ರವಾರ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಾರುಕಟ್ಟೆ ನಿಯಂತ್ರಣ ಸಂಸ್ಥೆಯಾದ ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ಆದೇಶ ನೀಡಿದೆ. ಯಾವುದೇ ಸಾರ್ವಜನಿಕ ಶೇರುಗಳ ಕಂಪನಿಯೊಂದಿಗೆ ಸಹಭಾಗಿತ್ವವನ್ನು ಅನಿಲ್‌ ಅಂಬಾನಿಗೆ ಸೆಬಿ ನಿರ್ಬಂಧಿಸಿದೆ.

“ಸೆಬಿ ಮಧ್ಯಂತರ ಆದೇಶದ ಪ್ರಕಾರ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನಿಲ್ ಡಿ ಅಂಬಾನಿಯವರು ರಿಲಯನ್ಸ್ ಪವರ್ ಮಂಡಳಿಯಿಂದ ಕೆಳಗಿಳಿಯಲಿದ್ದಾರೆ” ಎಂದು ರಿಲಯನ್ಸ್ ಪವರ್ ತಿಳಿಸಿದೆ.

ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಸೆಬಿಯು ಕಂಪನಿಯಿಂದ ಹಣವನ್ನು ಕಸಿದುಕೊಂಡ ಆರೋಪದ ಮೇಲೆ ಕಳೆದ ಫೆಬ್ರವರಿಯಲ್ಲಿ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿರ್ಬಂಧಿಸಿತು.

ಸೆಬಿಯಲ್ಲಿ ನೋಂದಾಯಿತ ಯಾವುದೇ ಮಧ್ಯವರ್ತಿ ಕಂಪನಿ, ಅಥವಾ ಲಿಸ್ಟಿಂಗ್‌ನಲ್ಲಿರುವ ಸಾರ್ವಜನಿಕ ಕಂಪನಿಯಲ್ಲಿ ಹಾಲಿ ನಿರ್ದೇಶಕರು/ಪ್ರವರ್ತಕರಾಗಿ ಮುಂದಿನ ಆದೇಶದವರೆಗೆ ಮುಂದುವರಿಯಬಾರದು ಎಂದು ಅಂಬಾನಿ ಮತ್ತು ಇತರ ಮೂವರಿಗೆ ಸೆಬಿ ತಿಳಿಸಿತ್ತು.

ಸೆಬಿ ಆದೇಶ ಹೊರಬಿದ್ದ ಬಳಿಕ, “ಆರ್‌ಪವರ್ ಮತ್ತು ಆರ್‌ಇನ್‌ಫ್ರಾ ಮಂಡಳಿಗಳಲ್ಲಿ ಐದು ವರ್ಷಗಳ ಅವಧಿಗೆ ಸ್ವತಂತ್ರ ನಿರ್ದೇಶಕರ ಹುದ್ದೆಯಲ್ಲಿ ರಾಹುಲ್ ಸರಿನ್ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಲಾಗಿದೆ” ಎಂದು ಎರಡು ರಿಲಯನ್ಸ್ ಗ್ರೂಪ್ ಕಂಪನಿಗಳು ತಿಳಿಸಿವೆ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಅನುಮೋದನೆ ಮೇರೆಗೆ ನೇಮಕ ಮಾಡಲಾಗಿದೆ ಕಂಪನಿಗಳು ತಿಳಿಸಿವೆ.

ಈ ವಿಷಯವನ್ನು ಶೀಘ್ರವಾಗಿ ಪರಿಹರಿಸಲು ಮಂಡಳಿಗಳು ಎದುರು ನೋಡುತ್ತಿವೆ. ಎಲ್ಲಾ ಪಾಲುದಾರರ ಹಿತಾಸಕ್ತಿಯಿಂದ ಅಂಬಾನಿಯವರ ದೂರದೃಷ್ಟಿ ಮತ್ತು ನಾಯಕತ್ವವನ್ನು ಒದಗಿಸಲು ಮಂಡಳಿಗಳು ಅಂಬಾನಿ ಅವರನ್ನು ಮತ್ತೆ ಆಹ್ವಾನಿಸುತ್ತವೆ ಎಂದು ಕಂಪನಿಗಳು ಹೇಳಿವೆ.


ಇದನ್ನೂ ಓದಿರಿ: ಬಿಜೆಪಿ ಪರ ಪ್ರಚಾರ ಮಾಡುತ್ತಿರುವ NEWJ ಫೇಸ್‌ಬುಕ್ ಪೇಜ್: ದುಡ್ಡು ಮಾತ್ರ ಅಂಬಾನಿಯದ್ದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...