Homeಕರ್ನಾಟಕ‘ಕರ್ನಾಟಕ ಬಿಲ್ಕಿಸ್ ಜೊತೆಗಿದೆ’: ಬಿಜೆಪಿ ಸರ್ಕಾರದ ನಡೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

‘ಕರ್ನಾಟಕ ಬಿಲ್ಕಿಸ್ ಜೊತೆಗಿದೆ’: ಬಿಜೆಪಿ ಸರ್ಕಾರದ ನಡೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

- Advertisement -
- Advertisement -

ಗುಜರಾತಿನ ಬಿಜೆಪಿ ಸರ್ಕಾರ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರಿಗಳಿಗೆ ಕ್ಷಮಾದಾನ ನೀಡಿರುವುದನ್ನು ವಿರೋಧಿಸಿ ‘ಬಿಲ್ಕಿಸ್‌ಗೆ ನ್ಯಾಯ ದೊರಕಿಸಿಕೊಡುವಂತೆ ಕರ್ನಾಟಕ ಆಗ್ರಹಿಸುತ್ತದೆ’ ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ಪ್ರಮುಖ ಮಹಿಳಾ ಸಂಘಟನೆಗಳು, ಲೈಂಗಿಕ ಸಂಖ್ಯಾತರ ಸಂಘಟನೆ, ಜಾತ್ಯಾತೀತ ಪಕ್ಷಗಳು ಸೇರಿದಂತೆ ಹಲವಾರು ಜನಪರ ಸಂಘಟನೆಗಳು ಬೃಹತ್‌ ಪ್ರತಿಭಟನಾ ಸಮಾವೇಶವನ್ನು ಶನಿವಾರ ನಡೆಸಿದೆ.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಕೆ.ಎಸ್‌. ವಿಮಲಾ, “ಬಿಲ್ಕೀಸ್ ಪರವಾಗಿರು ಧ್ವನಿ ಇಡೀ ದೇಶದಾದ್ಯಂತ ಮೊಳಗುತ್ತಿದೆ. ದೇಶದ ಸ್ವಾತಂತ್ಯ್ರದ 75 ನೇ ವರ್ಷದ ಧ್ವಜಾರೋಹಣ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ‘ಮಹಿಳೆಯ ಘನತೆಯನ್ನು ಕಾಪಾಡುವುದು, ಅದನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು. ಅದಕ್ಕಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ’ ಎಂದು ಹೇಳಿದ್ದರು” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಆದರೆ ಪ್ರಧಾನಿ ಮೋದಿ ನಾಚಿಕೆ ಆಗಬೇಕಾಗಿದೆ. ಈ ಮಾತನ್ನು ಅವರು ಕೆಂಪು ಕೋಟೆಯಲ್ಲಿ ನಿಂತು ಹೇಳಬೇಕಾದ ಸಂದರ್ಭ ಅವರದ್ದೇ ಸರ್ಕಾರ ಗುಜರಾತಿನಲ್ಲಿ ನನ್ನ ಸಹೋದರಿಯನ್ನು ಅತ್ಯಾಚಾರ ಮಾಡಿದ್ದ ದುಷ್ಕರ್ಮಿಗಳನ್ನು ಕ್ಷಮಾದಾನ ಮಾಡಿ ಬಿಡುಗಡೆ ಮಾಡುತ್ತಿದೆ. ಪ್ರಧಾನಿ ಮೋದಿಗೆ ಮಹಿಳೆಯ ಘಟನೆಯ ಬಗ್ಗೆ ಮಾತನಾಡಲು ಕನಿಷ್ಠ ನೈತಿಕತೆ ಇದೆಯೆ?” ಎಂದು ವಿಮಲಾ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಜನಶಕ್ತಿ ಕಾರ್ಯದರ್ಶಿ ಕುಮಾರ್‌‌ ಸಮತಳ ಮಾತನಾಡಿ, “ಬಿಲ್ಕೀಸ್ ಬಾನೊ ಅತ್ಯಾಚಾರ ಆರೋಪಿಗಳನ್ನು ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯ. ನಮ್ಮ ದೇಶದ ಸ್ವಾತಂತ್ಯ್ರಕ್ಕೆ ಮಾಡಿದ ಅವಮಾನವಿದು. ಸರ್ಕಾರವು ಒಂದು ಕಡೆ ದೇಶದಾದ್ಯಂತ ಸ್ವಾತಂತ್ಯ್ರದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ, ಇನ್ನೊಂದು ಕಡೆ ಅತ್ಯಾಚಾರಿಗಳನ್ನು ಬಿಡುಗಡೆ ಮಾಡುತ್ತಿದೆ. ಅತ್ಯಾಚಾರಿಗಳನ್ನು ಗೌರವದಿಂದ ಸ್ವಾಗತಿಸಿದ್ದು ಸಮಾಜವೇ ತಲೆ ತಗ್ಗಿಸುವಂತಹ ಘಟನೆ” ಎಂದು ಹೇಳಿದರು.

ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಕೊಲೆ, ಅತ್ಯಾಚಾರದಂತಹ ಹೀನಕೃತ್ಯ ಎಸಗಿದವರಿಗೆ ಕ್ಷಮಾದಾನ ಸರಿಯೇ?

ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕೈ ಪದ್ಮಶಾಲಿ ಮಾತನಾಡಿ,“ದೆಹಲಿಯ ಗ್ಯಾಂಗ್‌ ರೇಪ್‌ನಿಂದ ಹಿಡಿದು ಬಿಲ್ಕೀಸ್ ಬಾನೋ ತನಕ ಕೇಂದ್ರ ಹಾಗೂ ಗುಜರಾತ್ ಸರ್ಕಾರ ಹೇಗೆ ಮಹಿಳಾ ವಿರೋಧಿ ಎಂಬುದಜಕ್ಕೆ ಇದೊಂದು ನಿದರ್ಶನವಾಗಿದೆ. ದೇಶವೂ 75 ನೇ ಸ್ವಾತಂತ್ಯ್ರೋತ್ಸವ ಆಚರಿಸುತ್ತಿರಬೇಕಾದರೆ ಪ್ರಧಾನ ಮಂತ್ರಿ ಮಹಿಳಾ ಪರವಾದ ಭಾಷಣ ಮಾಡಿದ್ದಾರೆ. ಬೇಟಿ ಪಡಾವೊ-ಬೇಟಿ ಬಚಾವೊ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಯಾವ ಬೇಟಿ, ಹೇಗೆ ಓದಬೇಕು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನಲ್ಲೂ ಪ್ರತಿಭಟನೆ

ಬಿಲ್ಕಿಸ್ ಬಾನೊ ಅವರಿಗೆ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯ ಖಂಡಿಸಿ ಶನಿವಾರ ಮೈಸೂರಿನ ಟೌನ್ ಹಾಲ್ ಎದುರು ಪ್ರತಿಭಟನೆಕ ಕೂಡಾ ಪ್ರತಿಭಟನೆ ನಡೆಸಲಾಗಿದೆ.

ರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ನೇತೃತ್ವದಲ್ಲಿ ಪ್ರಕಾಶ್ ರಾಜ್, ಪ.ಮಲ್ಲೇಶ್, ಸಿ.ಬಸವಲಿಂಗಯ್ಯ ಒಳಗೊಂಡಂತೆ ಹಲವಾರು ಹೋರಾಟಗಾರರು, ಚಿಂತಕರು, ಮಹಿಳಾ ಮತ್ತು ಜನಪರ ಸಂಘಟನೆಗಳು ಭಾಗವಹಿಸಿದ್ದವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಿಲ್ಕಿಸ್ ಬಾನು ಅವರ ಜೊತೆಗೆ ನಿಲ್ಲುವುದರ ಜೊತೆಗೆ ನಾವಿಂದು, ಮುರುಗಾ ಶರಣರ ವಿರುದ್ಧ ದೂರು ನೀಡಿರುವ ಇಬ್ಬರು ಅಪ್ರಾಪ್ತ ಬಾಲಕಿಯರ ಪರವಾಗಿ ದನಿ ಎತ್ತಬೇಕು. ಏಕೆಂದರೆ ಕರ್ನಾಟಕ ಸರ್ಕಾರವು ಈಗಾಗಲೇ ಮುರುಗಾಶರಣರ ಪರವಾಗಿ ಕಾರ್ಯಾಚರಣೆಗೆ ಇಳಿದಿದೆ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...